Author Archives: thirunarayanembar

ಎಂಬಾರ್

ಶ್ರೀ:
ಶ್ರೀಮತೇ ಶಠಕೋಪಾಯ ನಮ:
ಶ್ರೀಮತೇ ರಾಮಾನುಜಾಯ ನಮ:
ಶ್ರೀಮದ್ ವರವರಮುನಯೇ ನಮ:
ಶ್ರೀ ವಾನಾಚಲ ಮಹಾಮುನಯೇ ನಮ:

ಹಿಂದಿನ ಲೇಖನದಲ್ಲಿ (https://guruparamparaikannada.wordpress.com/2018/02/26/emperumanar/) ನಾವು ಎಂಬೆರುಮಾನಾರ್ ಬಗ್ಗೆ ಚರ್ಚಿಸಿದೆವು. ನಾವು ಈಗ ಓರಾನ್ ವಳಿ ಗುರು ಪರಂಪರೆಯಲ್ಲಿ ಮುಂದಿನ ಅಚಾರ್ಯರ ಬಗ್ಗೆ ಮುಂದುವರೆಯೋಣ.

ಎಂಬಾರ್– ಮಧುರಮಂಗಲಂ

ತಿರುನಕ್ಷತ್ರಂ: ತೈ, ಪುನರ್ ಪೂಸಂ

ಅವತಾರ ಸ್ಥಳಂ: ಮಧುರಮಂಗಲಂ

ಆಚಾರ್ಯ: ಪೆರಿಯ ತಿರುಮಲೈ ನಂಬಿ

ಶಿಷ್ಯರು: ಪರಾಶರ ಭಟ್ಟರ್, ವೇದವ್ಯಾಸ ಭಟ್ಟರ್.

ಪರಮಪದ ಹೊಂದಿದ ಸ್ಥಳ: ತಿರುವರಂಗಂ

ಕೃತಿಗಳು:  ವಿಜ್ಞಾನ ಸ್ತುತಿ,  ಎಂಬೆರುಮಾನಾರ್ ವಡಿವಳಗು ಪಾಶುರಂ.

ಗೋವಿಂದ ಪೆರುಮಾಳ್ ಜನಿಸಿದ್ದು ಮಧುರಮಂಗಲದಲ್ಲಿ ಕಮಲನಯನ ಭಟ್ಟರ್ ಹಾಗು ಶ್ರೀದೇವಿ ಅಮ್ಮಾಳ್ ಅವರ ಪುತ್ರನಾಗಿ. ಅವರು ಗೋವಿಂದ ಭಟ್ಟರ್, ಗೋವಿಂದ ದಾಸರ್ ಮತ್ತು ರಾಮಾನುಜ ಪದಚ್ಛಾಯರ್ ಎಂದು ಸಹ ಕರೆಯಲ್ಪಡುತ್ತಾರೆ.  ಅವರು ಅಂತಿಮವಾಗಿ ಹಾಗು ಜನಪ್ರಿಯವಾಗಿ ಎಂಬಾರ್ ಎಂದು ಕರೆಯಲ್ಪಟ್ಟರು. ಇವರು ಎಂಬೆರುಮಾನಾರ್ ರ ಸೋದರಸಂಬಂಧಿಯಾಗಿದ್ದರು ಮತ್ತು ಯಾದವ ಪ್ರಕಾಶರ ಜೊತೆಯಲ್ಲಿನ ವಾರಣಾಸಿ ಯಾತ್ರೆಯಲ್ಲಿ ಎಂಬೆರುಮಾನಾರ್ ರು ಕೊಲೆಯಾಗುವುದನ್ನು ತಡೆದು ಸಾಧನೆ ಮಾಡಿದ್ದರು.

ಎಂಬೆರುಮಾನಾರ್ ರನ್ನು ಉಳಿಸಿದ ನಂತರ, ತಮ್ಮ ಯಾತ್ರೆಯನ್ನು ಮುಂದುವರೆಸಿದ ಗೋವಿಂದ ಪೆರುಮಾಳ್ ಓರ್ವ ಶಿವಭಕ್ತನಾಗಿ ಕಾಳಹಸ್ತಿಯಲ್ಲಿ ನೆಲೆಗೊಂಡರು. ಅವರನ್ನು ಸುಧಾರಣೆ ಮಾಡಲು ಎಂಬೆರುಮಾನಾರ್ ತಿರುಮಲೈ ನಂಬಿಗಳನ್ನು ಕಳುಹಿಸಿದರು. ಒಮ್ಮೆ ಗೋವಿಂದ ಪೆರುಮಾಳ್ ತಮ್ಮ ಪೂಜೆಗಾಗಿ ಹೂವುಗಳನ್ನು ಕೀಳಲು ನಂದವನಕ್ಕೆ ಬಂದಾಗ,  ಪೆರಿಯ ತಿರುಮಲೈ ನಂಬಿ ತಿರುವಾಯ್ ಮೊಳಿ ಪಾಶುರವಾದ “ದೇವನ್ ಎಂಬೆರುಮಾನುಕ್ಕಲ್ಲಾಲ್ ಪೂವುಂ ಪೂಸನೈಯುಂ ತಗುಮೇ” ಪಠಿಸಿದರು. ಅರ್ಥಾತ್ ಎಂಬೆರುಮಾನ್ ಶ್ರೀಮನ್ ನಾರಾಯಣ ಒಬ್ಬನೇ ಹೂಗಳಿಂದ ಪೂಜಿಸಲು ಅರ್ಹನಾಗಿದ್ದಾನೆ ಮತ್ತು ಬೇರೆ ಯಾರೂ ಅದಕ್ಕೆ ಅರ್ಹರಲ್ಲ ಎಂದು. ತಮ್ಮ ತಪ್ಪನ್ನು ಒಡನೆಯೇ ಅರಿತುಕೊಂಡ ಗೋವಿಂದಪ್ಪೆರುಮಾಳ್ ಶಿವನ ಬಗ್ಗೆ ತಮಗಿದ್ದ ಮೋಹವನ್ನು ತ್ಯಜಿಸಿ, ಪೆರಿಯತಿರುಮಲೈ ನಂಬಿಗಳಿಗೆ ಶರಣಾಗುತ್ತಾರೆ. ಅವರಿಗೆ ಪೆರಿಯ ತಿರುಮಲೈ ನಂಬಿಗಳು ಪಂಚಸಂಸ್ಕಾರವನ್ನು ನಿರ್ವಹಿಸುತ್ತಾರೆ ಮತ್ತು ಸಂಪ್ರದಾಯ ಅರ್ಥಗಳನ್ನು ಕಲಿಸಿಕೊಡುತ್ತಾರೆ.  ತದನಂತರ, ತಮ್ಮ ಆಚಾರ್ಯನ ಎಲ್ಲಾ ಕೈಂಕರ್ಯಗಳನ್ನೂ ಮಾಡುತ್ತಾ ಗೋವಿಂದಪೆರುಮಾಳ್ ಪೆರಿಯ ತಿರುಮಲೈನಂಬಿಗಳೊಡನೆ ವಾಸ ಮಾಡುತ್ತಾರೆ.

ಪೆರಿಯ ತಿರುಮಲೈ ನಂಬಿಗಳನ್ನು ಭೇಟಿಮಾಡಲು ತಿರುಪತಿಗೆ ಬಂದ ಎಂಬೆರುಮಾನಾರ್, ಅವರಿಂದ ಶ್ರೀರಾಮಾಯಣವನ್ನು ಕಲಿಯುತ್ತಾರೆ. ಆ ಸಮಯದಲ್ಲಿ ನಡೆದಂತಹ ಕೆಲವು ಘಟನೆಗಳು ನಮಗೆ ಎಂಬಾರ್ ರ ಹಿರಿಮೆಯನ್ನು ಅರ್ಥಮಾಡಿಸುತ್ತದೆ. ಅವುಗಳನ್ನು ಸಂಕ್ಷಿಪ್ತವಾಗಿ ನೋಡೋಣ:

 • ಒಮ್ಮೆ ಗೋವಿಂದ ಪೆರುಮಾಳ್, ಪೆರಿಯ ತಿರುಮಲೈ ನಂಬಿಗಳಿಗೆ ಹಾಸಿಗೆಯನ್ನು ತಯಾರುಗೊಳಿಸಿದ ನಂತರ, ತಮ್ಮ ಆಚಾರ್ಯ ಮಲಗುವ ಮುನ್ನ ತಾವು ಮಲಗುತ್ತಾರೆ. ಇದನ್ನು ನೋಡಿದ ಎಂಬೆರುಮಾನಾರ್ ಪೆರಿಯನಂಬಿಗಳಿಗೆ ಇದನ್ನು ತಿಳಿಸುತ್ತಾರೆ. ಈ ಘಟನೆಯ ಬಗ್ಗೆ ಪೆರಿಯನಂಬಿಗಳು ವಿಚಾರಿಸಿದಾಗ, ಗೋವಿಂದ ಪೆರುಮಾಳ್ ತಮಗೆ ನರಕ ಸಿಗುತ್ತದೆ ಎಂದು ತಿಳಿದಿದೆ ಆದರೆ ತಾವು ಅದನ್ನು ಲೆಕ್ಕಿಸುವುದಿಲ್ಲ ಎನ್ನುತ್ತಾರೆ.  ಹಾಸಿಗೆಯು ಆರಾಮದಾಯಕವಾಗಿದೆಯೆಂದು ಖಚಿತಪಡಿಸಿಕೊಳ್ಳಲು ಪರೀಕ್ಷಿಸಿದ್ದಾಗಿ ಅವರು ತಿಳಿಸುತ್ತಾರೆ. ಆ ಕಾರಣದಿಂದ ಅವರು ತಮ್ಮ ವಿಧಿಯ ಬಗೆಗಿನ ಚಿಂತೆಗಿಂತಲೂ ಹೆಚ್ಚು ಚಿಂತಿಸಿದ್ದು ತಮ್ಮ ಆಚಾರ್ಯರ ತಿರುಮೇನಿಯ ಬಗ್ಗೆ. ಇದರ ಸಂಬಂಧವು ಮಾಮುನಿಗಳ ಶ್ರೀಸೂಕ್ತಿಯಲ್ಲಿದೆ – ತೇಶಾರುಂ ಸಿಚ್ಚನ್ ಅವನ್ ಸೀರ್ ವಡಿವೈ ಆಸೈಯುಡನ್ ನೋಕ್ಕುಮವನ್ (தேசாரும் சிச்சன் அவன் சீர் வடிவை ஆசையுடன் நோக்குமவன்).
 • ಒಮ್ಮೆ ಗೋವಿಂದ ಪೆರುಮಾಳ್ ಹಾವಿನ ಬಾಯಿಯಲ್ಲಿ ಏನೋ ಮಾಡಿ ನಂತರ ಶರೀರ ಶುಧ್ಧಿಗಾಗಿ ಸ್ನಾನ ಮಾಡುವುದನ್ನು ಗಮನಿಸುತ್ತಾರೆ. ಯಾಕೆಂದು ಎಂಬೆರುಮಾನಾರ್ ವಿಚಾರಿಸಿದಾಗ, ಹಾವಿನ ಬಾಯಲ್ಲಿ ಒಂದು ಮುಳ್ಳು ಇದ್ದುದಾಗಿಯೂ ತಾವು ಅದನ್ನು ತೆಗೆದರೆಂದೂ ಗೋವಿಂದ ಪೆರುಮಾಳ್ ತಿಳಿಸುತ್ತಾರೆ. ಗೋವಿಂದಪೆರುಮಾಳ್ ರವರ ಜೀವ ಕಾರುಣ್ಯವನ್ನು ಕಂಡು ಎಂಬೆರುಮಾನಾರರಿಗೆ ಅಭಿಮಾನ ತುಂಬಿ ಬಂದಿತು.
 • ಎಂಬೆರುಮಾನಾರ್ ತಾವು ಹೊರಡುವುದಕ್ಕೆ ಪೆರಿಯ ತಿರುಮಲೈ ನಂಬಿಗಳಿಂದ ಅಪ್ಪಣೆ ಕೇಳಿದಾಗ, ನಂಬಿ ತಾವು ಎಂಬೆರುಮಾನಾರ್ ಅವರಿಗೆ ಏನನ್ನಾದರೂ ನೀಡಬೇಕೆಂದು ಬಯಸುತ್ತಾರೆ.  ಗೋವಿಂದ ಪೆರುಮಾಳ್ ರನ್ನು ಕಳುಹಿಸಬೇಕೆಂದು ಎಂಬೆರುಮಾನಾರ್ ನಂಬಿಯವರಲ್ಲಿ ಬಿನ್ನವಿಸಿಕೊಳ್ಳುತ್ತಾರೆ. ಇದನ್ನು ಸಂತೋಷದಿಂದ ಒಪ್ಪುವ ನಂಬಿಗಳು ಎಂಬೆರುಮಾನಾರ್ ರನ್ನು ತಮ್ಮಂತೆಯೇ ನಡೆಸಿಕೊಳ್ಳಬೇಕೆಂದು ಗೋವಿಂದ ಪೆರುಮಾಳ್ ರಿಗೆ ನಿರ್ದೇಶಿಸುತ್ತಾರೆ.  ಆದರೆ ಅವರು ಕಾಂಚೀಪುರಂ ತಲುಪುವಷ್ಟರಲ್ಲಿ, ತಮ್ಮ ಆಚಾರ್ಯರಿಂದ ಬೇರ್ಪಡಿಕೆಯನ್ನು ಸಹಿಸಲಾಗದೆ ತಮ್ಮ ಆಚಾರ್ಯರ ಬಳಿಗೆ ಹಿಂತಿರುಗುತ್ತಾರೆ. ಗೋವಿಂದ ಪೆರುಮಾಳ್ ತಮ್ಮ ಮನೆಯೊಳಗೆ ಬರುವುದನ್ನು ತಡೆಯುವ  ಪೆರಿಯ ತಿರುಮಲೈ ನಂಬಿಗಳು, ಒಮ್ಮೆ ಎಂಬೆರುಮಾನಾರ್ ರಿಗೆ ಕೊಟ್ಟ ನಂತರ ಅವರ ಬಳಿಯೇ ವಾಸಿಸಬೇಕೆಂದು ಹೇಳುತ್ತಾರೆ. ತಮ್ಮ ಆಚಾರ್ಯನ ಮನಸನ್ನು ಅರ್ಥಮಾಡಿಕೊಂಡ ಗೋವಿಂದ ಪೆರುಮಾಳ್ ಎಂಬೆರುಮಾನಾರ್ ರ ಬಳಿಗೆ ಹಿಂದಿರುಗುತ್ತಾರೆ.

ಶ್ರೀರಂಗಕ್ಕೆ ಹಿಂತಿರುಗಿದ ನಂತರ, ಗೋವಿಂದ ಪೆರುಮಾಳ್ ರವರ ತಾಯಿಯ ಕೋರಿಕೆಯ ಮೇರೆಗೆ ಎಂಬೆರುಮಾನಾರ್ ಗೋವಿಂದ ಪೆರುಮಾಳ್ ಅವರ ಮದುವೆಯನ್ನು ಆಯೋಜಿಸುತ್ತಾರೆ.  ಇಷ್ಟವಿಲ್ಲದೆ ಇದ್ದರೂ ಒಪ್ಪಿಕೊಂಡಿದ್ದ  ಗೋವಿಂದ ಪೆರುಮಾಳ್,  ತಮ್ಮ ಪತ್ನಿಯ ಜೊತೆಗೆ ದಾಂಪತ್ಯದಲ್ಲಿ ಎಂದಿಗೂ ತೊಡಗಿಸಿಕೊಳ್ಳುವುದಿಲ್ಲ.  ಗೋವಿಂದ ಪೆರುಮಾಳ್ ರನ್ನು ಏಕಾಂತದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಎಂಬೆರುಮಾನಾರ್ ನಿರ್ದಿಷ್ಟವಾಗಿ ಸೂಚನೆ ನೀಡಿದರೂ ಸಹ, ಹಿಂತಿರುಗಿ ಬಂದ ಗೋವಿಂದ ಪೆರುಮಾಳ್, ತಾವು ಎಲ್ಲೆಡೆಯೂ ಎಂಬೆರುಮಾನ್ ರನ್ನೇ ಕಾಣುವುದರಿಂದ ತನಗೆ ಏಕಾಂತದಲ್ಲಿ ತೊಡಗಿಸಿಕೊಳ್ಳಲು ಆಗುವುದಿಲ್ಲ ಎಂದು ಹೇಳುತ್ತಾರೆ.   ಒಡನೆಯೇ ಗೊವಿಂದಪೆರುಮಾಳ್ ರ ಸನ್ನಿವೇಶವನ್ನು ಅರ್ಥಮಾಡಿಕೊಂಡ ಎಂಬೆರುಮಾನಾರ್, ಅವರಿಗೆ ಸಂನ್ಯಾಸಾಶ್ರಮವನ್ನು ನೀಡಿ, ಎಂಬಾರ್ ಎಮ್ಬ ಹೆಸರನ್ನೂ ನೀಡಿ, ಸದಾ ತಮ್ಮ ಜೊತೆಯಲ್ಲಿಯೇ ಇರಬೇಕೆಂದು ಆಜ್ಞಾಪಿಸುತ್ತಾರೆ.

ಒಮ್ಮೆ ಇತರ ಶ್ರೀವೈಷ್ಣವರುಗಳು ಎಂಬಾರ್ ರನ್ನು ಹೊಗಳಿದಾಗ ಎಂಬಾರ್ ಸಂತೋಷದಿಂದ ಆ ಹೊಗಳಿಕೆಗಳನ್ನು ಸ್ವೀಕರಿಸುತ್ತಾರೆ. ಇದನ್ನು ಗಮನಿಸಿದ ಎಂಬೆರುಮಾನಾರ್ ನೈಚ್ಚಿಯಾನುಸಂಧಾನಮ್  (ನಮ್ರತೆ) ಇಲ್ಲದೆ ಹೊಗಳಿಕೆಗಳನ್ನು ಸ್ವೀಕರಿಸುವುದು ಶ್ರೀವೈಷ್ಣವರ ಗುಣವಲ್ಲ ಎಂದು ಎಂಬಾರ್ ರಿಗೆ ತಿಳಿಸುತ್ತಾರೆ. ಅದಕ್ಕೆ ಎಂಬಾರ್ ನೀಡುವ ಉತ್ತರವೇನೆಂದರೆ, ಅತಿ ಕೆಳ ಮಟ್ಟದಲ್ಲಿದ್ದ ತಮ್ಮನ್ನು ಪರಿವರ್ತನೆ ಮಾಡಿದುದು ಎಂಬೆರುಮಾನಾರ್ ಆದುದರಿಂದ, ತಮ್ಮನ್ನು ಯಾರಾದರೂ ಹೊಗಳಿದರೆ, ಅದು ಎಂಬೆರುಮಾನಾರ್ ರನ್ನೇ ವೈಭವೀಕರಿಸಿದಂತಾಗುತ್ತದೆ ಎಂದು. ಅದನ್ನು ಅಂಗೀಕರಿಸುವ ಎಂಬೆರುಮಾನಾರ್, ಎಂಬಾರ್ ರ ಆಚಾರ್ಯ ಭಕ್ತಿಯನ್ನು ಶ್ಲಾಘಿಸುತ್ತಾರೆ.

ಒಮ್ಮೆ ಆಂಡಾಳ್ (ಕೂರತ್ತಾಳ್ವಾನ್ ರ ಪತ್ನಿ) ಎಂಬೆರುಮಾನ್ ರ ಪ್ರಸಾದದ ಮೂಲಕವಾದ  ಕೃಪೆಯಿಂದ ಎರಡು ಮಕ್ಕಳಿಗೆ ಜನ್ಮ ನೀಡಿದಾಗ, ಅವರ ನಾಮಕರಣ ಕಾರ್ಯಕ್ರಮಕ್ಕೆ ಭೇಟಿ ನೀಡಲು ಎಂಬಾರ್ ರೊಡನೆ ಎಂಬೆರುಮಾನಾರ್ ಆಗಮಿಸುತ್ತಾರೆ. ಆ ಮಕ್ಕಳನ್ನು ತರಲು ಎಂಬಾರ್ ರಿಗೆ ಎಂಬೆರುಮಾನಾರ್ ನಿರ್ದೇಶಿಸಿದಾಗ, ಹಾಗೆ ಮಾಡುವಾಗ ಎಂಬಾರ್ ಆ ಮಕ್ಕಳ ರಕ್ಷೆಗೆಂದು ದ್ವಯ ಮಂತ್ರವನ್ನು ಪಠಣೆ ಮಾಡುತ್ತಾರೆ. ಆ ಮಕ್ಕಳನ್ನು ನೋಡುತ್ತಿದ್ದ ಒಡನೆಯೇ ಎಂಬಾರ್ ರಿಂದ ದ್ವಯ ಮಂತ್ರೋಪದೇಶ ಆಗಿದೆಯೆಂಬುದನ್ನು ಎಂಬೆರುಮಾನಾರ್ ರಿಗೆ ಗುರುತಿಸಲು ಸಾಧ್ಯವಾಗುತ್ತದೆ ಮತ್ತು ಎಂಬಾರ್ ರಿಗೆ ಆ ಮಕ್ಕಳ ಆಚಾರ್ಯನಾಗಿರಬೇಕೆಂದು ಆಜ್ಞಾಪಿಸುತ್ತಾರೆ. ಈ ರೀತಿ ಪರಾಶರ ಭಟ್ಟರ್ ಮತ್ತು ವೇದವ್ಯಾಸ ಭಟ್ಟರ್, ಎಂಬಾರ್ ರ ಶಿಷ್ಯರಾಗುತಾರೆ.

ಲೋಕ ವಿಷಯಗಳಿಂದ (ಸಾಂಸಾರಿಕ ವಸ್ತುಗಳು) ಸಂಪೂರ್ಣ ವಿರಕ್ತರಾಗಿದ್ದ ಎಂಬಾರ್, ಭಗವದ್ ವಿಷಯದಲ್ಲಿ ಯಾವಾಗಲೂ ಆಸಕ್ತಿ ಹೊಂದಿದ್ದರು. ಭಗವದ್ ವಿಷಯದ ಮಹಾನ್ ರಸಿಕರಲ್ಲಿ (ಮೆಚ್ಚುವವ/ಆನಂದಿಸುವವ) ಅವರೂ ಒಬ್ಬರಾಗಿದ್ದರು. ವ್ಯಾಖ್ಯಾನಗಳಲ್ಲಿ ಬಹಳ ಕಡೆ ಎಂಬಾರ್ ರ ಭಗವದ್ ಅನುಭವಗಳ ಬಗೆಗಿನ ಹಲವಾರು ಘಟನೆಗಳು ಪ್ರಕಾಶಗೊಳಿಸಲಾಗಿದೆ. ಅಂತಹ ಕೆಲವನ್ನು ನಾವು ನೋಡೋಣ.

 • ಪೆರಿಯಾಳ್ವಾರ್ ತಿರುಮೊಳಿಯ ಕೊನೆಯ ಪಾಶುರ “ಛಾಯೈ ಪೋಲ ಪಾಡವಲ್ಲಾರ್ ತಾಮುಂ ಅಣುಕ್ಕರ್ಗಳೇ” ಎಂಬುವುದರ ಅರ್ಥವನ್ನು ಶ್ರೀವೈಷ್ಣವರು ಕೇಳಿದಾಗ ತಾವು ಎಂಬೆರುಮಾನಾರ್ ರಿಂದ ಆ ನಿರ್ದಿಷ್ಟ ಪಾಶುರದ ಅರ್ಥವನ್ನು ಕೇಳಿಲ್ಲವೆಂದು ಹೇಳುತ್ತಾರೆ. ಆದರೆ ಎಂಬೆರುಮಾನಾರ್ ರ ಪಾದುಕೆಯನ್ನು ತಮ್ಮ ತಲೆಯ ಮೇಲೆ ಇಟ್ಟು ಒಂದು ಕ್ಷಣ ಧ್ಯಾನ ಮಾಡಿ, ಎಂಬೆರುಮಾನಾರ್ ಆ ಕ್ಷಣದಲ್ಲಿ ಬಹಿರಂಗಪಡಿಸಿದ್ದುದು ಏನೆಂದರೆ “ಪಾಡವಲ್ಲಾರ್ – ಛಾಯೈ ಪೋಲ – ತಾಮುಂ ಅಣುಕ್ಕರ್ಗಳೇ ”  ಎಂದು ಅಂದರೆ, ಯಾರು ಈ ಪಾಶುರಗಳನ್ನು ಹಾಡುವರೋ, ಅವರು ನೆರಳಿನಂತೆ ಎಂಬೆರುಮಾನ್ ರಿಗೆ ಹತ್ತಿರವಾಗಿರುತ್ತಾರೆ ಎಂದು.
 • ಪೆರಿಯಾಳ್ವಾರ್ ತಿರುಮೊಳಿ 2.1 ದಶಕದಲ್ಲಿ ಯಾವರೀತಿ ಕಣ್ಣನ್ ಎಂಬೆರುಮಾನ್ ಎಲ್ಲರನ್ನೂ ಹೆದರಿಸುತ್ತಾನೆ ಎಂದು ಉಯ್ನಿಂದ ಪಿಳ್ಳೈ ಅರೈಯರ್ ಅಭಿನಯ ಮಾಡುವಾಗ,  ಕಣ್ಣನ್ ಎಂಬೆರುಮಾನ್ ತನ್ನ ಕಣ್ಣನ್ನು ಭಯ ಪಡಿಸುವಂತೆ ತೋರಿಸಿ ಗೋಪ ಕುಮಾರರನ್ನು (ಹಸುಮೇಯಿಸುವ ಹುಡುಗರು) ಹೆದರಿಸುವಂತೆ ತೋರಿಸುತ್ತಾರೆ.  ಆದರೆ ಹಿಂದಿನಿಂದ ನೋಡುತ್ತಿದ್ದ ಎಂಬಾರ್, ಕಣ್ಣನ್ ಎಂಬೆರುಮಾನ್ ತನ್ನ ಶಂಖ-ಚಕ್ರಗಳನ್ನು ತೋರಿಸಿ ಮಕ್ಕಳನ್ನು ಹೆದರಿಸಬಹುದೆಂದು ತೋರಿಸಿದಾಗ, ಅದನ್ನು ಅರ್ಥ ಮಾಡಿಕೊಂಡ ಅರೈಯರ್ ಸ್ವಾಮಿ, ಮುಂದಿನ ಸಲ ಅದನ್ನೇ ತೋರಿಸುತ್ತಾರೆ. ಇದನ್ನು ಗಮನಿಸಿದ ಎಂಬೆರುಮಾನಾರ್ “ಗೋವಿಂದ ಪೆರುಮಾಳೇ ಇರುಂದೀರೋ” (ನೀವು ಗೋಷ್ಟಿಯಲ್ಲಿ ಇದ್ದೀರೇನು?)  ಎಂದು ಕೇಳುತ್ತಾರೆ, ಏಕೆಂದರೆ ಎಂಬಾರ್ ಮಾತ್ರವೇ ಇಂತಹ ಸುಂದರವಾದ ಅರ್ಥಗಳನ್ನು ನೀಡಬಲ್ಲರು ಎಂದು ಅವರಿಗೆ ಗೊತ್ತಿತ್ತು.
 • ತಿರುವಾಯ್ಮೊಳಿಯ ಮಿನ್ನಿಡೈ ಮಡವಾರ್ಗಳ್ ದಶಕದಲ್ಲಿ (6.2), ಏನು ತೋರಿಸಲ್ಪಟ್ಟಿದೆಯೆಂದರೆ, ಆಳ್ವಾರ್ ತಮ್ಮ ತಿರುವುಳ್ಳಂನಲ್ಲಿ ಕಣ್ಣನ್ ಎಂಬೆರುಮಾನ್ ರೊಡನೆ ವಿಶ್ಲೇಷ ಹೊಂದಿದ್ದರು ಎಂಬುವುದು ಸಂನ್ಯಾಸಿಯಾಗಿದ್ದರೂ ಎಂಬಾರ್ ರಿಗೆ ಅರ್ಥವಾಗಿತ್ತು ಎಂದು.  ಅವರು ಈ ದಶಕಕ್ಕೆ ಅತ್ಯಂತ ಸುಂದರ ಅರ್ಥಗಳನ್ನು ನೀಡುತ್ತಿದ್ದದ್ದು ಎಲ್ಲಾ ಶ್ರೀವೈಷ್ಣವರುಗಳನ್ನೂ ಆಶ್ಚರ್ಯಚಕಿತರನ್ನಾಗಿಸಿತ್ತು. ಇದು ನೈಜವಾಗಿ ತೋರಿಸುವುದು ಹೇಗೆ ಓರ್ವ ಶ್ರೀವೈಷ್ಣವ “ಪರಮಾತ್ಮ ನಿರಕ್ತ: ಅಪರಮಾತ್ಮನಿ ವಿರಕ್ತ:” – ಎಂಬೆರುಮಾನ್ ನಿಗೆ ಸಂಬಂಧಿಸಿದ ಎಲ್ಲವೂ ಆನಂದಿಸಲು ಅರ್ಹವಾದವು ಮತ್ತು ಪರಮಾತ್ಮನಿಗೆ ಸಂಬಂಧಿಸಿಲ್ಲವಾದ ಯಾವುದನ್ನಾದರೂ ನಿಷೇಧಿಸಲ್ಪಡಬೇಕು/ತ್ಯಜಿಸಬೇಕು ಎಂದು..
 • ತಿರುವಾಯ್ಮೊಳಿಯ 10.8.3 ಪಾಶುರದ ವ್ಯಾಖ್ಯಾನದಲ್ಲಿ ಒಂದು ಅಸಕ್ತಿದಾಯಕ ಘಟನೆ ತೋರಿಸಲಾಗಿದೆ. ಎಂಬೆರುಮಾನಾರ್ ತಮ್ಮ ಮಠದ ಮುಂದೆ ನಡೆದಾಡುತ್ತಾ ತಿರುವಾಯ್ಮೊಳಿಯ ಮೇಲೆ ಧ್ಯಾನಿಸುತ್ತಿದ್ದವರು ಇದ್ದಕ್ಕಿದ್ದಂತೆ ಹಿಂತಿರುಗುತ್ತಾರೆ. ಬಾಗಿಲುಗಳ ಹಿಂದಿನಿಂದ ನೋಡುತ್ತಿದ್ದ ಎಂಬಾರ್, ಎಂಬೆರುಮಾನರನ್ನು “ಮಡಿತ್ತೇನ್” ಪಾಶುರದ ಬಗ್ಗೆ ಯೋಚಿಸುತ್ತಿದ್ದೀರೇನು ಎಂದು ಕೇಳುತ್ತಾರೆ ಮತ್ತು ಅದಕ್ಕೆ ಎಂಬೆರುಮಾನಾರ್ ಅಂಗೀಕಾರ ನೀಡುತ್ತಾರೆ. ಕೇವಲ ಒಂದು ಸರಳವಾದ ಕ್ರಿಯೆಯನ್ನು ಆಧರಿಸಿ ಎಂಬೆರುಮಾನಾರ್ ಏನನ್ನು ಯೋಚಿಸುತ್ತಿದ್ದಾರೆ ಎಂಬುವುದನ್ನು ನಿಖರವಾಗಿ ಗುರುತಿಸಲು ಎಂಬಾರ್ ರಿಗೆ ಸಾಧ್ಯವಾಯಿತು.

ತಮ್ಮ ಚರಮ ದಶೆಯಲ್ಲಿ ಎಂಬಾರ್ ಪರಾಶರ ಭಟ್ಟರಿಗೆ ನಮ್ಮ ಸಂಪ್ರದಾಯವನ್ನು ಶ್ರೀರಂಗದಿಂದ ನಿರ್ವಹಿಸುವಂತೆ ನಿಯಮಿಸುತ್ತಾರೆ. ಅವರು ಭಟ್ಟರಿಗೆ ಮತ್ತೂ ಹೇಳುವುದೇನೆಂದರೆ, ಭಟ್ಟರು ಯಾವಾಗಲೂ “ಎಂಬೆರುಮಾನಾರ್ ತಿರುವಡಿಗಳೇ ತಂಜಂ” ಎಂದು ಯೋಚಿಸಬೇಕು ಎಂದು. ಎಂಬೆರುಮಾನಾರ್ ರ ಮೇಲೆ ಧೀರ್ಘವಾಗಿ ಧ್ಯಾನಮಾಡುತ್ತಾ, ಎಂಬಾರ್ ತಮ್ಮ ಚರಮ ತಿರುಮೇನಿಯನ್ನು ತ್ಯಜಿಸಿ, ಎಂಬೆರುಮಾನಾರ್ ರೊಡನೆ ನಿತ್ಯವಿಭೂತಿಯಲ್ಲಿರಲು ಪರಮಪದವನ್ನು ತಲುಪುತ್ತಾರೆ.

ನಮ್ಮಗೂ  ಸಹ ಎಂಬೆರುಮಾನಾರ್ ಹಾಗು ನಮ್ಮ ಆಚಾರ್ಯರ ಬಗ್ಗೆ ಇದೇ ರೀತಿಯ ಸಂಬಂಧ ಬೆಳೆಯಲಿ ಎಂದು ಎಂಬಾರ್ ರ ಪದಕಮಲಗಳಲ್ಲಿ ಪ್ರಾರ್ಥಿಸೋಣ..

ಎಂಬಾರ್ ತನಿಯನ್

ರಾಮಾನುಜ ಪದಛ್ಚಾಯಾ ಗೋವಿಂದಾಹ್ವ ಅನಪಾಯಿನೀ
ತದಾ ಯತ್ತ ಸ್ವರೂಪಾ ಸಾ ಜೀಯಾನ್ ಮದ್ ವಿಶ್ರಮಸ್ಥಲೀ

ನಮ್ಮ ಮುಂದಿನ ಲೇಖನದಲ್ಲಿ, ನಾವು ಪರಾಶರ ಭಟ್ಟರ ವೈಭವವನ್ನು ನೋಡೋಣ.

ಅಡಿಯೇನ್ ತಿರುನಾರಾಯಣ ರಾಮಾನುಜ ದಾಸನ್

ಸಂಗ್ರಹ – http://guruparamparai.wordpress.com/2012/09/07/embar/

ರಕ್ಷಿತ ಮಾಹಿತಿ:  https://guruparamparaikannada.wordpress.com

ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಧರ್ಮಗ್ರಂಥಗಳು) – http://granthams.koyil.org
ಪ್ರಮಾತಾ (ಭೋಧಕರು) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org

 

ಎಂಬೆರುಮಾನಾರ್

ಶ್ರೀ:
ಶ್ರೀಮತೇ ಶಠಕೋಪಾಯ ನಮ:
ಶ್ರೀಮತೇ ರಾಮಾನುಜಾಯ ನಮ:
ಶ್ರೀಮದ್ ವರವರಮುನಯೇ ನಮ:
ಶ್ರೀ ವಾನಾಚಲ ಮಹಾಮುನಯೇ ನಮ:

ಹಿಂದಿನ ಲೇಖನದಲ್ಲಿ (https://guruparamparaikannada.wordpress.com/2018/02/22/periya-nambi/) ನಾವು ಪೆರಿಯ ನಂಬಿ ಗಳ ಬಗ್ಗೆ ಚರ್ಚಿಸಿದೆವು. ನಾವು ಈಗ ಓರಾನ್ ವಳಿ ಗುರು ಪರಂಪರೆಯಲ್ಲಿ ಮುಂದಿನ ಅಚಾರ್ಯರ ಬಗ್ಗೆ ಮುಂದುವರೆಯೋಣ.

ತಾನಾನ ತಿರುಮೇನಿ (ಶ್ರೀರಂಗಂ) ತಾನುಗಂದ ತಿರುಮೇನಿ (ಶ್ರೀಪೆರುಂಬೂದೂರ್) ತಮರುಗಂದ ತಿರುಮೇನಿ (ತಿರುನಾರಾಯಣಪುರಂ)

ತಿರುನಕ್ಷತ್ರಂ: ಚಿತ್ತಿರೈ, ತಿರುವಾದಿರೈ

ಅವತಾರ ಸ್ಥಳಂ: ಶ್ರೀಪೆರುಂಬೂದೂರ್

ಆಚಾರ್ಯ: ಪೆರಿಯ ನಂಬಿ

ಶಿಷ್ಯರು: ಕೂರತ್ತಾಳ್ವಾನ್, ಮುದಲಿಯಾಂಡಾನ್, ಎಂಬಾರ್, ಅರುಳಾಳಪ್ಪೆರುಮಾಳ್ ಎಂಬೆರುಮಾನಾರ್, ಅನಂತಾಳ್ವಾನ್, 74 ಸಿಂಹಾಸನಾಧಿಪತಿಗಳು, ಸಾವಿರಾರು ಶಿಷ್ಯರು. ಅವರಲ್ಲಿ 12000 ಶ್ರೀವೈಷ್ಣವರು, 74 ಸಿಂಹಾಸನಾಧಿಪತಿಗಳು, 700 ಸಂನ್ಯಾಸಿಗಳು ಹಾಗು ವಿವಿಧ ಜಾತಿ/ಮತಗಳಿಗೆ ಸೇರಿದಂತಹ ಬಹಳಷ್ಟು ಶಿಷ್ಯರಿದ್ದರೆಂದು ಹೇಳಲಾಗುತ್ತದೆ

ಪರಮಪದ ಹೊಂದಿದ ಸ್ಥಳ: ತಿರುವರಂಗಂ

ಕೃತಿಗಳು: ಅವರು ರಚಿಸಿರುವ ಒಂಬತ್ತು ಗ್ರಂಥಗಳು ನವರತ್ನಗಳೆಂದು ಪರಿಗಣಿಸಲ್ಪಡುವುದು. ಅವು ಶ್ರೀಭಾಷ್ಯ, ಗೀತಾ ಭಾಷ್ಯ, ವೇದಾಂತ ಸಂಗ್ರಹ, ವೇದಾಂತ ದೀಪ, ವೇದಾಂತ ಸಾರ, ಶರಣಾಗತಿ ಗದ್ಯ, ಶ್ರೀರಂಗ ಗದ್ಯ, ಶ್ರೀವೈಕುಂಠಗದ್ಯ ಹಾಗು ನಿತ್ಯಗ್ರಂಥ

ಕೇಶವ ದೀಕ್ಷಿತರ್ ಹಾಗು ಕಾಂತಿಮತಿ ಅಮ್ಮಂಗಾರ್ ರಿಗೆ ಶ್ರೀಪೆರುಂಬೂದೂರಿನಲ್ಲಿ ಆದಿಶೇಷನ ಅವತಾರದಲ್ಲಿ ಹುಟ್ಟಿದ ಇಳೈಯಾಳ್ವಾರ್ ಅವರು ಇನ್ನೂ ಹಲವು ಹೆಸರುಗಳಿಂದ ಪರಿಚಿತರು. ಅವರಿಗೆ ಹೆಸರು ನೀಡಿದವರು ಹಾಗು ಅವರ ಅನೇಕ ಹೆಸರುಗಳು ಏನೆಂದು ನೋಡೋಣ.

 • ಇಳೈಯಾಳ್ವಾರ್ – ಅವರ ಹೆತ್ತವರ ಪರವಾಗಿ ಪೆರಿಯ ತಿರುಮಲೈ ನಂಬಿ ನೀಡಿದ್ದು
 • ಶ್ರೀ ರಾಮಾನುಜ – ಅವರ ಪಂಚಸಂಸ್ಕಾರದಲ್ಲಿ ಪೆರಿಯ ನಂಬಿ ನೀಡಿದ್ದು
 • ಯತಿರಾಜ ಮತ್ತು ರಾಮಾನುಜ ಮುನಿ – ಸಂನ್ಯಾಸಾಶ್ರಮ ಸ್ವೀಕಾರದಲ್ಲಿ ದೇವಪ್ಪೆರುಮಾಳ್ ನೀಡಿದ್ದು
 • ಉಡೈಯವರ್ – ನಮ್ ಪ್ಪೆರುಮಾಳ್ ನೀಡಿದ್ದು
 • ಲಕ್ಷ್ಮಣ ಮುನಿ – ತಿರುವರಂಗಪ್ಪೆರುಮಾಳ್ ಅರೈಯರ್ ನೀಡಿದ್ದು
 • ಎಂಬೆರುಮಾನಾರ್ – ತಿರುಕ್ಕೋಷ್ಟಿಯೂರ್ ನಂಬಿ ನೀಡಿದ್ದು -ತಿರುಕೋಷ್ಟಿಯೂರಿನಲ್ಲಿ ತಮ್ಮಲ್ಲಿ ಶರಣಾಗತಿ ಮಾಡಿದವರಿಗೆ ಚರಮಶ್ಲೋಕದ ಅರ್ಥವನ್ನು ಎಂಬೆರುಮಾನಾರ್ ಕೊಟ್ಟಾಗ.
 • ಶಠಗೋಪನ್ ಪೊನ್ನಡಿ – ತಿರುಮಲೈಯಾಂಡಾನ್ ನೀಡಿದ್ದು.
 • ಕೋಯಿಲ್ ಅಣ್ಣನ್ – ಆಂಡಾಳ್ ನೀಡಿದ್ದು – ತಿರುಮಾಲಿರುಂಶೋಲೈ ಅಳಗರ್ ರಿಗೆ 100  ಪಾತ್ರೆಗಳಲ್ಲಿ ಬೆಣ್ಣೆಯನ್ನೂ 100  ಪಾತ್ರೆಗಳಲ್ಲಿ ಅಕ್ಕಾರವಡಿಶಲ್ ಗಳನ್ನೂ ಎಂಬೆರುಮಾನಾರ್ ನೀಡಿದಾಗ.
 • ಶ್ರೀಭಾಷ್ಯಕಾರರ್ – ಕಾಶ್ಮೀರದಲ್ಲಿ ಸರಸ್ವತಿ ನೀಡಿದ್ದು.
 • ಭೂತಪುರೀಶರ್ – ಶ್ರೀಪೆರುಂಬೂದೂರಿನ ಆದಿ ಕೇಶವ ಪ್ಪೆರುಮಾಳ್ ನೀಡಿದ್ದು.
 • ದೇಶಿಕೇಂದ್ರರ್ – ತಿರುವೇಂಗಡಮುಡೈಯಾನ್ ನೀಡಿದ್ದು.

ಸಂಕ್ಷಿಪ್ತ ಜೀವನ ಚರಿತ್ರೆ

 • ತಿರುವಲ್ಲಿಕ್ಕೇಣಿ ಪಾರ್ಥಸಾರಥಿ ಎಂಬೆರುಮಾನ್ ಅವರ ಅನುಗ್ರಹ ಹಾಗು ಅಂಶಾವತಾರವಾಗಿ ಶ್ರೀಪೆರುಂಬೂದೂರಿನಲ್ಲಿ ಹುಟ್ಟಿದರು.

ಉಭಯ ನಾಚ್ಚಿಯಾರೊಡನೆ ಪಾರ್ಥಸಾರಥಿ ಹಾಗು ಉಡಯವರ್ – ತಿರುವಲ್ಲಿಕ್ಕೇಣಿ

 • ತಂಜಮ್ಮಾಳ್ (ರಕ್ಷಕಾಂಬಾಳ್) ಅವರೊಂದಿಗೆ ಮದುವೆಯಾದರು.
 • ಕಾಂಚೀಪುರಕ್ಕೆ ತೆರಳಿ ಯಾದವಪ್ರಕಾಶರಲ್ಲಿ ಸಾಮಾನ್ಯಶಾಸ್ತ್ರ ಹಾಗು ಪೂರ್ವಪಕ್ಷ ಕಲಿತರು.
 • ಶಾಸ್ತ್ರವಾಕ್ಯಗಳಿಗೆ ಯಾದವಪ್ರಕಾಶರು ಡೊಂಕಾದ ವ್ಯಾಖ್ಯಾನಗಳು ನೀಡಿದಾಗ – ಇಳೈಯಾಳ್ವಾರ್ ಅದನ್ನು ಸರಿಪಡಿಸಿದರು.
 • ವಾರಣಾಸಿಗೆ ತೀರ್ಥಯಾತ್ರೆಯ ಸಮಯದಲ್ಲಿ ಇಳೈಯಾಳ್ವಾರರನ್ನು ಕೊಲ್ಲಲು ಯಾದವಪ್ರಕಾಶರ ಕೆಲ  ಶಿಷ್ಯರು ಸಂಚನ್ನು ರೂಪಿಸುತ್ತಾರೆ. ಗೋವಿಂದ (ಮುಂದೆ ಎಂಬಾರ್) ಎನ್ನುವ  ಇಳೈಯಾಳ್ವಾರರ ಸೋದರಸಂಬಂಧಿ ಆ ಯೋಜನೆಯನ್ನು ಅಡ್ಡಿಪಡಿಸಿ ಇಳೈಯಾಳ್ವಾರರನ್ನು ಕಾಂಚೀಪುರದತ್ತ ಕಳುಹಿಸುತ್ತಾರೆ. ಕಾಡಿನಲ್ಲಿ ಕಳೆದು ಹೋಗಿದ್ದ ಭಾವನೆಯಲ್ಲಿದ್ದ ಇಳೈಯಾಳ್ವಾರರಿಗೆ ದೇವಪ್ಪೆರುಮಾಳ್ ಮತ್ತು ಪ್ಪೆರುಂದೇವಿ ತಾಯಾರ್ ಸಹಾಯ ಮಾಡಿ, ಇಳೈಯಾಳ್ವಾರ್ ಕಾಂಚೀಪುರಕ್ಕೆ ಹಿಂತಿರುಗಿ ಬರುತ್ತಾರೆ.
 • ಹಿಂತಿರುಗಿದ ನಂತರ ತಮ್ಮ ತಾಯಿಯ ಸಲಹೆಯಂತೆ ಅವರು  ತಿರುಕ್ಕಚ್ಚಿ ನಂಬಿಗಳ ಮಾರ್ಗದರ್ಶನದಲ್ಲಿ ದೇವಪ್ಪೆರುಮಾಳ್ ರ ಕೈಂಕರ್ಯದಲ್ಲಿ ತೊಡಗುತ್ತಾರೆ.
 • ಇಳೈಯಾಳ್ವಾರ್ ಆಳವಂದಾರರನ್ನು ಭೇಟಿಮಾಡಲು ಪೆರಿಯನಂಬಿಗಳೊಡನೆ ಶ್ರೀರಂಗಕ್ಕೆ ಪ್ರಯಾಣ ಮಾಡುತ್ತಾರೆ- ಆದರೆ ಆಳವಂದಾರರ ಚರಮ ತಿರುಮೇನಿಯನ್ನು ಮಾತ್ರ ನೋಡುತ್ತಾರೆ. ಆಳವಂದಾರರ 3 ಆಸೆಗಳನ್ನು ತಾವು ಈಡೇರಿಸುವುದಾಗಿ ಪ್ರತಿಜ್ಞೆ ಮಾಡುತ್ತಾರೆ.
 • ಇಳೈಯಾಳ್ವಾರ್ ತಿರುಕ್ಕಚ್ಚಿನಂಬಿಗಳನ್ನು ತಮ್ಮ ಗುರುಗಳನ್ನಾಗಿ ಪರಿಗಣಿಸಿ ತಮಗೆ ಪಂಚಸಂಸ್ಕಾರವನ್ನು ಮಾಡಲು ಕೇಳಿಕೊಳ್ಳುತ್ತಾರೆ, ಆದರೆ ಶಾಸ್ತ್ರ ಪ್ರಮಾಣಗಳನ್ನು  ಉಲ್ಲೇಖಿಸುತ್ತಾ ನಂಬಿಗಳು ಆ ಕಾರ್ಯವನ್ನು ಮಾಡಲು ನಿರಾಕರಿಸುತ್ತಾರೆ. ತಿಕ್ಕಚ್ಚಿನಂಬಿಗಳ ಶೇಷಪ್ರಸಾದವನ್ನು ಸ್ವೀಕರಿಸಲು ಇಳೈಯಾಳ್ವಾರ್ ಬಯಸುತ್ತಾರೆ ಆದರೆ ಅವರ ಬಯಕೆ ಈಡೇರುವುದಿಲ್ಲ.
 • ದೇವಪ್ಪೆರುಮಾಳ್ ತಿರುಕ್ಕಚ್ಚಿ ನಂಬಿಗಳ ಮೂಲಕ ಇಳೈಯಾಳ್ವಾರರಿಗೆ ಆರು ವಾರ್ತೆಗಳನ್ನು (6 ಪದಗಳು) ನೀಡುತ್ತಾರೆ.
 • ಇಳೈಯಾಳ್ವಾರ್ ಹಾಗು ಪೆರಿಯ ನಂಬಿಗಳ ಭೇಟಿ ಮಧುರಾಂತಕದಲ್ಲಿ ನಡೆಯುತ್ತದೆ. ಪೆರಿಯನಂಬಿಗಳು ಇಳೈಯಾಳ್ವಾರರಿಗೆ ಪಂಚಸಂಸ್ಕಾರವನ್ನು ಮಾಡುತ್ತಾರೆ ಹಾಗು ಅವರಿಗೆ ರಾಮಾನುಜನ್ ಎನ್ನುವ ದಾಸ್ಯನಾಮವನ್ನು ನೀಡುತ್ತಾರೆ.
 • ರಾಮಾನುಜರ ತಿರುಮಾಳಿಗೆಯಲ್ಲಿ ವಾಸ ಮಾಡುವ ಪೆರಿಯನಂಬಿ ಅವರಿಗೆ ಸಂಪ್ರದಾಯ ಅರ್ಥಗಳಲ್ಲವನ್ನೂ ಕಲಿಸುತ್ತಾರೆ.  ಅಂತಿಮವಾಗಿ ಪೆರಿಯನಂಬಿಗಳು ಶ್ರೀರಂಗಕ್ಕೆ ಹೊರಡುತ್ತಾರೆ.
 • ರಾಮಾನುಜರು ದೇವಪ್ಪೆರುಮಾಳ್ ರಿಂದ ಸಂನ್ಯಾಸಾಶ್ರಮವನ್ನು ಸ್ವೀಕರಿಸುತ್ತಾರೆ.
 • ಆಳ್ವಾನ್ ಮತ್ತು ಆಂಡಾನ್ ರಾಮಾನುಜರ ಶಿಷ್ಯರಾಗುತ್ತಾರೆ.
 • ರಾಮಾನುಜರ ಶಿಷ್ಯರಾಗುವ ಯಾದವಪ್ರಕಾಶರು ಗೋವಿಂದ ಜೀಯರ್ ಎಂದು ಕರೆಸಿಕೊಳ್ಳುತ್ತಾರೆ. ಅವರು ರಚಿಸಿದ “ಯತಿ  ಧರ್ಮ ಸಮುಚ್ಚಯಂ”- ಶ್ರೀವೈಷ್ಣವ ಯತಿಗಳಿಗೆ ಮಾರ್ಗದರ್ಶನವಾಗಿ ಉಪಯೋಗಿಸಲ್ಪಡುತ್ತದೆ.
 • ಪೆರಿಯಪ್ಪೆರುಮಾಳ್ ತಿರುವರಂಗ ಪ್ಪೆರುಮಾಳ್ ಅವರನ್ನು  ರಾಮಾನುಜರನ್ನು ಶ್ರೀರಂಗಕ್ಕೆ ಕರೆತರಲು ದೇವಪ್ಪೆರುಮಾಳ್ ಅವರ ಬಳಿಗೆ ಕಳುಹಿಸುತ್ತಾರೆ. ದೇವಪ್ಪೆರುಮಾಳ್ ಒಪ್ಪಿದ ನಂತರ ರಾಮಾನುಜರು ಶ್ರೀರಂಗವಾಸಿಯಾಗುತ್ತಾರೆ.
 • ರಾಮಾನುಜರು ಪೆರಿಯ ತಿರುಮಲೈ ನಂಬಿಗಳಿಂದ ಗೋವಿಂದ ಭಟ್ಟರ್ (ಎಂಬಾರ್) ಅವರನ್ನು ಪುನಃ ಶ್ರೀವೈಷ್ಣವ ಧರ್ಮಕ್ಕೆ ಕರೆತರಲು ಏರ್ಪಾಡುಮಾಡುತ್ತಾರೆ.
 • ತಿರುಕ್ಕೋಷ್ಟಿಯೂರ್ ನಂಬಿಗಳಿಂದ ಚರಮ ಶ್ಲೋಕಗಳನ್ನು ಕಲಿಯಲು ರಾಮಾನುಜರು ತಿರುಕ್ಕೋಷ್ಟಿಯೂರಿಗೆ ಪ್ರಯಾಣ ಮಾಡುತ್ತಾರೆ. ಅವರು ಅದನ್ನು ಕಲಿಯಲು ಆಸಕ್ತಿ ಹೊಂದಿರುವ ಎಲ್ಲರಿಗೂ ಕಲಿಸಿ, ತಿರುಕ್ಕೋಷ್ಟಿಯೂರ್ ನಂಬಿಗಳಿಂದ ಎಂಬೆರುಮಾನಾರ್ ಎಂಬ ಹೆಸರು ಪಡೆಯುತ್ತಾರೆ.
 • ಎಂಬೆರುಮಾನಾರ್ ತಿರುವಾಯ್ ಮೊಳಿ ಕಾಲಕ್ಷೇಪವನ್ನು ತಿರುಮಾಲೈ ಆಂಡಾನ್ ಬಳಿ ಕೇಳಿಸಿಕೊಳ್ಳುತ್ತಾರೆ.
 • ಎಂಬೆರುಮಾನಾರ್ ಪರಮೋಪಾಯ (ಆಚಾರ್ಯ) ನಿಷ್ಠೆಯನ್ನು ತಿರುವರಂಗ ಪ್ಪೆರುಮಾಳ್ ಅರೈಯರ್ ಅವರಿಂದ ಕಲಿಯುತ್ತಾರೆ.
 • ಎಂಬೆರುಮಾನಾರ್ ತಮ್ಮ ಪರಮ ಕೃಪೆಯಿಂದ ತಮ್ಮ ಅನುನಾಯಿಗಳ ಹಿತಕ್ಕಾಗಿ ಪಂಗುನಿ ಉತ್ತಿರಂ ದಿನದಂದು  ನಮ್ ಪೆರುಮಾಳ್ ಮತ್ತು ಶ್ರೀರಂಗನಾಚ್ಚಿಯಾರ್ ಅವರ ಮುಂದೆ ಶರಣಾಗತಿ ಮಾಡುತ್ತಾರೆ.
 • ಎಂಬೆರುಮಾನ್ ರಿಗೆ ವಿಷ ಮಿಶ್ರಿತ ಆಹಾರ ನೀಡಲಾಗುತ್ತದೆ. ಶ್ರೀರಂಗಕ್ಕೆ ಭೇಟಿ ನೀಡುವ ತಿರುಕ್ಕೋಷ್ಟಿಯೂರ್ ನಂಬಿಗಳು ಎಂಬೆರುಮಾನರ ಭಿಕ್ಷೆಯನ್ನು ನೋಡಿಕೊಳ್ಳಬೇಕೆಂದು ಕಿಡಾಂಬಿ ಆಚ್ಚಾನ್ ರನ್ನು ಆಜ್ಞಾಪಿಸುತ್ತಾರೆ.
 • ಎಂಬೆರುಮಾನಾರ್ ಯಜ್ಞಮೂರ್ತಿ ಅವರನ್ನು ಚರ್ಚೆಯಲ್ಲಿ ಸೋಲಿಸಿತ್ತಾರೆ. ಅರುಳಾಳ ಪ್ಪೆರುಮಾಳ್ ಎಂಬೆರುಮಾನಾರ್ ಎಂದು ಕರೆಯಲ್ಪಡುವ ಯಜ್ಞಮೂರ್ತಿಗೆ ಎಂಬೆರುಮಾನ್ ಅವರ ತಿರುವಾರಾಧನಾ ಎಂಬೆರುಮಾನ್ ಅವರ ತಿರುವಾರಾಧನ ಕೈಂಕರ್ಯವನ್ನು ನೀಡಲಾಗುತ್ತದೆ.
 • ಅರುಳಾಳ ಪ್ಪೆರುಮಾಳ್ ಎಂಬೆರುಮಾನ್ ಅವರ ಶಿಷ್ಯರಾಗುವಂತೆ ಅನಂತಾಳ್ವಾನ್ ಮತ್ತಿತರರಿಗೆ ಎಂಬೆರುಮಾನ್ ನಿರ್ದೇಶಿಸುತ್ತಾರೆ.
 • ತಿರುವೇಂಗಡಮುಡೈಯಾನ್ ರಿಗೆ ನಿತ್ಯ ಕೈಂಕರ್ಯ ನಿರ್ವಹಿಸಲು ಎಂಬೆರುಮಾನ್ ಅನಂತಾಳ್ವಾನ್ ರನ್ನು ತಿರುಮಲೈ ಗೆ ಕಳುಹಿಸುತ್ತಾರೆ.
 • ಎಂಬೆರುಮಾನ್ ತೀರ್ಥಯಾತ್ರೆಗೆ ಹೊರಟು ಕೊನೆಗೆ ತಿರುಮಲೈ ಸಂದರ್ಶಿಸುತ್ತಾರೆ.
 • ತಿರುವೇಂಗಡಮುಡೈಯಾನ್ ಓರ್ವ ವಿಷ್ಣು ಮೂರ್ತಿ (ವಿಗ್ರಹ) ಎಂದು ನಿರೂಪಿಸಿವ ಎಂಬೆರುಮಾನಾರ್ ಅದಕ್ಕೆ ವಿರೋಧವ್ಯಕ್ತಪಡಿಸಿದ ಕುದೃಷ್ಟಿಗಳನ್ನು ಸೋಲಿಸುತ್ತಾರೆ. ತಿರುವೇಂಗಡಮುಡೈಯಾನ್ ರ ಆಚಾರ್ಯರೆಂದೇ ಕೊಂಡಾಡಲ್ಪಡುವ ಅವರು, ತಿರುಮಲೈ ನಲ್ಲಿ ಜ್ಞಾನಮುದ್ರೆಯೊಂದಿಗೆ ಇರುವುದನ್ನು ನೋಡಬಹುದು.

ಎಂಬೆರುಮಾನಾರ್ – ತಿರುಮಲೈ

 • ಅಲ್ಲಿ ಅವರು ಶ್ರೀ ರಾಮಾಯಣ ಕಾಲಕ್ಷೇಪವನ್ನು ಪೆರಿಯ ತಿರುಮಲೈ ನಂಬಿಗಳಿಂದ ಕೇಳುತ್ತಾರೆ.
 • ಎಂಬೆರುಮಾನಾರ್ ಗೋವಿಂದ ಭಟ್ಟರಿಗೆ ಸಂನ್ಯಾಸಾಶ್ರಮವನ್ನು ನೀಡಿ ಅವರಿಗೆ ಎಂಬಾರ್ ಎಂಬ ಹೆಸರನ್ನು ನೀಡುತ್ತಾರೆ.
 • ಎಂಬೆರುಮಾನಾರ್ ಕೂರತ್ತಾಳ್ವಾನ್ ಅವರೊಂದಿಗೆ ಬೋಧಾಯನ ವೃತ್ತಿ ಗ್ರಂಥವನ್ನು ತರಲು ಕಾಶ್ಮೀರಕ್ಕೆ ಭೇಟಿ ನೀಡುತ್ತಾರೆ. ಅವರಿಗೆ ಗ್ರಂಥ ದೊರೆಯುತ್ತದೆ ಆದರೆ ಅಲ್ಲಿನ ದುಷ್ಟ ಪಂಡಿತರು ಎಂಬೆರುಮಾನಾರ್ ಅವರಿಂದ ಗ್ರಂಥವನ್ನು ಕಿತ್ತುಕೊಳ್ಳಲು ಸೈನಿಕರನ್ನು ಕಳುಹಿಸುತ್ತಾರೆ. ಅವುಗಳು ನಷ್ಟವಾದಾಗ, ತಾವು ಎಲ್ಲವನ್ನೂ ನೆನಪಿಟ್ಟುಕೊಂಡಿರುವುದಾಗಿ ಆಳ್ವಾನ್ ಹೇಳುತ್ತಾರೆ.
 • ಆಳ್ವಾನ್ ಅವರ ಸಹಾಯದಿಂದ ಎಂಬೆರುಮಾನಾರ್ ಶ್ರೀಭಾಷ್ಯವನ್ನು ರಚಿಸಿ ಆಳವಂದಾರರ ಮೊದಲ ಆಸೆಯನ್ನು ಪೂರ್ತಿಮಾಡುತ್ತಾರೆ.
 • ತಿರುಕ್ಕುರುಂಗುಡಿಗೆ ಎಂಬೆರುಮಾನಾರ್ ಭೇಟಿ ಮಾಡಿದಾಗ ಎಂಬೆರುಮಾನ್ ಎಂಬೆರುಮಾನಾರ್ ಅವರ ಶಿಷ್ಯರಾಗುತ್ತಾರೆ ಮತ್ತು “ಶ್ರೀವೈಷ್ಣವ ನಂಬಿ” ಎಂಬ ಹೆಸರು ಪಡೆಯುತ್ತಾರೆ.

 • ನಮ್ ಪೆರುಮಾಳ್ ರ ಪ್ರಸಾದದ ಮಹಿಮೆಯಿಂದ ಆಳ್ವಾನ್ ಮತ್ತು ಆಂಡಾಳ್ ರಿಗೆ 2 ಮಕ್ಕಳು ಜನಿಸುತ್ತಾರೆ. ಎಂಬೆರುಮಾನಾರ್ ಅವರಿಗೆ ಪರಾಶರ ಮತ್ತು ವೇದವ್ಯಾಸ ಎಂಬ ಹೆಸರುಗಳನ್ನಿಟ್ಟು ಆಳವಂದಾರರ ಎರಡನೆಯ ಬಯಕೆಯನ್ನು ಪೂರ್ತಿಮಾಡುತ್ತಾರೆ.
 • ಎಂಬಾರರ ಸಹೋದರ ಶಿರಿಯ ಗೋವಿಂದ ಪೆರುಮಾಳ್ ರಿಗೆ ಒಂದು ಮಗು ಹುಟ್ಟಿದಾಗ ಎಂಬೆರುಮಾನಾರ್ ಅದಕ್ಕೆ “ಪರಾಂಕುಶ ನಂಬಿ” ಎಂದು ನಾಮಕರಣ ಮಾಡಿ ಆಳವಂದಾರರ ಮೂರನೆಯ ಬಯಕೆಯನ್ನು ಪೂರೈಸಿದರು. ಆಳವಂದಾರರ ಮೂರನೆಯ ಬಯಕೆಯನ್ನು ಪೂರ್ತಿ ಮಾಡಲು ತಿರುವಾಯ್ಮೊಳಿ ವ್ಯಾಖ್ಯಾನ ಬರೆಯಬೇಕೆಂದು ತಿರುಕ್ಕುರುಗೈ ಪಿರಾನ್ ಪಿಳ್ಳಾನ್ ಅವರಿಗೆ ಎಂಬೆರುಮಾನಾರರು ನಿರ್ದೇಶಿಸಿದರು ಎಂದೂ ಸಹ ಹೇಳಲ್ಪಡುತ್ತದೆ.
 • ತಿರುನಾರಾಯಣಪುರಕ್ಕೆ ಪ್ರಯಾಣ ಮಾಡಿದ ಎಂಬೆರುಮಾನಾರ್, ಅಲ್ಲಿ ದೇವಾಲಯ ಪೂಜೆಯನ್ನು ಸ್ಥಾಪಿಸಿ ಅಲ್ಲಿದ್ದ ಬಹಳಷ್ಟು ಜನರನ್ನು ನಮ್ಮ ಸಂಪ್ರದಾಯಕ್ಕೆ ಕರೆತಂದರು.
 • 1000 ತಲೆಯ ಆದಿಶೇಷನ ಅವತಾರ ಮಾಡಿದ ಎಂಬೆರುಮಾನಾರ್ 1000 ಜೈನ ವಿದ್ವಾಂಸರನ್ನು ಏಕಕಾಲದಲ್ಲಿ ಸೋಲಿಸಿದರು.
 • ಮುಸಲ್ಮಾನ ರಾಜಕುಮಾರಿಯಿಂದ ಶೆಲ್ವಪಿಳ್ಳೈ ಉತ್ಸವಮೂರ್ತಿಯನ್ನು ಮರಳಿ ಪಡೆದ ಎಂಬೆರುಮಾನಾರ್, ಮುಸಲ್ಮಾನ ರಾಜಕುಮಾರಿಗೆ ಶೆಲ್ವಪಿಳ್ಳೈಯೊಂದಿಗೆ ಮದುವೆ ಮಾಡಿಸುತ್ತಾರೆ.
 • ಶೈವ ರಾಜನ ಮರಣದ ನಂತರ ಶ್ರೀರಂಗಕ್ಕೆ ಎಂಬೆರುಮಾನಾರ್ ಹಿಂತಿರುಗುತ್ತಾರೆ. ದೇವಪ್ಪೆರುಮಾಳರನ್ನು ಸ್ತೋತ್ರ ಮಾಡಿ ಕಣ್ಣುಗಳನ್ನು ಮರಳಿ ಪಡೆಯುವಂತೆ ಆಳ್ವಾನ್ ರಿಗೆ ನಿರ್ದೇಶಿಸುತ್ತಾರೆ.
 • ಎಂಬೆರುಮಾನಾರ್ ತಿರುಮಾಲಿರುಂಶೋಲೈಗೆ ಪ್ರಯಾಣ ಬೆಳೆಸಿ, ಆಂಡಾಳ್ ನ ಕೋರಿಕೆಯಂತೆ 100 ಪಾತ್ರೆ ಅಕ್ಕಾರವಡಿಸಿಲ್ ಮತ್ತು 100 ಪಾತ್ರೆ ಬೆಣ್ಣೆಯನ್ನು ಅರ್ಪಿಸಿದರು.
 • ಎಂಬೆರುಮಾನಾರ್ ಅವರು ಪಿಳ್ಳೈ ಉರುಂಗಾವಿಲ್ಲಿ ದಾಸರ್ ಅವರ ಹಿರಿಮೆಯನ್ನು ಇತರ ಶ್ರೀವೈಷ್ಣವರಿಗೆ ತೋರಿಸಿಕೊಡುತ್ತಾರೆ.
 • ಎಂಬೆರುಮಾನಾರ್ ತಮ್ಮ ಶಿಷ್ಯರಿಗೆ ಅನೇಕ ಅಂತಿಮ ನಿರ್ದೇಶನಗಳನ್ನು ನೀಡುತ್ತಾರೆ. ಪರಾಶರ ಭಟ್ಟರನ್ನು ತಮ್ಮಂತೆಯೇ ಕಾಣುವಂತೆ ತಮ್ಮ ಶಿಷ್ಯರಿಗೆ ನಿರ್ದೇಶಿಸುತ್ತಾರೆ. ಅವರು ಪರಾಶರಭಟ್ಟರಿಗೆ ನಂಜೀಯರ್ ಅವರನ್ನು ನಮ್ಮ ಸಂಪ್ರದಾಯಕ್ಕೆ ಕರೆತರುವಂತೆ ನಿರ್ದೇಶಿಸುತ್ತಾರೆ.
 • ಕೊನೆಯಲ್ಲಿ, ಆಳವಂದಾರರ ತಿರುಮೇನಿಯನ್ನು ಧ್ಯಾನ ಮಾಡುತ್ತಾ ಎಂಬೆರುಮಾನಾರ್ ತಮ್ಮ ಲೀಲೆಯನ್ನು ಲೀಲಾ ವಿಭೂತಿಯಲ್ಲಿ ಮುಗಿಸಿಕೊಂಡು, ಪರಮಪದಕ್ಕೆ ಹಿಂತಿರುಗಿ ನಿತ್ಯವಿಭೂತಿಯಲ್ಲಿ ತಮ್ಮ ಲೀಲೆಗಳನ್ನು ಮುಂದುವರೆಸುತ್ತಾರೆ.
 • ಯಾವ ರೀತಿ ಆಳ್ವಾರರ ಚರಮ ತಿರುಮೇನಿಯನ್ನು ಆಳ್ವಾರ್ ತಿರುನಗರಿಯಲ್ಲಿನ ಆದಿನಾಥನ್ ರ ದೇವಸ್ಥಾನದಲ್ಲಿ ಸಂರಕ್ಷಿಸಲ್ಪಟ್ಟಿದೆಯೊ ಅದೇ ರೀತಿ ಎಂಬೆರುಮಾನಾರರ ಚರಮ ತಿರುಮೇನಿಯನ್ನು ಶ್ರೀರಂಗಂನ ರಂಗನಾಥನ ದೇವಾಲಯದಲ್ಲಿ ಸಂರಕ್ಷಿಸಲ್ಪಟ್ಟಿದೆ (ಎಂಬೆರುಮಾನಾರ್ ಸನ್ನಿಧಿಯ ಮೂಲವರ್ ತಿರುಮೇನಿಯ ಕೆಳಗೆ).
 • ಅವರ ಎಲ್ಲಾ ಚರಮ ಕೈಂಕರ್ಯಗಳನ್ನೂ ರಂಗನಾಥನ ಬ್ರಹ್ಮೋತ್ಸವದಂತೆಯೇ ಭರ್ಜರಿಯಾಗಿ ಮಾಡಲಾಯಿತು.

ನಮ್ಮ ಸಂಪ್ರದಾಯದಲ್ಲಿ ಎಂಬೆರುಮಾನಾರ್ ರ ವಿಶಿಷ್ಟ ಸ್ಥಾನ

ನಮ್ಮ ಆಚಾರ್ಯ ರತ್ನ ಹಾರದಲ್ಲಿ ಎಂಬೆರುಮಾನಾರರನ್ನು ನಾಯಕಮಣಿ (ಮಧ್ಯಭಾಗ) ಎಂದು ಪರಿಗಣಿಸಲಾಗಿದೆ. ತಮ್ಮ ಚರಮೋಪಾಯ ನಿರ್ಣಯಂ ಎಂಬ ಕೃತಿಯಲ್ಲಿ, ನಾಯನಾರ್ ಆಚ್ಚಾನ್ ಪಿಳ್ಳೈ (ಪೆರಿಯವಾಚ್ಚಾನ್ ಪಿಳ್ಳೈ ರ ಮಗ) ಎಂಬೆರುಮಾನಾರ್ ಅವರ ಸಂಪೂರ್ಣ ವೈಭವವನ್ನು ಹೊರತಂದಿದ್ದಾರೆ. ಈ ಭವ್ಯವಾದ ಗ್ರಂಥದಿಂದ ಕೆಲವು ವಿಷಯಗಳನ್ನು ನೋಡೋಣ:

 • ಬಹಳಷ್ಟು ಆಚಾರ್ಯರ (ಎಂಬೆರುಮಾನರ ಮುಂಚಿನವರು ಹಾಗು ನಂತರದವರು) ಹೇಳಿರುವಂತೆ ಎಲ್ಲಾ ಶ್ರೀವೈಷ್ಣವರಿಗೂ ಎಂಬೆರುಮಾನರೇ ಚರಮೋಪಾಯ ಎಂದು ಸಿದ್ದವಾಗಿದೆ.
 • ನಮ್ಮ ಪೂರ್ವಾಚಾರ್ಯರೆಲ್ಲರೂ ತಮ್ಮ ಸ್ವಂತ ಆಚಾರ್ಯರ ಮೇಲೆಯೇ ಪೂರ್ಣ ಅವಲಂಬಿತರಾಗಿದ್ದರೂ, ಎಂಬೆರುಮಾನಾರ್ ಅವರ ಉತ್ತಾರಕತ್ವ ಪೂರ್ಣವಾಗಿ ಸ್ಥಾಪಿತವಾಗಿದ್ದು ಏಕೆಂದರೆ, ಎಲ್ಲರ ಆಚಾರ್ಯರೂ ತೋರಿಸಿದ್ದು “ನಾವು ಎಂಬೆರುಮಾನಾರ್ ಅವರ ಮೇಲೇಯೇ ಸಂಪೂರ್ಣವಾಗಿ ಅವಲಂಬಿತರಾಗಿರಬೇಕು” ಎಂದು.
 • ಪೆರಿಯವಚ್ಚಾನ್ ಪಿಳ್ಳೈ ಅವರೂ ಸಹ ತಮ್ಮ ಮಾಣಿಕ್ಕ ಮಾಲೈ ನಲ್ಲಿ ಹೇಳುವುದೇನೆಂದರೆ “ಆಚಾರ್ಯ ಸ್ಥಾನವು ಬಹಳ ವಿಶಿಷ್ಟವಾದುದು ಮತ್ತು ಆ ಸ್ಥಾನಕ್ಕೆ ಎಂಬೆರುಮಾನಾರ್ ಸಂಪೂರ್ಣವಾಗಿ ಅರ್ಹರು” ಎಂದು.
 • ಎಂಬೆರುಮಾನಾರ್ ಅವರ ಮುಂಚಿನ ಆಚಾರ್ಯರು ಅನುವೃತ್ತಿ ಪ್ರಸನ್ನಾಚಾರ್ಯರಾಗಿದ್ದರು. ಅಂದರೆ, ಅವರಿಗೆ ನಿರಂತರವಾಗಿ ಸೇವೆ ಮಾಡಿದಾಗ ಮಾತ್ರ ಅವರುಗಳು ಪ್ರಸನ್ನರಾಗುತ್ತಿದ್ದರು ಹಾಗು ಬೆಲೆಬಾಳುವ ಸೂಚನೆಗಳನ್ನು ನೀಡುತ್ತಿದ್ದರು ಮತ್ತು ಶಿಷ್ಯರನಾಗಿ ಸ್ವೀಕರಿಸುತ್ತಿದ್ದರು. ಆದರೆ ಕಲಿಯುಗದ ಕಷ್ಟಗಳನ್ನು ಮನಗಂಡ ಎಂಬೆರುಮಾನಾರ್ ಅವರು ಆಚಾರ್ಯರುಗಳು ಕೃಪಾಮಾತ್ರರಾಗಿರಬೇಕು ಎಂದು ಗುರುತಿಸಿದ್ದರು. ಅಂದರೆ, ಅವರುಗಳು ಕೃಪೆಯಿಂದ ಪೂರ್ಣರಾಗಿದ್ದು, ಶಿಷ್ಯರುಗಳ ಮನಸ್ಸಿನಲ್ಲಿನ ಬಯಕೆ ಎಂಬ ಒಂದೇ ಕಾರಣಕ್ಕಾಗಿ ಅವರುಗಳನ್ನು ಶಿಷ್ಯರನ್ನಾಗಿ ಸ್ವೀಕರಿಸಬೇಕು ಎಂದು.
 • ಯಾವ ರೀತಿ ಪಿತೃ ಲೋಕದಲ್ಲಿನ ಪಿತೃಗಳು ತಮ್ಮ ಕುಟುಂಬದಲ್ಲಿನ ಸತ್ ಸಂತಾನದಿಂದ (ಒಳ್ಳೆಯ ಸಂತತಿ) ಲಾಭ ಪಡೆಯುತ್ತಾರೆಯೋ ಹಾಗು ಅದೇರೀತಿ ಆ ವ್ಯಕ್ತಿಯ ನಂತರದ ಪೀಳಿಗೆಯವರೂ ಸಹ ಅದರ ಲಾಭಗಳನ್ನು ಪಡೆಯುವಂತೆ, ಎಂಬೆರುಮಾನಾರ್ ರವರ ಮುಂಚಿನ ಮತ್ತು ನಂತರದ ಆಚಾರ್ಯರುಗಳೂ ಸಹ  ಶ್ರೀವೈಷ್ಣವ ಕುಲದಲ್ಲಿ ಎಂಬೆರುಮಾನಾರ್ ಅವರ ಅವತಾರದಿಂದ ಲಾಭ ಪಡೆಯುತ್ತಾರೆ ಎಂದೂ ಸಹ ವಿವರಿಸಲಾಗಿದೆ.  ಯಾವ ರೀತಿ ವಸುದೇವ/ದೇವಕಿ, ನಂದಗೋಪ/ಯಶೋದ ಮತ್ತು ದಶರಥ/ಕೌಸಲ್ಯಾ ಕಣ್ಣನ್ ಎಂಬೆರುಮಾನ್ ಮತ್ತು ಪೆರುಮಾಳ್ ರಿಗೆ ಜನ್ಮ ನೀಡಿ ಕೃತಾರ್ಥರಾದರೋ ಅದೇ ರೀತಿ ಪ್ರಪನ್ನ ಕುಲದಲ್ಲಿ ಎಂಬೆರುಮಾನಾರ್ ಅವರ ಅವತಾರದಿಂದ ಎಂಬೆರುಮಾನಾರ್ ಅವರಿನ ಮುಂಚಿನ ಅಚಾರ್ಯರೂ ಸಹ ಕೃತಾರ್ಥರಾದರು.
 • ಎಂಬೆರುಮಾನಾರ್  ಅವರ ಅವತಾರವನ್ನು ಪೊಲಿಗ ಪೊಲಿಗ ಪೊಲಿಗ ಎಂಬ ಹತ್ತಿನಲ್ಲಿ ಭವ್ಯಗೊಳಿಸಿರುವ ನಮ್ಮಾಳ್ವಾರ್ ಅವರು ನಾಥಮುನಿಗಳಿಗೆ ಭವಿಷ್ಯದಾಚಾರ್ಯ (ಎಂಬೆರುಮಾನಾರ್) ವಿಗ್ರಹವನ್ನು ಎಂಬೆರುಮಾನಾರ್ ಅವರು ಅವತಾರ ಮಾಡುವ ಮುನ್ನವೇ ನೀಡುತ್ತಾರೆ. (ನಮ್ಮಾಳ್ವಾರ್ ಅವರ ಕೃಪೆಯಿಂದ ಮಧುರಕವಿಯಾಳ್ವಾರರು ತಾಮ್ರಪರ್ಣಿ ತೀರ್ಥವನ್ನು ಕುದಿಸಿ ಮತ್ತೊಂದು ಭವಿಷ್ಯದಾಚಾರ್ಯ ವಿಗ್ರಹವನ್ನು ಪಡೆದಿದ್ದರು).

ಭವಿಷ್ಯದಾಚಾರ್ಯ– ಆಳ್ವಾರ್ ತಿರುನಗರಿ

 • ಈ ದಿವ್ಯ ಮಂಗಳ ರೂಪವನ್ನು ಸಂರಕ್ಷಿಸಿ ಪೂಜಿಸುತ್ತಿದ್ದವರು ನಾಥಮುನಿಗಳು, ಉಯ್ಯಕೊಂಡಾರ್ ಮತ್ತು ತಿರುಕ್ಕೋಷ್ಟಿಯೂರ್ ನಂಬಿ ವರೆಗಿನ ಇತರರು (ತಾಮ್ರಪರ್ಣಿ ತೀರ್ಥವನ್ನು ಕುದಿಸಿ ಪಡೆದುಕೊಂಡಂತಹ ಮತ್ತೊಂದು ದಿವ್ಯ ಮಂಗಳ ರೂಪವನ್ನು ಆಳ್ವಾರ್ ತಿರುನಗರಿಯ ಭವಿಷ್ಯದಾಚಾರ್ಯ ಸನ್ನಿಧಿಯಲ್ಲಿ ತಿರುವಾಯ್ಮೊಳಿ ಪಿಳ್ಳೈ ಮತ್ತು ಮಣವಾಳ ಮಾಮುನಿಗಳು ಆರಾಧಿಸುತ್ತಿದ್ದರು.
 • ಪೆರಿಯ ನಂಬಿ ಹೇಳುತ್ತಾರೆ, ಯಾವ ರೀತಿ ಪೆರುಮಾಳ್ ರಘುಕುಲದಲ್ಲಿ ಜನಿಸಿ ಆ ಕುಲವನ್ನುಪ್ರಖ್ಯಾತ ಮಾಡಿದರೋ ಅದೇ ರೀತಿ ಎಂಬೆರುಮಾನಾರ್ ಪ್ರಪನ್ನಕುಲದಲ್ಲಿ ಜನಿಸಿ ಈ ಕುಲವನ್ನು ಪ್ರಖ್ಯಾತಗೊಳಿಸಿದರು ಎಂದು.
 • ಪೆರಿಯ ತಿರುಮಲೈ ನಂಬಿಗಳು ಎಂಬಾರ್ ರಿಗೆ ಹೇಳುವುದೇನೆಂದರೆ “ ನೀನು ಯಾವಗಲೂ ಎಂಬೆರುಮಾನಾರ್ ತಿರುವಡಿಗಳನ್ನೇ ಹೆಚ್ಚಾಗಿ ಯೋಚಿಸಬೇಕು ಮತ್ತು ನನಗಿಂತಲೂ ನೀನು ಎಂಬೆರುಮಾನಾರ್ ರ ಬಗ್ಗೆ ಯೋಚಿಸಬೇಕು” ಎಂದು.
 • ತಿರುಕ್ಕೋಷ್ಟಿಯೂರ್ ನಂಬಿ ತಮ್ಮ ಕೊನೆಯ ದಿನಗಳಲ್ಲಿ ಹೇಳುತ್ತಿದ್ದುದು “ಎಂಬೆರುಮಾನಾರ್ ರೊಂದಿಗೆ ಸಂಭಂಧ ಹೊಂದಿದ್ದಕ್ಕೆ ತಾವು ಅದೃಷ್ಟವಂತರು” ಎಂದು. ಹಾಗೆಯೇ ಒಂದು ಸಲ ತಿರುಮಲೈ ಆಂಡಾನ್ ಅಪಾರ್ಥ ಮಾಡಿಕೊಂಡಿದ್ದಾಗ, ಅವರಿಗೆ ತಿರುಕ್ಕೋಷ್ಟಿಯುರ್ ನಂಬಿ ಹೇಳುತ್ತಾರೆ “ನೀವು ಎಂಬೆರುಮಾನಾರ್ ರಿಗೆ ಹೊಸದೇನನ್ನೂ ಕಲಿಸುತ್ತಿಲ್ಲ ಏಕೆಂದರೆ ಅವರು ಈಗಾಗಲೇ ಸರ್ವಜ್ಞರು. ಯಾವ ರೀತಿ ಕಣ್ಣನ್ ಎಂಬೆರುಮಾನ್ ಸಾಂದೀಪನೀ ರ ಬಳಿ ಕಲಿತರೂ ಮತ್ತು ಹೇಗೆ ಪೆರುಮಾಳ್ ವಸಿಷ್ಟರ ಬಳಿ ಕಲಿತರೋ ಹಾಗೆಯೇ ಎಂಬೆರುಮಾನಾರ್ ನಮ್ಮಿಂದ ಕಲಿಯುತ್ತಿದ್ದಾರೆ” ಎಂದು.
 • ಪೇರರುಳಾಳನ್, ಪೆರಿಯ ಪೆರುಮಾಳ್, ತಿರುವೇಂಗಡಮುಡೈಯಾನ್, ತಿರುಮಾಲಿರುಂಶೋಲೈ ಅಳಗರ್, ತಿರುಕ್ಕುರುಂಗುಡಿ ನಂಬಿ ಮತ್ತಿತರರು ಸಹ ಎಂಬೆರುಮಾನಾರ್ ಅವರ ವೈಭವ/ಪ್ರಾಮುಖ್ಯತೆ ಪ್ರಕಾಶಗೊಳಿಸಿದರು ಮತ್ತು ಎಲ್ಲರಿಗೂ ಎಂಬೆರುಮಾನಾರ್ ಅವರ ಮೇಲೆ ಸಂಪೂರ್ಣವಾಗಿ ಅವಲಂಬಿತರಾಗಿರುವಂತೆ ನಿರ್ದೇಶಿಸಿದರು.
 • ಅರುಳಾಳ ಪ್ಪೆರುಮಾಳ್ ಎಂಬೆರುಮಾನಾರ್, ಆಳ್ವಾನ್, ಆಂಡಾನ್, ಎಂಬಾರ್, ವಡುಗ ನಂಬಿ, ವಂಗಿಪುರತ್ತು ನಂಬಿ, ಭಟ್ಟರ್, ನಡಾದೂರ್ ಅಮ್ಮಾಳ್, ನಂಜೀಯರ್, ನಂಬಿಳ್ಳೈ, ಮತ್ತು ಅನೇಕ ಇತರ ಆಚಾರ್ಯರು ತಮ್ಮ ಶಿಷ್ಯರಿಗೆ ತೋರಿಸಿಕೊಟ್ಟಿರುವುದೇನೆಂದರೆ “ನಾವು ಯಾವಾಗಲೂ ಎಂಬೆರುಮಾನಾರ್ ತಿರುವಡಿಗಳೇ ಶರಣಾಗಬೇಕು” ಎಂದು.
 • ನಮ್ಮ ಪೂರ್ವಾಚಾರ್ಯರು ನಮಗೆ ವಿವರಿಸುವುದೇನೆಂದರೆ ನಾವು ಯಾವಾಗಲೂ ಎಂಬೆರುಮಾನಾರ್ ರನ್ನು ಉಪಾಯ ಹಾಗು ಉಪೇಯವಾಗಿ ಯೋಚಿಸಬೇಕು ಎಂದು. ಇದನ್ನು ಚರಮೋಪಾಯ ನಿಷ್ಟೆ ಅಥವಾ ಅಂತಿಮೋಪಾಯ ನಿಷ್ಟೆ ಎನ್ನುತ್ತಾರೆ.
 • ಕೂರತ್ತಾಳ್ವಾನ್ ಅವರಿಂದ ಸುಧಾರಣೆಗೊಂಡ ತಿರುವರಂಗತ್ತಮುದನಾರ್, ಎಂಬೆರುಮಾನಾರ್ ರ ಪ್ರತಿ  ಮಹಾನ್ ಪ್ರೀತಿ ಬೆಳೆಸಿಕೊಂಡಿದ್ದರು. ತಮ್ಮ ರಾಮಾನುಜನೂಟ್ರಂದಾದಿ ಪ್ರಬಂಧದಲ್ಲಿ ತಮ್ಮ ಭಾವನೆಗಳನ್ನೆಲ್ಲಾ ಧಾರಾಕಾರವಾಗಿ ಹೊರಗಿಟ್ಟರು. ಎಂಬೆರುಮಾನಾರಿಗೆ ಯೋಗ್ಯವಾದ ಈ ವೈಭವೀಕರಣ, ಎಂಬೆರುಮಾನಾರ್ ಶ್ರೀರಂಗದಲ್ಲಿ ವಾಸಿಸುತ್ತಿರುವಾಗ ರಚಿಸಿದಂತಹ ಪ್ರಬಂಧ ಮತ್ತು ನಂಬೆರುಮಾಳ್ ತಮ್ಮ ಪುರಪ್ಪಾಡಿನ ಮುಂದೆ (ಇಂತಹ ಪುರಪ್ಪಾಡಿನ ಮುಂದೆ ಸಮಾನ್ಯವಾಗಿ ಇರುವಂತಹ) ಯಾವುದೇ ವಾದ್ಯಘೋಷದಂತಹ ಅಡಚಣೆಗಳಿಲ್ಲದೆ ಓದಬೇಕೆಂದು ನಿಯಮಿಸಿದ್ದರು. ಎಂಬೆರುಮಾನಾರರ ಖ್ಯಾತಿ ಹಾಗು ನಮ್ಮ ಸಂಪ್ರದಾಯಕ್ಕೆ ಅವರು ನೀಡಿದಂತಹ ಕೊಡುಗೆಗಳನ್ನು ಮನಗಂಡ ನಮ್ಮ ಪೂರ್ವಾಚಾರ್ಯರುಗಳು ಈ ಪ್ರಬಂಧವನ್ನು  4000 ದಿವ್ಯ ಪ್ರಭಂಧಗಳೊಡನೆ ಸೇರಿಸಿದರು. ಇದು ಮಾತ್ರವಲ್ಲದೆ, ಇದು ಪ್ರಪನ್ನ ಗಾಯಾತ್ರಿ ಎಂದು ಹೆಸರುವಾಸಿಯಾಗಿ, ಪ್ರತಿಯೋರ್ವ ಶ್ರೀವೈಷ್ಣವರೂ ದಿನಕ್ಕೆ ಒಂದು ಸಲವಾದರೂ ಸಂಪೋರ್ಣವಾಗಿ ಅನುಸಂಧಾನ ಮಾಡಲೇಬೇಕು.

ಮಣವಾಳ ಮಾಮುನಿಗಳು ತಮ್ಮ ಉಪದೇಶರತ್ನಮಾಲೆಯಲ್ಲಿ ತೋರಿಸಿಕೊಡುವುದೇನೆಂದರೆ, ನಮ್ ಪೆರುಮಾಳ್ ಸ್ವತ: ತಾವೆ ನಮ್ಮ ದರ್ಶನವನ್ನು “ಎಂಬೆರುಮಾನಾರ್ ದರ್ಶನ” ಎಂದು ಹೆಸರು ನೀಡಿದ್ದಾರೆ ಎಂದು. ಅವರು ಮತ್ತೂ ಹೇಳುವುದೇನೆಂದರೆ, ಎಂಬೆರುಮಾನಾರ್ ರ ಮುಂಚಿನ ಆಚಾರ್ಯರು ಅನುವೃತ್ತಿ ಪ್ರಸನ್ನಾಚಾರ್ಯರಾಗಿದ್ದರು ಮತ್ತು ತಮ್ಮನ್ನು ಅತ್ಯಂತ ಸಮರ್ಪಣಾ ಭಾವದಿಂದ ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿದ ಕೆಲ ಶಿಷ್ಯರಿಗೆ ಮಾತ್ರ ನಿರ್ದೇಶನಗಳನ್ನು ನೀಡುತ್ತಿದ್ದರು.  ಆದರೆ ಎಂಬೆರುಮಾನಾರ್ ಇಂತಹ ಪ್ರವೃತ್ತಿಯನ್ನು ಬದಲಾಯಿಸಿದರು ಮತ್ತು ಈ ಕಲಿಯುಗದಲ್ಲಿ ಆಚಾರ್ಯರು ಕೃಪೆ ತುಂಬಿದವರಾಗಿರಬೇಕು ಎಂದು ತೋರಿಸಿಕೊಟ್ಟರು. ಸಂಸಾರದಲ್ಲಿನ ದು:ಖ ಹಾಗು ಕಷ್ಟಗಳನ್ನು ಕಂಡು, ಈ ಸಂಸಾರದಿಂದ ವಿಮುಕ್ತರಾಗಲು ಬಯಸುವಂತಹ ವ್ಯಕ್ತಿಗಳನ್ನು ಆಚಾರ್ಯರುಗಳು ಹುಡುಕಬೇಕು ಮತ್ತು ಅವರುಗಳಿಗೆ ಸಂಸಾರದಿಂದ ಮುಕ್ತರಾಗಲು ಇರುವ ಪ್ರಕ್ರಿಯೆಗಳ ಬಗ್ಗೆ ಬೆಲೆಬಾಳುವ ಅರ್ಥಗಳನ್ನು ನೀಡಬೇಕು.  ಎಂಬೆರುಮಾನಾರ್ ತಾವು ಮಾತ್ರ ಅದನ್ನು ಮಾಡಿದ್ದುದಲ್ಲದೆ,  ನಮ್ಮ ಸನಾತನ ಧರ್ಮವನ್ನು ಎಲ್ಲೆಡೆಗಳಲ್ಲಿ ಪ್ರಚುರಗೊಳಿಸಿ ಪ್ರತಿ ಒಬ್ಬರಿಗೂ ಕೃಪೆ ಮಾಡಲು 74 ಸಿಂಹಾಸನಾಧಿಪತಿಗಳನ್ನು ಸ್ಥಾಪಿಸಿದರು.

ಎಂಬೆರುಮಾನ್ ರ ವೈಭವದ ಬಗ್ಗೆ ಕ್ಷಿಪ್ರವಾಗಿ ಮಾತನಾಡುವುದು ಸುಲಭ ಆದರೆ ಎಂಬೆರುಮಾನಾರ್ ವೈಭವ ಅನಿಯಮಿತವಾದದ್ದು. ಅವರು ತಾವೇ ತಮ್ಮ ಸಾವಿರ ನಾಲಗೆಗಳಿಂದ (ಆದಿಶೇಷ ರಂತೆ) ತಮ್ಮ ವೈಭವಗಳನ್ನು ಹೇಳಲು ಅಶಕ್ತರಾಗಿರುವಾಗ, ನಾವುಗಳು ಮಾತ್ರ ನಮ್ಮ ಪೂರ್ಣ ತೃಪ್ತಿಯಾಗುವಂತೆ ಹೇಳುವುದು ಹೇಗೆ ಸಾಧ್ಯ. ನಾವು ಈ ದಿನ ಅವರ ಬಗ್ಗೆ ಮಾತನಾಡಿ (ಮತ್ತು ಓದಿ) ಅಪಾರವಾದ ಲಾಭಗಳಿಸಿಕೊಂಡಿದ್ದೇವೆ ಎಂದು ನಮ್ಮನ್ನು ನಾವು ಸಮಾಧಾನಪಡಿಸಿಕೊಳ್ಳಬಹುದು ಅಷ್ಟೆ.

ಎಂಬೆರುಮಾನಾರ್ ರ ತನಿಯನ್

ಯೋನಿತ್ಯಂ ಅಚ್ಯುತ ಪದಾಂಬುಜ ಯುಗ್ಮ ರುಕ್ಮ
ವ್ಯಾಮೋಹತಸ್ ತದಿತರಾಣಿ ತೃಣಾಯ ಮೇನೇ
ಅಸ್ಮದ್ ಗುರೋರ್ ಭಗವತೋಸ್ಯ ದಯೈಕಸಿಂಧೋ:
ರಾಮಾನುಜಸ್ಯ ಚರಣೌ ಶರಣಂ ಪ್ರಪದ್ಯ

ನಮ್ಮ ಮುಂದಿನ ಲೇಖನದಲ್ಲಿ, ಎಂಬಾರ್ ವೈಭವವನ್ನು ನೋಡೋಣ.

ಅಡಿಯೇನ್ ತಿರುನಾರಾಯಣ ರಾಮಾನುಜ ದಾಸನ್

ಸಂಗ್ರಹ – http://guruparamparai.wordpress.com/2012/09/06/emperumanar/

ರಕ್ಷಿತ ಮಾಹಿತಿ:  https://guruparamparaikannada.wordpress.com

ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಧರ್ಮಗ್ರಂಥಗಳು) – http://granthams.koyil.org
ಪ್ರಮಾತಾ (ಭೋಧಕರು) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org

ಮಹಾ ಪೂರ್ಣ (ಪೆರಿಯ ನಂಬಿ)

ಶ್ರೀ:
ಶ್ರೀಮತೇ ಶಠಕೋಪಾಯ ನಮ:
ಶ್ರೀಮತೇ ರಾಮಾನುಜಾಯ ನಮ:
ಶ್ರೀಮದ್ ವರವರಮುನಯೇ ನಮ:
ಶ್ರೀ ವಾನಾಚಲ ಮಹಾಮುನಯೇ ನಮ:

ಹಿಂದಿನ ಲೇಖನದಲ್ಲಿ (https://guruparamparaikannada.wordpress.com/2018/02/21/alavandhar/) ನಾವು ಆಳವಂದಾರ್ ಬಗ್ಗೆ ಚರ್ಚಿಸಿದೆವು. ನಾವು ಈಗ ಓರಾನ್ ವಳಿ ಗುರು ಪರಂಪರೆಯಲ್ಲಿ ಮುಂದಿನ ಅಚಾರ್ಯರ ಬಗ್ಗೆ ಮುಂದುವರೆಯೋಣ.

ಪೆರಿಯ ನಂಬಿ – ಶ್ರೀರಂಗಂ

ತಿರುನಕ್ಷತ್ರಂ: ಮಾರ್ಗಳಿ, ಕೇಟ್ಟೈ

ಅವತಾರ ಸ್ಥಳಂ: ಶ್ರೀರಂಗಂ

ಆಚಾರ್ಯ: ಆಳವಂದಾರ್

ಶಿಷ್ಯರು: ಎಂಬೆರುಮಾನಾರ್, ಮಲೈ ಕುನಿಯ ನಿನ್ರಾರ್, ಆರಿಯೂರಿಲ್ ಶ್ರೀ ಶಠಗೋಪ ದಾಸರ್, ಅಣಿ ಅರಂಗತ್ತಮುದನಾರ್ ಪಿಳ್ಳೈ, ತಿರುವಾಯ್ ಕುಲಮುಡೈಯಾರ್ ಭಟ್ಟರ್, ಇತರರು.

ಇವರು ಪರಮಪದ ಹೊಂದಿದ ಸ್ಥಳ:  ಚೋಳ ದೇಶದ ಪಸಿಯದು (ಪಶುಪತಿ?) ಕೋಯಿಲ್

ಪೆರಿಯ ನಂಬಿ ಅವರು ಜನಿಸಿದ್ದು ಶ್ರೀರಂಗದಲ್ಲಿ ಮತ್ತು ಅವರು ಮಹಾ ಪೂರ್ಣ, ಪರಾಂಕುಶ ದಾಸ ಹಾಗು ಪೂರ್ಣಾಚಾರ್ಯ ಎಂದೂ ಸಹ ಕರೆಯಲ್ಪಡುತ್ತಾರೆ.

ಇವರು ಆಳವಂದಾರ್ ಅವರ ಪ್ರಧಾನ ಶಿಷ್ಯರಲ್ಲಿ ಒಬ್ಬರಾಗಿದ್ದು ಮತ್ತು ರಾಮಾನುಜರನ್ನು ಶ್ರೀರಂಗಕ್ಕೆ ಕರೆದು ತರಲು ಕಾರಣಕರ್ತರು. ಆಳವಂದಾರ್ ಅವರ ಕಾಲದ ನಂತರ, ರಾಮಾನುಜರನ್ನು ಶ್ರೀರಂಗಕ್ಕೆ ಕರೆದು ತರಲು, ಶ್ರೀರಂಗಂ ನಲ್ಲಿರುವ ಎಲ್ಲಾ ಶ್ರೀವೈಷ್ಣವರೂ ಪೆರಿಯ ನಂಬಿಯವರನ್ನು ಕೇಳಿಕೊಂಡರು. ಆದುದರಿಂದ ಅವರು ತಮ್ಮ ಸಂಸಾರವಂದಿಗರಾಗಿ ಶ್ರೀರಂಗವನ್ನು ಬಿಟ್ಟು ಕಾಂಚೀಪುರದ ಕಡೆಗೆ ಪ್ರಯಾಣವನ್ನು ಬೆಳೆಸುತ್ತಾರೆ.  ಅದೇ ಸಮಯದಲ್ಲಿ ರಾಮಾನುಜರೂ ಸಹ ಪೆರಿಯ ನಂಬಿಯನ್ನು ಕಾಣಲು ಕಾಂಚೀಪುರವನ್ನು ಬಿಟ್ಟು  ಹೊರಟಿರುತ್ತಾರೆ. ಇಬ್ಬರೂ ಮಧುರಾಂತಕದಲ್ಲಿ ಭೇಟಿ ಮಾಡಿದಾಗ ರಾಮನುಜರಿಗೆ ಪೆರಿಯ ನಂಬಿಗಳು ಅಲ್ಲಿಯೇ ಪಂಚಸಂಸ್ಕಾರವನ್ನು ಮಾಡಿಬಿಡುತ್ತಾರೆ. ಅವರು ಕಾಂಚೀಪುರಕ್ಕೆ ಹೋಗಿ ಸಂಪ್ರದಾಯದ ಅರ್ಥಗಳನ್ನು ರಾಮಾನುಜರಿಗೆ ಉಪದೇಶಿಸುತ್ತಾರೆ.  ಆದರೆ ರಾಮಾನುಜರ ಧರ್ಮಪತ್ನಿಯಿಂದಾದ ಕೆಲವು ಉಪಟಳಗಳಿಂದ, ಕಾಂಚೀಪುರವನ್ನು ತೊರೆದು ತಮ್ಮ ಸಂಸಾರದೊಂದಿಗೆ ಶ್ರೀರಂಗಕ್ಕೆ ಹಿಂತಿರುಗುತ್ತಾರೆ.

ಪೆರಿಯ ನಂಬಿ ಅವರ ಜೀವನಕ್ಕೆ ಸಂಬಂಧಿಸಿದಂತೆ ಹಲವಾರು ಘಟನೆಗಳನ್ನು ವಿವಿಧ ಪೂರ್ವಾಚಾರ್ಯ ಶ್ರೀಸೂಕ್ತಿಗಳಲ್ಲಿ ಉಲ್ಲೇಖಿಸಲಾಗಿದೆ.  ಅದರಲ್ಲಿನ ಕೆಲವನ್ನು ನಾವು ಇಲ್ಲಿ ನೋಡೋಣ:

 • ಅವರು ಆತ್ಮ ಗುಣಗಳಿಂದ ತುಂಬಿದ್ದವರು ಹಾಗು ರಾಮಾನುಜರೆಡೆಗೆ ಮಹಾನ್ ಬಾಂಧವ್ಯವನ್ನು ಹೊಂದಿದ್ದರು.  ತನ್ನ ಮಗಳು ಲೌಕಿಕ ಸಹಾಯದ ಅಪೇಕ್ಷೆಯಿಂದ ಬಂದಾಗಲೂ ಸಹ ಅವರು ಅವಳನ್ನು ರಾಮಾನುಜರ ಬಳಿ  ಪರಿಹಾರಕ್ಕಾಗಿ ಕಳುಹಿಸಿದರು
 • ಒಮ್ಮೆ ರಾಮಾನುಜರು ತಮ್ಮ ಎಲ್ಲಾ ಶಿಷ್ಯರೊಂದಿಗೆ ನಡೆದುಕೊಂಡು ಹೋಗುತ್ತಿರುವಾಗ, ಪೆರಿಯ ನಂಬಿಗಳು ಅವರ ಮುಂದೆ ದೀರ್ಘದಂಡ ಪ್ರಣಾಮವನ್ನು ಸಲ್ಲಿಸುತ್ತಾರೆ.  ತನ್ನ ಆಚಾರ್ಯನಿಂದ ಪ್ರಣಾಮಗಳನ್ನು ಸ್ವೀಕರಿಸಿದಂತೆ ಆಗುವುದು ಎಂದುಕೊಂಡ ರಾಮಾನುಜರು ಅದನ್ನು ಅಂಗೀಕರಿಸಲಿಲ್ಲ,  ಹೀಗೇಕೆ ಮಾಡಿದಿರಿ ಎಂದು ಪೆರಿಯ ನಂಬಿಗಳನ್ನು ಕೇಳಿದಾಗ ಅವರು ತಾವು ರಾಮಾನುಜರಲ್ಲಿ ಆಳವಂದಾರರನ್ನು ಕಂಡದ್ದಾಗಿ ತಿಳಿಸುತ್ತಾರೆ. ವಾರ್ತಾಮಾಲೈ ನಲ್ಲಿ ಬರುವ  “ಆಚಾರ್ಯನು ತನ್ನ ಶಿಷ್ಯರ ಮೇಲೆ ಬಹಳ ಗೌರವ ಇಟ್ಟುಕೊಳ್ಳಬೇಕು”  ಎಂಬ ವಾಕ್ಯದಂತೆ, ಪೆರಿಯ ನಂಬಿಗಳು ಅದರಂತೆಯೇ ನಡೆದಿದ್ದರು.
 •  ಮಾರನೇರಿ ನಂಬಿ (ಚತುರ್ಥ ವರ್ಣದಲ್ಲಿ ಜನಿಸಿದ್ದ ಓರ್ವ ಮಹಾನ್ ಶ್ರೀವೈಷ್ಣವ ಹಾಗು ಆಳವಂದಾರ್ ರ ಶಿಷ್ಯ) ಪರಮಪದವನ್ನು ಹೊಂದಿದಾಗ, ಆತನ ಚರಮ ಕೈಂಕರ್ಯಗಳನ್ನು ಪೆರಿಯ ನಂಬಿಗಳು ನಡೆಸಿದರು.  ಅವರ ಈ ಕಾರ್ಯವನ್ನು ಸ್ವೀಕರಿಸದ ಕೆಲ ಸ್ಥಳೀಯ ಶ್ರೀವೈಷ್ಣವರು, ಇದರ ಬಗ್ಗೆ ರಾಮಾನುಜರಲ್ಲಿ ದೂರು ನೀಡುತ್ತಾರೆ.  ರಾಮಾನುಜರು ಇದರ ಬಗ್ಗೆ ವಿಚಾರಿಸಿದಾಗ, ಪೆರಿಯ ನಂಬಿಗಳು ತಾವು ಆಳ್ವಾರ್ ತಿರುವುಳ್ಳಂ ನಂತೆ ತಿರುವಾಯ್ ಮೊಳಿಯ ಪಯಿಲುಂ ಶುಡರೊಳಿ (3.7) ಹಾಗು ನೆಡುಮಾರ್ಕ್ಕಡಿಮೈ (8.10) ದಶಕಗಳಂತೆ ನಡೆದುಕೊಂಡಿದ್ದಾಗಿ ತಿಳಿಸುತ್ತಾರೆ. ಈ ಐತೀಹ್ಯವನ್ನು ಅಳಗೀಯ ಮಣವಾಳ ಪೆರುಮಾಳ್ ನಾಯನಾರ್ ತಮ್ಮ ಆಚಾರ್ಯ ಹೃದಯದಲ್ಲಿ ತೋರಿಸಿದ್ದಾರೆ ಮತ್ತು ಗುರುಪರಂಪರಾ ಪ್ರಭಾವದಲ್ಲಿ ವಿವರಿಸಲಾಗಿದೆ.
 • ಒಮ್ಮೆ ಪೆರಿಯ ಪೆರುಮಾಳ್ ರಿಗೆ ಕೆಲವು ದುಷ್ಕರ್ಮಿಗಳಿಂದ ಅಪಾಯ ಒದಗಿದಾಗ,  ಪೆರಿಯ ಕೋಯಿಲ್ ನ ಸುತ್ತಲೂ ಪ್ರದಕ್ಷಿಣೆ ಮಾಡಲು ಪೆರಿಯ ನಂಬಿಗಳೇ ಸರಿಯಾದ ವ್ಯಕ್ತಿ ಎಂದು ನಿರ್ಧರಿಸಿದರು. ಅವರು ಕೂರತ್ತಾಳ್ವಾನನ್ನು ತಮ್ಮ ಜೊತೆ ಬರಲು ಕೇಳಿಕೊಳ್ಳುತ್ತಾರೆ ಏಕೆಂದರೆ ಪಾರತಂತ್ರ್ಯ ಸ್ವಭಾವವನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಂಡವರಲ್ಲೊಬ್ಬರು ಕೂರತ್ತಾಳ್ವಾನ್ ಎಂದು. ಇದನ್ನು ನಂಬಿಳ್ಳೈ ತಮ್ಮ ತಿರುವಾಯ್ ಮೊಳಿ (7.10.5) ಈಡು ವ್ಯಾಖ್ಯಾನದಲ್ಲಿ ತೋರಿಸಿದ್ದಾರೆ.
 • ಇವೆಲ್ಲಕ್ಕಿಂತಲೂ ಮಿಗಿಲಾಗಿ, ಶೈವ ರಾಜನು ರಾಮಾನುಜರನ್ನು ತನ್ನ ಆಸ್ಥಾನಕ್ಕೆ ಆಹ್ವಾನಿಸಿದಾಗ, ಕೂರತ್ತಾಳ್ವಾನ್ ಮಾರುವೇಶದಲ್ಲಿ ಹೋಗುತ್ತಾರೆ. ಆಳ್ವಾನನ ಜೊತೆ ಬಹಳ ವೃದ್ಧ ವಯಸ್ಕರಾದ ಪೆರಿಯನಂಬಿಗಳೂ ಹೋಗುತ್ತಾರೆ.   ರಾಜನು ಕಣ್ಣುಗಳನ್ನು ಕೀಳಬೇಕೆಂದು ಮಾಡಿದ ಆಜ್ಞೆಯನ್ನು ಒಪ್ಪಿದ ಪೆರಿಯ ನಂಬಿಗಳು, ತಮ್ಮ ವೃದ್ದ ವಯಸ್ಸಿನ ಕಾರಣ ನೋವು ಸಹಿಸಲಾರದೆ ತಮ್ಮ ಜೀವವನ್ನು ತೊರೆದು ಪರಮಪದ ಸೇರುತ್ತಾರೆ. ಆದರೆ ತಮ್ಮ ಪ್ರಾಣ ತ್ಯಜಿಸುವ ಸಮಯದಲ್ಲಿ,  ನಮಗೆ ಒಂದು ಬಹು ಮುಖ್ಯ ಅಂಶವನ್ನು ತೋರಿಸಿಕೊಟ್ಟಿದ್ದಾರೆ.  ಶ್ರೀರಂಗಂ ಇನ್ನು ಕೆಲವೇ ಮೈಲಿಗಳ ದೂರದಲ್ಲಿರುವುದು ಎಂದು ಹೇಳುವ ಆಳ್ವಾನ್ ಹಾಗು ಅತ್ತುಳಾಯ್ (ಪೆರಿಯ ನಂಬಿಗಳ ಪುತ್ರಿ), ಶ್ರೀರಂಗಂ ತಲುಪುವವರೆವಿಗೂ ಪೆರಿಯನಂಬಿಗಳು ತಮ್ಮ ಉಸಿರನ್ನು ಬಿಗಿಹಿಡಿದುಕೊಂಡಿದ್ದು, ಶ್ರೀರಂಗಂನಲ್ಲಿ ದೇಹ ತ್ಯಜಿಸಬಹುದು ಎಂದು ಪ್ರಾರ್ಥಿಸಿಕೊಳ್ಳುತ್ತಾರೆ.  ಒಡನೆಯೇ ನಿಂತು ಬಿಡುವ ಪೆರಿಯ ನಂಬಿಗಳು, ತಮ್ಮ ಪ್ರಾಣವನ್ನು ಅಲ್ಲಿಯೇ ಆಗಲೇ ತ್ಯಜಿಸಿಬಿಡಲು ನಿರ್ಧರಿಸಿಬಿಡುತ್ತಾರೆ. ಯಾರಾದರೂ ಈ ಘಟನೆಯ ಬಗ್ಗೆ ತಿಳಿದು ಪ್ರಾಣವನ್ನು ತ್ಯಜಿಸಲು ಶ್ರೀರಂಗಂ (ಅಥವಾ ಯಾವುದಾದರೂ ದಿವ್ಯದೇಶ) ದಲ್ಲಿಯೇ ಇರಬೇಕು ಎಂದು ತೀರ್ಮಾನಿಸಿದರೆ ಅದು ಆ ಶ್ರೀವೈಷ್ಣವನ ವೈಭವವನ್ನು ಮಿತಿಗೊಳಿಸುತ್ತದೆ ಎಂದು ಪೆರಿಯ ನಂಬಿ ಹೇಳುತ್ತಾರೆ.    ಆಳ್ವಾರ್ ಹೇಳುವಂತೆ “ವೈಗುಂದಂ ಆಗುಂ ತಂ ಊರೆಲ್ಲಾಂ” (வைகுந்தம் ஆகும் தம் ஊரெல்லாம்) – ಎಲ್ಲೆಲ್ಲಿ ಶ್ರೀವೈಷ್ಣವರಿರುವನೊ ಆ ಸ್ಥಳವೇ ವೈಕುಂಠ ಆಗುವುದು.  ನಾವು ಎಲ್ಲಿಯೇ ಇದ್ದರೂ ಎಂಬೆರುಮಾನ್ ನ ಮೇಲೆ ಅವಲಂಬಿಸಿರುವುದೇ ಹೆಚ್ಚು ಮುಖ್ಯ –  ದಿವ್ಯ ದೇಶಗಳಲ್ಲಿ ವಾಸಿಸುವ ಬಹಳಷ್ಟು ಜನರು ಅದರ ಕೀರ್ತಿಗಳನ್ನು ಅರಿತುಕೊಳ್ಳದೇ ವಾಸಿಸುತ್ತಿದ್ದಾರೆ.  ಹಾಗೆಯೇ,  ದೂರಸ್ಥ ಸ್ಥಳಗಳಲ್ಲಿ (ಚಾಂಡಿಲಿ-ಗರುಡನ ಪ್ರಸಂಗ ನೆನೆಪಿಸಿಕೊಳ್ಳಿ) ವಾಸಿಸುವ ಇತರರು ನಿರಂತರವಾಗಿ ಎಂಬೆರುಮಾನ್ ಬಗ್ಗೆ ಚಿಂತಿಸುತ್ತಿರುತ್ತಾರೆ.

ಈ ರೀತಿ ನಾವು ಪೆರಿಯ ನಂಬಿ ಎಷ್ಟು ಉತ್ಕೃಷ್ಟವಾದವರೆಂಬುದನ್ನು ಕಾಣಬಹುದು. ಇವರು ಎಂಬೆರುಮಾನ್ ರ ಮೇಲೆ ಸಂಪೂರ್ಣವಾಗಿ ಅವಲಂಬಿತರಾಗಿದ್ದವರು. ನಮ್ಮಾಳ್ವಾರ್ ಹಾಗು ತಿರುವಾಯ್ ಮೊಳಿಯ ಮೇಲೆ ಇವರಿಗಿದ್ದ ಬಾಂಧವ್ಯದಿಂದ ಇವರನ್ನು ಪರಾಂಕುಶ ದಾಸರ್ ಎಂದೂ ಸಹ ಕರೆಯುತ್ತಾರೆ. ಇವರ ತನಿಯನ್ ನಿಂದ, ಇವರು ಶ್ರೀಯ:ಪತಿಯ ಕಲ್ಯಾಣ ಗುಣಾನುಭವದಲ್ಲಿ ಮುಳುಗಿದ್ದರೆಂದು ಮತ್ತು ಈ ಅನುಭವದಲ್ಲಿ ಸಂಪೂರ್ಣ ತೃಪ್ತಿ ಹೊದಿದ್ದರೆಂದೂ ತಿಳಿಯುತ್ತದೆ. ಅವರಂತಹುದೇ ಗುಣಗಳನ್ನು ನಮಗೂ ಸಹ ದಯಪಾಲಿಸಿ ಎಂದು ಅವರ ಪಾದಪದ್ಮಗಳಲ್ಲಿ ಬೇಡಿಕೊಳ್ಳೋಣ.

ಪೆರಿಯ ನಂಬಿ ಅವರ ತನಿಯನ್

ಕಮಲಾಪತಿ ಕಲ್ಯಾಣ ಗುಣಾಂಮೃತ  ನಿಶೇವಯಾ
ಪೂರ್ಣ ಕಾಮ್ಯ ಸತತಂ ಪೂರ್ಣಾಯ ಮಹತೇ ನಮ:

ನಮ್ಮ ಮುಂದಿನ ಲೇಖನದಲ್ಲಿ ಎಂಬೆರುಮಾನಾರ್ ವೈಭವದ ಬಗ್ಗೆ ನೋಡೋಣ.

ಅಡಿಯೇನ್ ಎಂಬಾರ್ ತಿರುನಾರಾಯಣ ರಾಮಾನುಜ ದಾಸನ್

ಸಂಗ್ರಹ – http://guruparamparai.wordpress.com/2012/09/01/periya-nambi/

ರಕ್ಷಿತ ಮಾಹಿತಿ:  https://guruparamparaikannada.wordpress.com

ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಧರ್ಮಗ್ರಂಥಗಳು) – http://granthams.koyil.org
ಪ್ರಮಾತಾ (ಭೋಧಕರು) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org

 

 

ಆಳವಂದಾರ್

ಶ್ರೀ:
ಶ್ರೀಮತೇ ಶಠಕೋಪಾಯ ನಮ:
ಶ್ರೀಮತೇ ರಾಮಾನುಜಾಯ ನಮ:
ಶ್ರೀಮದ್ ವರವರಮುನಯೇ ನಮ:
ಶ್ರೀ ವಾನಾಚಲ ಮಹಾಮುನಯೇ ನಮ:

ಈ ಹಿಂದಿನ ಕೃತಿಯಲ್ಲಿ (https://guruparamparaikannada.wordpress.com/2018/02/20/manakkal-nambi/) ನಾವು ಮಣಕ್ಕಾಲ್ ನಂಬಿಯ ಬಗ್ಗೆ ಚರ್ಚಿಸಿದೆವು.  ಈಗ ನಾವು ಓರಾನ್ ವಳಿ ಗುರು ಪರಂಪರೆಯಲ್ಲಿನ ಮುಂದಿನ ಆಚಾರ್ಯನ ಬಗ್ಗೆ ಮುಂದುವರೆಯೋಣ.

ಆಳವಂದಾರ್  – ಕಾಟ್ಟು ಮನಾರ್ ಕೋಯಿಲ್

ತಿರುನಕ್ಷತ್ರಂ: ಆಡಿ, ಉತ್ತಿರಾಡಂ

ಅವತಾರ ಸ್ಥಳಂ: ಕಾಟ್ಟು ಮನ್ನಾರ್ ಕೋಯಿಲ್

ಆಚಾರ್ಯ: ಮಣಕ್ಕಾಲ್ ನಂಬಿ

ಶಿಷ್ಯರು: ಪೆರಿಯ ನಂಬಿ, ಪೆರಿಯ ತಿರುಮಲೈ ನಂಬಿ, ತಿರುಕ್ಕೋಷ್ಟಿಯೂರ್ ನಂಬಿ, ತಿರುಮಲೈ ಆಂಡಾನ್, ದೈವವಾರಿಯಾಂಡಾನ್, ವಾಣಮಾಮಲೈಯಾಂಡಾನ್,  ಈಶ್ವರಾಂಡಾನ್, ಜೀಯರಾಂಡಾನ್ ಆಳವಂದಾರಾಳ್ವಾನ್, ತಿರುಮೋಗೂರಪ್ಪನ್, ತಿರುಮೋಗೂರ್ ನಿನ್ರಾರ್, ದೇವಪ್ಪೆರುಮಾಳ್, ಮಾರನೇರಿ ನಂಬಿ, ತಿರುಕ್ಕಚ್ಚಿ ನಂಬಿ, ತಿರುವರಂಗ ಪೆರುಮಾಳ್ ಅರೈಯರ್ (ಮಣಕ್ಕಾಲ್ ನಂಬಿಯ ಶಿಷ್ಯ ಹಾಗು ಆಳವಂದಾರ್ ಅವರ ಪುತ್ರ) ತಿರುಕ್ಕುರುಗೂರ್ ದಾಸರ್, ವಕುಳಾಭರಣ ಸೋಮಯಾಜಿಯಾರ್, ಅಮ್ಮಂಗಿ ಆಳ್ಕೊಂಡಿ ಗೋವಿಂದ ದಾಸರ್ (ವಡಮದುರೈ ನಲ್ಲಿ ಜನಿಸಿದವರು), ನಾಥಮುನಿ ದಾಸರ್ (ರಾಜ ಪುರೋಹಿತರು), ತಿರುವರಂಗತ್ತಮ್ಮಾನ್ (ರಾಜ ಮಹಿಷಿ).

ಕೃತಿಗಳು: ಚತುಶ್ಲೋಕಿ, ಸ್ತೋತ್ರರತ್ನ, ಸಿದ್ಧಿತ್ರಯ, ಆಗಮ ಪ್ರಾಮಾಣ್ಯ, ಗೀತಾರ್ಥ ಸಂಗ್ರಹ

ಪರಮಪದವನ್ನು ಹೊಂದಿದ ಸ್ಥಳ: ತಿರುವರಂಗಂ

ಯಮುನೈತುರೈವರ್ ಕಾಟ್ಟುಮನ್ನಾರ್ ಕೋಯಿಲ್ ನಲ್ಲಿ ಜನಿಸಿದರು. ಕಾಲಾನಂತರ ಅವರು ಆಳವಂದಾರ್ ಎಂಬ ಹೆಸರಿನಿಂದ ಜನಪ್ರಿಯರಾದರು.  ಅವರು ಪೆರಿಯ ಮುದಲಿಯಾರ್, ಪರಮಾಚಾರ್ಯರ್, ವಾದಿಮತೇಭ ಸಿಂಹೇಂದ್ರರ್ ಎಂದೂ ಸಹ ಕರೆಯಲ್ಪಡುತ್ತಿದ್ದರು.

ಇವರು ಈಶ್ವರಮುನಿಗಳ ಪುತ್ರರಾಗಿಯೂ ಹಾಗು ನಾಥಮುನಿಗಳ ಮೊಮ್ಮಗನಾಗಿಯೂ ಜನಿಸಿದವರು. ಇವರು ಮಹಾಭಾಷ್ಯ ಭಟ್ಟರ ಬಳಿಯಲ್ಲಿ ಸಾಮಾನ್ಯ ಶಾಸ್ತ್ರವನ್ನು ಕಲಿತುಕೊಂಡರು. ಆ ಸಮಯದಲ್ಲಿ, ಆಕ್ಕಿಯಾಳ್ವಾನ್ ಎಂಬ ರಾಜ ಪುರೋಹಿತರು ತಮ್ಮ ಪ್ರತಿನಿಧಿಗಳನ್ನು ಎಲ್ಲಾ ಪಂಡಿತರ ಬಳಿಗೂ ಕಳುಹಿಸಿ, ಅವರಿಂದ ತೆರಿಗೆ ಕಟ್ಟಿಸಿಕೊಳ್ಳುವಂತೆ ಹೇಳಿದ್ದರು (ತಾನು ಪ್ರಧಾನ ಪಂಡಿತನೆಂದು). ಆಗ ಮಹಾಭಾಷ್ಯ ಭಟ್ಟರು ಚಿಂತಿತರಾಗಿ ಇರುವುದನ್ನು ಕಂಡ ಯಮುನೈತುರೈವರ್,  ತಾನು ಸಮಸ್ಯೆಯನ್ನು ನಿಭಾಯಿಸುವುದಾಗಿ ಹೇಳಿದ.  ಒಂದು ಶ್ಲೋಕದಲ್ಲಿ “ಅಗ್ಗದ ಪ್ರಚಾರಕ್ಕೆ ಮೊರೆಹೊಕ್ಕು ಕವಿಗಳನ್ನು ನಾಶಮಾಡುತ್ತಾರೆ”  ಎಂದು ಬರೆದು ಕಳುಹಿಸಿದ. ಅದನ್ನು ಕಂಡು ಕೋಪಗೊಂಡ ಆಕ್ಕಿಯಾಳ್ವಾನ್, ತನ್ನ ಸೈನಿಕರನ್ನು ಕಳುಹಿಸಿ ಯಮುನೈತುರೈವನ್ ರನ್ನು ರಾಜನ ಆಸ್ಥಾನಕ್ಕೆ ಕರೆದುಕೊಂಡು ಬರಲು ತಿಳಿಸಿದ. ಯಮುನೈತುರೈವನ್ ತನಗೆ ಸೂಕ್ತ ಮರ್ಯಾದೆಗಳನ್ನು ಅರ್ಪಿಸಿದರೆ ಮಾತ್ರ ಬರುವುದಾಗಿ ಅವರಿಗೆ ಹೇಳಿದ. ಆ ರಾಜ ಒಂದು ಪಲ್ಲಕಿಯನ್ನು ಕಳುಹಿಸಲು, ಯಮುನೈತುರೈವನ್ ರಾಜನ ಆಸ್ಥಾನವನ್ನು ತಲುಪಿದನು.

ಇನ್ನೇನು ಚರ್ಚೆ ಆರಂಭಿಸಬೇಕಿದ್ದಾಗ, ರಾಜ ಮಹಿಷಿಯು  ಯಮುನೈತುರೈವನ್ ಅವರೇ ಗೆಲ್ಲುವುದು ಎಂದು ತನಗೆ ಖಚಿತವಾಗಿದೆ ಎಂದು ರಾಜನಿಗೆ ಹೇಳಿ, ಒಂದು ವೇಳೆ ಅವನು ಸೋತರೆ, ತಾನು ರಾಜನ ದಾಸಿ ಆಗುವೆ ಎಂದು ಹೇಳಿದಳು. ಆಕ್ಕಿಯಾಳ್ವಾನ್ ಗೆಲ್ಲುತ್ತಾನೆ ಎಂಬ ವಿಶ್ವಾಸದಿಂದ,  ರಾಜನು ಯಮುನೈತುರೈವನ್ ಗೆದ್ದರೆ ತನ್ನ ರಾಜ್ಯದ ಅರ್ಧ ಭಾಗವನ್ನು ಆತನಿಗೆ ನೀಡುತ್ತೇನೆ ಎಂದು ಹೇಳಿದ.

ತನ್ನ ಚರ್ಚಾ ಸಾಮರ್ಥ್ಯದಲ್ಲಿ ಅತಿಯಾದ ವಿಶ್ವಾಸವಿದ್ದ ಆಕ್ಕಿಯಾಳ್ವಾನನು, ಯಮುನೈತುರೈವನ್ ಹೇಳುವ ಯಾವುದೇ ವಾಕ್ಯಗಳನ್ನು ತಾನು ವಿರೋಧಿಸುತ್ತೇನೆ ಎಂದು ಹೇಳಿದ. ಯಮುನೈತುರೈವರ್ ೩ ವಾಕ್ಯಗಳನ್ನು ಹೇಳುತ್ತಾರೆ:

 • ಆಕ್ಕಿಯಾಳ್ವಾನ್ ನ ತಾಯಿ ಬಂಜೆಯಲ್ಲ.
 • ರಾಜ ಸರ್ವಶಕ್ತನು.
 • ಮಹಾರಾಣಿಯು ಮಹಾ ಪತಿವ್ರತೆ.

ಇದನ್ನು ಕೇಳಿಸಿಕೊಂಡ ಆಕ್ಕಿಯಾಳ್ವಾನ್ ಆಶ್ಚರ್ಯಚಕಿತನಾಗುತ್ತಾನೆ.  ರಾಜನಿಂದ ಶಿಕ್ಷಿತನಾಗಬಹುದು ಎಂದು ಹೆದರಿದ ಅವನು ಯಾವುದೇ ವಾಕ್ಯಗಳನ್ನು ನಿರಾಕರಿಸಲಾಗಲಿಲ್ಲ.  ಆದರೆ ಯಮುನೈತುರೈವನ್ ಎಲ್ಲಾ 3 ಅಂಶಗಳನ್ನು ಕೆಳಕಂಡಂತೆ ಸುಲಲಿತವಾಗಿ ನಿರಾಕರಿಸುತ್ತಾರೆ:

 • ಆಕ್ಕಿಯಾಳ್ವಾನನ ತಾಯಿ ಬಂಜೆ ಏಕೆಂದರೆ ಅವಳಿಗೆ ಒಂದೇ ಮಗು ಇರುವುದು (ಸಾಮಾನ್ಯ ಶಾಸ್ತ್ರದ ಪ್ರಕಾರ, ಒಂದೇ ಮಗುವಿರುವ ತಾಯಿಯನ್ನು ಬಂಜೆ ಎಂದು ಪರಿಗಣಿಸಲಾಗುತ್ತದೆ)
 • ರಾಜ ಸರ್ವಶಕ್ತನಲ್ಲ ಏಕೆಂದರೆ ಆತ ಎಲ್ಲವನ್ನೂ ಆಳಲು ಸಾಧ್ಯವಿಲ್ಲ- ಕೇವಲ ನಿರ್ದಿಷ್ಟವಾದ ಸಾಮ್ರಾಜ್ಯವನ್ನು ಆಳುತ್ತಿದ್ದಾನೆ.
 • ಶಾಸ್ತ್ರೋಕ್ತವಾಗಿ ನಡೆಸುವ ಮದುವೆಗಳಲ್ಲಿ, ವಧುವನ್ನು ವರನಿಗಿಂತ ಮೊದಲು ದೇವತೆಗಳಿಗೆ ಮಂತ್ರೋಚ್ಚಾರ ಸಹಿತವಾಗಿ ಅರ್ಪಿಸಲಾಗುವುದು. ಆ ಆರ್ಥದಲ್ಲಿ ಆಕೆ ಪತಿವ್ರತೆ ಅಲ್ಲ.

ಯಮುನೈತುರೈವರ್ ಅವರ ನಿಜವಾದ ಪಾಂಡಿತ್ಯವನ್ನು ಅರಿತುಕೊಂಡ ಆಕ್ಕಿಯಾಳ್ವಾನ್, ಕೊನೆಗೆ ಯಮುನೈತುರೈವನ್ ಶಾಸ್ತ್ರಗಳ ವಿವರಣೆಗಳಿಂದ ವಿಶಿಷ್ಟಾದ್ವೈತ ಸಿದ್ದಾಂತದ ಸ್ಥಾಪನೆ ಮಾಡಿದಾಗ ಚರ್ಚೆಯಲ್ಲಿ ಸೋಲುತ್ತಾನೆ. ಮಹಾರಾಣಿಯು ಅವರಿಗೆ “ಆಳವಂದಾರ್” (ಆಳಲು/ಕಾಪಾಡಲು ಬಂದವರು – ಅವನು ಗೆಲ್ಲದೆ ಇದ್ದಿದ್ದರೆ, ಆಕೆ ದಾಸಿಯಾಗಿರಬೇಕಾಗಿತ್ತು) ಎಂದು ಹೆಸರು ನೀಡುತ್ತಾಳೆ.  ಆತನಿಗೆ ಅರ್ಧ ರಾಜ್ಯವೂ ದೊರಕುತ್ತದೆ ಹಾಗು ಆತ ಆಡಳಿತಾತ್ಮಕ ಕಾರ್ಯಗಳಲ್ಲಿ ತನ್ನನು ತೊಡಗಿಸಿಕೊಳ್ಳಲು ಪ್ರಾರಂಭಿಸುತ್ತಾನೆ.

ನಾವು ಈಗಾಗಲೇ ಹಿಂದಿನ ಕೃತಿಯಲ್ಲಿ ಹೇಗೆ ಮಣಕ್ಕಾಲ್ ನಂಬಿಗಳು ಆಳವಂದಾರ್ ರನ್ನು ಪರಿವರ್ತಿಸಿ ಶ್ರೀರಂಗಕ್ಕೆ ಕರೆತಂದು ನಮ್ಮ ಸಂಪ್ರದಾಯದ ನಾಯಕನನ್ನಾಗಿ ಮಾಡಿದರು ಎಂದು ನೋಡಿದ್ದೇವೆ. ಅವರು ಶ್ರೀರಂಗಕ್ಕೆ ಬಂದ ನಂತರ, ಸಂನ್ಯಾಸಿಯಾಗಿ ನಮ್ಮ ಸಂಪ್ರದಾಯವನ್ನು ಪ್ರಚುರಗೊಳಿಸಲು ತೊಡಗುತ್ತಾರೆ. ಬಹಳಷ್ಟು ಜನ ಅವರ ಶಿಷ್ಯರಾಗುತ್ತಾರೆ.

ಒಮ್ಮೆ ಮಣಕ್ಕಾಲ್ ನಂಬಿಗಳು ಆಳವಂದಾರರಿಗೆ ಕುರುಗೈ ಕಾವಲಪ್ಪನ್ ಅವರ ಬಳಿ ಅಷ್ಟಾಂಗ ಯೋಗ ರಹಸ್ಯ ಕಲಿತುಕೊಳ್ಳಲು ನಿರ್ದೇಶಿಸುತ್ತಾರೆ. ಅವರು ಅಲ್ಲಿಗೆ ಹೋದಾಗ, ಕುರುಗೈ ಕಾವಲಪ್ಪನ್ ಯೋಗದ ಮೂಲಕ ಭಗವದ್ ಅನುಭವದಲ್ಲಿ ಪೂರ್ಣವಾಗಿ ಮುಳುಗಿಹೋಗುತ್ತಾರೆ . ಆದರೆ ಆಳವಂದಾರರ ಆಗಮನವನ್ನು ಗಮನಿಸಿದ ಅವರು, ನಾಥಮುನಿಗಳ ವಂಶಾವಳಿಯಲ್ಲಿ ಬರುವ ಆಳವಂದಾರರನ್ನು ಕಾಣಲು, ಯೋಗದ ಸಮಯದಲ್ಲಿ, ಎಂಬೆರುಮಾನ್ ತನ್ನ ಭುಜಗಳ ಹಿಂದಿನಿಂದ ನೋಡುತ್ತಿದ್ದಾನೆ ಏಕೆಂದರೆ ಆ ವಂಶಾವಳಿಯವರು ಭಗವಂತನಿಗೆ ಬಹಳ ಆಪ್ತರಾದವರು ಎಂದು ಆಳವಂದಾರರಿಗೆ ಹೇಳುತ್ತಾರೆ. ಜೊತೆಗೆ ಆಳವಂದಾರ್ ಯೋಗ ರಹಸ್ಯವನ್ನು ಕಲಿಯಲು ಒಂದು ದಿನಾಂಕವನ್ನು ನೀಡುತ್ತಾರೆ (ತಾವು ಸಂಸಾರದಿಂದ ಪರಮಪದಕ್ಕೆ ತೆರಳಲು ಯೋಜಿಸಿದ್ದ ಸಮಯಕ್ಕೆ ಮುನ್ನ). ಆದರೆ ಆ ನಿರ್ದಿಷ್ಟವಾದ ದಿನದಂದು ಆಳವಂದಾರ್ ರ ತಿರುವನಂತಪುರದ ಭೇಟಿ ಸಂಭವಿಸುತ್ತದೆ ಹಾಗು ಯೋಗ ರಹಸ್ಯ ಕಲಿಯಲು ತುಂಬಾ ತಡವಾಗಿದೆ ಎಂದು ಅರಿತುಕೊಳ್ಳುತ್ತಾರೆ.

ಆ ಸಮಯದಲ್ಲಿ, ಅವರ ಶಿಷ್ಯರಲ್ಲೊಬ್ಬರಾದ ದೈವವಾರಿಯಾಂಡಾನ್, ತನ್ನ ಆಚಾರ್ಯರಿಂದ ಬೇರ್ಪಡಿಕೆ ಸಹಿಸಲಾರದೆ ತಿರುವನಂತಪುರದ ಕಡೆ ಪ್ರಯಾಣ ಬೆಳಸುತ್ತಾರೆ ಮತ್ತು ಅದೇ ಸಮಯದಲ್ಲಿ ಆಳವಂದಾರ್ ಸಹ ಶ್ರೀರಂಗಕ್ಕೆ ಪ್ರಯಾಣ ಮಾಡಲು ತೊಡಗುತ್ತಾರೆ್. ಅವರೀರ್ವರೂ ತಿರುವನಂತಪುರದ ಪ್ರವೇಶ ದ್ವಾರದ ಬಳಿ ಭೇಟಿ ಮಾಡಿದಾಗ ದೈವವಾರಿಯಾಂಡಾನನಿಗೆ ತನ್ನ ಆಚಾರ್ಯನನ್ನು ಕಂಡು ಬಹಳ ಸಂತೋಷವಾಗುತ್ತದೆ. ಆಳವಂದಾರ್ ಜೊತೆಗೆ ಹಿಂತಿರುಗಲು ಆತ ತೀರ್ಮಾನಿಸಿದಾಗ, ಆತನನ್ನು ಅನಂತಶಯನ ಎಂಬೆರುಮಾನ್ ರ ದರ್ಶನ ಮಾಡಿ ಬರಲು  ಹೇಳುತ್ತಾರೆ. ಅದಕ್ಕೆ ಆತ ತನಗೆ ಎಂಬೆರುಮಾನ್ ಅವರಿಗಿಂತ ಆಳವಂದಾರ್ ಅವರೇ ಮುಖ್ಯವೆಂದು ತಿಳಿಸುತ್ತಾರೆ. ಅಷ್ಟಿತ್ತು ಅವರ ಆಚಾರ್ಯ ಭಕ್ತಿ.

ಆಳವಂದಾರ್ ಶ್ರೀರಂಗಕ್ಕೆ ಹಿಂತಿರುಗಿ ಬಂದು ತಮ್ಮ ಸಂಪ್ರದಾಯದ ಉತ್ತರಾಧಿಕಾರಿಯ ನೇಮಕದ ಬಗ್ಗೆ ಚಿಂತಿತರಾಗುತ್ತಾರೆ. ಕಾಂಚೀಪುರದಲ್ಲಿ ಯಾದವಪ್ರಕಾಶರ ಕೆಳಗೆ ಓದುತ್ತಿರುವ ಇಳೈಯಾಳ್ವಾರ್ (ರಾಮಾನುಜರ್) ಬಗ್ಗೆ ಕಂಡುಕೊಳ್ಳುತ್ತಾರೆ. ಕಾಂಚೀಪುರಕ್ಕೆ ಹೋಗುವ ಅವರು ದೇವಪ್ಪೆರುಮಾಳ್ ದೇವಸ್ಥಾನದಲ್ಲಿ ಕರಿಯಮಾಣಿಕ್ಕ ಪೆರುಮಾಳ್ ಸನ್ನಿಧಿಯಲ್ಲಿ ಅವರು ತಮ್ಮ ದಿವ್ಯ ಕಟಾಕ್ಷವನ್ನು ಆ ಸಮಯದಲ್ಲಿ ಆ ಹಾದಿಯಲ್ಲಿ ಹೋಗುತ್ತಿದ್ದ ಇಳೈಯಾಳ್ವಾರ್ ಮೇಲೆ ಹರಿಸುತ್ತಾರೆ,  ಆಳವಂದಾರ್ ದೇವಪ್ಪೆರುಮಾಳ್ ಬಳಿಗೆ ಹೋಗಿ, ಇಳೈಯಾಳ್ವಾರ್ ರನ್ನು ಸಂಪ್ರದಾಯದ ಮುಂದಿನ ನಾಯಕನನ್ನಾಗಿ ಮಾಡಬೇಕೆಂದು ಎಂಬೆರುಮಾನ್ ರಲ್ಲಿ ಶರಣಾಗತಿ ಮಾಡುತ್ತಾರೆ.  ಈ ರೀತಿ ಆಳವಂದಾರ್ ಮಹಾ ವೃಕ್ಷದ, ಅಂದರೆ ಎಂಬೆರುಮಾನಾರ್ ದರ್ಶನದ, ಬೀಜವನ್ನು ಬಿತ್ತುತ್ತಾರೆ.  ಇಳೈಯಾಳ್ವಾರರಿಗೆ ಅವರ ಆಧ್ಯಾತ್ಮದ ಬೆಳವಣಿಗೆಯಲ್ಲಿ ಸಹಾಯ ಮಾಡುವಂತೆ ತಿರುಕಚ್ಚಿ ನಂಬಿಗಳಿಗೆ ಆಳವಂದಾರ್ ಸೂಚಿಸುತ್ತಾರೆ.

ಆಳವಂದಾರ್ ಅಸ್ವಸ್ಥಗೊಂಡು ತಮ್ಮ ಎಲ್ಲಾ ಶಿಷ್ಯರುಗಳಿಗೂ ತಿರುವರಂಗ ಪೆರುಮಾಳ್ ಅರೈಯರ್ ಅವರನ್ನು ಆಶ್ರಯಿಸಲು ನಿರ್ದೇಶಿಸುತ್ತಾರೆ. ತಮ್ಮ ಚರಮ ದಶೆ್ (ಈ ಸಂಸಾರದಲ್ಲಿ ತಮ್ಮ ಜೀವನದ ಕೊನೆ) ಯಲ್ಲಿ ಆಳವಂದಾರ್ ಬಹು ಮುಖ್ಯ ಸೂಚನೆಗಳನ್ನು ಸಹ ನೀಡುತ್ತಾರೆ. ಅವರ ಕೆಲ ಸೂಚನೆಗಳು ಯಾವುವೆಂದರೆ:

 • ದಿವ್ಯದೇಶಗಳೇ ನಮ್ಮ ಜೀವನ ಹಾಗು ನಾವು ಯಾವಾಗಲೂ ನಮ್ಮ ಸಮಯವನ್ನು ಅವುಗಳ ಚಿಂತನೆಯಲ್ಲಿಯೇ ಕಳೆಯಬೇಕು ಮತ್ತು ಅಲ್ಲಿ ಕೈಂಕರ್ಯಗಳನ್ನು ಮಾಡಬೇಕು
 • ಪೆರಿಯ ಪೆರುಮಾಳ್ ರ ಪಾದ ಕಮಲಗಳಲ್ಲಿ ನೆಲೆಸಿರುವ ತಿರುಪ್ಪಾಣಾಳ್ವಾರ್ ರ (ತಿರುವಡಿಯಿಂದ ತಿರುಮುಡಿಯ ವರೆವಿಗೂ) ನಾವು ಪೂಜಿಸಲೇಬೇಕು. ತಾವು ಸಹ ತಿರುಪ್ಪಾಣಾಳ್ವಾರ್ (ತಿರುವರಂಗಪ್ಪೆರುಮಾಳ್ ಅರೈಯರ್ ರಿಂದಲೂ ಸಹ ಪೂಜಿಸಲ್ಪಟ್ಟ) ಅವರೇ ತಮ್ಮ ಉಪಾಯ ಹಾಗು ಉಪೇಯ ಎಂದು ಯಾವಾಗಲೂ ಚಿಂತಿಸುತ್ತಿದ್ದರು.  ತಿರುಪ್ಪಾಣಾಳ್ವಾರ್ (ಪೆರಿಯ ಪೆರುಮಾಳ್ ರ ಬಗ್ಗೆ ಹಾಡಿದವರು) ಅವರನ್ನು ಕುರುಂಬರುತ್ತ ನಂಬಿ (ತಿರುವೇಂಗಡಮುಡೈಯಾನ್ ರಿಗೆ ಮಣ್ಣಿನ ಪುಷ್ಪ ನೀಡಿದವರು) ಹಾಗು ತಿರುಕ್ಕಚ್ಚಿ ನಂಬಿ (ದೇವ ಪ್ಪೆರುಮಾಳ್ ರಿಗೆ ಬೀಸಣಿಗೆ ಕೈಂಕರ್ಯ ಮಾಡಿದವರು) ಇವರಿಬ್ಬರಿಗೂ ಹೋಲಿಕೆ ಮಾಡಿ ಮೂರ್ವರೂ ಒಂದೇ ಮಟ್ಟದಲ್ಲಿರುವವರು  ಎಂದಿದ್ದಾರೆ.
 • ಓರ್ವ ಪ್ರಪನ್ನನು ಎಂದಿಗೂ ಸಹ ತನ್ನ ಆತ್ಮ ಯಾತ್ರೆ (ಭಗವದ್ ವಿಷಯಂ) ಅಥವಾ ತನ್ನ ದೇಹ ಯಾತ್ರೆ (ಲೌಕಿಕ) ಗಳ ಬಗ್ಗೆ ಚಿಂತಿಸಲೇಬಾರದು. ಏಕೆಂದರೆ, ಆತ್ಮನು ಎಂಬೆರುಮಾನ್ ರ ಅತ್ಯಂತ ಪರತಂತ್ರನು ಮತ್ತು ಎಂಬೆರುಮಾನ್ ಆತ್ಮ ಯಾತ್ರೆಯ ಆರೈಕೆಯನ್ನು ನೋಡಿಕೊಳ್ಳುತ್ತಾನೆ. ದೇಹವು ಕರ್ಮದಿಂದ ನಡೆಸಲ್ಪಡುವುದರಿಂದ, ನಮ್ಮ ಪಾಪ/ಪುಣ್ಯಗಳು ದೇಹ ಯಾತ್ರೆಯನ್ನು ನಡೆಸಿಕೊಳ್ಳುತ್ತದೆ. ಆದುದರಿಂದ, ನಾವು ಈ ಎರಡರ ಬಗ್ಗೆಯೂ ಚಿಂತಿಸಬೇಕಾಗಿಲ್ಲ.
 • ನಾವು ಭಾಗವತರ ನಡುವೆ ತಾರತಮ್ಯ ಮಾಡಬಾರದು. ನಾವು ಭಾಗವತರನ್ನು ಕನಿಷ್ಟ ಪಕ್ಷ ಎಂಬೆರುಮಾನ್ ನಿಗೆ ಸಮಾನವಾಗಿಯಾದರೂ ಕಾಣಲೇಬೇಕು.
 • ನಾವು ಎಂಬೆರುಮಾನ್ ರ ಚರಾಣಾಮೃತವನ್ನು ಸ್ವೀಕರಿಸುವ ರೀತಿಯಲ್ಲಿಯೇ, ಆಚಾರ್ಯರ ಶ್ರೀಪಾದ ತೀರ್ಥವನ್ನು ಸಹ ಅದೇ ಗೌರವದೊಂದಿಗೆ ಸ್ವೀಕರಿಸಬೇಕು
 •  ನಾವುಗಳು (ಆಚಾರ್ಯರು) ಶ್ರೀಪಾದ ತೀರ್ಥವನ್ನು ಇತರರಿಗೆ ನೀಡುವಾಗ, ಅದನ್ನು ವಾಕ್ಯ ಗುರುಪರಂಪರೆ/ದ್ವಯ ಮಹಾಮಂತ್ರದ ಅನುಸಂಧಾನದೊಂದಿಗೆ ಗುರುಪರಂಪರೆಯ ಪರವಾಗಿ ನೀಡಬೇಕು

ಕೊನೆಯಲ್ಲಿ ಅವರು ತಮ್ಮ ಎಲ್ಲ ಶಿಷ್ಯಂದಿರನ್ನೂ ಹಾಗು ಇತರ ಶ್ರೀವೈಷ್ಣವರನ್ನೂ ತಮ್ಮ ಮುಂದೆ ನಿಲ್ಲುವಂತೆ ಬಿನ್ನವಿಸಿಕೊಳ್ಳುತ್ತಾರೆ.  ತಾವು ಮಾಡಿರಬಹುದಾದಂತಹ ಯಾವುದೇ ತಪ್ಪುಗಳಿಗೆ ಅವರಲ್ಲಿ ಕ್ಷಮೆಯನ್ನು ಯಾಚಿಸಿ,  ಅವರಿಂದ ಶ್ರೀಪಾದ ತೀರ್ಥ ಸ್ವೀಕರಿಸಿ, ಅವರುಗಳಿಗೆ ತದಿಯಾರಾಧನೆ ನಡೆಸಿ, ತಮ್ಮ ಚರಮ ತಿರುಮೇನಿಯನ್ನು ಕಳಚಿ ಪರಮಪದಕ್ಕೆ ತೆರಳುತ್ತಾರೆ. ಅವರ ಎಲ್ಲಾ ಶಿಷ್ಯರೂ ದು:ಖದಲ್ಲಿ ಮುಳುಗಿಹೋಗಿ, ಕೊನೆಯದಾಗಿ ಒಂದು ಭವ್ಯ ಆಚರಣೆ ಮಾಡುವ ಯೋಜನೆಯಲ್ಲಿ ತೊಡಗುತ್ತಾರೆ. ಶ್ರೀವೈಷ್ಣವರು ಪರಮಪದಕ್ಕೆ ಹೋಗಲು ತಮ್ಮ ದೇಹ ತೊರೆದಾಗ, ಅವರಿಗೆ ಪರಮಪದದಲ್ಲಿ ದೊರಕುವ ಆಶೀರ್ವಾದದ ಸಂದರ್ಭವನ್ನು ಭವ್ಯವಾದ ರೀತಿಯಲ್ಲಿ ಆಚರಿಸಲಾಗುತ್ತದೆ.  ಚರಮ ಕೈಂಕರ್ಯಗಳಾದ ತಿರುಮಂಜನ, ಶ್ರೀಚೂರ್ಣಪರಿಪಾಲನ, ಅಲಂಕಾರಗಳು, ಬ್ರಹ್ಮರಥ ಇತ್ಯಾದಿ   ಆಳವಂದಾರ್ ಚರಿತ್ರೆ ಹಾಗು ಇತರ ಆಚಾರ್ಯರುಗಳ ಜೀವಿತಗಳಲ್ಲಿ ಬಹಳ ವಿಷದೀಕೃತವಾಗಿ ವಿವರಿಸಲಾಗಿದೆ.

ಸರಾಸರಿ ಅದೇ ಸಮಯದಲ್ಲಿ, ಇಳೈಯಾಳ್ವಾರರನ್ನು ಶ್ರೀರಂಗಕ್ಕೆ ಕರೆತರಲು ಪೆರಿಯನಂಬಿ ಕಾಂಚೀಪುರಕ್ಕೆ ಹೋಗಿರುತ್ತಾರೆ.  ದೇವಪ್ಪೆರುಮಾಳ್ ರಿಗೆ ನೀರು ತರುವ ತಮ್ಮ ಕೈಂಕರ್ಯಕ್ಕಾಗಿ ಇಳೈಯಾಳ್ವಾರ್ ಸಾಲೈ ಕಿಣರಿಗೆ ಹೋಗಿದ್ದಾಗ, ಪೆರಿಯ ನಂಬಿಗಳು ಆಳವಂದಾರರ ಸ್ತೋತ್ರರತ್ನವನ್ನು ಜೋರಾಗಿ ಓದತೊಡಗುತ್ತಾರೆ. ಅದನ್ನು ಕೇಳಿ, ಅದರ ಗೂಢಾರ್ಥಗಳನ್ನು ಅರಿತ ಇಳೈಯಾಳ್ವಾರ್, ಈ ಶ್ಲೋಕಗಳನ್ನು ಬರೆದವರಾರು ಎಂದು ಪೆರಿಯನಂಬಿಗಳನ್ನು ವಿಚಾರಿಸುತ್ತಾರೆ.  ಆಳವಂದಾರರ ಹಿರಿಮೆಗಳನ್ನು ವಿವರಿಸಿದ ಪೆರಿಯನಂಬಿಗಳು, ಇಳೈಯಾಳ್ವಾರರನ್ನು ಶ್ರೀರಂಗಕ್ಕೆ ಭೇಟಿ ನೀಡಲು ಕೋರುತ್ತಾರೆ. ಈ ಪ್ರಸ್ತಾಪವನ್ನು ಒಪ್ಪಿದ ಇಳೈಯಾಳ್ವಾರ್, ದೇವಪ್ಪೆರುಮಾಳ್ ಹಾಗು ತಿರುಕಚ್ಚಿನಂಬಿಗಳ ಬಳಿ ಹೋಗಿ ಶ್ರೀರಂಗಕ್ಕೆ ಭೇಟಿ ನೀಡಲು ಒಪ್ಪಿಗೆಯನ್ನು ಪಡೆಯುತ್ತಾರೆ.     ಶ್ರೀರಂಗವನ್ನು ತಲುಪುತ್ತಿದ್ದಾಗ ಆಳವಂದಾರರ ತಿರುಮೇನಿಯ ಮೆರವಣಿಗೆಯನ್ನು ಕಂಡ ಪೆರಿಯ ನಂಬಿಗಳು ಕೆಳಗೆ ಬಿದ್ದು ಅಳತೊಡಗುತ್ತಾರೆ. ಇದರಿಂದ ವಿಚಲಿತರಾದ ಇಳೈಯಾಳ್ವಾರ್, ಸ್ಥಳೀಯ ಶ್ರೀವೈಷ್ಣವರುಗಳನ್ನು ವಿಚಾರಿಸಿ, ನಡೆದುದು ಏನೆಂದು ತಿಳಿದುಕೊಳ್ಳುತ್ತಾರೆ.

ಆ ಸಮಯದಲ್ಲಿ, ಆಳವಂದಾರರಿಗೆ ಕೊನೆಯ ಕೈಂಕರ್ಯಗಳು ಶುರುವಾದಾಗ, ಅವರ ಕೈನ 3 ಬೆರಳುಗಳು ಮಡಚಿರುವುದನ್ನು ಎಲ್ಲಾರೂ ಗಮನಿಸುತ್ತಾರೆ.  ಇದರ ಕಾರಣ ಏನೆಂದು ಯಾರಿಗಾದರೂ ಗೊತ್ತಿದೆಯೇ ಎಂದು ಇಳೈಯಾಳ್ವಾರರು ಕೇಳಿದಾಗ, ಆಳವಂದಾರರಿಗೆ 3 ಅತೃಪ್ತ ಆಸೆಗಳು ಇದ್ದವು ಎಂದು ಅ ಶ್ರೀವೈಷ್ಣವರುಗಳು ಹೇಳುತ್ತಾರೆ. ಅವು:

 • ವ್ಯಾಸ ಹಾಗು ಪರಾಶರ ಋಷಿಗಳೆಡೆಗೆ ನಾವು ನಮ್ಮೆ ಕೃತಘ್ಞತೆಗಳನ್ನು ತೋರಿಸಬೇಕು
 • ನಮ್ಮಾಳ್ವಾರರಿಗೆ ನಾವು ನಮ್ಮ ಪ್ರೇಮವನ್ನು ತೋರಿಸಬೇಕು
 •  ವಿಶಿಷ್ಟಾದ್ವೈತ ಸಿದ್ದಾಂತದಂತೆ ನಾವು ವ್ಯಾಸರ ಬ್ರಹ್ಮಸೂತ್ರಗಳಿಗೆ ಒಂದು ಭಾಷ್ಯವನ್ನು ಬರೆಯಬೇಕು

ಇದನ್ನು ಕೇಳಿದ ಕೂಡಲೇ, ತಾನು ಈ  3 ಆಸೆಗಳನ್ನೂ ಪೂರೈಸುವನ್ನು ಎಂದು ಇಳೈಯಾಳ್ವಾರ್  ಪ್ರತಿಜ್ಞೆಯನ್ನು ಮಾಡುತ್ತಾರೆ ಮತ್ತು ಒಡನೆಯೇ ಆಳವಂದಾರರ ಕೈ ಬೆರಳುಗಳು ತೆರೆದುಕೊಳ್ಳುತ್ತವೆ.  ಅಲ್ಲಿ ಒಟ್ಟುಗೂಡಿದ್ದ ವೈಷ್ಣವರೆಲ್ಲರೂ, ಇದನ್ನು ಕಂಡು ಭಾವಪರವಶರಾಗುತ್ತಾರೆ ಮತ್ತು ಆಳವಂದಾರರ ಕೃಪೆ ಹಾಗು ಶಕ್ತಿ ಸಂಪೂರ್ಣವಾಗಿ ಇವರ ಮೇಲೆ ವರ್ಷಗೈಯುತ್ತದೆ ಎಂದು ಹೇಳಿ, ನಮ್ಮ ದರ್ಶನ ನಿರ್ವಾಹಕರಾಗಲು ಹಾರೈಸುತ್ತಾರೆ. ಎಲ್ಲಾ ಕೈಂಕರ್ಯಗಳೂ ಮುಗಿದ ನಂತರ,  ಆಳವಂದಾರರ ನಷ್ಟದಿಂದ ತುಂಬಾ ನೊಂದ ಇಳೈಯಾಳ್ವಾರ್ ನಂಬೆರುಮಾಳ್ ರನ್ನು ಪೂಜಿಸದೆಯೇ ಕಾಂಚೀಪುರಕ್ಕೆ ಹಿಂತಿರುಗಿಬಿಡುತ್ತಾರೆ.

ಆಳವಂದಾರ್ ಉಭಯ ವೇದಾಂತಗಳಲ್ಲಿಯೂ ಒಬ್ಬ ಮಹಾನ್ ವಿದ್ವಾಂಸರಾಗಿದ್ದರು. ಇದನ್ನು ಅವರ ಗ್ರಂಥಗಳಿಂದ ನಾವು ಸುಲಭವಾಗಿ ಗ್ರಹಿಸಬಹುದು.

 • ಚತು:ಶ್ಲೋಕಿಯಲ್ಲಿ ಪಿರಾಟ್ಟಿಯ ವೈಭವದ ಮೂಲ ತತ್ವವನ್ನು ಅವರು ಕೇವಲ 4 ಶ್ಲೋಕಗಳಲ್ಲಿ ನೀಡಿದ್ದಾರೆ.
 • ಸ್ತೋತ್ರರತ್ನ ಒಂದು ನಿಜವಾದ ರತ್ನವಾಗಿದೆ – ಶರಣಾಗತಿಯ ಇಡೀ ಪರಿಕಲ್ಪನೆಯನ್ನು (ತಿರುವಾಯ್ ಮೊಳಿ ಇತ್ಯಾದಿಗಳಲ್ಲಿ ವಿವರಿಸಿರುವಂತೆ) ಅವರು ಅತೀ ಸುಲಭ ಸ್ತೋತ್ರಗಳಲ್ಲಿ ವಿವರಿಸಿದ್ದಾರೆ.
 •  ಗೀತಾರ್ಥ ಸಂಗ್ರಹ – ಗೀತೆಯಲ್ಲಿನ ಮೂಲತತ್ವವನ್ನು ಹೊರತರುತ್ತದೆ.
 • ಆಗಮ ಪ್ರಾಮಾಣ್ಯಂ – ಇದು ಪಂಚರಾತ್ರ ಆಗಮದ ಪ್ರಾಮುಖ್ಯತೆ ಮತ್ತು ಸಿಂಧುತ್ವವನ್ನು ಪ್ರಚರಿಸುವ ಮೊದಲ ಗ್ರಂಥವಾಗಿದೆ.

ಆಳವಂದಾರರ ತನಿಯನ್

ಯತ್ ಪದಾಂಭೋರುಹಧ್ಯಾನ  ವಿದ್ವಸ್ತಾಶೇಷ ಕಲ್ಮಷ:
ವಸ್ತುತಾಮುಪಯಾ ತೋಹಂ ಯಾಮುನೇಯಂ ನಮಾಮಿತಂ

ಮುಂದಿನ ಕೃತಿಯಲ್ಲಿ, ನಾವು ಪೆರಿಯ ನಂಬಿಗಳ ವೈಭವವನ್ನು ಕಾಣೋಣ.

ಅಡಿಯೇನ್ ಎಂಬಾರ್ ತಿರುನಾರಾಯಣ ದಾಸನ್

ಸಂಗ್ರಹ – http://guruparamparai.wordpress.com/2012/09/01/alavandhar/

ರಕ್ಷಿತ ಮಾಹಿತಿ:  https://guruparamparaikannada.wordpress.com

ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಧರ್ಮಗ್ರಂಥಗಳು) – http://granthams.koyil.org
ಪ್ರಮಾತಾ (ಭೋಧಕರು) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org

ತಿರುಮಳಿಶೈ ಆಳ್ವಾರ್

ಶ್ರೀ:
ಶ್ರೀಮತೇ ಶಠಕೋಪಾಯ ನಮ:
ಶ್ರೀಮತೇ ರಾಮಾನುಜಾಯ ನಮ:
ಶ್ರೀಮದ್ ವರವರಮುನಯೇ ನಮ:
ಶ್ರೀ ವಾನಾಚಲ ಮಹಾಮುನಯೇ ನಮ:

thirumazhisaiazhwarತಿರು ನಕ್ಷತ್ರ೦: ತೈ, ಮಖ೦

ಅವತಾರ ಸ್ಥಳ೦: ತಿರುಮಳಿಶೈ

ಆಚಾರ್ಯರು:  ವಿಶ್ವಕ್ಸೇನರ್, ಪೇಯಾಳ್ವಾರ್

ಶಿಷ್ಯರು: ಕಣಿಕಣ್ಣನ್, ಧೃಡವ್ರತ

ಕೃತಿಗಳು: ನಾನ್ ಮುಗನ್ ತಿರುವ೦ದಾದಿ, ತಿರುಚ್ಛಂದ ವಿರುತ್ತಂ

ಪರಮಪದವನ್ನು ಅಲಂಕರಿಸಿದ ಸ್ಥಳ: ತಿರುಕ್ಕುಡಂದೈ

ಮಾಮುನಿಗಳು ಆಳ್ವಾರರು ಶಾಸ್ತ್ರಗಳ ಬಗ್ಗೆ ಅತ್ಯಂತ ಪರಿಶುದ್ಧ ಙ್ಞಾನಹೊಂದಿದ್ದರು ಎಂದು. ಮಣವಾಳ ಮಾಮುನಿಗಳು ಹೇಳುವುದು ಏನೆಂದರೆ – ಶ್ರೀಮನ್ನಾರಾಯಣನೊಬ್ಬನೇ ಪೂಜಿಸಲು ಅರ್ಹನು ಮತ್ತು ನಾವು ಅನ್ಯ ದೇವತೆಗಳ (ಇತರೆ ದೇವರ) ಬಳಿ ಕಿಂಚಿತ್ ಸಂಪರ್ಕವನ್ನೂ ಹೊಂದಿರಬಾರದು. ಮಾಮುನಿಗಳು ಅಳ್ವಾರರಿಗೆ ಶುದ್ಧ ಮನಸು ಎಂಬ ಅರ್ಥ ಇರುವ “ತುಯ್ಯ ಮದಿ” ಎಂಬ ಪದ ಉಪಯೋಗಿಸುತ್ತಾರೆ. ಪಿಳ್ಳೈ ಲೋಕಂ ಜೀಯರ್ ಅವರ ವಿವರಣೆಯಂತೆ, ಆಳ್ವಾರರ ಶುದ್ಧತೆ ಎಂಬುವುದು ಶ್ರೀಮನ್ನಾರಾಯಣನನ್ನು ಹೊರತುಪಡಿಸಿ ಇತರ ದೈವಗಳ ಬಗ್ಗೆ ಕಿಂಚಿತ್ತೂ ಪರತ್ವ (ಪ್ರಾಬಲ್ಯ) ಇಟ್ಟುಕೊಳ್ಳದೆ  ಇರುವುದು ಮತ್ತು ನಮ್ಮಗಳ ಮನಸ್ಸಿನಿಂದ ಅಂತಹ ಶಂಕೆಗಳನ್ನೂ ತೆಗೆದುಹಾಕುವುದು. ಬಹಳಷ್ಟು ಪಾಶುರಗಳಲ್ಲಿ, ಶ್ರೀವೈಷ್ಣವರು ಇತರ ದೇವತೆಗಳ ವಿಷಯದಲ್ಲಿ ಹೇಗೆ ನಡೆದುಕೊಳ್ಳಬೇಕು ಎಂಬುವುದನ್ನು ಆಳ್ವಾರರು ಗುರುತಿಸಿದ್ದಾರೆ.
ಉದಾಹರಣೆಗೆ:

 • ನನ್ಮುಗನ್ ತಿರುವಂದಾದಿ – 53 – ತಿರುವಿಲ್ಲಾದ ತೇವರೈ ತೇರೇಲ್ ಮಿನ್ ತೇವು – ಶ್ರೀ ಮಹಾಲಕ್ಷ್ಮಿಯೊಡನೆ ಸಂಬಂಧವಿರದ ಯಾರನ್ನೂ ನಾವು ಪೂಜಿಸಬಾರದು
 • ನನ್ಮುಗನ್ ತಿರುವಂದಾದಿ – 68 – ತಿರುವಡಿ ತನ್ ನಾಮಂ ಮರಂದುಂ ಪುರಂದೊಳಾ ಮಾಂದರ್ – ಸರ್ವೇಶ್ವರನಾದ ಶ್ರೀಮನ್ನಾರಾಯಣನನ್ನು ಮರೆತರೂ ಸಹ ಶ್ರೀವೈಷ್ಣವರು ಇತರ ದೇವತೆಗಳನ್ನು ಪೂಜಿಸುವುದಿಲ್ಲ

ಪೆರಿಯವಾಚ್ಚಾನ್ ಪಿಳ್ಳೈ ಮತ್ತು ನಂಬಿಳ್ಳೈ ಇವರಿಬ್ಬರೂ ತಮ್ಮ ನಾನ್ಮುಗನ್ ತಿರುವಂದಾದಿಯ ವ್ಯಾಖ್ಯಾನದ ಮುನ್ನುಡಿಯಲ್ಲಿ ಬಹಳ ಸುಂದರವಾಗಿ ವರ್ಣಿಸುವುದೇನೆಂದರೆ ಎಲ್ಲರ ಮನಸ್ಸಿನಲ್ಲಿ ಕಿಂಚಿತ್ತೂ ಅನುಮಾನವಿಲ್ಲದಂತೆ ಎಂಬೆರುಮಾನ್‌ರ ಪರತ್ವ ಹಾಗು ಇತರ ದೇವತೆಗಳ ಮಿತಿಗಳ ಬಗ್ಗೆ ತಿರುಮಳಿಶೈ ಆಳ್ವಾರರು ವಿವರಿಸಿದ್ದಾರೆ ಎಂದು.

ಪೆರಿಯವಾಚ್ಚಾನ್ ಪಿಳ್ಳೈರ ವಿವರಣೆ:

ಎಂಬೆರುಮಾನ್ ಒಬ್ಬನೇ ಪರಮ ಪುರುಷನೆಂದು ಗ್ರಹಿಸಿ ಆನಂದಿಸಬೇಕೆಂದು ಮುದಲಾಳ್ವಾರರು ಪ್ರತಿಪಾದಿಸಿದ್ದಾರೆ. ಆ ಪ್ರಕ್ರಿಯೆಯಲ್ಲಿ ಇರುವಂತಹ ಕಳೆಗಳನ್ನು ತಿರುಮಳಿಶೈ ಆಳ್ವಾರರು ತೆಗೆದುಹಾಕಿದ್ದಾರೆ. ಯಾವ ಸಂಸಾರಿಗಳು ಪರ ದೇವತೆಗಳನ್ನು ಈಶ್ವರ ( ನಿಯಂತ್ರಕ) ಎಂದು ಪರಿಗಣಿಸಿದ್ದಾರೊ, ಅಂತಹ ದೇವತೆಗಳೂ ಸಹ ಕ್ಷೇತ್ರಜ್ಞ (ಜೀವಾತ್ಮ – ಆತ್ಮ ಹೊಂದಿರುವ ದೇಹ) ಮತ್ತು ಅವರೂ ಸಹ ನಿಯಂತ್ರಣಕ್ಕೆ ಒಳಪಟ್ಟವರು ಎಂದು ತಿರುಮಳಿಶೈ ಆಳ್ವಾರರು ವಿವರಿಸಿದ್ದಾರೆ.

ನಂಬಿಳ್ಳೈರ ವಿವರಣೆ:

ಮುದಲಾಳ್ವಾರರು ಸರ್ವೇಶ್ವರನನ್ನು ಅರಿತುಕೊಂಡದ್ದು ಪ್ರಾಪಂಚಿಕ ದೃಷ್ಟಿ, ಶಾಸ್ತ್ರಗಳ ದೃಷ್ಟಿ, ಅವರ ಭಕ್ತಿ ಹಾಗು ಎಂಬೆರುಮಾನ್‍ರ ನಿರ್ಹೇತುಕ ಕೃಪೆಯಿಂದಾಗಿ. ಇದೇ ರೀತಿ ತಿರುಮಳಿಶೈ ಆಳ್ವಾರರು ಸಹ ಎಂಬೆರುಮಾನ್‍ನನ್ನು ಅರ್ಥೈಸಿಕೊಂಡು ಆನಂದಿಸಿದ್ದಾರೆ. ಆದರೆ ಪ್ರಪಂಚದ ಸುತ್ತಲೂ ನೋಡುತ್ತಾ, ಅವರು ದುಃಖಿಸುವುದು, ಬಹಳಷ್ಟು ಜನರು ಶ್ರೀಮನ್ನಾರಾಯಣನೇ ನಿಯಂತ್ರಕ ಹಾಗು ಶಾಸ್ತ್ರಗಳಲ್ಲಿ ವಿವರಿಸಿರುವಂತೆ ಇತರ ಎಲ್ಲವೂ ಆತನ ನಿಯಂತ್ರಣದಲ್ಲಿಯೆಂದು, ಅವರು ವೇದಗಳ ರಹಸ್ಯಗಳನ್ನು ತಮ್ಮ ಅತ್ಯಂತ ಕೃಪೆಯಿಂದ ಬಹರಂಗಪಡಿಸಿದ್ದಾರೆ. ಅವರು ಹೇಳುತ್ತಾರೆ, “ಬ್ರಹ್ಮನೇ (ಮೊದಲ ಮೂಲಜನಕ) ಒಬ್ಬ ಜೀವಾತ್ಮ ಹಾಗು ಶ್ರೀಮನ್ನಾರಯಣನಿಂದ ಸೃಷ್ಟಿಯ ಸಮಯದಲ್ಲಿ ನೇಮಕಗೊಂಡಿದ್ದು, ಹಾಗು ವೇದಗಳಲ್ಲಿ ವಿವರಿಸಿರುವಂತೆ ಶ್ರೀಮನ್ನಾರಾಯಣನೇ ಸಕಲ ಚರಾಚರ ವಸ್ತುಗಳಿಗೂ ಅಂತರ್ಯಾಮಿಯಾಗಿರುವುದರಿಂದ ಶ್ರೀಮನ್ನಾರಾಯಣನೊಬ್ಬನೇ ಸರ್ವೋಚ್ಚ ಪರಮಪುರುಷ. ಈ ತತ್ವವನ್ನು ಮರೆಯದೇ ಸ್ಪಷ್ಟವಾಗಿ ಹಿಡಿದಿಟ್ಟುಕೊಳ್ಳಿ “

ಈ ರೀತಿ ಮಾಮುನಿಗಳು, ಪೆರಿಯವಾಚ್ಚಾನ್ ಪಿಳ್ಳೈ ಮತ್ತು ನಂಬಿಳ್ಳೈ ಅವರುಗಳು ತಿರುಮಳಿಶೈ ಆಳ್ವಾರ್‍ರ ವಿಶೇಷತೆಗಳನ್ನು ತಮ್ಮ ಸುಂದರವಾದ ಕೃತಿಗಳಲ್ಲಿ ವರ್ಣಿಸಿದ್ದಾರೆ.

ಇವುಗಳಲ್ಲದೆ, ತಿರುಚ್ಚಂದವಿರುತ್ತಂನ ತನಿಯನ್‍ನಲ್ಲಿರುವ ಒಂದು ಸುಂದರ ವರ್ಣನೆ ಏನೆಂದರೆ, ಒಂದು ಸಲ ಮಹಾನ್ ಋಷಿಗಳು ತಪಸ್ಸು ಮಾಡಲು ಒಂದು ಒಳ್ಳೆಯ ಏಕಾಂತ ಪ್ರದೇಶವನ್ನು ಆಯ್ಕೆ ಮಾಡಲು ತಿರುಮಳಿಶೈ (ಆಳ್ವಾರರ ಅವತಾರ ಸ್ಥಳ) ಹಾಗು ಇಡೀ ಪ್ರಪಂಚವನ್ನು ಹೋಲಿಕೆ ಮಾಡಿದಾಗ ತಿರುಮಳಶೈಯೇ  ಮಹಾನ್ ಎಂದು ನಿರ್ಧರಿಸಿದರು. ಆಳ್ವಾರ್/ಆಚಾರ್ಯರ ಅವತಾರ ಸ್ಥಳಗಳ ಮಹಿಮೆ ಎಷ್ಟೆಂದರೆ, ಈ ಸ್ಥಳಗಳನ್ನು ದಿವ್ಯದೇಶಗಳಿಗಿಂತಲೂ ಹೆಚ್ಚಾಗಿ ವೈಭವೀಕರಿಸಬೇಕು, ಏಕೆಂದರೆ ಎಂಬೆರುಮಾನ್ ಯಾರು ಎಂದು ನಮಗೆ ತೋರಿಸಿಕೊಟ್ಟವರು ಈ  ಆಳ್ವಾರ್/ಆಚಾರ್ಯರು ಮತ್ತು ಅವರುಗಳು ಇಲ್ಲದೆ ಇದ್ದಿದ್ದರೆ ನಾವುಗಳು ಎಂಬೆರುಮಾನ್‍ರ ಅನುಭವಗಳನ್ನು ಹೊಂದಲಾಗುತ್ತಿರಲಿಲ್ಲ.

ಇವುಗಳನ್ನು ಮನಸ್ಸಿನಲ್ಲಿಟ್ಟುಕೊಂಡು, ಈಗ ನಾವು ಆಳ್ವಾರರ ಚರಿತ್ರೆಯನ್ನು ನೋಡೋಣ.

ಆಳ್ವಾರರು ಕೃಷ್ಣನ ತರಹ – ಕಣ್ಣನ್ ಎಂಬೆರುಮಾನ್ ಹುಟ್ಟಿದ್ದು ವಸುದೇವ/ದೇವಕಿಗೆ ಹಾಗು ಬೆಳಸಲ್ಪಟ್ಟದ್ದು ನಂದಗೋಪ/ಯಶೋದೆಯಿಂದ. ಇದೇ ರೀತಿ, ಆಳ್ವಾರರು ಹುಟ್ಟಿದ್ದು ಭಾರ್ಗವ ಋಷಿ/ಕನಕಾಂಗಿಗೆ ಮತ್ತು ಬೆಳಸಲ್ಪಟ್ಟದ್ದು ತಿರುವಾಳನ್/ಪಂಗಯಚೆಲ್ವಿ (ಒಬ್ಬ ಮರ ಕಡಿಯುವವ ಹಾಗು ಆತನ ಪತ್ನಿ) ಯಿಂದ. ಅವರು ಶ್ರೀ ಭಕ್ತಿಸಾರರ್, ಮಹಿಷಪುರಾಧೀಶರ್, ಭಾರ್ಗವಾತ್ಮಜರ್, ತಿರುಮಳಿಶೈಯಾರ್ ಎಂದೂ ಹಾಗು ಬಹಳ ಮುಖ್ಯವಾಗಿ ತಿರುಮಳಿಶೈಪ್ಪಿರಾನ್ ಎಂದು ಕರೆಯಲ್ಪಡುತ್ತಾರೆ. ಪಿರಾನ್ ಎಂದರೆ ದೊಡ್ಡ ಅನುಗ್ರಹ ಮಾಡಿದವರು ಎಂದು ಹಾಗು ಆಳ್ವಾರ್‍ರವರು ನಾರಾಯಣನ ಪರತ್ವವನ್ನು ಸ್ಥಾಪಿಸಿ ನಮಗೆ ಬಹಳ ದೊಡ್ಡ ಅನುಗ್ರಹವನ್ನೇ ಮಾಡಿದ್ದಾರೆ.

ಒಂದು ಸಲ ಮಹಾ ಋಷಿಗಳಾದ ಅತ್ರಿ, ಭೃಗು, ವಸಿಷ್ಟ, ಭಾರ್ಗವ, ಆಂಗೀರಸ ಮತ್ತಿತ್ತರರು ಬ್ರಹ್ಮ (ಚತುರ್ಮುಖ) ನಲ್ಲಿ ಹೋಗಿ “ನಾವು ಭೂಲೋಕದಲ್ಲಿನ ಉತ್ಕೃಷ್ಟ ಪ್ರದೇಶದಲ್ಲಿ ವಾಸ ಮಾಡಲು ಬಯಸತ್ತೇವೆ. ಅಂತಹ ಉತ್ತಮವಾದ ಸ್ಥಳವನ್ನು ವಾಸ್ತವಿಕವಾಗಿ ಸ್ಥಾಪಿಸಿ ಕೊಡಬೇಕು” ಎಂದು ಕೇಳಿಕೊಂಡರು. ವಿಶ್ವಕರ್ಮನ ಸಹಾಯದೊಂದಿಗೆ ಬ್ರಹ್ಮ ಇಡೀ ವಿಶ್ವವನ್ನು ಒಂದುಕಡೆಯಲ್ಲಿ ಹಾಗು ತಿರುಮಳಿಶೈಯನ್ನು ಮತ್ತೊಂದು ಕಡೆಯಲ್ಲಿ ತೂಗಿ ಅಳೆದು, ಸ್ಪರ್ಧೆಯಲ್ಲಿ ತಿರುಮಳಿಶೈ ಗೆದ್ದಿತ್ತು. ಇದು ಮಹೀಸಾರ ಕ್ಷೇತ್ರ ಎಂದೂ ಕರೆಯಲ್ಪಡುತ್ತದೆ. ಆದುದರಿಂದ, ಮಹಾನ್ ಋಷಿಗಳು ಕೆಲ ಕಾಲ ಅ ಸ್ಥಳಕ್ಕೆ ಹೋಗಿ ತಂಗಿದ್ದರು.

ಆ ಸಮಯದಲ್ಲಿ, ಭಾರ್ಗವ ಮಹರ್ಷಿಯು ಶ್ರೀಮನ್ನಾರಾಯಣನಿಗೋಸ್ಕರ ಧೀರ್ಘ ಸತ್ರ ಯಾಗ ಎಂಬ ಯಜ್ಞವನ್ನು ನಡೆಸುತ್ತಿದ್ದಾಗ, ಅವರ ಪತ್ನಿ ಗರ್ಭವತಿಯಾಗಿ  12 ತಿಂಗಳುಗಳ ನಂತರ ಒಂದು ಪಿಂಡಕ್ಕೆ (ಮಾಂಸದ ಮುದ್ದೆ – ಭ್ರೂಣದ ಮೊದಲಿನ ಭಾಗ) ಜನ್ಮವಿತ್ತಳು ಹಾಗು ಅದೇ ತಿರುಮಳಿಶೈ ಆಳ್ವಾರ್. ಅವರು ಸುದರ್ಶನ ಅಂಶಸ್ಥ (ಆಳ್ವಾರ ವೈಭವಗಳನ್ನು ಗಮನಿಸಿದರೆ, ಇವರು ನಿತ್ಯಸೂರಿಗಳ ಅಂಶ ಎಂದು ಕೆಲ ಆಚಾರ್ಯರು ಅಭಿಪ್ರಾಯ ಹೊಂದಿದ್ದರೂ ಸಹ, ನಮ್ಮ ಪೂರ್ವಾಚಾರ್ಯರು ಸ್ಪಷ್ಟವಾಗಿ ವಿವರಿಸಿರುವಂತೆ ಆಳ್ವಾರರು ಬಹಳ ಹಿಂದಿನಿಂದಲೂ ಈ ಸಂಸಾರದಲ್ಲಿ ಇದ್ದು, ಹಠಾತ್ತನೆ ಎಂಬೆರುಮಾನಿನ ಕೃಪೆಗೆ ಪಾತ್ರರಾದವರು). ಭಾರ್ಗವ ಮಹರ್ಷಿ ಹಾಗು ಅವರ ಪತ್ನಿ, ಆಕಾರ ತಳೆಯದ ಮಗುವಿಗೆ ಆಶ್ರಯಕೊಡಲು ಇಚ್ಚಿಸದೆ, ಒಂದು ಪೊದೆಯ ಕೆಳಗೆ ಬಿಟ್ಟುಬಿಟ್ಟರು.  ಶ್ರೀದೇವಿ ನಾಚ್ಚಿಯಾರಿನ ಸಂಕಲ್ಪದೊಂದಿಗೆ ಭೂದೇವಿ ನಾಚ್ಚಿಯಾರ್ ಆ ಪಿಂಡವನ್ನು ಸಂರಕ್ಷಿಸಿ, ತನ್ನ ಸ್ಪರ್ಶ ಮಾತ್ರದಿಂದ ಆ ಪಿಂಡವನ್ನು ಒಂದು ಸುಂದರ ಮಗುವನ್ನಾಗಿಸಿದಳು.  ಒಡನೆಯೇ ಆ ಮಗು ಹಸಿವಿನಿಂದ ಅಳಲಾರಂಭಿಸಿದಾಗ, ಜಗನ್ನಾಥ (ತಿರುಮಳಿಶೈಯ) ಎಂಬೆರುಮಾನ್, ಆಳ್ವಾರರ ಮುಂದೆ ಪ್ರತ್ಯಕ್ಷನಾಗಿ ತಿರುಕ್ಕುಡಂದೈ ಆರಾವಮುದನ್‍ರ ದಿವ್ಯ ಮಂಗಳ ರೂಪವನ್ನು ತೋರಿಸಿ, ಆಳ್ವಾರರಿಗೆ ಸಂಪೂರ್ಣ ಜ್ಞಾನವನ್ನು ದಯಪಾಲಿಸಿದ. ಎಂಬೆರುಮಾನ್ ಮರೆಯಾದ ತಕ್ಷಣ, ಆಳ್ವಾರರು ಭಗವಂತನ ವಿಯೋಗದಿಂದ ಅಳ ತೊಡಗಿದರು.

ಆ ಸಮಯದಲ್ಲಿ, ಅಲ್ಲಿ ಹಾದುಹೊಗುತ್ತಿದ್ದ ತಿರುವಾಳನ್ ಎಂಬ ಒಬ್ಬ ಮರ ಕಡಿಯುವವ, ಅಳುತ್ತಿರುವ ಎಳೆಯ ಮಗುವನ್ನು ಬಹಳ ಸಂತೋಷದಿಂದ ತೆಗೆದುಕೊಂಡು, ತನ್ನ ಪತ್ನಿಯ ಬಳಿ ತರುತ್ತಾರೆ. ಮಕ್ಕಳಿಲ್ಲದ ಆಕೆ, ಸಂತೋಷದಿಂದ ಮಗುವನ್ನು ಸ್ವೀಕರಿಸಿ ಬೆಳೆಸುತ್ತಾಳೆ. ತಾಯಿಯ ಮಮತೆಯಿಂದ ಆಕೆ ತನ್ನ ಮೊಲೆಹಾಲು ಉಣಿಸಲು ಪ್ರಯತ್ನಿಸಿದರೂ ಸಹ,   ಆಳ್ವಾರರು ಭಗವತ್ ಕಲ್ಯಾಣಾನುಭವದಲ್ಲಿ ತಲ್ಲೀನರಾಗಿದ್ದುದರಿಂದ, ತಿನ್ನುವುದಾಗಲಿ, ಮಾತನಾಡುವುದಾಗಲಿ, ಅಳುವುದಾಗಲಿ, ಇನ್ನಿತರ ಯಾವುದರಲ್ಲಿಯೂ ಆಸಕ್ತಿ ತೋರದೆ, ಭಗವಂತನ ಕೃಪೆಯಿಂದ ಸುಂದರವಾಗಿ ಬೆಳೆಯುತ್ತಾರೆ.

ಈ ಅದ್ಭುತ ವಾರ್ತೆಯನ್ನು ಕೇಳಿದ್ದ ಚತುರ್ಥ ವರ್ಣದಲ್ಲಿ ಹುಟ್ಟಿದ್ದ ಓರ್ವ ವೃದ್ದ ತನ್ನ ಪತ್ನಿಯೊಡನೆ ಒಂದು ದಿನ ಬೆಳಗಿನ ಜಾವದಲ್ಲೇ ಬಂದು, ಭವ್ಯ ತೇಜಸ್ಸಿನಿಂದ ಬೆಳಗುವ ಮಗುವನ್ನು ನೋಡಿ, ತಾವು ತಯಾರಿಸಿದ್ದ ಒಳ್ಳೆಯ ಬೆಚ್ಚಗಿನ ಹಾಲನ್ನು ಅರ್ಪಿಸಿ ಸ್ವೀಕರಿಸಲು ಬೇಡಿಕೊಳ್ಳುತ್ತಾರೆ. ಅವರ ಭಕ್ತಿಗೆ ಮೆಚ್ಚಿದ ಆಳ್ವಾರರು, ಹಾಲನ್ನು ಸ್ವೀಕರಿಸಿ, ಸ್ವಲ್ಪ ಕುಡಿದು, ಶೇಷವನ್ನು (ಉಳಿದಿದ್ದನ್ನು) ಆ ವೃದ್ದ ದಂಪತಿಗಳಿಗೇ ನೀಡುತ್ತಾರೆ. ಅವರುಗಳಿಗೆ ಆ ಹಾಲಿನ ಪ್ರಸಾದವನ್ನು ಸೇವಿಸುವಂತೆ ಮತ್ತು ಅದರಿಂದ ಅವರುಗಳಿಗೆ ಒಬ್ಬ ಸತ್ಪುತ್ರ (ಒಳ್ಳೆಯ ಗಂಡು ಮಗು) ಪ್ರಾಪ್ತಿಯಾಗುವುದು ಎಂದು ಆಳ್ವಾರರು ತಿಳಿಸುತ್ತಾರೆ.  ಒಡನೆಯೇ ಆ ದಂಪತಿಗಳಿಗೆ ತಮ್ಮ ಪ್ರಾಯ ಮರುಕಳಿಸಿ, ಅ ಹೆಂಗಸು ಗರ್ಭ ಧರಿಸುತ್ತಾಳೆ. 10 ತಿಂಗಳುಗಳ ಬಳಿಕ ಆಕೆ ಶ್ರೀ ವಿದುರರಂತೆ (ಕಣ್ಣನಿಗೆ ಅತ್ಯಂತ ಹತ್ತಿರದ ಸಂಭಂದವಿದ್ದ) ಮಗುವಿಗೆ ಜನ್ಮವೀಯುತ್ತಾಳೆ. ಅವರು ಆ ಮಗುವಿಗೆ ಕನಿ ಕಣ್ಣನ್ ಎಂದು ನಾಮಕರಣ ಮಾಡಿ, ಆತನಿಗೆ ಎಂಬೆರುಮಾನ್‍ರ ಬಗೆ ಎಲ್ಲವನ್ನೂ ಹೇಳಿಕೊಡುತ್ತಾರೆ.

ಭಾರ್ಗವ ಋಷಿಯ ಪುತ್ರರಾದುದರಿಂದಲೂ ಹಾಗು ಜನ್ಮದ ಸಮಯದಲ್ಲಿ ಎಂಬೆರುಮಾನ್‍ರ ಕೃಪೆಗೆ ಪಾತ್ರರಾದುದರಿಂದಲೂ ಆಳ್ವಾರರಿಗೆ 7 ವರ್ಷಗಳು ತುಂಬಿದ ನಂತರ ಅವರಿಗೆ ಅಷ್ಟಾಂಗ ಯೋಗ ಮಾಡುವ ಬಯಕೆ ಹುಟ್ಟಿತು. ಅದು ಮಾಡುವುದಕ್ಕೆ ಮೊದಲು ಪರಬ್ರಹ್ಮದ ಅರ್ಥಪಡೆದುಕೊಳ್ಳಬೇಕು ಎಂದು ವಿವಿಧ ಮತಗಳ ಸಂಶೋಧನೆ ಮಾಡಲು (ಇತರ ಮತಗಳು ದೋಷಯುಕ್ತವಾದವು ಎಂದು ಸ್ಥಾಪಿಸಲು) ಬಾಹ್ಯ ಮತಗಳು (ಶಾಕ್ಯ, ಉಲೂಕ್ಯ, ಅಕ್ಷಪಾದತ್, ಕ್ಷಪಣ, ಕಪಿಲ, ಪತಾಂಜಲಿ) ಹಾಗು ಕುದೃಷ್ಟಿ ಮತಗಳ (ಶೈವ, ಮಾಯಾವಾದ, ನ್ಯಾಯ, ವೈಶೇಷಿಕ, ಭಟ್ಟ, ಪ್ರಭಾಕರ, ಇತರೆ) ಬಗ್ಗೆ ವಿಷ್ಲೇಶಿಸಿ, ಈ ಮತಗಳು ಅತ್ಯುಚ್ಚ ಸತ್ಯದ ಕಡೆಗೆ ಕರೆದೊಯ್ಯಲಾರದು ಎಂದು ಸ್ಪಷ್ಟವಾಗಿ ಸ್ಥಾಪಿಸಿದರು. ಕಡೆಗೆ, ಅವರು ಸನಾತನ ಧರ್ಮವಾದ ಶ್ರೀವೈಷ್ಣವ ಸಿದ್ದಾಂತದಲ್ಲಿ ದೃಢವಾಗಿ ನೆಲಗೊಳ್ಳುತ್ತಾರೆ. ಅಷ್ಟರಲ್ಲಿ 700 ವರ್ಷಗಳು ಕಳೆದಿರುತ್ತದೆ.

ತದನಂತರ ಸರ್ವೇಶ್ವರನು ಆಳ್ವಾರರಿಗೆ ಕಳಂಕರಹಿತ ದೈವೀಕ ಜ್ಞಾನವನ್ನು ಕರುಣಿಸಿ, ಅವರಿಗೆ ಕೆಳಕಂಡದೆಲ್ಲವನ್ನು ತೋರಿಸುತ್ತಾರೆ:

 • ಆತನ ದಿವ್ಯ ಸ್ವರೂಪ
 • ಆತನ ಅತ್ಯಂತ ಮಂಗಳಕರ ಗುಣಗಳು
 • ಆತನ ದಿವ್ಯ ರೂಪಗಳು (ಸ್ವರೂಪ ಮತ್ತು ಗುಣಗಳನ್ನು ತೋರಿಸುವಂತಹ)
 • ಆ ದಿವ್ಯ ರೂಪಗಳ ಮೇಲೆ ಧರಿಸಿರುವಂತಹ ಆಭರಣಗಳು
 • ಅನುಕೂಲರು ಆಭರಣಗಳು ಎಂದೇ ಪರಿಗಣಿಸಲ್ಪಡುವ ಆತನ ದಿವ್ಯ ಆಯುಧಗಳು
 • ಆತನ ಮಹಿಷಿಗಳು (ಶ್ರೀದೇವಿ, ಭೂದೇವಿ, ನೀಳಾ ದೇವಿ, ಇತರರು) ಮತ್ತು ಆತನ ನಿರಂತರ ಅನಂದವನ್ನು ಅನುಭವಿಸುವ ನಿತ್ಯಸೂರಿಗಳು ಮೇಲ್ಕಂಡವುಗಳೊಂದಿಗೆ (ಸ್ವರೂಪ, ಗುಣ, ರೂಪ, ಆಭರಣ, ಆಯುಧ, ಮತ್ತಿತರ)
 • ಪರಮಪದ – ಅದರ ನಿತ್ಯ ಸುಂದರ ನಿವಾಸ ಹಾಗು ಕೊನೆಯದಾಗಿ
 • ಸಂಸಾರ – ಪ್ರಕೃತಿ, ಪುರುಷ, ಕಾಲ ತತ್ವಗಳನ್ನು ಒಳಗೊಂಡದ್ದು ಮತ್ತು ಸೃಷ್ಟಿ, ಸ್ಥಿತಿ, ಸಂಹಾರಗಳನ್ನು ಇತರ ದೇವತೆಗಳಿಂದ ಪರೋಕ್ಷವಾಗಿ ಹಾಗು ಎಂಬೆರುಮಾನ್ ತಾನೇ ಪ್ರತ್ಯಕ್ಷವಾಗಿ ನಡೆಸುವ  ನಿರಂತರ ಪ್ರಕ್ರಿಯೆಗಳು.

ತನ್ನ ಮಹಾನ್ ಗುಣಗಳಿಂದ ಎಂಬೆರುಮಾನ್ ಹೇಗೆ ಬ್ರಹ್ಮ (ತನ್ನ ಮೊದಲನೆಯ ಮಗ) ತನ್ನ ನಾಭಿ ಕಮಲದಿಂದ ಸೃಷ್ಟಿಸಲ್ಪಟ್ಟ ಎಂದು ಆಳ್ವಾರರಿಗೆ ತೋರಿಸಿದ –  ಶ್ವೇತಾಶ್ವತರ ಉಪನಿಷತ್ತಿನ “ಯೋ ಬ್ರಹ್ಮಾಣಾಂ ವಿದಧಾತಿ ಪೂರ್ವಂ” ನಂತೆ ಬ್ರಹ್ಮನನ್ನು ಸೃಷ್ಟಿಸುವುದು ಪರಬ್ರಹ್ಮ ಮತ್ತು ಛಾಂದೋಗ್ಯ ಬ್ರಾಹ್ಮಣದ “ಬ್ರಹ್ಮಣಃ ಪುತ್ರಾಯ ಜ್ಯೇಷ್ಠಾಯ ಶ್ರೇಷ್ಠಾಯ” – ರುದ್ರನು ಬ್ರಹ್ಮನ ಮೊದಲನೆ ಪುತ್ರ. ಇದನ್ನು ಗಮನಿಸಿದ ತಕ್ಷಣ ಆಳ್ವಾರರು ತಮ್ಮ ನಾನ್ಮುಗನ್ ತಿರುವಂದಾದಿಯಲ್ಲಿ “ನಾನ್ಮುಗನೈ ನಾರಾಯಣನ್ ಪಡೈತ್ತಾನ್ ನಾನ್ಮುಗನುಂ ತಾನ್ ಮುಗಮಾಯ್ ಶಂಕರನೈ ತಾನ್ ಪಡೈತ್ತಾನ್” ಎಂಬ ಘೋಷಣೆಯಂತೆ ನಾರಾಯಣನು ಬ್ರಹ್ಮನನ್ನು ಸೃಷ್ಟಿಸಿದ ಹಾಗು ಪ್ರತಿಯಾಗಿ ಬ್ರಹ್ಮ ರುದ್ರನನ್ನು ಎನ್ನುತ್ತಾ ಸಂಸಾರಿಗಳ ಮನಸ್ಸಿನಲ್ಲಿ ಎಂಬೆರುಮಾನ್‍ನ ಪರತ್ವದ ಬಗ್ಗೆ ಇರುವ ಯಾವುದೇ ಅನುಮಾನಗಳನ್ನು ತೆಗೆದುಹಾಕುತ್ತಾರೆ.  ತಾವೇ ಘೋಷಿಸುವಂತೆ ಆಳ್ವಾರರು ವಿವಿಧ ಮತಗಳನ್ನು ಕಲಿತುಕೊಂಡ ನಂತರ ಕೊನೆಯಲ್ಲಿ ಎಂಬೆರುಮಾನ್ ಕೃಪೆಯಿಂದಾಗಿ ತಾವು ಎಂಬೆರುಮಾನ್‍ನ ಪಾದಪದ್ಮಗಳನ್ನು ಆಶ್ರಯಿಸಿದೆ ಎಂದು ಹೇಳುತ್ತಾರೆ. ತದನಂತರ ಅವರು  ಕೈರವಣಿ ಪುಷ್ಕರಣಿಯ ತಟಾಕದಲ್ಲಿರುವ ತಿರುವಲ್ಲಿಕೇಣಿ (ಬೃಂದಾರಣ್ಯ ಕ್ಷೇತ್ರ) ದಲ್ಲಿರವ ಶ್ರೀಯಃಪತಿಯ (ಮಹಾಲಕ್ಷ್ಮಿಯ ಪತಿ) ಕಲ್ಯಾಣ ಗುಣಗಳ ನಿರಂತರ ಧ್ಯಾನದಲ್ಲಿ ನಿರತರಾಗಿದ್ದರು.

ಒಂದು ದಿನ ರುದ್ರನು ತನ್ನ ಪತ್ನಿಯೊಡನೆ ಆಕಾಶಮಾರ್ಗದಲ್ಲಿ ತನ್ನ ವೃಷಭ ವಾಹನದಲ್ಲಿ ಸಂಚರಿಸುತ್ತಿದ್ದನು. ಅವರ ನೆರಳು ಆಳ್ವಾರರ ಮೇಲೆ ಬೀಳುವುದರಲ್ಲಿದ್ದಾಗ ಆಳ್ವಾರರು ಕೊಂಚ ದೂರ ಸರಿದರು. ಅದನ್ನು ಗಮನಿಸಿದ ಪಾರ್ವತಿ, ರುದ್ರನಲ್ಲಿ ಆಳ್ವಾರರನ್ನು ಭೇಟಿ ಮಾಡೋಣವೆಂದು ಹೇಳುತ್ತಾಳೆ. ಮಹಾತ್ಮರಾದ ಆಳ್ವಾರರು ಎಂಬರುಮಾನ್‍ನ ಭಕ್ತರಾದುದರಿಂದ ತಮ್ಮನ್ನು ಉಪೇಕ್ಷಿಸುತ್ತಾರೆ ಎಂದು ರುದ್ರನು ಹೇಳುತ್ತಾನೆ. ಆದರೂ  ಪಾರ್ವತಿಯ ಬಲವಂತಕ್ಕೆ ಮಣಿದು ರುದ್ರನು ಕೆಳಗೆ ಇಳಿದು ಆಳ್ವಾರರನ್ನು ಭೇಟಿ ಮಾಡಲು ಒಪ್ಪುತ್ತಾನೆ.   ಆಳ್ವಾರರು  ಬಂದವರು ಯಾರೆಂದು ನೋಡುವುದು ಇಲ್ಲ. ಆಗ ರುದ್ರನು ಕೇಳುತ್ತಾನೆ, “ನಾವು ನಿಮ್ಮ ಪಕ್ಕದಲ್ಲಿದ್ದರೂ ಸಹ ತಾವೇಕೆ ನಮ್ಮನ್ನು ನೋಡುವುದಿಲ್ಲ?” ಆದಕ್ಕೆ ಆಳ್ವಾರರು “ನಿನ್ನೊಡನೆ ನನಗೆ ಮಾಡಲು ಏನೂ ಇಲ್ಲ” ಎಂದು ಉತ್ತರಿಸುತ್ತಾರೆ. ಆಗ ರುದ್ರನು “ನಿಮಗೆ ವರವನ್ನು ನೀಡಲು ಇಚ್ಚಿಸುತ್ತೇವೆ” ಎಂದು ಹೇಳುತ್ತಾನೆ.  ಆದಕ್ಕೆ ಆಳ್ವಾರರು “ನನಗೆ ನಿನ್ನಿಂದ ಏನೂ ಬೇಡ” ಎಂದು ಹೇಳುತ್ತಾರೆ. ಆಗ ರುದ್ರನು “ನಾವು ಭೇಟಿ ಮಾಡಲು ಬಂದದ್ದು ವ್ಯರ್ಥವಾಗುತ್ತದೆ, ಆದುದರಿಂದ ನಿಮ್ಮ ಯಾವುದೇ ಬಯಕೆ ಇದ್ದರೆ ಕೇಳಿ” ಎನ್ನುತ್ತಾನೆ. ಅದಕ್ಕೆ ನಗುತ್ತಾ ಆಳ್ವಾರರು “ ನನಗೆ ಮೋಕ್ಷ ನೀಡುವೆಯಾ?” ಎಂದು ಕೇಳುತ್ತಾರೆ. ಆಗ ರುದ್ರನು “ನನಗೆ ಅದನ್ನು ನೀಡುವ ಅಧಿಕಾರ ಇಲ್ಲ, ಕೇವಲ ಶ್ರೀಮನ್ನಾರಯಣನೊಬ್ಬನೆ ಅದನ್ನು ನೀಡಬಲ್ಲ” ಎಂದು ಉತ್ತರಿಸುತ್ತಾನೆ. ಆಗ ಆಳ್ವಾರರು “ ಯಾರಾದರೂ ಒಬ್ಬ ವ್ಯಕ್ತಿಯ ಸಾವನ್ನು ಮುಂದೂಡಲು ಸಾಧ್ಯವೆ?” ಎಂದು ಕೇಳಿದಾಗ ರುದ್ರನು “ಅದು ವ್ಯಕ್ತಿಯ ಕರ್ಮಾನುಸಾರವಾದದ್ದು, ನನಗೆ ಅದರ ಮೇಲೆ ನಿಯಂತ್ರಣವಿಲ್ಲ” ಎನ್ನುತ್ತಾನೆ. ಆಗ ಆಳ್ವಾರರು ತಮ್ಮ ಕೈಯಲ್ಲಿದ್ದ ಸೂಜಿ-ದಾರವನ್ನು ತೋರಿಸಿ “ಈ ಸೂಜಿಯೊಳಗೆ ದಾರವನ್ನು ತೂರಿಸಬಲ್ಲಿರಾ?” ಎಂದು ವ್ಯಂಗ್ಯವಾಗಿ ಕೇಳುತ್ತಾರೆ. ಆಗ ರುದ್ರನು ಕೋಪಗೊಂಡು ಕಾಮದೇವನನ್ನ ಸಟ್ಟಂತೆ ಆಳ್ವಾರರನ್ನೂ ಭಸ್ಮಮಾಡಿಬಿಡುವುದಾಗಿ ಶಪಥ ಮಾಡತ್ತಾನೆ. ರುದ್ರನು ತನ್ನ ಮೂರನೆ ಕಣ್ಣು ತೆರೆಯುತ್ತಿದ್ದಂತೆ ಬೆಂಕಿಯು ಹರಿಯಲು ಪ್ರಾರಂಭವಾಗುತ್ತದೆ.  ಪ್ರತಿಯಾಗಿ ಆಳ್ವಾರರು ಸಹ  ತಮ್ಮ ಬಲಗಾಲಿನಲ್ಲಿದ್ದ ತಮ್ಮ ಮೂರನೆಯ ಕಣ್ಣನ್ನು ತರೆದಾಗ, ಅದರಿಂದಲೂ ಬೆಂಕಿಯು ಹೊರಹೊಮ್ಮಲು ತೊಡಗುತ್ತದೆ.  ಆಳ್ವಾರರ ತಿರುವಡಿಯ ಅಗ್ನಿಯ ಉಷ್ಣತೆಯನ್ನು ತಾಳಲಾರದೆ, ರುದ್ರನು ಶ್ರೀಮನ್ನಾರಯಣನಲ್ಲಿ ಶರಣಾಗುತ್ತಾನೆ ಹಾಗ ಇತರ ಎಲ್ಲ ದೇವತೆಗಳು, ಋಷಿಗಳು ಸಹ ಎಂಬೆರುಮಾನ್‍ನ ಮೊರೆ ಹೊಕ್ಕು ವ್ಯವಸ್ಥೆಯನ್ನು ಕಾಪಾಡಲು ಪ್ರಾರ್ಥಿಸುತ್ತಾರೆ. ಒಡನೆ ಎಂಬೆರುಮಾನ್ ದೊಡ್ಡ ಮಳೆ ತರುವ ಪ್ರಳೆಯದ ಮೋಡಗಳನ್ನ ಆದೇಶಿಸುತ್ತಾನೆ. ಈ ಮೋಡಗಳಿಗೆ ಆಳ್ವಾರರ ಅಗ್ನಿಯನ್ನು ಉಪಶಮನ ಮಾಡುವ ಶಕ್ತಿ ಇದೆಯೇ ಎಂದು ಕೇಳಿದಾಗ, ಎಂಬೆರುಮಾನ್ ತಾನು ಆ ಶಕ್ತಿಯನ್ನು ಮೋಡಗಳಿಗೆ ನೀಡುವೆ ಎಂದು ಉತ್ತರಿಸುತ್ತಾನೆ.  ಒಂದು ದೊಡ್ಡ ಪ್ರವಾಹವು ಉತ್ಪತ್ತಿಯಾಗಿ ಆಳ್ವಾರರ ಅಗ್ನಿಯನ್ನ ಶಾಂತವಾಗಿಸಿದ ನಂತರ, ಎಂಬೆರುಮಾನ್‍ರಲ್ಲಿ ದೃಢ ಭಕ್ತಿ ಹೊಂದಿದ್ದ ಆಳ್ವಾರರು ಯಾವುದೇ ಅಡೆತಡೆಗಳಿಲ್ಲದೆ ತಮ್ಮ ಧ್ಯಾನವನ್ನು ಮುಂದುವರೆಸುತ್ತಾರೆ. ಅಳ್ವಾರರ ನಿಷ್ಠೆಯನ್ನು ಕಂಡು ವಿಸ್ಮಯಗೊಂಡ ರುದ್ರನು, ಅವರಿಗೆ “ಭಕ್ತಿಸಾರ” ಎಂಬ ಬಿರುದನ್ನು ನೀಡಿ, ಅವರನ್ನು ವೈಭವೀಕರಸಿ, ಪಾರ್ವತಿಗೆ “ಅಂಬರೀಷನಿಗೆ ಅಪಚಾರ ಮಾಡಿ ದೂರ್ವಾಸರು ಶಿಕ್ಷೆಗೆ ಒಳಗಾದರು, ಭಾಗವತರನ್ನು ಸೋಲಿಸಲು ಸಾಧ್ಯವಿಲ್ಲ” ಎಂದು ತಿಳಿಸಿ ತನ್ನ ಸ್ವಸ್ಥಾನಕ್ಕೆಹಿಂದಿರುಗಿದನು.

ಆಳ್ವಾರರು ತಮ್ಮ ಧ್ಯಾನವನ್ನು ಮುಂದುವರೆಸುತ್ತಾರೆ. ಒಬ್ಬ ಕೇಚರ (ಗಗನ ಸಂಚಾರಿ) ತನ್ನ ಹುಲಿಯ ಮೇಲೆ ಆಕಾಶಮಾರ್ಗದಲ್ಲಿ ಚಲಿಸುತ್ತಿದ್ದಾಗ, ಆಳ್ವಾರರ ಯೋಗಶಕ್ತಿಯ ಕಾರಣದಿಂದ ಆತನಿಗೆ ಆಳ್ವಾರರನ್ನು ದಾಟಿ ಮಂದೆಹೋಗಲು ಸಾಧ್ಯವಾಗಲಿಲ್ಲ. ಆತ ಕೆಳಗೆ ಬಂದು ಆಳ್ವಾರರಿಗೆ ತನ್ನ ಪ್ರಣಾಮಗಳನ್ನು ಸಲ್ಲಿಸಿದ.  ಆ ಕೇಚರ ತನ್ನ ಮಾಂತ್ರಿಕ ಶಕ್ತಿಯಿಂದ ಒಂದು ಸುಂದರವಾದ ಶಾಲು ಸೃಷ್ಠಿಸಿ “ನಿಮ್ಮ ಹರಿದುಹೋದ ಶಾಲುವನ್ನು ಬಿಟ್ಟುಕೊಟ್ಟು ತನ್ನ ಸುಂದರವಾದ ಶಾಲುವನ್ನು ಅಂಗೀಕರಿಸಿ” ಎಂದು ಕೇಳಿಕೊಳ್ಳುತ್ತಾನೆ.  ಆಗ ಆಳ್ವಾರರು ಸುಲಲಿತವಾಗಿ ಮತ್ತೊಂದು ಸುಂದರ ಹಾಗು ರತ್ನಗಳಿಂದ ಕೂಡಿರುವ ಶಾಲುವನ್ನು ಸೃಷ್ಠಿಸಿದಾಗ ಕೇಚರನಿಗೆ ಅಸಮಾಧಾನವಾಗುತ್ತದೆ. ಆಗ ಕೇಚರ ತನ್ನ ಹಾರ (ಕಂಠಹಾರ) ತೆಗೆದು ಆಳ್ವಾರರಿಗೆ ಸಮರ್ಪಿಸಿದಾಗ ಆಳ್ವಾರರು ತಮ್ಮ ತುಳಸಿಮಾಲೆಯನ್ನು ತೆಗೆದು ಆತನಿಗೆ ವಜ್ರದ ಹಾರದಂತೆ ತೋರಿಸುತ್ತಾರೆ.  ಆಳ್ವಾರರ ಯೋಗಶಕ್ತಿಯನ್ನು ಅರ್ಥಮಾಡಿಕೊಂಡ ಕೇಚರನು, ಅವರನ್ನು ವೈಭವೀಕರಿಸಿ, ಪ್ರಣಾಮಗಳನ್ನು ಸಲ್ಲಿಸಿ, ಅಲ್ಲಿಂದ ಹೊರಡಲು ಅನುಮತಿ ಪಡೆದನು.

ಆಳ್ವಾರರ ವೈಭವಗಳನ್ನು ಕೇಳಿ, ಕೊಂಕಣಸಿದ್ದ ಎಂಬ ಜಾದೂಗಾರ ಆಳ್ವಾರರನ್ನು ಭೇಟಿಮಾಡಲು ಬಂದು, ತನ್ನ ಪ್ರಣಾಮಗಳನ್ನು ಅರ್ಪಿಸಿ, ಅವರಿಗೆ ಒಂದು ರಸವಿದ್ಯೆ ಕಲ್ಲನ್ನು (ಕಲ್ಲು/ಲೋಹವನ್ನು ಚಿನ್ನವನ್ನಾಗಿ ರೂಪಾಂತರಗೊಳಿಸುವ) ನೀಡಲು ಆಶಿಸಿದ. ಅದನ್ನು ತಿರಸ್ಕರಿಸಿದ ಆಳ್ವಾರರು, ತಮ್ಮ ದಿವ್ಯದೇಹದಿಂದ (ಕಿವಿಯ ಭಾಗದಿಂದ) ಕೊಂಚ ಕೊಳಕನ್ನು ಆ ಜಾದೂಗರನಿಗೆ ಕೊಟ್ಟು ಆ ಕೊಳಕು ಪದಾರ್ಥವೂ ಸಹ ಕಲ್ಲನ್ನು ಚಿನ್ನವನ್ನಾಗಿ ರೂಪಾಂತರಗೊಳಿಸುತ್ತದೆ ಎಂದರು. ಅದನ್ನು ಪರೀಕ್ಷಿಸಿ ಕಾರ್ಯ ಮಾಡುವುದು ಎಂಬುದನ್ನು ತಿಳಿದು ಸಂತೋಷದಿಂದ ಆಳ್ವಾರರಿಗೆ ತನ್ನ ಪ್ರಣಾಮಗಳನ್ನು ಅರ್ಪಿಸಿ ಹೊರಟುಹೋದ.

ಆಳ್ವಾರರು ತಮ್ಮ ಧ್ಯಾನವನ್ನು ಒಂದು ಗುಹೆಯೊಳಗೆ ಕೆಲಕಾಲ ಮುಂದುವರೆಸಿದರು.  ಯವಾಗಲೂ ಎಂಬೆರುಮಾನ್‍ನ ದಿವ್ಯಗುಣಗಳನ್ನು ವೈಭವೀಕರಿಸುತ್ತಾ  ನಿರಂತರವಾಗಿ ಪರ್ಯಟನೆ ಮಾಡುತಿದ್ದ ಮುದಲಳ್ವಾರರು (ಪೊಯ್‍ಗೈಯಾಳ್ವಾರ್, ಭೂದತ್ತಾಳ್ವಾರ್, ಪೇಯಾಳ್ವಾರ್)  ದಿವ್ಯ ತೇಜಸ್ಸು ಹೊರಹೊಮ್ಮುತ್ತಿದ್ದ ಆಳ್ವಾರರು ವಾಸಿಸುತ್ತಿದ್ದ ಆ ಗುಹೆಯ ಬಳಿ ಬಂದರು. ತಿರುಮಳಿಶೈ ಆಳ್ವಾರರ ವೈಭವವನ್ನು ಅರಿತ ಒಡನೆಯೇ, ಅವರ ಯೋಗಕ್ಷೇಮವನ್ನು ವಿಚಾರಿಸಿದರು. ಮುದಲಾಳ್ವಾರರ ವೈಭವವನ್ನು ಅರ್ಥಮಾಡಿಕೊಂಡ ಆಳ್ವಾರರು ಸಹ ಅವರ ಕುಶಲೋಪರಿಯನ್ನು ವಿಚಾರಿಸಿದರು. ಅವರುಗಳು ತಮ್ಮ ಭಗವದನುಭವಗಳನ್ನು ಒಟ್ಟಾಗಿ ಹಂಚಿಕೊಂಡರು. ಅವರೆಲ್ಲರೂ ಒಗ್ಗೂಡಿ ಅಲ್ಲಿಂದ ಹೊರಟು ಪೇಯಾಳ್ವಾರರ ಅವತಾರ ಸ್ಥಳವಾದ ತಿರುಮಯಿಲೈ (ಮಯಿಲಾಪುರ) ತಲುಪಿ, ಕೈರವತೀರ್ಥದ ದಡದ ಬಳಿ ಕೆಲಕಾಲ ಕಳೆದರು. ನಂತರ ಮುದಲಾಳ್ವಾರರು ತಮ್ಮ ದಿವ್ಯಪರ್ಯಟನೆಯನ್ನು ಮುಂದುವರೆಸಿದಾಗ, ಆಳ್ವಾರರು ತಮ್ಮ ಅವತಾರಸ್ಥಳವಾದ ತಿರುಮಳಿಶೈಗೆ ಹಿಂತಿರುಗಿದರು.

ಆವರು ತಿರುಮಣ್‍ಕಾಪ್ಪು ಹುಡುಕಲು ತೊಡಗಿದಾಗ ಅವರಿಗೆ ಸಿಗಲಿಲ್ಲ, ಅವರು ದುಃಖಿತರಾಗಿರುವಾಗ, ಅವರಿಗೆ ಸ್ವಪ್ನದಲ್ಲಿ ತಿರುವೇಂಗಡಮುಡೈಯಾನ್ ಪ್ರತ್ಯಕ್ಷನಾಗಿ ತಿರುಮಣ್ ದೊರೆಯುವ ಸ್ಥಳವನ್ನು ತೋರಿದನು.  ಆಗ ಅವರು ಸಂತೋಷದಿಂದ ಅದನ್ನು ಪುನಃ ಪಡೆದುಕೊಂಡು ದ್ವಾದಶ ಊರ್ಧ್ವಪುಂಡ್ರ (ಶಾಸ್ತ್ರಗಳಲ್ಲಿ ತಿಳಿಸಿರುವಂತೆ ದೇಹದ ವಿವಿಧ ಭಾಗಗಳಲ್ಲಿ 12 ತಿರುಮಣ್‍ಗಳು) ಧರಿಸಿದರು ಮತ್ತು ತಮ್ಮ ಭಗವದನುಭವಗಳನ್ನು ಮುಂದುವರೆಸಿದರು. ಪೊಯ್‍ಗೈಯಾಳ್ವಾರರ ಅವತಾರ ಸ್ಥಳಕ್ಕೆ ಹೋಗಲು ಇಚ್ಛೆಪಟ್ಟು ಪುಣ್ಯಕ್ಷೇತ್ರಗಳಲ್ಲಿ ಅತ್ಯಂತ ವೈಭವಯುಕ್ತವಾದ ಕಾಂಚೀಪುರದ ತಿರುವೆಕ್ಕಾಗೆ ಬಂದರು. ಶ್ರೀದೇವಿ-ಭೂದೇವಿಯರೊಡನೇ ಸೇವೆ ಸ್ವೀಕರಿಸುತ್ತಾ ಆದಿಶೇಷನ ಮೇಲೆ ಸುಂದರವಾಗಿ  ಪವಡಿಸಿರುವ ಎಂಬೆರುಮಾನ್‍ನನ್ನು ಪೂಜಿಸುತ್ತಾ ಅಲ್ಲಿಯೇ  700 ವರ್ಷಗಳ ಕಾಲ ಇದ್ದರು. ಪೊಯ್‍ಗೈಯಾಳ್ವಾರರು ಕಾಣಿಸಿಕೊಂಡ ಕೊಳದ ದಡದ ಮೇಲೇ ವಾಸಿಸುತ್ತಾ, ಪೊಯ್‍ಗೈಯಾಳ್ವಾರರನ್ನು ಧ್ಯಾನಿಸುತ್ತಾ ಸಮಯ ಕಳೆದರು.

.

yathokthakari-swamy

ನಾಚ್ಚಿಯಾರೊಡಗೂಡಿ ಯಥೋಕ್ತಕಾರಿ, ತಿರುವೆಕ್ಕಾ

ಆ ಸಮಯದಲ್ಲಿ ಕಣಿಕಣ್ಣನ್ ಅಲ್ಲಿಗೆ ತಲುಪಿ ಅವರ ಪಾದ ಪದ್ಮಗಳಲ್ಲಿ ಆಶ್ರಯವನ್ನು ಪಡೆದ.  ಒಬ್ಬ ವೃದ್ದ ಮಹಿಳೆ ಪ್ರತಿ ದಿನವೂ ಆಳ್ವಾರರ ಸೇವೆಯನ್ನು ಶ್ರದ್ಧಾಭಕ್ತಿಯಿಂದ ಮಾಡುತ್ತಿದ್ದಳು. ಆಳ್ವಾರರು ಆಕೆಯ ಶ್ರದ್ಧಾಭಕ್ತಿಯನ್ನು ಮೆಚ್ಚಿ, ಏನಾದರೂ ಕೋರಿಕೆಗಳಿದ್ದರೆ ಪೂರ್ತಿ ಮಾಡುತ್ತೇನೆಂದು ಹೇಳಿದರು.  ಆಕೆ ತಾನು ಮತ್ತೆ ಯೌವನ ಮರುಪಡೆಯಬೇಕು ಎಂದಾಗ, ಆಳ್ವಾರರು ಅವಳನ್ನು ಹರಿಸಿದ ಒಡನೆಯೆ ಆಕೆ ಪುನಃ ಸುಂದರ ಯುವತಿಯಾದಳು.   ಆಕೆಯಿಂದ ಆಕರ್ಷಿತನಾದ ಆ ಪ್ರದೇಶದ ರಾಜ ಪಲ್ಲವರಾಯನು, ತನ್ನನ್ನು ಮದುವೆಯಾಗು ಎಂದು ಕೇಳಿದ. ಆಕೆ ಒಪ್ಪಿ, ಈರ್ವರೂ ಮದುವೆಯಾಗಿ ಸಂತೋಷದಿಂದ ಜೊತೆಗೂಡಿದ್ದರು. ಒಂದು ದಿನ, ಪಲ್ಲವರಾಯ ತಾನು ಪ್ರತಿ ದಿನವೂ ವೃದ್ಧನಾಗುತ್ತಿದ್ದರೂ ಸಹ ತನ್ನ ಪತ್ನಿ (ಆಳ್ವಾರರ ಆಶೀರ್ವಾದದಿಂದ) ಸದಾ ಯೌವನದಿಂದ ಇರುವುದನ್ನು ಕಂಡು, ಈ ದಿವ್ಯ ಯೌವನದ ಮರ್ಮವೇನೆಂದು ಕೇಳಿದ. ಆಕೆ ಆಳ್ವಾರರ ಆಶೀರ್ವಾದದ ಬಗ್ಗೆ ತಿಳಸಿ, ಕನಿಕಣ್ಣನ್ ನನ್ನು (ರಾಜನಿಗೆ ಕೈಂಕರ್ಯ ಮಾಡಲು ಪದಾರ್ಥಗಳನ್ನು ತರುತ್ತಿದ್ದ) ವಿನಮ್ರತೆಯಿಂದ  ವಿನಂತಿಸಿಕೊಂಡರೆ, ಆತ ಆಳ್ವಾರರಿಗೆ ಶಿಫಾರಸು ಮಾಡಿ, ರಾಜನಿಗೂ ಅದೇ ದಿವ್ಯ ಯೌವನ ದಯಪಾಲಿಸುವರು ಎಂದು ನಿರ್ದೇಶಿಸಿದಳು. ಕನಿಕಣ್ಣನ್‍ನನ್ನು ಕರೆಸಿಕೊಂಡ ರಾಜನು, ಆಳ್ವಾರರನ್ನು ಪೂಜಿಸಲು ಅರಮನೆಗೆ ಕರೆದುಕೊಂಡುಬರಬೇಕು ಎಂದು ವಿನಂತಿಸಿಕೊಳ್ಳುತ್ತಾನೆ. ಆಳ್ವಾರರು ಎಂಬೆರುಮಾನ್‍ನ ದೇವಾಲಯ ಹೊರತಾಗಿ ಬೇರೆಲ್ಲಿಗೂ ಹೋಗುವುದಿಲ್ಲವೆಂದು ಉತ್ತರಿಸುತ್ತಾನೆ. ರಾಜನು ತನ್ನನ್ನು ವೈಭವೀಕರಿಸಲು ಕೋರಿದಾಗ, ಕನಿಕಣ್ಣನ್ ತಾನು ಶಿಷ್ಟಾಚಾರದಂತೆ (ಹಿರಿಯರ ವರ್ತನೆ ಹಾಗು ಕಾರ್ಯ)  ಶ್ರೀಮನ್ನಾರಾಯಣ ಮತ್ತು ಆತನ ಭಕ್ತರ ವಿನಃ ಬೇರೆ ಯಾರನ್ನೂ ವೈಭವೀಕರಿಸುವುದಿಲ್ಲ ಎಂದು ಹೇಳುತ್ತಾನೆ. ತನ್ನನ್ನು ವೈಭವೀಕರಿಸಲು ನಿರಾಕರಿಸಿದ ಎಂಬ ಕಾರಣದಿಂದ ಕೋಪಗೊಂಡ ರಾಜನು ಕನಿಕಣ್ಣನ್‍ನನ್ನು ತನ್ನ ರಾಜ್ಯದಿಂದ ಹೊರ ಹೋಗುವಂತೆ ಆಜ್ಞೆಮಾಡಿದ. ತಕ್ಷಣ ಅರಮನೆಯಿಂದ ಹೊರ ಬಂದ ಕನಿಕಣ್ಣನ್, ಆಳ್ವಾರರ ಬಳಿಬಂದು ನಡೆದ ಘಟನೆಗಳನ್ನು ವಿವರಿಸಿ ಹೊರಡಲು ಅಪ್ಪಣೆಯನ್ನು ಕೇಳಿದ. ಅಳ್ವಾರರು “ನೀನು ಹೋಗುವುದಾದರೆ ನಾನೂ ಸಹ ಹೋಗುತ್ತೇನೆ.  ನಾನ ಹೋಗುವುದಾದರೆ ಎಂಬೆರುಮಾನ್ ಸಹ ಹೊರಡುತ್ತಾನೆ ಮತ್ತು ಅವನೊಡನೆ ಎಲ್ಲಾ ದೇವತೆಗಳೂ ಇಲ್ಲಿಂದ ಹೊರಟುಹೋಗುತ್ತಾರ” ಎಂದು ಹೇಳುತ್ತಾ “ನಾನು ದೇವಾಲಯಕ್ಕೆ ಹೋಗಿ ಎಂಬೆರುಮಾನ್‍ನನ್ನು ಎಬ್ಬಿಸಿ ನನ್ನೊಡನೆ ಕರೆದು ತರುತ್ತೇನೆ” ಎಂದು ದೇವಾಲಯಕ್ಕೆ ಹೋದರು.  ಆಳ್ವಾರರು ತಿರುವೆಕ್ಕಾ ಎಂಬೆರುಮಾನ್‍ರ ಮುಂದೆ ಹಾಡಲು ತೊಡಗುತ್ತಾರೆ:

ಕಣಿಕಣ್ಣನ್ ಪೋಗಿನ್ರಾನ್ ಕಾಮರು ಪೂಂಗಚ್ಚಿ
ಮಣಿವಣ್ಣಾ! ನೀ ಕಿಡಕ್ಕ ವೇಂಡಾ ತುಣಿವುಡೈಯ
ಶೆನ್ನಾಪ್ಪುಲವನುಂ ಪೋಗಿನ್ರೇನ್ ನೀಯುಂ ಉನ್ರನ್
ಪೈಂನ್ನಾಗಪ್ಪಾಯ್ ಶರುಟ್ಟಿಕ್ಕೊಳ್

ಓ ತಿರುವೆಕ್ಕಾದಲ್ಲಿ ವಾಸಿಸುವ ಸುಂದರ ರೂಪ ಉಳ್ಳವನೇ! ಕನಿಕಣ್ಣನ್ ಹೋಗುತ್ತಿದ್ದಾನೆ. ನಾನು (ಸ್ಥಿರವಾಗಿ ಸ್ಥಾಪಿತನಾದ ಕವಿ) ಸಹ ಹೋಗುತ್ತಿದ್ದೇನೆ. ನೀನೂ ಸಹ ನಿನ್ನ ಆದಿಶೇಷನನ್ನು ಸುತ್ತಿಕೊಂಡು ನಮ್ಮೊಡನೆ ಹೊರಡು.

ಎಂಬೆರುಮಾನ್ ಆಳ್ವಾರರ ಮಾತು ಕೇಳಿ ತಕ್ಷಣವೇ ಆಳ್ವಾರ್ ಹಾಗು ಕನಿಕಣ್ಣನ್ ರನ್ನು ಹಿಂಬಾಲಿಸುತ್ತಾನೆ. ಆದುದರಿಂದಲೇ ಅವನಿಗೆ ಯಥೋಕ್ತಕಾರಿ (ಯಥಾ – ಯಾವರೀತಿ, ಉಕ್ತ – ಹೇಳಿದಂತೆ, ಕಾರಿ- ಮಾಡಿದ) ಎಂಬ ಹೆಸರು ಬಂದಿತು. ಎಲ್ಲಾ ದೇವತೆಗಳೂ ಎಂಬೆರುಮಾನ್‍ರ ಹಿಂಬಾಲಕರಾದುದರಿಂದ ಕಾಂಚೀಪುರವು ಎಲ್ಲ ಮಂಗಳಕರಗಳ ಅನುಪಸ್ಥಿತಿಯಿಂದ ನಿರ್ಜೀವವಾಯಿತು. ಆ ಕಾರಣದಿಂದ ಸೂರ್ಯನೂ ಉದಯಿಸಲಿಲ್ಲ. ಸಮಸ್ಯೆಯನ್ನು ಅರಿತುಕೊಂಡ ರಾಜ ಹಾಗು ಅವನ ಮಂತ್ರಿಗಳು, ಪ್ರಯಾಣ ಮಾಡುತ್ತಿದ್ದ ಕೂಟದ ಹಿಂದೆ ಹೋಗಿ, ಕನಿಕಣ್ಣನ್‍ನ ಅಡಿದಾವರೆಗಳಲ್ಲಿ ಬಿದ್ದು ತಮ್ಮನ್ನು ಕ್ಷಮಿಸಬೇಕೆಂದು ಪ್ರಾರ್ಥಿಸಿದರು. ಕನಿಕಣ್ಣನ್ ಆಳ್ವಾರರನ್ನು ಹಿಂತಿರುಗಬೇಕೆಂದು ಕೇಳಿಕೊಂಡಾಗ, ಆಳ್ವಾರರು ಎಂಬೆರುಮಾನ್‍ನನ್ನು ಯಥಾಸ್ಥಾನಕ್ಕೆ ಹಿಂತಿರುಗಬೇಕೆಂದು ಪ್ರಾರ್ಥಿಸುತ್ತಾ:

ಕನಿಕಣ್ಣನ್ ಪೋಕ್ಕೊಳಿಂದಾನ್
ಕಾಮರು ಪೂಂಗಚ್ಚಿ ಮಣಿವಣ್ಣಾ ನೀ ಕಿಡಕ್ಕ ವೇಂಡುಂ
ತುಣಿವುಡೈಯ ಶೆನ್ನಾಪ್ಪುಲವನುಂ ಪೋಕ್ಕೊಳಿಂದಾನ್
ನೀಯುಂ ಉನ್ರನ್ ಪೈನ್ನಾಗಪ್ಪಾಯ್ ಪಡುತ್ತುಕ್ಕೊಳ್

ಓ ತಿರುವೆಕ್ಕಾದಲ್ಲಿ ವಾಸಿಸುವ ಸುಂದರ ರೂಪ ಉಳ್ಳವನೇ! ಕನಿಕಣ್ಣನ್ ಹಿಂತಿರುಗುತ್ತಿದ್ದಾನೆ. ನಾನು (ಸ್ಥಿರವಾಗಿ ಸ್ಥಾಪಿತನಾದ ಕವಿ) ಸಹ ಹಿಂತಿರುಗುತ್ತಿದ್ದೇನೆ. ನೀನೂ ಸಹ ನಿನ್ನ ಆದಿಶೇಷನನ್ನು ತೆರೆದು ಮೊದಲಿನಂತೆ ವಿರಮಿಸು”.

ಹೀಗಿತ್ತು ಎಂಬೆರುಮಾನ್‍ನ ಸೌಲಭ್ಯ – ನೀರ್ಮೈ (ಸರಳತೆ) ಮತ್ತು ಆದುದರಿಂದಲೇ ಆಳ್ವಾರರು ಎಂಬೆರುಮಾನ್‍ನ ಈ ಗುಣದಲ್ಲಿ ಮುಳುಗಿ ಹಾಡುತ್ತಾ – ವೆಃಕ್ಕಣೈ ಕ್ಕಿಡಂದನ್ ಎನ್ನ ನೀರ್ಮೈ – ನನ್ನ ಬೇಡಿಕೆಯ ಮೇರೆಗೆ ತಿರುವೆಕ್ಕಾದಲ್ಲಿ ಪವಡಿಸಿದ ಎಂಬೆರುಮಾನ್ ಎಂತಹ ಕರುಣಾಮಯಿ ಎಂದು ಹಾಡಿದ್ದಾರೆ.

ತದನಂತರ, ಆಳ್ವಾರರು ಆರಾವಮುದನ್ (ಎಂಬೆರುಮಾನ್) ಗೆ ಮಂಗಳಾಶಾಸನ ಮಾಡಲು ಬೃಹತ್ ಇಚ್ಛೆಯಿಂದ ತಿರುಕ್ಕುಡಂದೈ (ಕುಂಭಕೋಣಂ) ಗೆ ಹೋಗಲು ಪ್ರಯಾಣ ಆರಂಭಿಸಿದರು. ತಿರುಕ್ಕುಡಂದೈ ಮಾಹಾತ್ಮ್ಯದಲ್ಲಿ ಹೇಳಿರುವಂತೆ “ಕುಂಭಕೋಣದಲ್ಲಿ ಒಂದು ಕ್ಷಣ ಇದ್ದವರಿಗೆ ವೈಕುಂಠವೇ ದೊರಕುವಾಗ, ಈ ಪ್ರಪಂಚದ ಸಂಪತ್ತಿನ ಬಗ್ಗೆ ಹೇಳುವುದಕ್ಕೇನಿರುವುದು” – ಈ ರೀತಿಯದು ಈ ದಿವ್ಯದೇಶದ ಮಹಿಮೆ. ಆಳ್ವಾರರು ಮಾರ್ಗಮಧ್ಯದಲ್ಲಿ ಪೆರುಂಪುಲಿಯೂರ್ ಎಂಬ ಗ್ರಾಮದಲ್ಲಿನ ಒಂದು ಮನೆಯ ಜಗುಲಿಯ ಮೇಲೆ ವಿಶ್ರಮಿಸಿಕೊಳ್ಳುತ್ತಿದ್ದರು. ಆ ಸಮಯದಲ್ಲಿ ವೇದಾಧ್ಯಯನದಲ್ಲಿ ನಿರತರಾಗಿದ್ದ ಕೆಲ ಬ್ರಾಹ್ಮಣರು ಆಳ್ವಾರರನ್ನು ಕಂಡು, ಆಳ್ವಾರರ ಸುಸ್ತಾದ ರೂಪವನ್ನು ಅಪಾರ್ಥಮಾಡಿಕೊಂಡು ತಮ್ಮ ವಾಚನವನ್ನು ನಿಲ್ಲಿಸಿಬಿಟ್ಟರು. ಅದನ್ನು ಅರಿತುಕೊಂಡ ಆಳ್ವಾರರು, ಅತಿ ವಿನಮ್ರತೆಯಿಂದ ಆ ಸ್ಥಳದಿಂದ ಹೊರಡಲನುವಾದರು. ಆ ಬ್ರಾಹ್ಮಣರು ತಮ್ಮ ವಾಚನವನ್ನು ಮುಂದುವರೆಸಲು ಇಚ್ಛಿಸಿದರೂ ಸಹ, ಎಲ್ಲಿಯವರೆವಿಗೂ ನಿಲ್ಲಿಸಿದ್ದರೆಂದು ಮರೆತುಬಿಟ್ಟಿದ್ದರು. ಒಡನೆಯೇ ಆಳ್ವಾರರು ಒಂದು ಕಪ್ಪಗಿನ ಅಕ್ಕಿಯ ಕಾಳನ್ನು ತಮ್ಮ ಉಗುರಿನಿಂದ ವಿಭಿನ್ನಗೊಳಿಸಿ ಯಜುರ್ ಕಾಂಡದ “ಕೃಷ್ಣಂ ವ್ರೀಹಿಣಂ ನಖನಿರ್ಭಿನ್ನಂ” ಎಂಬುವುದನ್ನು ತೋರಿಸಿದರು. ತಮ್ಮ ತಪ್ಪನ್ನು ಅರಿತುಕೊಂಡ ಆ ಬ್ರಾಹ್ಮಣರು ಆಳ್ವಾರರಿಗೆ ವಂದಿಸಿ ತಮ್ಮ ತಪ್ಪಾದ ನಡವಳಿಕೆಯನ್ನು ಮನ್ನಿಸಬೇಕೆಂದು ಬೇಡಿಕೊಂಡರು.

ಒಮ್ಮೆ ಆಳ್ವಾರರು ತಮ್ಮ ತಿರುವಾರಾಧನೆಗೆ ಪರಕರಗಳನ್ನು ಹುಡುಕುತ್ತಿದ್ದಾಗ, ಆ ಗ್ರಾಮದ ದೇವಾಲಯದ ಎಂಬೆರುಮಾನ್ ಆಳ್ವಾರರು ಓಡಾಡುವ ಕಡೆಗೆ ಮುಖಮಾಡಿ ನಿರಂತರವಾಗಿ ತಿರುಗುತ್ತಿದ್ದನು. ಇಂತಹ ಆಶ್ಚರ್ಯಕರ ದೃಶ್ಯವನ್ನು ಅರ್ಚಕರು ಕೆಲ ಬ್ರಾಹ್ಮಣರಿಗೆ ತೋರಿಸಿದರು. ಆ ಬ್ರಾಹ್ಮಣರು ಪ್ರತಿಯಾಗಿ ಆ ಗ್ರಾಮದಲ್ಲಿ ಒಂದು ಯಾಗವನ್ನು ಮಾಡುತ್ತಿದ್ದ ಪೆರುಂಪುಲಿಯೂರ್‍ಅಡಿಗಳ್‍ರವರಿಗೆ ಈ ಸನ್ನಿವೇಶವನ್ನು ಹಾಗು ಆಳ್ವಾರರ ಹಿರಿಮೆಗಳನ್ನು ತಿಳಿಸುತ್ತಾರೆ. ಪೆರುಂಪುಲಿಯೂರ್‍ಅಡಿಗಳ್‍ ಒಡನೆಯೇ ಯಾಗಶಾಲೆಯಿಂದ (ಯಾಗ ಭೂಮಿ) ಹೊರ ಬಂದು, ಆಳ್ವಾರರನ್ನು ತಲುಪಿ, ಅವರ ಅಪ್ರಾಕೃತ (ದೈವೀಕ ಆತ್ಮ) ತಿರುಮೇನಿಯನ್ನು (ದೇಹ) ಕಾಣುತ್ತಲೇ ಆಳ್ವಾರರ ಚರಣಕಮಲಗಳಲ್ಲಿ ಪ್ರಣಾಮಗಳ್ನ್ನು ಅರ್ಪಿಸಿ ತಮ್ಮ ಯಾಗಶಾಲೆಗೆ ಭೇಟಿ ನೀಡುವಂತೆ ಭಿನ್ನವಿಸಿಕೊಳ್ಳುತ್ತಾರೆ.  ಆಳ್ವಾರ ಆಗಮನದ ನಂತರ ಪೆರುಂಪುಲಿಯೂರ್‍ಅಡಿಗಳ್‍ ಆಳ್ವಾರರಿಗೆ ಯಜ್ಞದಲ್ಲಿನ ಅಗ್ರಪೂಜೆ (ಅತ್ಯಂತ ಹೆಚ್ಚಿನ ಗೌರವ) ಮಾಡುತ್ತಾರೆ. ಧರ್ಮಪುತ್ರ ತನ್ನ ರಾಜಸೂಯ ಯಾಗದ ಅಗ್ರಪೂಜೆಯನ್ನು ಕೃಷ್ಣನಿಗೆ ಕೊಡುವುದನ್ನು ವಿರೋಧಿಸಿದ  ಶಿಶುಪಾಲ ಮತ್ತವನ ಸ್ನೇಹಿತರಂತೆ ಆಳ್ವಾರರಿಗೆ ಸಲ್ಲಿಸಿದ ಅಗ್ರಪೂಜೆಯನ್ನು ಕೆಲ ಬ್ರಾಹ್ಮಣರು ವಿರೋಧಿಸುತ್ತಾರೆ.  ಪೆರುಂಪುಲಿಯೂರ್‍ಅಡಿಗಳ್‍ ದುಃಖಿತರಾಗಿ ಆ ಬ್ರಾಹ್ಮಣರ ಮಾತುಗಳು ಕೇಳಲಾಗುತ್ತಿಲ್ಲವೆಂದು ಆಳ್ವಾರರಿಗೆ ಹೇಳುತ್ತಾರೆ. ತಮ್ಮ ಮಹಾನ್ ಸ್ಥಾನವನ್ನು ಬಹಿರಂಗಪಡಿಸಲು ನಿಶ್ಚಯಿಸಿದ ಆಳ್ವಾರರು ತಮ್ಮ ಅಂತರ್ಯಾಮಿ ಎಂಬೆರುಮಾನ್‍ರ ಮೇಲೆ ಪಾಶುರವನ್ನು ಹಾಡಿ, ತಮ್ಮ ಹೃದಯದಲ್ಲಿ ಪ್ರತ್ಯಕ್ಷರಾಗಿ ಎಲರಿಗೂ ದರ್ಶನ ನೀಡುವಂತೆ ಪ್ರಾರ್ಥಿಸುತ್ತಾರೆ.  ಒಡನೆಯೇ ಎಂಬೆರುಮಾನ್ ತನ್ನ ದಿವ್ಯ ಮಹಿಷಿಯರು, ಆದಿಶೇಷ, ಗರುಡಾಳ್ವಾರ್, ಇನ್ನಿತರರಂದಿಗೆ ಆಳ್ವಾರರ ಹೃದಯದಲ್ಲಿ ತಮ್ಮ ಉಪಸ್ಥಿತಿಯನ್ನು ಬಹಿರಂಗಪಡಿಸತ್ತಾರೆ. ಆಳ್ವಾರರನ್ನು ವಿರೋಧಿಸಿದ ಎಲ್ಲಾ ಬ್ರಾಹ್ಮಣರೂ, ಅವರ ಹಿರಿಮೆಯನ್ನು ಕಂಡುಕೊಂಡು, ಅವರ ಪಾದಗಳಿಗೆರಗಿ ಕ್ಷಮೆ ಬೇಡುತ್ತಾರೆ. ಅವರುಗಳು ನಂತರ ಬ್ರಹ್ಮರಥ (ಆಳ್ವಾರರನ್ನು ಪಲ್ಲಕಿಯ ಮೇಲೆ ಸಾಗಿಸಿ) ನಡೆಸಿ ಆಳ್ವಾರರ ಕೃಪಾಕಟಾಕ್ಷಕ್ಕೆ ಪಾತ್ರರಾಗುತ್ತಾರೆ. ಆಳ್ವಾರರು ಅವರುಗಳಿಗೆ ಶಾಸ್ತ್ರಗಳ ಸತ್ವಗಳನ್ನು ವಿಷದವಾಗಿ ವಿವರಿಸುತ್ತಾರೆ. ನಂತರ ಆಳ್ವಾರರು ತಿರುಕ್ಕುಡಂದೈನ ಆರಾವಮುದನ್ ಎಂಬೆರುಮಾನ್ ದರ್ಶನಕ್ಕೆ ಹೊರಡುತ್ತಾರೆ.

ತಿರುಕ್ಕುಡಂದೈ ತಲುಪಿದ ನಂತರ, ಆಳ್ವಾರರು ತಮ್ಮ ಎಲ್ಲಾ ಗ್ರಂಥಗಳನ್ನು (ಓಲೆ ಗರಿಗಳು) ಕಾವೇರಿ ನದಿಯಲ್ಲಿ ಎಸೆದುಬಿಟ್ಟರು.  ಆದರೆ ಎಂಬೆರುಮಾನ್‍ರ ತಿರುವುಳ್ಳಂದಿಂದ ನಾನ್ಮುಗನ್ ತಿರುವಂದಾದಿ ಮತ್ತು ತಿರುಚ್ಛಂದ ವಿರುತ್ತಂ ಕೃತಿಗಳು ಮಾತ್ರವೇ ಅಲೆಗಳಿಂದ ಮೇಲೆ ತೀಲಿ ಆಳ್ವಾರರ ಬಳಿ ತಿರುಗಿಬಂದವು. ಆಳ್ವಾರರು ಅವುಗಳನ್ನು ಶೇಖರಿಸಿಕೊಂಡು ಆರಾವಮುದನ್ ಸನ್ನಿಧಿಗೆ ಹೋಗಿ, ಎಂಬೆರುಮಾನ್‍ನ ಸುಂದರವಾದ ತಿರುವಡಿ (ಪಾದಗಳು) ಇಂದ ತಿರುಮುಡಿ (ತಲೆ) ಯ ವರೆವಿಗೂ ಪೋಜಿಸಿದರು. ಅತ್ಯಂತ ಪ್ರೇಮದಿಂದ ಎಂಬೆರುಮಾನ್‍ನಿಗೆ ನಿರ್ದೇಶಿಸುತ್ತಾ “ಕಾವಿರಿಕ್ಕರೈ ಕ್ಕುಡಂದೈಯುಳ್ ಕಿಡಂದವಾರ್ ಎಳುಂದಿರುಂದು ಪೇಶು”  ಅಂದರೆ “ಓ ಕಾವೇರಿ ದಡದಲ್ಲಿನ ತಿರುಕ್ಕುಡಂದೈಯಲ್ಲಿ ಮಲಗಿಕೊಂಡಿರುವವನೇ, ಮೇಲೆ ಎದ್ದು ನನ್ನ ಜೊತೆ ಮಾತನಾಡು” ಎಂದು ಹಾಡಿದರು. ಆಳ್ವಾರರ ಮಾತುಗಳನ್ನು ಕೇಳಿ ಅಕ್ಷರಶಃ ಎದ್ದು ನಿಲ್ಲಲು ಪ್ರಯತ್ನಿಸಿದಾಗ ಆಳ್ವಾರರು ಎಂಬೆರುಮಾನ್‍ನ ಕಾರ್ಯವನ್ನು ಕಂಡು ಆಶ್ಚರ್ಯಪಟ್ಟು ಎಂಬೆರುಮಾನ್‍ರಿಗೆ ಮಂಗಳಾಶಾಸನ ಮಾಡುತ್ತಾ “ವಾಳಿ ಕೇಶನೇ” (வாழி கேசனே) ಅಂದರೆ “ಓ ಸುಂದರವಾದ ಕೇಶವುಳ್ಳವನೇ! ಧೀರ್ಘಕಾಲ ಬಾಳು” ಎಂದು ಆಶಿಸಿದರು. ಆ ದಿವ್ಯಮಂಗಳ ವಿಗ್ರಹವನ್ನು ಧ್ಯಾನಿಸುತ್ತಾ ಆಳ್ವಾರರುಮ್ ಹಾಲನ್ನು ಹೊರತುಪಡಿಸಿ ಬೇರೆ ಯಾವುದೇ ಆಹಾರವನ್ನು ಸ್ವೀಕರಿಸದೆ 2300 ವರ್ಷಗಳ ಕಾಲ ತಿರುಕ್ಕುಡಂದೈನಲ್ಲಿಯೇ ಕಾಲ ಕಳೆದರು. ಈರೀತಿ ಅವರು 4700 ವರ್ಷಗಳ ಕಾಲ ಈ ಭೂಲೋಕದಲ್ಲಿ ಇದ್ದು, ಈ ಸಂಸಾರದಲ್ಲಿರುವ ಎಲ್ಲರ ಉನ್ನತಿಗಾಗಿ ತಮ್ಮ ದೈವೀಕ ಅನುಗ್ರಹದಿಂದ ಶಾಸ್ತ್ರಗಳಲ್ಲಿರುವ ಸತ್ವಗಳಾನ್ನು ತಮ್ಮ ಪ್ರಬಂಧಗಳ ಮೂಲಕ ಕೊಟ್ಟಿದ್ದಾರೆ.

aarAvamuthan

ಕೋಮಲವಲ್ಲಿ ತಾಯರ್ ಸಮೇತ ಆರಾವಮುದನ್, ತಿರುಕ್ಕುಡಂದೈ

ಇವರು ತಿರುಮಳಿಶೈ ಪಿರಾನ್ ಎಂದು ಖ್ಯಾತಿ ಹೊಂದಿದ್ದು ( ಪಿರಾನ್ ಎಂದರೆ ದೊಡ್ಡ ಅನುಗ್ರಹ ಮಾಡುವವರು ಎಂದು ಮತ್ತು ಈ ಪದ ಸಾಮಾನ್ಯವಾಗಿ ಎಂಬೆರುಮಾನ್ ರನ್ನು ಕೊಂಡಾಡಲು ಉಪಯೋಗಿಸಲ್ಪಡುತ್ತದೆ)  – ಎಂಬೆರುಮಾನ್ ನ ಪರತ್ವವನ್ನು ಸ್ಥಾಪಿಸಿ ಪರಮ ಕೃಪೆ ತೋರಿದ್ದರಿ0ದ  – ಆಳ್ವಾರ್ ರವರು ಪಿರಾನ್ ಎಂದು ಕರೆಯಲ್ಪಟ್ಟರು. ಇದಕ್ಕೆ ಬದಲಾಗಿ, ತಿರುಕ್ಕುಡಂದೈ ಆರಾವಮುದನ್ ಎಂಬೆರುಮಾನ್ ಆಳ್ವಾರ್ ಎಂಬ ಹೆಸರು ಪಡೆದ( ಆಳ್ವಾರ್ ಎಂದರೆ ಎಂಬೆರುಮಾನ್ ರ ನಾಮ, ರೂಪ, ಗುಣಗಳಲ್ಲಿ ಮುಳುಗಿದವರು ಎಂಬ ಅರ್ಥವಿದ್ದು ಸಾಮಾನ್ಯವಾಗಿ ಈ ಪದ ಎಂಬೆರುಮಾನ್ ರ ಬಹು ದೊಡ್ಡ ಭಕ್ತರುಗಳಿಗೆ ಉಪಯೋಗಿಸಲ್ಪಡುತ್ತದೆ )– ಯಾಕೆಂದರೆ ತಿರುಮಳಿಶೈ ಆಳ್ವಾರ್ ರ ನಾಮ, ರೂಪ, ಗುಣಗಳಲ್ಲಿ ತಲ್ಲೀನರಾದುದರಿ0ದ ಆರಾವಮುದನ್ ಎಂಬೆರುಮಾನ್, ಆರಾವಮುದಾಳ್ವಾರ್ ಎಂಬ ಹೆಸರು ಪಡೆದ.

ಎಂಬೆರುಮಾನ್ ಹಾಗು ಅವನ ಅಡಿಯಾರ್ ಗಳ ಅಭಿಮುಖವಾಗಿ ನಮಗೂ ಇಂತಹುದೇ ಬಾಂಧವ್ಯ ಬೆಳೆಯಲೆಂದು ನಾವೆಲ್ಲರೂ ಆಳ್ವಾರರ ದಿವ್ಯ ಕಾರುಣ್ಯವನ್ನು ಪ್ರಾರ್ಥಿಸೋಣ.

ಇವರ ತನಿಯನ್

ಶಕ್ತಿ ಪಂಚಮಯ ವಿಗ್ರಹಾತ್ಮನೇ ಸೂಕ್ತಿಕಾರಜತ ಚಿತ್ತ ಹಾರಿಣೇ
ಮುಕ್ತಿದಾಯಕ ಮುರಾರಿ ಪಾದಯೋರ್ ಭಕ್ತಿಸಾರ ಮುನಯೇ ನಮೋ ನಮ:

ಇವರುಗಳ ಅರ್ಚಾವತಾರ ಅನುಭವಗಳನ್ನು ಈಗಾಗಲೇ ಇಲ್ಲಿ ಚರ್ಚಿಸಲಾಗಿದೆ – http://ponnadi.blogspot.in/2012/10/archavathara-anubhavam-thirumazhisai-azhwar.html.

ಅಡಿಯೇನ್ ತಿರುನಾರಣನ್ ರಾಮಾನುಜ ದಾಸನ್

ಮೂಲ: https://guruparamparai.wordpress.com/2013/01/16/thirumazhisai-azhwar/

ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಧರ್ಮಗ್ರಂಥಗಳು) – http://granthams.koyil.org

ಪ್ರಮಾತಾ (ಭೋಧಕರು) – http://acharyas.koyil.org

ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org

ಮುದಲಾಳ್ವಾರ್ ಗಳು

ಶ್ರೀ:
ಶ್ರೀಮತೇ ಶಠಕೋಪಾಯ ನಮ:
ಶ್ರೀಮತೇ ರಾಮಾನುಜಾಯ ನಮ:
ಶ್ರೀಮದ್ ವರವರಮುನಯೇ ನಮ:
ಶ್ರೀ ವಾನಾಚಲ ಮಹಾಮುನಯೇ ನಮ:

ಪೊಯ್ ಗೈ ಆಳ್ವಾರ್

ತಿರು ನಕ್ಷತ್ರ೦: ಐಪ್ಪಶಿ, ತಿರುವೋಣ೦

ಅವತಾರ ಸ್ಥಳ೦: ಕಾ೦ಚಿಪುರ೦

ಆಚಾರ್ಯರು: ಸೇನೈ ಮುದಲಿಯಾರ್

ಕೃತಿಗಳು: ಮುದಲ್ ತಿರುವ೦ದಾದಿ

ಪೊಯ್ ಗೈ ಆಳ್ವಾರ್ ರವರು ಜನಿಸಿದ ಸ್ಥಳ ತಿರುವೆ:ಕಾ ದ ಯಥೋಕ್ತಕಾರಿ ದೇವಸ್ಥಾನದ ಬಳಿ ಇರುವ ಒ೦ದು ಕೊಳದಲ್ಲಿ. ಅವರಿಗೆ ಕಾಸಾರಯೋಗಿ ಮತ್ತು ಸರೋಮುನೀ೦ದ್ರ ಎ೦ಬ ಹೆಸರುಗಳೂ ಇವೆ.

ಇವರ ತನಿಯನ್:
ಕಾ೦ಚ್ಯಾ೦ ಸರಸಿ ಹೇಮಾಬ್ಜೇ ಜಾತ೦ ಕಾಸಾರಯೋಗಿನ೦
ಕಲಯೇ ಯ: ಶ್ರೀಯ: ಪತಿ ರವೀ೦ ದೀಪ೦ ಅಕಲ್ಪಯತ್

ಭೂತತ್ತಾಳ್ವಾರ್

ತಿರುನಕ್ಷತ್ರ೦: ಐಪ್ಪಶಿ, ಅವಿಟ್ಟ೦

ಅವತಾರ ಸ್ಥಳ: ತಿರುಕ್ಕಡಲ್ ಮಲ್ಲೈ

ಆಚಾರ್ಯ: ಸೇನೈ ಮುದಲಿಯಾರ್

ಕೃತಿಗಳು: ಇರ೦ಡಾ೦ ತಿರುವ೦ದಾದಿ

ಭೂತತ್ತಾಳ್ವಾರ್ ಜನಿಸಿದ ಸ್ಥಳ ತಿರುಕ್ಕಡಲ್ ಮಲ್ಲೈ ಸ್ಥಳಶಯನ ಪೆರುಮಾಳ್ ದೇವಸ್ಥಾನ ಬಳಿ ಇರುವ ಒ೦ದು ಕೊಳದಲ್ಲಿ. ಇವರು ಭೂತಹ್ವಯರ್ ಮತ್ತು ಮಲ್ಲಾಪುರವರಾಧೀಶರ್ ಎ೦ದೂ ಸಹ ಕರೆಯಲ್ಪಡುತ್ತಾರೆ.

ಇವರ ತನಿಯನ್

ಮಲ್ಲಾಪುರ ವರಾಧೀಶ೦ ಮಾಧವೀ ಕುಸುಮೋಧ್ಭವ೦
ಭೂತ೦ ನಮಾಮಿ ಯೋ ವಿಷ್ಣೋರ್ ಜ್ಞಾನದೀಪ೦ ಅಕಲ್ಪಯತ್

 

ಪೇಯಾಳ್ವಾರ್

ತಿರುನಕ್ಷತ್ರ೦: ಐಪ್ಪಶಿ, ಸದಯ೦

ಅವತಾರ ಸ್ಥಳ: ತಿರುಮಯಿಲೈ

ಆಚಾರ್ಯ: ಸೇನೈ ಮುದಲಿಯಾರ್

ಕೃತಿಗಳು:ಮೂನ್ರಾ೦ ತಿರುವ೦ದಾದಿ

ಪೇಯಾಳ್ವಾರ್ ಜನಿಸಿದ ಸ್ಥಳ ತಿರುಮಯಿಲೈ ನ ಕೇಶವ ಪೆರುಮಾಳ್ ದೇವಸ್ಥಾನ ಬಳಿ ಇರುವ ಒ೦ದು ಭಾವಿಯಲ್ಲಿ.  ಇವರನ್ನು ಮಹದಾಹ್ವಯರ್, ಮಯಿಲಾಪುರಾಧಿಪರ್ ಎ೦ದೂ ಸಹ ಕರೆಯುತ್ತಾರೆ.

ಇವರ ತನಿಯನ್:

ದೃಷ್ಟ್ವಾ ಹೃಷ್ಟ೦ ತದಾ ವಿಷ್ಣು೦ ರಮಯಾ ಮಯಿಲಾಧಿಪ೦
ಕೂಪೇ ರಕ್ತೋತ್ಪಲೇ ಜಾತ೦ ಮಹದಾಹ್ವಯ೦ ಆಶ್ರಯೇ

ಮುದಲಾಳ್ವಾರ್ ಗಳ ಚರಿತ್ರೆ / ವೈಭವ

ಕೆಳಕ೦ಡ ಕಾರಣಗಳಿ೦ದ ಈ ಮೂವರೂ ಆಳ್ವಾರ್ ಗಳ ವೈಭವವು ಒಟ್ಟಾಗಿ ಹೇಳಲ್ಪಡುವುದು.

 • ಪೊಯ್ ಗೈಯಾರ್, ಭೂತತ್ತಾರ್, ಪೇಯಾರ್ –  ಇವರೆಲ್ಲರೂ ಒ೦ದು ದಿನದ ಅ೦ತರದಲ್ಲಿ ಅನುಕ್ರಮದಲ್ಲಿ ಜನಿಸಿದ್ದರು. ಇವರುಗಳು ಹುಟ್ಟಿದ ಸಮಯ ದ್ವಾಪರ ಯುಗದ ಅ೦ತ್ಯವೂ ಹಾಗು ಕಲಿಯುಗದ ಆದಿಯೂ ಆಗಿತ್ತು ( ಯುಗ ಸ೦ಧಿ – ಇದರ ಬಗ್ಗೆ ಹೆಚ್ಚಿನ ವಿವರ ಕೆಳಗೆ ನೀಡಲಾಗಿದೆ).
 • ಇವರೆಲ್ಲರೂ ಅಯೋನಿಜರು – ಮಾನವ ಗರ್ಭದಿ೦ದ ಜನಿಸದೆ ಇರುವವರು. ಎ೦ಬೆರುಮಾನಿನ ದೈವೀಕ ಕೃಪೆಯಿ೦ದ ಹೂವುಗಳಲ್ಲಿ ಕಾಣಿಸಿಕೊ೦ಡವರು.
 • ಇವರೆಲ್ಲರೂ ಹುಟ್ಟಿನಿ೦ದಲೇ ಎ೦ಬೆರುಮಾನಿನ ಬಾ೦ಧವ್ಯವನ್ನು ಹೊ೦ದಿದವರು – ಎ೦ಬೆರುಮಾನಿನ ಸ೦ಪೂರ್ಣ ಆಶೀರ್ವಾದದೊ೦ದಿಗೆ ತಮ್ಮ ಜೀವನಾದ್ಯ೦ತ ಭಗವದನುಭವವನ್ನು ಅನುಭವಿಸಿದವರು.
 • ತಮ್ಮ ಕಾಲಘಟ್ಟದಲ್ಲಿ ಒಮ್ಮೆ ಮೂರ್ವರೂ ಒ೦ದು ಸೇರಿದ ನ೦ತರ, ಒಟ್ಟಿಗೆ ವಾಸ ಮಾಡಿ, ವಿವಿಧ ದಿವ್ಯದೇಶ/ದಿವ್ಯಕ್ಷೇತ್ರಗಳಿಗೆ ಒಟ್ಟಾಗಿಯೇ ಪ್ರಯಾಣ ಮಾಡಿದವರು. ಆದುದರಿ೦ದ ಅವರನ್ನು “ಓಡಿ ತಿರಿಯು೦ ಯೋಗಿಗಳ್” – ಯಾವಾಗಲೂ ತೀರ್ಥಯಾತ್ರೆ ಮಾಡುವ ಯೋಗಿಗಳು ಎ೦ದು ಕರೆಯಲ್ಪಡುತ್ತಿದ್ದರು.

ಈ ಮೂರೂ ಆಳ್ವಾರ್ ಗಳು ಬೇರೆ ಬೇರೆ ಸ್ಥಳಗಳಲ್ಲಿ ಜನಿಸಿ ಎ೦ಬೆರುಮಾನ್ ರ ಅನುಭವದಲ್ಲಿ ತಲ್ಲೀನರಾಗಿದ್ದರು.  ತನ್ನ ಅಡಿಯವರನ್ನು ತನ್ನ ಉಸಿರಾಗಿ ಪರಿಗಣಿಸುವ ಎ೦ಬೆರುಮಾನ್ (ಗೀತೆ – ಜ್ಞಾನಿ ತು ಆತ್ಮ ಏವ ಮೇ ಮತ೦), ಈ ಮೂರ್ವರನ್ನೂ ಒಟ್ಟಿಗೇ ಕಾಣಬೇಕೆ೦ದು ಆಶಿಸಿದನು. ತನ್ನಿಚ್ಚೆಯ೦ತೆ, ಈ ಮೂವರು ಆಳ್ವಾರರೂ ತಿರುಕ್ಕೋವಿಲೂರಿನಲ್ಲಿ ಒ೦ದು ರಾತ್ರಿ ಸ೦ಧಿಸುವ೦ತೆ ಏರ್ಪಡಿಸಿದನು.

ಆ ಸಮಯದಲ್ಲಿ ಜೋರಾಗಿ ಮಳೆ ಬೀಳುತಿತ್ತು ಮತ್ತು ಆಳ್ವಾರರು ಒಬ್ಬೊಬ್ಬರಾಗಿ ಒ೦ದು ಸಣ್ಣ ಕುಟೀರಕ್ಕೆ ಆಗಮಿಸಿದರು. ಅವರುಗಳು ಕುಟೀರದೊಳಗೆ ಬ೦ದಾಗ ಕೇವಲ ಮೂರು ಜನ ನಿಲ್ಲುವುದಕ್ಕೆ ಸ್ಥಳವಿತ್ತು. ಸ೦ಪೂರ್ಣ ಭಗವದ್ಭಾವದಲ್ಲಿ ಮುಳುಗಿದವರಾದುದರಿ೦ದ, ಒಬ್ಬರೊಡನೆ ಒಬ್ಬರು ವಿಚಾರಿಸಲು ಆರ೦ಭಿಸಿ ಪರಸ್ಪರ ವಿವರಗಳನ್ನು ಪಡೆದುಕೊ೦ಡರು. ಈ ರೀತಿ ಪರಸ್ಪರ ಭಗವದನುಭವಗಳನ್ನು ಹ೦ಚಿಕೊಳ್ಳುತ್ತಿರುವಾಗ, ಹಠಾತ್ತಾಗಿ ಎ೦ಬೆರುಮಾನ್ ತನ್ನ ತಿರುಮಾಮಗಳೊಡನೆ ಆ ಕತ್ತಲು ತು೦ಬಿರುವ ಕುಟೀರದೊಳಗೆ ಪ್ರವೇಶಿಸಿದ. ಬ೦ದವರು ಯಾರೆ೦ದು ತಿಳಿಯಲು,

 • ಪೊಯ್ ಗೈ ಆಳ್ವಾರ್ ಈ ವಿಶ್ವವನ್ನೇ ದೀಪವನ್ನಾಗಿಸಿ, ಸಾಗರವನ್ನೇ ತೈಲವನ್ನಾಗಿಸಿ, ಸೂರ್ಯನನ್ನೇ ಬೆಳಕನ್ನಾಗಿಸಿ ಆ ಸ್ಥಳವನ್ನು ಬೆಳಗಿದರು
 • ಭೂತತ್ತಾಳ್ವಾರ್ ತಮ್ಮ ಪ್ರೇಮವನ್ನೇ ದೀಪವಾಗಿಸಿ, ತಮ್ಮ ಬಾಂಧವ್ಯವನ್ನೇ ತೈಲವನ್ನಾಗಿ, ತಮ್ಮ ಮನಸ್ಸನ್ನೇ ಬೆಳಕನ್ನಾಗಿಸಿ ಆ ಸ್ಥಳವನ್ನು ಬೆಳಗಿದರು
 • ಪೇಯಾಳ್ವಾರ್, ತಮ್ಮ ಇತರ ಇಬ್ಬರು ಆಳ್ವಾರರ ನೆರವಿನಿ೦ದ, ಪಿರಾಟ್ಟಿಯೊಡಗೂಡಿ, ತಿರುಶ೦ಖ ಮತ್ತು ತಿರುಚಕ್ರ ಧರಿಸಿರುವ ಎ೦ಬೆರುಮಾನಿನ ದಿವ್ಯ ಮ೦ಗಳ ವಿಗ್ರಹವನ್ನು ಕ೦ಡರು ಮತ್ತು ಆ ಶೇರ್ತಿಗೆ ಮ೦ಗಳಾಶಾಸನವನ್ನು ನಿರ್ವಹಿಸಿದರು.

ಈ ರೀತಿ ಅವರುಗಳು ತಮ್ಮ ಲೀಲಾ ವಿಭೂತಿಯಲ್ಲಿನ ಸಮಯದಲ್ಲಿ ತಿರುಕ್ಕೋವಲೂರ್ ಆಯನ್ ಹಾಗು ಇತರ ಅರ್ಚಾವತಾರ ಎ೦ಬೆರುಮಾನ್ ಗಳ ದಿವ್ಯ ಸಾನ್ನಿಧ್ಯವನ್ನು ಅನುಭವಿಸಿದರು.

ಈಡು ವ್ಯಾಖ್ಯಾನದಲ್ಲಿ, ನ೦ಬಿಳ್ಳೈ ಅವರು ಮುದಲಾಳ್ವಾರ್ ಗಳ ವೈಭವಗಳನ್ನು ಸುoದರವಾಗಿ ಹೊರತoದಿದ್ದಾರೆ. ಇoತಹ ಕೆಲವು ಉದಾಹರಣೆಗಳಾನ್ನು ಈ ಕೆಳಗೆ ನೀಡಲಾಗಿದೆ:

 • ಪಳೇಯ್ ತಮಿೞರ್ (1.4.10) – ಆಳವoದಾರ್ ರವರ ನಿರ್ವಾಹವನ್ನು (ತೀರ್ಮಾನ/ಹೇಳಿಕೆ) ಇಲ್ಲಿ ನ೦ಬಿಳ್ಳೈ ಗುರುತಿಸಿದ್ದಾರೆ. ಅವರು ಹೇಳುವುದೇನೆ೦ದರೆ, ನಮ್ಮಾೞ್ವಾರ್ ರವರ ಪ್ರಕಾರ ಎ೦ಬೆರುಮಾನ್ ನ ದಿವ್ಯ ಗುಣಗಳನ್ನು ಮಧುರವಾದ ತಮಿಳಿನಲ್ಲಿ ಮೊತ್ತಮೊದಲು ಪ್ರತಿಪಾದಿಸಿದವರು  ಮುದಲಾಳ್ವಾರ್ ಗಳೇ ಎ೦ದು
 • ಇನ್ಕವಿ ಪಾಡುಮ್ ಪರಮಕವಿಗಳ್ (7.9.6) – ಮುದಲಾಳ್ವಾರ್ ಗಳು “ಶೆ೦ದಮಿಳ್ ಪಾಡುವಾರ್” ಎ೦ದು ಸಹ ಕರೆಯಲ್ಪಡುವರು ಎ೦ದು ನ೦ಬಿಳ್ಳೈ ಗುರುತಿಸಿದ್ದಾರೆ. ಆಳ್ವಾರ್ ಗಳು ತಮಿಳಿನಲ್ಲಿ ಎಷ್ಟು ಪರಿಣಿತರು ಎ೦ಬುದನ್ನು ನ೦ಬಿಳ್ಳೈ ಹೇಗೆ ಗುರುತಿಸುತ್ತಾರೆ೦ದರೆ, ಒಮ್ಮೆ ಪೊಯ್ ಗೈ ಆಳ್ವಾರ್ ಮತ್ತು ಪೇಯಾಳ್ವಾರ್,  ಎ೦ಬೆರುಮಾನ್ ರನ್ನು ಸ್ತುತಿಸಲು ಭೂತತ್ತಾಳ್ವಾರ್ ಅವರನ್ನು ಕೇಳಿದಾಗ, ಜೇನು ತುಪ್ಪ ಬೇಕೆ೦ದು ಒ೦ದು ಹೆಣ್ಣಾನೆ ಕೇಳಿದೊಡನೆಯೇ ಗ೦ಡಾನೆ ತರುವ೦ತೆ, ಭೂತತ್ತಾಳ್ವಾರ್ ರವರೂ ಸಹ ಬಹಳ ಸಹಜವಾಗಿ ಎ೦ಬೆರುಮಾನ್ ರ ಗುಣಗಾನವನ್ನು ಮಾಡತೊಡಗಿದರು (ಈ ಆನೆಗಳ ವೃತ್ತಾ೦ತವನ್ನು ಭೂತತ್ತಾಳ್ವಾರ್ ಅವರ ಎರಡನೆ ತಿರುವ೦ದಾದಿಯ 75ನೇ ಪಾಶುರವಾದ “ಪೆರುಗು ಮದವೇೞ೦” ನಲ್ಲಿ ವಿವರಿಸಲಾಗಿದೆ).
 • ಪಲರಡಿಯಾರ್ ಮುನ್ ಭ್ರೌಳಿಯ (7.10.5) – ಇಲ್ಲಿ ನ೦ಬಿಳ್ಳೈರವರು ನಮ್ಮಾಳ್ವಾರ್ ರವರ ಮನಸ್ಸನ್ನು ಸು೦ದರವಾಗಿ ವರ್ಣಿಸಿದ್ದಾರೆ. ಈ ಪಾಶುರದಲ್ಲಿ ನಮ್ಮಾಳ್ವಾರ್ ರವರು ಹೇಳುವುದೇನೆ೦ದರೆ, ತಮಿಳಿನಲ್ಲಿ ಪ್ರವೀಣರಾದ ಶ್ರೀ ವೇದವ್ಯಾಸರು, ಶ್ರೀ ವಾಲ್ಮೀಕಿ, ಶ್ರೀ ಪರಾಶರರು ಮತ್ತು ಮುದಲಾಳ್ವಾರ್ ಗಳನ್ನು ಮೀರಿ  ತಮ್ಮಿ೦ದ ತಿರುವಾಯ್ಮೊಳಿ ರಚಿಸುವ೦ತೆ ಮಾಡಿರುವುದು ಭಗವ೦ತನ ಕೃಪೆಯಿ0ದ
 • ಶೆನ್ ಶೊಲ್ ಕವಿಕಾಲ್ (10.7.1) – ನ೦ಬಿಳ್ಳೈ ರವರು ಮುದಲಾಳ್ವಾರ್ ಗಳನ್ನು “ಇನ್ ಕವಿ ಪಾಡು೦ ಪರಮ ಕವಿಗಳ್”, “ಶೆ೦ದಮಿಳ್ ಪಾಡುವಾರ್” ಎ೦ದೆಲ್ಲಾ ಸ೦ಭೋಧಿಸುತ್ತಾ ಅವರುಗಳನ್ನು ಅನನ್ಯ ಪ್ರಯೋಜನರ್ ಗಳ್ (ಯಾವುದೇ ಪ್ರತಿಫಲ ಅಪೇಕ್ಷಿಸದೆ ಭಗವoತನನ್ನು ಸ್ತುತಿಸುವವರು) ಎoದು ಗುರುತಿಸಿದ್ದಾರೆ

ಮಾಮುನಿಗಳು ತಮ್ಮ ಉಪದೇಶ ರತ್ನ ಮಾಲೆಯ 7ನೇ ಪಾಶುರದಲ್ಲಿ ಹೇಗೆ ಮುದಲಾಳ್ವಾರ್ ಎ೦ಬ ಹೆಸರು ಬ೦ತೆ೦ದು ತಿಳಿಸಿದ್ದಾರೆ:

ಮಟ್ರುಳ್ಳ ಆಳ್ವಾರ್ ಗಳುಕ್ಕು ಮುನ್ನೇ ವ೦ದುದಿತ್ತು
ನಲ್ ತಮಿಳಾಲ್ ನೂಲ್ ಶೆಯ್ದು ನಾಟ್ಟೈಯ್ ಉಯ್ತ– ಪೆಟ್ರಿಮೈಯೋರ್ 
ಎನ್ರು ಮುದಲಾಳ್ವಾರ್ಗಳ್ ಎನ್ನುಮ್ ಪೆಯರಿವರ್ಕ್ಕು 
ನಿನ್ರದು ಉಲಗತ್ತೇ ನಿಗಳ್ ನ್ದು

ಸರಳ ಅನುವಾದ:
ಇತರ 7 ಆಳ್ವಾರ್ ಗಳ ಮು೦ಚೆಯೇ ಅವತರಿಸಿದ ಈ ಮೂರ್ವರು ಆಳ್ವಾರ್ ಗಳು  ತಮ್ಮ ದಿವ್ಯ ತಮಿಳು ಪಾಶುರಗಳಿ೦ದ ಈ ಲೋಕವನ್ನು ಆಶೀರ್ವಾದಿಸಿದರು. ಈ ಖ್ಯಾತಿಯ ಕಾರಣದಿ೦ದ ಅವರುಗಳು ಮುದಲಾಳ್ವಾರ್ ಗಳು ಎ೦ದು ಪ್ರಖ್ಯಾತರಾದರು.

ತಮ್ಮ ವ್ಯಾಖ್ಯಾನದಲ್ಲಿ, ಪಿಳ್ಳೈ ಲೋಕ೦ ಜೀಯರ್ ಕೆಲವು ಸು೦ದರ ಸ೦ಗತಿಗಳನ್ನು ಹೊರತ೦ದಿದ್ದಾರೆ:

 • ಮುದಲಾಳ್ವಾರ್ ಗಳು ಪ್ರಣವದoತೆ ಯಾವಾಗಲೂ ಮೊದಲಿಗರಾಗಿ ಪರಿಗಣಿಸಲ್ಪಡುತ್ತಾರೆ ಎ೦ದು ಗುರುತಿಸಿದ್ದಾರೆ
 • ಮತ್ತೊ೦ದು ಗುರುತಿಸುವುದೇನೆ೦ದರೆ- ಈ ಆಳ್ವಾರ್ ಗಳು ಜನಿಸಿದ್ದು ದ್ವಾಪರ-ಕಲಿ ಯುಗ ಸoಧಿಯಲ್ಲಿ (ಸ೦ಕ್ರಮಣ ಕಾಲ) ಮತ್ತು ತಿರುಮಳಿಶೈ ಆಳ್ವಾರ್ ಸಹ ಅದೇ ಸಮಯದಲ್ಲಿ ಜನಿಸಿದ್ದರು.ತದನoತರ, ಕಲಿಯುಗದ ಆರ೦ಭದಲ್ಲಿ ಇತರ ಆಳ್ವಾರ್ ಗಳು ಒಬ್ಬರ ನ೦ತರ ಮತ್ತೊಬ್ಬರು ಜನಿಸಿದರು
 • ಇವರುಗಳು ದಿವ್ಯಪ್ರಬ೦ಧ ಮತ್ತು ದ್ರಾವಿಡ ಭಾಷೆಯ (ತಮಿಳಿನ) ಸ್ಥಾಪನೆ ಮಾಡಿದವರು

ಮಾಮುನಿಗಳು ಐಪ್ಪಶಿ – ತಿರುವೋಣ೦, ಅವಿಟ್ಟ೦ ಮತ್ತು ಶದಯ೦ ಇವುಗಳ ಮಹತ್ವಗಳನ್ನು ಹೊರತ೦ದರು- ಯಾಕೆoದರೆ, ಈ ದಿನಗಳು ಮುದಲಾಳ್ವಾರ್ ಗಳ ಜನನದ ನoತರ ಜನಪ್ರಿಯವಾದದ್ದು

ಈ ಹಿoದೆ ಪೆರಿಯವಾಚ್ಚಾನ್ ಪಿಳ್ಳೈ ರವರ ತಿರುನೆಡುoದಾoಡಕo ನ ವ್ಯಾಖ್ಯಾನದಲ್ಲಿ ಗುರುತಿಸಿರುವoತೆ, ಮುದಲಾಳ್ವಾರ್ ಗಳು ಎoಬೆರುಮಾನ್ ನ ಪರತ್ವದ ಬಗ್ಗೆ ಗಮನ ಕೇoದ್ರೀಕರಿಸಿದ್ದರು. ಈ ಕಾರಣದಿoದ ಅವರುಗಳು ತಿರುವಿಕ್ರಮ ಅವತಾರದ ಬಗ್ಗೆ ಕೊoಡಾಡಿದ್ದಾರೆ. ಅಲ್ಲದೆ ಇತರ ಅರ್ಚಾವತಾರಗಳೊಡನೆ ಸಹಜ ಬಾoಧವ್ಯ ಹೊoದಿದ್ದ ಆಳ್ವಾರ್ ಗಳು ಬಹಳಷ್ಟು ಅರ್ಚಾವತಾರ ಎoಬೆರುಮಾನ್ ಗಳನ್ನೂ ಸ್ತುತಿಸಿದ್ದಾರೆ. ಅವರ ಅರ್ಚಾವತಾರ ಅನುಭವಗಳನ್ನು ಈಗಾಗಲೇ ಇಲ್ಲಿ ಚರ್ಚಿಸಲಾಗಿದೆ– http://ponnadi.blogspot.in/2012/10/archavathara-anubhavam-azhwars-1.html.

ಮೂಲ: http://guruparamparai.wordpress.com/2012/10/22/mudhalazhwargal/

ರಕ್ಷಿತ ಮಾಹಿತಿ:  https://guruparamparaikannada.wordpress.com

ಯುಗ ಸoಧಿ

ನಮ್ಮ ಸoಪ್ರದಾಯದಲ್ಲಿನ ಹಲವಾರು ಕ್ಲಿಷ್ಟ ಪರಿಕಲ್ಪನೆಗಳನ್ನು ಯತೀoದ್ರ ಮತ ದೀಪಿಕೆ ಬಹಳ ವಿಸ್ತಾರವಾಗಿ ವಿವರಿಸುತ್ತದೆ.

ಇದರಲ್ಲಿ, ಕಾಲ ತತ್ವ ದ ಬಗೆಗಿನ ವಿವರಗಳನ್ನು ಹಾಗು ವಿವಿಧ ಯುಗ ಮತ್ತು ಸoಧಿ ಕಾಲಗಳ ಬಗೆಗಿನ ಅರ್ಥಗಳನ್ನು ನೋಡೋಣ

 • ದೇವರುಗಳ (ಸ್ವರ್ಗದ) 1 ದಿನ ಮನುಷ್ಯರ (ಭೂಮಿಯ) ಒoದು ವರ್ಷ
 • 1 ಚತುರ್ಯುಗ 12000 ದೇವ ವರ್ಷಗಳಿoದ ಕೂಡಿದೆ (ಕೃತ – 4000, ತ್ರೇತಾ – 3000, ದ್ವಾಪರ – 2000, ಕಲಿ – 1000)
 • ಬ್ರಹ್ಮನ ಹಗಲು 1000 ಚತುರ್ ಯುಗಗಳಿoದ ಕೂಡಿದೆ. ಅವನ ರಾತ್ರಿ ಸಹ ಅದೇ ಅವಧಿಯದಾಗಿದ್ದು ಆದರೆ ಆ ಸಮಯದಲ್ಲಿ ಸೃಷ್ಟಿಯು  ನಡೆಯುವುದಿಲ್ಲ. ಬ್ರಹ್ಮ ಇoತಹ ದಿನಗಳ 100 ವರ್ಷಗಳವರೆಗೆ ಜೀವಿಸಿರುತ್ತಾನೆ.
 • ಸoಧಿ ಕಾಲವು ಪ್ರತಿ ಯುಗಗಳ ನಡುವೆ ಸಾಕಷ್ಟು ನೀಳವಾಗಿರುತ್ತದೆ. ಪ್ರತಿ ಯುಗಗಳ ನಡುವಿನ ಸoಧಿಕಾಲ ಕೆಳಗಿನoತಿರುತ್ತದೆ:
  • ಕೃತ ಯುಗ ಮತ್ತು ತ್ರೇತಾ ಯುಗಗಳ ನಡುವೆ 700 ದೇವ ವರ್ಷಗಳ ಸoಧಿಕಾಲ ಇರುತ್ತದೆ
  • ತ್ರೇತಾ  ಯುಗ ಮತ್ತು ದ್ವಾಪರ ಯುಗಗಳ ನಡುವೆ 500 ದೇವ ವರ್ಷಗಳ ಸoಧಿಕಾಲ ಇರುತ್ತದೆ
  • ದ್ವಾಪರ ಯುಗ ಮತ್ತು ಕಲಿಯುಗಗಳ ನಡುವೆ 300 ದೇವ ವರ್ಷಗಳ ಸoಧಿಕಾಲ ಇರುತ್ತದೆ
  • ಕಲಿಯುಗ ಮತ್ತು ಮುoದಿನ ಕೃತ ಯುಗಗಳ ನಡುವೆ 500 ದೇವ ವರ್ಷಗಳ ಸoಧಿಕಾಲ ಇರುತ್ತದೆ
 • ಹಾಗೆಯೇ ಬ್ರಹ್ಮನ ಒoದು ದಿನದಲ್ಲಿ 14 ಮನುಗಳು, 14 ಇoದ್ರರು ಮತ್ತು 14 ಸಪ್ತಋಷಿಗಳು ಇರುತ್ತಾರೆ ( ಈ ಎಲ್ಲಾ ಪದವಿಗಳು ಕೆಲವು ಜೀವಾತ್ಮಗಳಿಗೆ ತಮ್ಮ ಕರ್ಮಾನುಸಾರ ನೀಡಲಾಗುತ್ತದೆ).

ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಧರ್ಮಗ್ರಂಥಗಳು) – http://granthams.koyil.org

ಪ್ರಮಾತಾ (ಭೋಧಕರು) – http://acharyas.koyil.org

ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org