ಶ್ರೀವೈಷ್ಣವ ಗುರುಪರಂಪರೆ – ಮುನ್ನುಡಿ

ಶ್ರೀ:
ಶ್ರೀಮತೇ ಶಠಕೋಪಾಯ ನಮ:
ಶ್ರೀಮತೇ ರಾಮಾನುಜಾಯ ನಮ:
ಶ್ರೀಮದ್ ವರವರಮುನಯೇ ನಮ:
ಶ್ರೀ ವಾನಾಚಲ ಮಹಾಮುನಯೇ ನಮ:

ಲಕ್ಶ್ಮೀನಾಥ ಸಮಾರಂಭಾಂ ನಾಥಯಾಮುನ ಮಧ್ಯಮಾಂ |
ಅಸ್ಮದಾಚಾರ್ಯ ಪರ್ಯನ್ತಾಂ ವಂದೇ ಗುರುಪರಂಪರಾಂ||

ಶ್ರಿಯಃಪತಿಯಾದ ಲಕ್ಶ್ಮೀನಾರಾಯಣನಿಂದ ಶುರುವಾಗುವ – ನಾಥಮುನಿಗಳು ಮತ್ತು ಯಾಮುನಾಚಾರ್ಯರು ಮಧ್ಯದಲ್ಲಿ  ಇರುವ –  ಸ್ವಾಚಾರ್ಯರಿಂದ ಸಮಾಪ್ತವಾಗುವ – ಗುರುಪರಂಪರೆಯನ್ನು ವಂದಿಸುತ್ತೇನೆ

ಈ ದಿವ್ಯ ಶ್ಲೋಕವನ್ನು ಕೂರತ್ತಾಳ್ವಾನ್ ನಮ್ಮ ಗುರುಪರಂಪರೆಯನ್ನು ವೈಭವೀಕರಿಸಲು ರಚಿಸಿದ್ದಾರೆ. ಎಂಬೆರುಮಾನಾರ್, ಅವರ ಆರ್ಚಾರ್ಯರಾಗಿದ್ದ ಕಾರಣದಿಂದ, ಅವರ ಪ್ರಕಾರ “ಅಸ್ಮದಾಚಾರ್ಯ” ಎಂದರೆ “ಎಂಬೆರುಮಾನಾರ್”. ಆದರೆ ಸಾಮಾನ್ಯವಾಗಿ ‘ಅಸ್ಮದಾಚಾರ್ಯ’ ಎಂದರೆ “ಈ ಶ್ಲೋಕವನ್ನು ಹೇಳುವವರ ಆಚಾರ್ಯ”.

acharya haaram

ನಮ್ಮ ದರ್ಶನವನ್ನು, ನಮ್ಬೆರುಮಾಳ್, “ಎಂಬೆರುಮಾನಾರ್ ದರ್ಶನಂ” ಎಂದು ಕರೆಯುತ್ತಾರೆ. ಇದನ್ನು ಮನವಾಳ ಮಾಮುನಿಗಳು ಉಪದೇಶ ರತ್ನಮಾಲೈಯಲ್ಲಿ ಗುರುತಿಸುತ್ತಾರೆ. ಶ್ರೀ ರಾಮಾನುಜರು ತಮ್ಮ ಜೀವಾವಧಿಯಲ್ಲಿ ಸನಾತನ ಧರ್ಮವನ್ನು ಪುನಃ ಸಂಸ್ಥಾಪನೆ ಮಾಡಿದರು. ಅವರ ಪೂರ್ವಜರಾದ ನಾಥಮುನಿಗಳು, ಆಳವಂದಾರ್ ಇತ್ಯಾದಿ ಮಹಾಪುರುಷರಿಂದ ವಿಶೇಷ ಸಂದೇಶಗಳನ್ನು ಸಂಗ್ರಹಿಸಿ ಅದನ್ನು ಎಲ್ಲರಿಗೂ ಸರಳವಾಗಿ ಪ್ರಸ್ತುತಪಡಿಸಿದ್ದರು.

ಅಜ್ಞಾನವನ್ನು ತೆರೆವುಗೊಳಿಸುವವರು ’ಗುರು’. ಶಾಸ್ತ್ರವನ್ನು ಕಲಿತು, ಅರಿತು, ಅನುಸರಿಸಿ, ಇತರರಿಗೂ ಅದರ ಪ್ರಚಾರ ಮಾಡಿ ಅನುಸರಿಸುವಂತೇ ಮಾರ್ಗದರ್ಶನ ಕೊಡುವವರು ’ಆಚಾರ್ಯ’. ಮುರಿಯದ ಆಚರ್ಯರ ವಂಶಾವಳಿಯನ್ನು ಗುರು ಪರಂಪರೈ ಎನ್ನುತ್ತಾರೆ.

“ಲಕ್ಷ್ಮೀನಾಥ ಸಮಾರಂಭಾಂ” – ನಮ್ಮ ಶ್ರೀವೈಷ್ಣವ ಗುರು ಪರಂಪರೆಯು ಶೀಮನ್ ನಾರಾಯಣನಿಂದ ಪ್ರಾರಂಭವಾಗುತ್ತದೆ. ಅಪಾರ ಕರುಣೆಯಿಂದ ಶ್ರೀಮನ್ ನಾರಾಯಣನು, ಸಂಸಾರಿಗಳ (ಈ ಭೌತ ಜಗತ್ತಿನಲ್ಲಿ ಭಂಧಿಸಲಾಗಿರುವ ಜೇವಾತ್ಮಗಳ ) ಮನಸ್ಸಿನ್ನಲಿರುವ ಅಜ್ಞಾನವನ್ನು ತೊಲಗಿಸುವ ನಿರ್ವಹಣೆಯನ್ನು ವಹಿಸುತ್ತಾನೆ. ಭಕ್ತರನ್ನು ರಕ್ಷಿಸಿ ಪರಮಪದದಲ್ಲಿ ಆನಂದಮಯೀ ಜೀವನವನ್ನು ಕೊಡುತ್ತಾನೆ. ಈ ಕಾರಣದಿಂದ ಶ್ರೀಮನ್ ನಾರಾಯಣನು ನಮ್ಮ ಗುರು ಪರಮ್ಪರೈಯಲ್ಲಿ ಮೊದಲನೇ ಆಚಾರ್ಯರಾಗಿ ಅತ್ಯಮೂಲ್ಯವಾದ ಶಾಸ್ತ್ರಗಳ ಅರ್ಥವನ್ನು ಭೋಧಿಸುತ್ತಾರೆ.

“ತತ್ವ ಜ್ಞಾನ ಮೋಕ್ಷ ಲಾಭಃ” ಎಂದು ಶಾಸ್ತ್ರವು ಉದ್ಘೋಷಿಸುತ್ತದೆ. ನಿಜವಾದ ಜ್ಞಾನವನ್ನು ಪಡೆದರೆ ನಾವು ಮುಕ್ತರಾಗುತ್ತೇವೆ. ಎಲ್ಲಾ ತತ್ವಜ್ಞಾನವು ಮುರಿಯದ ಆಚಾರ್ಯ ಸರಪಳಿಯಿಂದ ಪ್ರಾಪ್ತವಾಗಿದೆ. ಇದನ್ನು ಅರಿತು ಅನುಭವಿಸಲು ನಮ್ಮ ಆಚಾರ್ಯರ ಜೀವನ ಮತ್ತು ಭೋಧನೆಗಳ ಬಗ್ಗೆ ಸದಾಕಾಲ ವಿಚಾರ ಮಾಡುವುದು ಉಚಿತ.

೬೦೦೦ ಪಡಿ ಗುರು ಪರಂಪರಾ ಪ್ರಭಾವಂ (ಪಿನ್ಬಯಗಿಯ ಪೆರುಮಾಳ್ ಜೀಯರ್ ರಚಿತ), ಯತೀಂದ್ರ ಪ್ರವಣ ಪ್ರಭಾವಂ (ಪಿಳ್ಳೈ ಲೋಕಂ ಜೀಯರ್ ರಚಿತ) ಮತ್ತು ಇತರ ಪೂರ್ವಾಚಾರ್ಯ ಗ್ರಂಥಗಳಲ್ಲಿ ವಿವರಣೇ ಮಾಡಿರುವ ನಮ್ಮ ದಿವ್ಯ ಗುರು ಪರಂಪರೆಯ ಬಗ್ಗೆ ತಿಳುವಳಿಕೆ ಕೊಡಲು ಇದು ಒಂದು ದೀನ ಪ್ರಯತ್ನ.

ಅಡಿಯೇನ್ ರಾಮಾನುಜನ್ ಮಧುರಕವಿ ರಾಮಾನುಜ ದಾಸನ್

ಮೂಲ: http://guruparamparai.wordpress.com/2012/08/16/introduction/

ರಕ್ಷಿತ ಮಾಹಿತಿ:  https://guruparamparaikannada.wordpress.com

ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಧರ್ಮಗ್ರಂಥಗಳು) –
http://srivaishnavagranthams.wordpress.com
ಪ್ರಮಾತಾ (ಭೋಧಕರು) – http://acharyas.koyil.org

ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org

 

1 thought on “ಶ್ರೀವೈಷ್ಣವ ಗುರುಪರಂಪರೆ – ಮುನ್ನುಡಿ

  1. Pingback: ಶ್ರೀವೈಷ್ಣವ ಗುರುಪರಂಪರೆ – ಮುನ್ನುಡಿ – ಮುಂದುವರಿಕೆ | guruparamparai kannada

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s