Category Archives: AzhwArs

ನಮ್ಮಾೞ್ವಾರ್

ಶ್ರೀ:
ಶ್ರೀಮತೇ ಶಠಕೋಪಾಯ ನಮ:
ಶ್ರೀಮತೇ ರಾಮಾನುಜಾಯ ನಮ:
ಶ್ರೀಮದ್ ವರವರಮುನಯೇ ನಮ:
ಶ್ರೀ ವಾನಾಚಲ ಮಹಾಮುನಯೇ ನಮ:

ಈಗಾಗಲೇ ನಾವು, ಹಿಂದಿನ ಲೇಖನದಲ್ಲಿ ಸೇನೈ ಮುದಲಿಯಾರ್ (ವಿಷ್ವಕ್ಸೇನರ್) ಬಗ್ಗೆ ಚರ್ಚೆ ಮಾಡಿದೇವೆ. ಈಗ ನಾವು ಓರಾಣ್ ವೞಿ ಆಚಾರ್ಯರುಗಳಲ್ಲಿ, ಮುಂದೆ ನಮ್ಮಾೞ್ವಾರ್ರ ಬಗ್ಗೆ ನೊಡೊಣ.

(https://guruparamparaikannada.wordpress.com/2016/02/07/senai-mudhaliar/)

ನಮ್ಮಾೞ್ವಾರ್ – ಆೞ್ವಾರ್ ತಿರುನಗರಿ

ತಿರುನಕ್ಷತ್ರಮ್: ವೈಗಾಸಿ, ವಿಶಾಕಂ

ಅವತಾರ ಸ್ಥಳಂ: ಆೞ್ವಾರ್ ತಿರುನಗರಿ (ತಿರುಕುರುಗೂರ್)

ಆಚಾರ್ಯನ್: ವಿಶ್ವಕ್ಸೇನರ್

ಶಿಷ್ಯರು: ಮಧುರಕವಿ ಆೞ್ವಾರ್, ನಾಥಮುನಿಗಳು ಮತ್ತು ಅವರ ದಾರಿಯಲ್ಲಿ ಬರುವ ಎಲ್ಲಾ ಆಚಾರ್ಯರ್ಗಳು.

ಅವರನ್ನು ಮಾಱನ್, ಶಠಗೊಪನ್, ಪರಾನ್ಕುಶನ್, ವಕುಳಾಭರಣನ್, ವಕುಳಾಭಿರಾಮನ್, ಮಗಿೞ್ಮಾರನ್, ಶಠಜಿತ್, ಕುರುಗೂರ್ ನಂಬಿ ಎಂದು ಹೆಸರಿದೆ.

ನಮ್ಮಾೞ್ವಾರ್ರರು ತಿರುಕ್ಕುರುಗೂರ್ (ಆೞ್ವಾರ್ ತಿರುನಗರಿ)ನಲ್ಲಿ ಕಾರಿ ಮತ್ತು ಉಡಯನಂಗೈ ಎಂಬವರಿಗೆ ಮಗನಾಗಿ ಜನಿಸಿದರು. ಅವರು ಕಲಿಯುಗ ಶುರುವಾಗಿ ಸ್ವಲ್ಪ ದಿನದ ನಂತರ ಜನಿಸಿದರು. ಭಗವತ್ ಗೀತೆಯಲ್ಲಿ, ಶ್ರೀ ಕೃಷ್ಣನು “ಯರೊಬ್ಬನು ಪುನಃ ಪುನಃ ಜನಿಸಿದ್ದರು, ವಾಸುದೆವನನ್ನು ಎಲ್ಲವೆಂದು ತಿಳಿಯುತಾನೊ (ಅವು:- ತಾಯಿ, ತಂದೆ, ಮಕ್ಕಳು, ಐಶ್ವರ್ಯ, ತಾರಕಮ್, ಪೊಶಕ, ಭೋಗ್ಯ, ಪ್ರಪ್ಯಮ್, ಪ್ರಪಕಮ್) ಮತ್ತು ಅವನಿಗೆ ಶರಣಾಗುತಾನೊ, ಅಂತಃ ಙ್ಞಾನಿಯು ಈ ಲೊಕದಲ್ಲಿ ವಿರಳ”. ನಮ್ಮಾೞ್ವಾರ್ರರ ಜಿವನದಿಂದ ಮತ್ತು ಅವರ ಕೃತಿಗಳಿಂದ ನಾವು ತಿಳಿದುಕೊಳ್ಳಬೇಕಾದದು ಏನೆಂದರೆ, ಅವರು ಒಬ್ಬ ಮಹಾ ಜ್ಞಾನಿ ಮತ್ತು ಅವರು ಎಂಬೆರುಮಾನ್ನಿಗೆ ತುಂಬ ಪ್ರೀತಿಪಾತ್ರರು. ಅವರು ತಮ್ಮ ಪುರ್ತಿ ಬದುಕಿನಲ್ಲಿ (ಅವರು ೩೨ ವರುಷ ಈ ಸಂಸಾರದಲ್ಲಿ ಜೀವಿಸಿದರು), ಹುಣಿಸೆ ಮರದಡಿಯಲ್ಲಿ (ತಿುಪುಳಿಯಾೞ್ವಾರ್) ಮತ್ತು ಯಾವಾಗಲು ಎಂಬೆರುಮಾನ್ನಿನ ಧ್ಯಾನದಲ್ಲಿ (ಯೋಗದಲ್ಲಿ) ಇರುತ್ತಿದರು. ಪೂರ್ವಾಚಾರ್ಯ ವ್ಯಾಖ್ಯಾನದಲ್ಲಿ, ನಾವು ಯಾವ ಕ್ಷಣದಲಿ ಕುರುಗೂರ್ ಎಂಬ ಶಬ್ಧವನ್ನು ಕೇಳಿದಕೂಡಲೆ ದಕ್ಷಿಣ ದಿಕ್ಕಿನ ಕಡೆಗೆ ನಮಸ್ಕಾರವನ್ನು ಮಾಡಬೇಕು (ತಿರುವಾಯ್ಮೊೞಿ ದಿವ್ಯ ಪ್ರಬಂಧಂನಲ್ಲಿ, ಎಲ್ಲ ಪದಿಗದ ಕೊನೆಯ ಪಾಸುರಮ್ಗಳ್ಳಲ್ಲಿ ನಮ್ಮಾೞ್ವಾರ್ರ ಹೆಸರು ಮತ್ತು ಅವರ ಅವತಾರ ಸ್ಥಳವಾದ ಕುರುಗೂರ್ ಉಪಸರ್ಗವಾಗಿದೆ) ಎಂದು ಹೇಳಿದ್ದಾರೆ.

ನಮ್ಮಾೞ್ವಾರನ್ನು ಪ್ರಪನ್ನ ಜನ ಕೂಟಸ್ತರ್” ಎಂದು ಕರೆಯುವರು – ಹಾಗೆಂದರೆ, ಪ್ರಪನ್ನ ಗೋಷ್ಠಿಯಲ್ಲಿ ಮೋದಲನೆಯವರು. ಅವರನ್ನು ವೈಷ್ಣವ ಕುಲಪತಿ ಎಂದು ಕರೆಯುವರು – ಹಾಗೆಂದರೆ, ಆಳವಂದಾರ್ ವೈಷ್ಣವ ಕುಲದ ಮುಖ್ಯಸ್ತರು. ಆಳವಂದಾರ್ರ ಸ್ತೋತ್ರ ರತ್ನಮ್ನ ೫ನೆ ಸ್ಲೋಕದಲ್ಲಿ, ಅವರು ವಕೂಲಾಭಿರಾಮನ ಪಾದ ಕಮಲಗಲಿಗೆ ಮಣಿಯುತ್ತೆನೆ ಎಂದು ಹಾಗು ನಮ್ಮಾೞ್ವಾರ್ರರು ಅವರಿಗೆ ಮತ್ತು ತಮ್ಮ ಶಿಷ್ಯಯರು/ವಂಶಸ್ಥರು ಎಲ್ಲವು ಅಗಿರುವರು (ತಂದೆ, ತಾಯಿ, ಮಗು, ಐಶ್ವರ್ಯ, ಮುಂತದವು).

azhvar-emperumanarಆೞ್ವಾರ್ ಶಯನ ತಿರುಕ್ಕೋಲಮ್ ಮತ್ತು ಎಂಬೆರುಮಾನಾರ್ ತಮ್ಮ ಪಾದ ಕಮಲದಲ್ಲಿ – ಆೞ್ವಾರ್ ತಿರುನಗರಿ

ಎಂಬೆರುಮಾನಾರ್ (ಆದಿಸೇಶನ ಅವತಾರ) ಪ್ರಶಂಸಿಸೆಯಿಂದ “ಮಾಱನ್ ಅಡಿ ಪಣಿನ್ದು ಉಯಂದವನ್” (மாறன் அடி பணிந்து உய்ந்தவன்) ಯಾರು ನಮ್ಮಾೞ್ವಾರ್ರಿಗೆ ಶರಣಾಗತನಾಗುತ್ತಾರೊ, ಅವರು ಅಭಿವೃದ್ಧಿ ಪಡೆಯುತ್ತಾರೆ.

ನಮ್ಪಿಳ್ಳೈ, ಪೂರ್ವಾಚಾರ್ಯಗಳ ಕೃತಿಯ ಆಧಾರದಿಂದ, ತಮ್ಮ ಈಡು ವ್ಯಖ್ಯಾನದ ಅವತಾರಿಕೆಯಲ್ಲಿ ಮತ್ತು ತಿರುವಿರುತಮ್ ವ್ಯಖ್ಯಾನದ ಅವತಾರಿಕೆಯಲ್ಲಿ, ನಮ್ಮಾೞ್ವಾರ್ರನ್ನು ಸ್ವತಃ ಎಂಬೆರುಮಾನೆ ಲೀಳಾ ವಿಭೂತಿಯಿಂದ ತಮ್ಮ ವೈಭವವನ್ನು ಹಾಡಲು ಮತ್ತು ಬದ್ದ ಜೀವಾತ್ಮಾನನ್ನು ಶ್ರೀವೈಷ್ಣವನ ಗುಂಪಿಗೆ ಕರೆತರಲು ಆರಿಸಿದ್ದಾರೆ ಎಂದು ದೃಢಪಡಿಸುತ್ತಾರೆ. ನಮ್ಪಿಳ್ಳೈ ಇದನ್ನು ನಮ್ಮಾೞ್ವಾರ್ರ ಮಾತಿನಿಂದ ರುಜುವಾತು ಮಾಡುತ್ತಾರೆ. ಎಂಬೆರುಮಾನು ಸ್ವತಃ ತನ್ನ ಸಂಕಲ್ಪದಿಂದ ನಿರ್ಮಲ ಜ್ಞಾನವನ್ನು ನಮ್ಮಾೞ್ವಾರ್ರಿಗೆ ಕೊಡುತ್ತಾನೆ. ಅದರಿಂದ ಆೞ್ವಾರ್ ಗತಕಾಲ, ವರ್ತಮಾನ ಮತ್ತು ಭವಿಷ್ಯತ್ಕಾಲ ನೊಡುವಂತೆ ಮಾಡುತ್ತಾರೆ. ಈ ಸಂಸಾರದಲ್ಲಿ ಅವರು ಪಟ್ಟ ಅನಾದಿ ಕಷ್ಠವನ್ನು, ತಮ್ಮ ಕೃತಿಯಲ್ಲಿ ಹೇಳಿದಾರೆ.ಅವರು ಈ ಸಂಸಾರದಲ್ಲಿ ಒಂದು ಕ್ಷಣ ಕೂಡ ತಂಗುವುದಿಲ್ಲ ಎಂದು ಹೇಳುತ್ತಾರೆ(ಈ ಸಂಸಾರದಲ್ಲಿ ಜೀವನ ಮಾಡುವುದು ಹೇಗಿದೆ ಏಂದರೆ ಬರಿ ಕಾಲಿನಲ್ಲಿ ಚೆನ್ನಾಗಿ ಕಾದ ನೆಲದ ಮೇಲೆ ನಿಂತಿರುವಂತೆ). ತಿರುವಾಯ್ಮೊೞಿಯ ಮೊದಲ ಪಾಸುರಂನಲ್ಲೆ, ಅವರಿಗೆ ಎಂಬೆರುಮಾನ್ನಿನ ಆಶೀರ್ವದದಿಂದ ತಮಗೆ ದಿವ್ಯ ಜ್ಞಾನವನ್ನು ಪಡೆದಿದ್ದಾರೆ ಎಂದರು. ಈ ಆಧಾರದ ಮೇಲೆ ನಾವು ತಿಳಿದುಕೊಳ್ಳುವುದು ಏನೆಂದರೆ, ಅವರು ಮೊದಲು ಸಂಸಾರಿ (ಬಡ್ದ ಜೀವಾತ್ಮಾ) ಅಗಿದ್ದರು. ಆಮೇಲೆ ಎಂಬೆರುಮಾನ್ನಿನ ಆಶೀರ್ವದದಿಂದ ಅವರಿಗೆ ದಿವ್ಯ ಜ್ಞಾನವು ಲಭಿಸುತ್ತದೆ. ಇದೆ ಎಲ್ಲ ಆೞ್ವಾರ್ಗಲಿಗೆ ಅನ್ವಯಿಕವಗುತ್ತದೆ, ಈ ಕೆಳಗಿನ ಕಾರಣದಿಂದ:

 • ನಮ್ಮಾೞ್ವಾರ್ರನ್ನು ಅವಯವಿ (ಪೂರ್ತಿ) ಮತ್ತು ಎಲ್ಲ ಆೞ್ವಾರ್ರನ್ನು (ಆಂಡಾಳ್ನ ಬಿಟ್ಟು) ಅವಯವ (ಭಾಗವು) ಮತ್ತು
 • ಬೇರೆ ಎಲ್ಲ ಆೞ್ವಾರ್ಗಲು ಇದನ್ನೆ ತಮ್ಮ ಕೃತಿಗಳಲ್ಲಿ ಹೇಳಿದರೆ, ಅವರು ಕೂಡ ಈ ಸಂಸಾರದಲ್ಲಿ ಕಷ್ಠಪಡುತ್ತಿದಾರೆ ಹಾಗು ಅವರಿಗೆ ಎಮ್ಪೆರುಮಾನ್ನಿನ ಆಶೀರ್ವದದಿಂದ ತಮಗೆ ದಿವ್ಯ ಜ್ಞಾನವನ್ನು ಪಡೆದಿದ್ದಾರೆ ಎಂದರು.

ನಮ್ಮಾೞ್ವಾರ್ ೪ ದಿವ್ಯ ಪ್ರಭಂದಂ ಹಾಡಿದಾರೆ. ಅವುಗಳು ಏನೆಂದರೆ,

 • ತಿರುವಿರುತ್ತಮ್ (ರಿಗ್ ವೇದ ಸಾರ)
 • ತಿರುವಾಸಿರಿಯಮ್ (ಯಜುರ್ ವೇದ ಸಾರ)
 • ಪೆರಿಯ ತಿರುವಂದಾದಿ (ಅತರ್ವಣ ವೇದ ಸಾರ)
 • ತಿರುವಾಯ್ಮೊೞಿ (ಸಾಮ ವೇದ ಸಾರ)

ನಮ್ಮಾೞ್ವಾರ್ರ ಪ್ರಭಂದಂಗಳು ೪ ವೇದಗಳಿಗೆ ಸಮವಾಗಿದೆ. ಅವರನ್ನು “ವೇದಮ್ ತಮಿೞ್ ಸೈದ ಮಾಱನ್” (ಸಂಸ್ಕೃತ ವೇದಗಳ ಸಾರವನ್ನು ತಮಿೞ್ ಪ್ರಬಂದಂಗಳ ಮುಲಕ ಕೊಡುವವನು) ಎಂದು ಕರೆಯುತ್ತಾರೆ. ಮತ್ತೆಲ್ಲ ಆೞ್ವಾರ್ರರ ಪ್ರಭಂದವನ್ನು ವೇದಗಳ ಅಂಶವೆಂದು ಪರಿಗಣಿಸಲಾಗಿದೆ (ಅವು ಶೀಕ್ಷಾ, ವ್ಯಾಕರಣ,ಮುಂತದವುಗಳು). ತಿರುವಾಯ್ಮೊೞಿಯನ್ನು ೪೦೦೦ ದಿವ್ಯ ಪ್ರಬಂದಗಳಿನ ಸಾರಾಂಶವೆಂದು ಆೞ್ವಾರ್ರರು ಹಾಡಿದಾರೆ. ನಮ್ಮ ಎಲ್ಲ ಪೂರ್ವಾಚಾರ್ಯಗಳ ಕೃತಿಗಳು (ವ್ಯಾಖ್ಯಾನ ಮತ್ತು ರಹಸ್ಯ ಗ್ರಂಥಗಳು) ತಿರುವಾಯ್ಮೊೞಿಯಿಂದ ಆಯ್ದು ತೆಗೆದಿದ್ದಾರೆ. ತಿರುವಾಯ್ಮೊೞಿಗೆ ಮಾತ್ರ ೫ ವ್ಯಾಖ್ಯಾನಗಳಿವೆ ಮತ್ತು ವಿವರಣೆ ನೀಡುತ್ತಾರೆ.

ನಮ್ಮ ಪೂರ್ವಾಚಾರ್ಯಗಳು, ನಮ್ಮಾೞ್ವಾರ್ರರು ಶ್ರೀದೇವಿ, ಭೂದೇವಿ, ನೀಳಾ ದೇವಿ, ಗೊಪಿಕೆಯರು, ಲಕ್ಶ್ಮಣ, ಭರತಾೞ್ವಾನ್, ಸತ್ರುಗ್ನಾೞ್ವಾನ್, ದಶರತ, ಕೌಸಲ್ಯ, ಪ್ರಹ್ಲಾದಾೞ್ವಾನ್, ವಿಭೀಶಣಾೞ್ವಾನ್, ಹನುಮನ್, ಅರ್ಜುನ, ಮುಂತಾದ ವ್ಯಕ್ತಿಗಳ ಗುಣಲಕ್ಷಣವನ್ನು ಹೊಂದಿದ್ದಾರೆ ಎಂದು ಹೇಳಿದ್ದಾರೆ. ಹೇಗೆ ನಮ್ಮಾೞ್ವಾರ್ರರಿಗೆ ಎಲ್ಲ ವ್ಯಕ್ತಿಗಳ ಗುಣಲಕ್ಷಣವನ್ನು ಹೊಂದಿದಾರೊ ಹಾಗೆಯೆ ಎಲ್ಲರು ಕೂಡ ನಮ್ಮಾೞ್ವಾರ್ರರ ಕೆಲವು ಗುಣಲಕ್ಷಣವನ್ನು ಹೊಂದಿದ್ದಾರೆ, ಇದು ನಮ್ಮಾೞ್ವಾರ್ರರ ಖ್ಯಾತಿ.

ತಿರುವಾಯ್ಮೊೞಿ ೭.೧೦.೫ ‘ಪಲರಡಿಯಾರ್ ಮುನ್ಬರುಳಿಯ’ (பலரடியார் முன்பருளிய) ಎಂಬ ಪಾಸುರಂನಲ್ಲಿ, ನಮ್ಪಿಳ್ಳೈ ನಮ್ಮಾೞ್ವಾರ್ರರ ಆಸೆ / ಮನಸನ್ನು ಇಲ್ಲಿ ಅದ್ಬುತವಾಗಿ ವಿವರಿಸಿದಾರೆ. ನಮ್ಮಾೞ್ವಾರ್ರರು ಈ ಪಾಸುರಂನಲ್ಲಿ ಎಂಬೆರುಮಾನ್ನಿನ ಅಶಿರ್ವಾದದಿಂದ ಶ್ರೇಷ್ಠ ಋಷಿಗಳು ( ಶ್ರೀ ವೇದವ್ಯಾಸರು, ಶ್ರೀ ವಾಲ್ಮಿಕಿ ಮಹರ್ಶಿ), ಶ್ರೀ ಪರಾಸರರು ಮತ್ತು ಮುದಲಾೞ್ವಾರ್ಗಳು (ತಮಿೞಿನಲ್ಲಿ ನಿಪುಣರು) ಬದಲಾಗಿ ತಾವು ತಿರುವಾಯ್ಮೊೞಿಯನ್ನು ಹಾಡಿದ್ದಾರೆ.

ಈದನ್ನು ಮನಸಿನಲ್ಲಿ ಇಟ್ಟುಕೊಂಡು, ನಮ್ಮಾೞ್ವಾರ್ರಿನ ಚರಿತ್ರೆಯನ್ನು ನೊಡೊಣ:

ನಮ್ಮಾೞ್ವಾರ್ರರು ಅವಯವಿ (ಪೂರ್ತಿ) ಮತ್ತು ಎಲ್ಲ ಆೞ್ವಾರ್ರನ್ನು (ಆಂಡಾಳ್ನ ಬಿಟ್ಟು) ಅವಯವ (ಭಾಗವು) ಎಂದು ಪರಿಗಣಿಸುತ್ತಾರೆ, ತಿರುಕ್ಕುರುಗೂರ್ ಎಂಬ ಊರಿನಲ್ಲಿ ಆವಿರ್ಭವಿಸುತ್ತಾರೆ. ಈ ಊರು ತಾಮಿರಭರಣಿ ಎಂಬ ನದಿ ತಿರದಲ್ಲಿ ಇದೆ. ಈ ನದಿಯು ಗಂಗಾ, ಯಮುನಾ, ಸರಸ್ವತಿ ಯಂತಃ ಪುನ್ಯ ನದಿಯಾಗಿದೆ. ಅವರು ಕಾರಿ (ಪ್ರಪ್ಪನ್ನ ಕುಲಕ್ಕೆ ಸೆರಿದವರು) ಎಂಬವರಿಗೆ ಮಗನಾಗಿ ಜನಿಸಿದರು.ಈ ಗುಂಪಿನವರು ಶ್ರೀಮನ್ ನಾರಾಯಣನನ್ನು ಬಿಟ್ಟು ಬೇರೆಯವರನ್ನು ಆರಾಧಿಸುವುದಿಲ್ಲ. ಈದನ್ನು ತಿರುಮೞಿಶೈ ಆೞ್ವಾರ್ “ಮಱಂದುಮ್ ಪುಱಮ್ ತೊೞಾ ಮಾಂದರ್” (மறந்தும் புறம் தொழா மாந்தர்). ಅಲ್ಲಿ ತಿರುವಳುತಿ ವಳ ನಾಡರ್ ಎಂಬವರು ಇದ್ದರು, ಅವರ ಮಗ ಅಱಂತಾನ್ಗಿಯಾರ್, ಅವರ ಮಗ ಚಕ್ರಪಾಣಿಯಾರ್, ಅವರ ಮಗ ಅಚ್ಯುತರ್, ಅವರ ಮಗ ಶೆನ್ತಾಮರೈ ಕಣ್ಣರ್, ಅವರ ಮಗ ಪೊಱ್ಕಾರಿಯಾರ್, ಅವರ ಮಗ ಕಾರಿಯಾರ್ ಮತ್ತು ಅವರ ಮಗ ನಮ್ಮಾೞ್ವಾರ್.

ಈ ವೈಶ್ಣವ ಕುಟುಂಬದಲ್ಲಿ, ಪೊಱ್ಕಾರಿಯಾರ್ ತಮ್ಮ ಮಗ ಕಾರಿಗೆ ವೈಶ್ಣವ ಹುಡುಗಿಯನ್ನು ನೋಡಿ ಮದುವೆ ಮಾಡಬೇಕೆಂದುಕೊಂಡರು (ಗ್ರುಹಸ್ತಾಶ್ರಮಕ್ಕೆ ಕಳುಹಿಸಲು). ಪೊಱ್ಕಾರಿ ತಿರುವಣ್ಪರಿಸಾರಮ್ ದಿವ್ಯದೇಶಕ್ಕೆ ಹೊಗಿ ತಿರುವಾೞ್ಮಾರ್ಭರ್ ಎಂಬವರನ್ನು ಭೇಟಿಮಾಡುತ್ತಾರೆ (ಅವರು ತಮ್ಮ ಮಗಳಿಗೆ ಒಬ್ಬ ವೈಶ್ಣವನಿಗೆ ಕೊಟ್ಟು ಮಡುವೆ ಮಾಡಬೇಕೆಂದು ಕೊಂಡಿದ್ದರು ಮತ್ತು ವೈಶ್ಣವ ಸಂತತಿಯನ್ನು ಬಯಸಿದರು). ಮತ್ತು ಅವರ ಮಗಳಾದ ಉಡೈಯ ನಂಗೈಯನ್ನು ತಮ್ಮ ಮಗನಿಗೆ(ಕಾರಿಯಾರ್) ಕೊಟ್ಟು ಮದುವೆ ಮಾಡಿಕೊಡಬೇಕು ಎಂದರು. ತಿರುವಾೞ್ಮಾರ್ಭರ್ ಯವರು ಮದುವೆಗೆ ವೊಪಿಗೆಕೊಟ್ಟರು ಮತ್ತು ಅದ್ಧೂರಿಯಗಿ ಕಾರಿಯಾರ್ ಹಾಗು ಉಡೈಯನಂಗೈಯರ ಮದುವೆ ನಡೆಯಿತು. ಕಾರಿಯಾರ್ ಹಾಗು ಉಡಯನಂಗೈ ತಿರುವಾೞ್ಮಾರ್ಭನ್ ಎಮ್ಪೆರುಮಾನ್ನನ್ನು ತಿರುವಣ್ಪರಿಸಾರಮ್ನಲ್ಲಿ ಪುಜಿಸಿ ತಿರುಕ್ಕುರುಗೂರ್ಗೆ ಹಿಂದಿರುಗುತ್ತಾರೆ. ಹಿಂದಿರುಗಿ ಬಂದಮೇಲೆ, ತಿರುಕ್ಕುರುಗೂರ್ರಿನಲ್ಲಿ ಎಲ್ಲರು ಅವರನ್ನು ಒಳ್ಳೆಯ ಮನೋಭಾವದಿಂದ ಬರಮಾಡಿಕೊಳ್ಳುತಾರೆ. ಹಾಗು ಶ್ರೀ ರಾಮನು ಹೇಗೆ ಸೀತಾ ಪಿರಾಟ್ಟಿಯನ್ನು ವಿವಾಹ ಮಾಡಿಕೊಂಡು ಮಿತಿಲೈಯಿಂದ ಅಯೋದ್ಯಾಗೆ ಕರೆತರುವಾಗ ಹೇಗೆ ಕೊಂಡಾಡಿದರೊ ಹಾಗೆ ಕೊಂಡಾಡಿದ್ದರು.

ಸ್ವಲ್ಪ ಸಮಯದ ನಂತರ, ಕಾರಿಯಾರ್ ಮತ್ತು ಉಡಯನಂಗೈ ತಿರುವಣ್ಪರಿಸಾರಮ್ಗೆ ಬರುತ್ತಾರೆ. ಹಿಂದಿರುಗುವಾಗ, ಅವರು ತಿರುಕ್ಕುರುಂಗುಡಿಗೆ ಹೊಗಿ ನಂಬಿ ಎಂಬೆರುಮಾನ್ನಿನ ಹತ್ತಿರ ಪ್ರಾರ್ಥನೆ ಮಾಡಿಕೋಳ್ಳುತ್ತಾರೆ. ಅವರು ನಂಬಿ ಎಂಬೆರುಮಾನ್ನಿನ ಹತ್ತಿರ ತಮಗೆ ಒಂದು ಮಗು ಬೇಕೆಂದು ಭಕ್ತಿಯಿಂದ ಪ್ರಾರ್ಥಿಸುತ್ತಾರೆ. ನಂಬಿ ಅವರಿಗೆ ತಾನೆ ಮಗುವಾಗಿ ಹುಟ್ಟುತ್ತೇನೆ ಎಂದು ಮಾತು ಕೊಡುತ್ತಾನೆ. ಅವರು ತಿರುಕ್ಕುರುಗೂರ್ಗೆ ಸಂತೋಷದಿಂದ ಹಿಂದಿರುಗಿ ಬರುತ್ತಾರೆ. ಸ್ವಲ್ಪ ಸಮಯದ ನಂತರ ಉಡಯ ನಂಗೈ ಗರ್ಭವತಿಯಗುತ್ತಾರೆ. ಕಲಿಯುಗ ಬಂದು 43ನೆ ದಿನ ಎಂಬೆರುಮಾನ್ನಿನ ಆಜ್ಞೆಗೆ ಅನುಸಾರವಾಗಿ, ನಮ್ಮಾೞ್ವಾರ್ “ತಿರುಮಾಲಾಲ್ ಅರುಳಪ್ ಪೆಱ್ಱ ಶಠಗೋಪನ್” (திருமாலால் அருளப் பெற்ற சடகோபன்) ಎಂದರೆ ನಮ್ಮಾೞ್ವಾರ್ರರು ಶ್ರೀಮನ್ ನಾರಾಯಣನ ಅನುಗ್ರಹದಿದ ವಿಶ್ವಕ್ಸೇನರ ಅಂಶವಾಗಿ, ಬಹುದಾನ್ಯ ಸಂವತ್ಸರದ (ಪ್ರಮಾದಿ ಸಂವತ್ಸರವೆಂದು ಕರೆಯುತಾರೆ), ವಸಂತ ಋತುವಿನ, ವೈಗಾಸಿ ಮಾಸದ(ವೃಷಭ ಮಾಸ), ಶುಕ್ಲ ಪಕ್ಷದ, ಪೌರ್ಣಮಿ ತಿತಿಯಲ್ಲಿ, ತಿರುವಿಶಾಕ ನಕ್ಶತ್ರದಲ್ಲಿ ಅವತರಿಸಿದರು ಎಂದು ಹೇಳಿದ್ದಾರೆ. ಅಂತೆಯೆ ಅೞಗಿಯ ಮಣವಾಳ ಪೆರುಮಾಳ್ ನಾಯನಾರ್ ತಮ್ಮ ಆಚಾರ್ಯ ಹೃದಯಮ್ನಲ್ಲಿ, “ಆದಿತ್ಯ ರಾಮದಿವಾಕರ ಅಚ್ಯುತ ಬಾನುಕ್ಕಳುಕ್ಕು ನೀಂಗಾದ ಉಳ್ಳಿರುಳ್ ನೀಂಗಿ ಶೋಶಿಯಾತ ಪಿಱವಿಕ್ಕಡಲ್ ಶೋಶಿತ್ತು ವಿಕಸಿಯಾದ ಪೋತಿಲ್ ಕಮಲಮ್ ಮಲರುಮ್ಪಡಿ ವಕುಳಬೂಶನ್ಣ ಬಾಸ್ಕರೋದಯಮ್ ಉಣ್ಡಾಯ್ತ್ತು ಉಡೈಯನಂಗೈಯಾಗಿಱ ಪೂರ್ವಸನ್ದ್ಯೈಯಿಲೇ” (ஆதித்ய ராமதிவாகர அச்யுத பாநுக்களுக்கு நீங்காத உள்ளிருள் நீங்கி சோஷியாத பிறவிக்கடல் சோஷித்து விகஸியாத போதில் கமலம் மலரும்படி வகுளபூஷண பாஸ்கரோதயம் உண்டாய்த்து உடையநங்கையாகிற பூர்வஸந்த்யையிலே) ಎಂದು ಘೋಷಿಸಿದ್ದಾರೆ. ಎಂದರೆ ಸಂಸಾರಿಗಳ ಅಜ್ಞಾನವು ಸೂರ್ಯನ (ಆದಿತ್ಯ) ಆವಿಷ್ಕರಣದಿಂದ ಅಳಿಸಿ ಹಾಕಲಿಲ್ಲ. ಶ್ರೀ ರಾಮನು (ರಾಮ ದಿವಾಕರ) ಭವ್ಯವಾದ ಉಜ್ವಲ ಸೂರ್ಯನಾಗಿದ್ದಾನೆ ಮತ್ತು ಶ್ರೀ ಕೃಷ್ಣನು (ಅಚ್ಯುತ ಬಾನು) ಭವ್ಯವಾದ ಉಜ್ವಲ ಸೂರ್ಯನಾಗಿದ್ದಾನೆ. ಅಜ್ಞಾನವನ್ನು ಅಳಿಸಿ ಹಾಕಿ ಮತ್ತು ನಮ್ಮಾೞ್ವಾರ್ರರ (ವಕುಳಾ ಭೂಶಣ ಬಾಸ್ಕರ) ಅಗಮನದಿಂದ ಜ್ಞಾನವು ಪರಿಪೂರ್ಣವಾಗಿದೆ. ಉಡೈಯನಂಗೈ ನಮ್ಮಾೞ್ವಾರ್ರರಿಗೆ ಜನ್ಮನೀಡಿದರು.

ಆದಿಸೇಶನು ಹುಣಿಸೆ ಮರವಾಗಿ ಆೞ್ವಾರ್ರನು ರಕ್ಷಿಸಲು ಬಂದರು (ಆೞ್ವಾರ್ರು ತಿರುಕ್ಕುರುಗೂರ್ ಆದಿನಾತನ್ ಎಮ್ಪೆರುಮಾನ್ನಿನ ದೇವಸ್ಥಾನದಲ್ಲಿ ಅಶ್ರಯ ಪಡೆಯುತರೆ ಎಂದು).

ಆೞ್ಹ್ವಾರ್ರರ ಆಮೇಲಿನ ಚಟುವಟಿಕೆಯನ್ನು ಮದುರಕವಿ ಆೞ್ವಾರ್ರ ಚರಿತ್ರೆಯಲ್ಲಿ ವರ್ಣಿಸಲಾಗಿದೆ –https://guruparamparaikannada.wordpress.com/2016/06/04/madhurakavi-azhwar/

ನಮ್ಮಾೞ್ವರ್ರರ ತನಿಯನ್

ಮಾತಾ ಪಿತಾ ಯುವತಯ ಸ್ತನಯಾವಿಭೂತಿಃ |
ಸರ್ವಂ ಯೆದೇವ ನಿಯಮೇನ ಮದನ್ವಯಾನಾಂ ||
ಆದ್ಯಸ್ಯನಃ ಕುಲಪತೇಃ ವಕುಳಾಭಿರಾಮಂ |
ಶ್ರೀಮತ್ತದಂಘ್ರಿಯುಗಳಂ ಪ್ರಣಮಾಮಿ ಮೂರ್ಧ್ನಾ ||

மாதா பிதா யுவதயஸ் தநயா விபூதி:
ஸர்வம் ய தேவ நியமேன மத் அந்வயாநாம்
ஆத்யஸ்யந: குலபதேர் வகுளாபிராமம்
ஸ்ரிமத் ததங்க்ரி யுகளம் ப்ரணமாமி மூர்த்நா

ಅವರ ಅರ್ಚಾವತಾರ ಅನುಭವವನ್ನು ಇಲ್ಲಿ ನೊಡೊಣ –

http://ponnadi.blogspot.in/2012/10/archavathara-anubhavam-nammazhwar.html.

ನಮ್ಮಾೞ್ವರ್ರರ ಗುಣಗಳ ಬಗ್ಗೆ ಅನೇಕ ವ್ಯಕ್ತಿಗಳಿಂದ ಇಲ್ಲಿ ನೊಡಬಹುದು –

http://kaarimaaran.com/songs.html

ನಮ್ಮಾೞ್ವರ್ರರ 32 ನಾಮಗಳನ್ನು ತಿರುಕುರುಗೂರ್ ದೇವಸ್ಥನದಲ್ಲಿ ಅಂಗ್ಲ ಮತ್ತು ತಮಿೞಿನಲ್ಲಿ ಬರೆದಿದಾರೆ.

ನಾಥಮುನಿಗಳಿನ ಬಗ್ಗೆ ಮುಂದಿನ ಲೇಖನದಲ್ಲಿ ನೊಡೊಣ.

ಅಡಿಯೇನ್ ರಾಮಾನುಜ ದಾಸನ್,

ಶ್ರೀಮತಿ ಅರ್.ಸೌಮ್ಯಲತಾ ದೇವರಾಜನ್

ಮೂಲ: https://guruparamparai.wordpress.com/2012/08/18/nammazhwar/

ರಕ್ಷಿತ ಮಾಹಿತಿ:  https://guruparamparaikannada.wordpress.com

ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಧರ್ಮಗ್ರಂಥಗಳು) – http://granthams.koyil.org
ಪ್ರಮಾತಾ (ಭೋಧಕರು) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org

ತಿರುಮಳಿಶೈ ಆಳ್ವಾರ್

ಶ್ರೀ:
ಶ್ರೀಮತೇ ಶಠಕೋಪಾಯ ನಮ:
ಶ್ರೀಮತೇ ರಾಮಾನುಜಾಯ ನಮ:
ಶ್ರೀಮದ್ ವರವರಮುನಯೇ ನಮ:
ಶ್ರೀ ವಾನಾಚಲ ಮಹಾಮುನಯೇ ನಮ:

thirumazhisaiazhwarತಿರು ನಕ್ಷತ್ರ೦: ತೈ, ಮಖ೦

ಅವತಾರ ಸ್ಥಳ೦: ತಿರುಮಳಿಶೈ

ಆಚಾರ್ಯರು:  ವಿಶ್ವಕ್ಸೇನರ್, ಪೇಯಾಳ್ವಾರ್

ಶಿಷ್ಯರು: ಕಣಿಕಣ್ಣನ್, ಧೃಡವ್ರತ

ಕೃತಿಗಳು: ನಾನ್ ಮುಗನ್ ತಿರುವ೦ದಾದಿ, ತಿರುಚ್ಛಂದ ವಿರುತ್ತಂ

ಪರಮಪದವನ್ನು ಅಲಂಕರಿಸಿದ ಸ್ಥಳ: ತಿರುಕ್ಕುಡಂದೈ

ಮಾಮುನಿಗಳು ಆಳ್ವಾರರು ಶಾಸ್ತ್ರಗಳ ಬಗ್ಗೆ ಅತ್ಯಂತ ಪರಿಶುದ್ಧ ಙ್ಞಾನಹೊಂದಿದ್ದರು ಎಂದು. ಮಣವಾಳ ಮಾಮುನಿಗಳು ಹೇಳುವುದು ಏನೆಂದರೆ – ಶ್ರೀಮನ್ನಾರಾಯಣನೊಬ್ಬನೇ ಪೂಜಿಸಲು ಅರ್ಹನು ಮತ್ತು ನಾವು ಅನ್ಯ ದೇವತೆಗಳ (ಇತರೆ ದೇವರ) ಬಳಿ ಕಿಂಚಿತ್ ಸಂಪರ್ಕವನ್ನೂ ಹೊಂದಿರಬಾರದು. ಮಾಮುನಿಗಳು ಅಳ್ವಾರರಿಗೆ ಶುದ್ಧ ಮನಸು ಎಂಬ ಅರ್ಥ ಇರುವ “ತುಯ್ಯ ಮದಿ” ಎಂಬ ಪದ ಉಪಯೋಗಿಸುತ್ತಾರೆ. ಪಿಳ್ಳೈ ಲೋಕಂ ಜೀಯರ್ ಅವರ ವಿವರಣೆಯಂತೆ, ಆಳ್ವಾರರ ಶುದ್ಧತೆ ಎಂಬುವುದು ಶ್ರೀಮನ್ನಾರಾಯಣನನ್ನು ಹೊರತುಪಡಿಸಿ ಇತರ ದೈವಗಳ ಬಗ್ಗೆ ಕಿಂಚಿತ್ತೂ ಪರತ್ವ (ಪ್ರಾಬಲ್ಯ) ಇಟ್ಟುಕೊಳ್ಳದೆ  ಇರುವುದು ಮತ್ತು ನಮ್ಮಗಳ ಮನಸ್ಸಿನಿಂದ ಅಂತಹ ಶಂಕೆಗಳನ್ನೂ ತೆಗೆದುಹಾಕುವುದು. ಬಹಳಷ್ಟು ಪಾಶುರಗಳಲ್ಲಿ, ಶ್ರೀವೈಷ್ಣವರು ಇತರ ದೇವತೆಗಳ ವಿಷಯದಲ್ಲಿ ಹೇಗೆ ನಡೆದುಕೊಳ್ಳಬೇಕು ಎಂಬುವುದನ್ನು ಆಳ್ವಾರರು ಗುರುತಿಸಿದ್ದಾರೆ.
ಉದಾಹರಣೆಗೆ:

 • ನನ್ಮುಗನ್ ತಿರುವಂದಾದಿ – 53 – ತಿರುವಿಲ್ಲಾದ ತೇವರೈ ತೇರೇಲ್ ಮಿನ್ ತೇವು – ಶ್ರೀ ಮಹಾಲಕ್ಷ್ಮಿಯೊಡನೆ ಸಂಬಂಧವಿರದ ಯಾರನ್ನೂ ನಾವು ಪೂಜಿಸಬಾರದು
 • ನನ್ಮುಗನ್ ತಿರುವಂದಾದಿ – 68 – ತಿರುವಡಿ ತನ್ ನಾಮಂ ಮರಂದುಂ ಪುರಂದೊಳಾ ಮಾಂದರ್ – ಸರ್ವೇಶ್ವರನಾದ ಶ್ರೀಮನ್ನಾರಾಯಣನನ್ನು ಮರೆತರೂ ಸಹ ಶ್ರೀವೈಷ್ಣವರು ಇತರ ದೇವತೆಗಳನ್ನು ಪೂಜಿಸುವುದಿಲ್ಲ

ಪೆರಿಯವಾಚ್ಚಾನ್ ಪಿಳ್ಳೈ ಮತ್ತು ನಂಬಿಳ್ಳೈ ಇವರಿಬ್ಬರೂ ತಮ್ಮ ನಾನ್ಮುಗನ್ ತಿರುವಂದಾದಿಯ ವ್ಯಾಖ್ಯಾನದ ಮುನ್ನುಡಿಯಲ್ಲಿ ಬಹಳ ಸುಂದರವಾಗಿ ವರ್ಣಿಸುವುದೇನೆಂದರೆ ಎಲ್ಲರ ಮನಸ್ಸಿನಲ್ಲಿ ಕಿಂಚಿತ್ತೂ ಅನುಮಾನವಿಲ್ಲದಂತೆ ಎಂಬೆರುಮಾನ್‌ರ ಪರತ್ವ ಹಾಗು ಇತರ ದೇವತೆಗಳ ಮಿತಿಗಳ ಬಗ್ಗೆ ತಿರುಮಳಿಶೈ ಆಳ್ವಾರರು ವಿವರಿಸಿದ್ದಾರೆ ಎಂದು.

ಪೆರಿಯವಾಚ್ಚಾನ್ ಪಿಳ್ಳೈರ ವಿವರಣೆ:

ಎಂಬೆರುಮಾನ್ ಒಬ್ಬನೇ ಪರಮ ಪುರುಷನೆಂದು ಗ್ರಹಿಸಿ ಆನಂದಿಸಬೇಕೆಂದು ಮುದಲಾಳ್ವಾರರು ಪ್ರತಿಪಾದಿಸಿದ್ದಾರೆ. ಆ ಪ್ರಕ್ರಿಯೆಯಲ್ಲಿ ಇರುವಂತಹ ಕಳೆಗಳನ್ನು ತಿರುಮಳಿಶೈ ಆಳ್ವಾರರು ತೆಗೆದುಹಾಕಿದ್ದಾರೆ. ಯಾವ ಸಂಸಾರಿಗಳು ಪರ ದೇವತೆಗಳನ್ನು ಈಶ್ವರ ( ನಿಯಂತ್ರಕ) ಎಂದು ಪರಿಗಣಿಸಿದ್ದಾರೊ, ಅಂತಹ ದೇವತೆಗಳೂ ಸಹ ಕ್ಷೇತ್ರಜ್ಞ (ಜೀವಾತ್ಮ – ಆತ್ಮ ಹೊಂದಿರುವ ದೇಹ) ಮತ್ತು ಅವರೂ ಸಹ ನಿಯಂತ್ರಣಕ್ಕೆ ಒಳಪಟ್ಟವರು ಎಂದು ತಿರುಮಳಿಶೈ ಆಳ್ವಾರರು ವಿವರಿಸಿದ್ದಾರೆ.

ನಂಬಿಳ್ಳೈರ ವಿವರಣೆ:

ಮುದಲಾಳ್ವಾರರು ಸರ್ವೇಶ್ವರನನ್ನು ಅರಿತುಕೊಂಡದ್ದು ಪ್ರಾಪಂಚಿಕ ದೃಷ್ಟಿ, ಶಾಸ್ತ್ರಗಳ ದೃಷ್ಟಿ, ಅವರ ಭಕ್ತಿ ಹಾಗು ಎಂಬೆರುಮಾನ್‍ರ ನಿರ್ಹೇತುಕ ಕೃಪೆಯಿಂದಾಗಿ. ಇದೇ ರೀತಿ ತಿರುಮಳಿಶೈ ಆಳ್ವಾರರು ಸಹ ಎಂಬೆರುಮಾನ್‍ನನ್ನು ಅರ್ಥೈಸಿಕೊಂಡು ಆನಂದಿಸಿದ್ದಾರೆ. ಆದರೆ ಪ್ರಪಂಚದ ಸುತ್ತಲೂ ನೋಡುತ್ತಾ, ಅವರು ದುಃಖಿಸುವುದು, ಬಹಳಷ್ಟು ಜನರು ಶ್ರೀಮನ್ನಾರಾಯಣನೇ ನಿಯಂತ್ರಕ ಹಾಗು ಶಾಸ್ತ್ರಗಳಲ್ಲಿ ವಿವರಿಸಿರುವಂತೆ ಇತರ ಎಲ್ಲವೂ ಆತನ ನಿಯಂತ್ರಣದಲ್ಲಿಯೆಂದು, ಅವರು ವೇದಗಳ ರಹಸ್ಯಗಳನ್ನು ತಮ್ಮ ಅತ್ಯಂತ ಕೃಪೆಯಿಂದ ಬಹರಂಗಪಡಿಸಿದ್ದಾರೆ. ಅವರು ಹೇಳುತ್ತಾರೆ, “ಬ್ರಹ್ಮನೇ (ಮೊದಲ ಮೂಲಜನಕ) ಒಬ್ಬ ಜೀವಾತ್ಮ ಹಾಗು ಶ್ರೀಮನ್ನಾರಯಣನಿಂದ ಸೃಷ್ಟಿಯ ಸಮಯದಲ್ಲಿ ನೇಮಕಗೊಂಡಿದ್ದು, ಹಾಗು ವೇದಗಳಲ್ಲಿ ವಿವರಿಸಿರುವಂತೆ ಶ್ರೀಮನ್ನಾರಾಯಣನೇ ಸಕಲ ಚರಾಚರ ವಸ್ತುಗಳಿಗೂ ಅಂತರ್ಯಾಮಿಯಾಗಿರುವುದರಿಂದ ಶ್ರೀಮನ್ನಾರಾಯಣನೊಬ್ಬನೇ ಸರ್ವೋಚ್ಚ ಪರಮಪುರುಷ. ಈ ತತ್ವವನ್ನು ಮರೆಯದೇ ಸ್ಪಷ್ಟವಾಗಿ ಹಿಡಿದಿಟ್ಟುಕೊಳ್ಳಿ “

ಈ ರೀತಿ ಮಾಮುನಿಗಳು, ಪೆರಿಯವಾಚ್ಚಾನ್ ಪಿಳ್ಳೈ ಮತ್ತು ನಂಬಿಳ್ಳೈ ಅವರುಗಳು ತಿರುಮಳಿಶೈ ಆಳ್ವಾರ್‍ರ ವಿಶೇಷತೆಗಳನ್ನು ತಮ್ಮ ಸುಂದರವಾದ ಕೃತಿಗಳಲ್ಲಿ ವರ್ಣಿಸಿದ್ದಾರೆ.

ಇವುಗಳಲ್ಲದೆ, ತಿರುಚ್ಚಂದವಿರುತ್ತಂನ ತನಿಯನ್‍ನಲ್ಲಿರುವ ಒಂದು ಸುಂದರ ವರ್ಣನೆ ಏನೆಂದರೆ, ಒಂದು ಸಲ ಮಹಾನ್ ಋಷಿಗಳು ತಪಸ್ಸು ಮಾಡಲು ಒಂದು ಒಳ್ಳೆಯ ಏಕಾಂತ ಪ್ರದೇಶವನ್ನು ಆಯ್ಕೆ ಮಾಡಲು ತಿರುಮಳಿಶೈ (ಆಳ್ವಾರರ ಅವತಾರ ಸ್ಥಳ) ಹಾಗು ಇಡೀ ಪ್ರಪಂಚವನ್ನು ಹೋಲಿಕೆ ಮಾಡಿದಾಗ ತಿರುಮಳಶೈಯೇ  ಮಹಾನ್ ಎಂದು ನಿರ್ಧರಿಸಿದರು. ಆಳ್ವಾರ್/ಆಚಾರ್ಯರ ಅವತಾರ ಸ್ಥಳಗಳ ಮಹಿಮೆ ಎಷ್ಟೆಂದರೆ, ಈ ಸ್ಥಳಗಳನ್ನು ದಿವ್ಯದೇಶಗಳಿಗಿಂತಲೂ ಹೆಚ್ಚಾಗಿ ವೈಭವೀಕರಿಸಬೇಕು, ಏಕೆಂದರೆ ಎಂಬೆರುಮಾನ್ ಯಾರು ಎಂದು ನಮಗೆ ತೋರಿಸಿಕೊಟ್ಟವರು ಈ  ಆಳ್ವಾರ್/ಆಚಾರ್ಯರು ಮತ್ತು ಅವರುಗಳು ಇಲ್ಲದೆ ಇದ್ದಿದ್ದರೆ ನಾವುಗಳು ಎಂಬೆರುಮಾನ್‍ರ ಅನುಭವಗಳನ್ನು ಹೊಂದಲಾಗುತ್ತಿರಲಿಲ್ಲ.

ಇವುಗಳನ್ನು ಮನಸ್ಸಿನಲ್ಲಿಟ್ಟುಕೊಂಡು, ಈಗ ನಾವು ಆಳ್ವಾರರ ಚರಿತ್ರೆಯನ್ನು ನೋಡೋಣ.

ಆಳ್ವಾರರು ಕೃಷ್ಣನ ತರಹ – ಕಣ್ಣನ್ ಎಂಬೆರುಮಾನ್ ಹುಟ್ಟಿದ್ದು ವಸುದೇವ/ದೇವಕಿಗೆ ಹಾಗು ಬೆಳಸಲ್ಪಟ್ಟದ್ದು ನಂದಗೋಪ/ಯಶೋದೆಯಿಂದ. ಇದೇ ರೀತಿ, ಆಳ್ವಾರರು ಹುಟ್ಟಿದ್ದು ಭಾರ್ಗವ ಋಷಿ/ಕನಕಾಂಗಿಗೆ ಮತ್ತು ಬೆಳಸಲ್ಪಟ್ಟದ್ದು ತಿರುವಾಳನ್/ಪಂಗಯಚೆಲ್ವಿ (ಒಬ್ಬ ಮರ ಕಡಿಯುವವ ಹಾಗು ಆತನ ಪತ್ನಿ) ಯಿಂದ. ಅವರು ಶ್ರೀ ಭಕ್ತಿಸಾರರ್, ಮಹಿಷಪುರಾಧೀಶರ್, ಭಾರ್ಗವಾತ್ಮಜರ್, ತಿರುಮಳಿಶೈಯಾರ್ ಎಂದೂ ಹಾಗು ಬಹಳ ಮುಖ್ಯವಾಗಿ ತಿರುಮಳಿಶೈಪ್ಪಿರಾನ್ ಎಂದು ಕರೆಯಲ್ಪಡುತ್ತಾರೆ. ಪಿರಾನ್ ಎಂದರೆ ದೊಡ್ಡ ಅನುಗ್ರಹ ಮಾಡಿದವರು ಎಂದು ಹಾಗು ಆಳ್ವಾರ್‍ರವರು ನಾರಾಯಣನ ಪರತ್ವವನ್ನು ಸ್ಥಾಪಿಸಿ ನಮಗೆ ಬಹಳ ದೊಡ್ಡ ಅನುಗ್ರಹವನ್ನೇ ಮಾಡಿದ್ದಾರೆ.

ಒಂದು ಸಲ ಮಹಾ ಋಷಿಗಳಾದ ಅತ್ರಿ, ಭೃಗು, ವಸಿಷ್ಟ, ಭಾರ್ಗವ, ಆಂಗೀರಸ ಮತ್ತಿತ್ತರರು ಬ್ರಹ್ಮ (ಚತುರ್ಮುಖ) ನಲ್ಲಿ ಹೋಗಿ “ನಾವು ಭೂಲೋಕದಲ್ಲಿನ ಉತ್ಕೃಷ್ಟ ಪ್ರದೇಶದಲ್ಲಿ ವಾಸ ಮಾಡಲು ಬಯಸತ್ತೇವೆ. ಅಂತಹ ಉತ್ತಮವಾದ ಸ್ಥಳವನ್ನು ವಾಸ್ತವಿಕವಾಗಿ ಸ್ಥಾಪಿಸಿ ಕೊಡಬೇಕು” ಎಂದು ಕೇಳಿಕೊಂಡರು. ವಿಶ್ವಕರ್ಮನ ಸಹಾಯದೊಂದಿಗೆ ಬ್ರಹ್ಮ ಇಡೀ ವಿಶ್ವವನ್ನು ಒಂದುಕಡೆಯಲ್ಲಿ ಹಾಗು ತಿರುಮಳಿಶೈಯನ್ನು ಮತ್ತೊಂದು ಕಡೆಯಲ್ಲಿ ತೂಗಿ ಅಳೆದು, ಸ್ಪರ್ಧೆಯಲ್ಲಿ ತಿರುಮಳಿಶೈ ಗೆದ್ದಿತ್ತು. ಇದು ಮಹೀಸಾರ ಕ್ಷೇತ್ರ ಎಂದೂ ಕರೆಯಲ್ಪಡುತ್ತದೆ. ಆದುದರಿಂದ, ಮಹಾನ್ ಋಷಿಗಳು ಕೆಲ ಕಾಲ ಅ ಸ್ಥಳಕ್ಕೆ ಹೋಗಿ ತಂಗಿದ್ದರು.

ಆ ಸಮಯದಲ್ಲಿ, ಭಾರ್ಗವ ಮಹರ್ಷಿಯು ಶ್ರೀಮನ್ನಾರಾಯಣನಿಗೋಸ್ಕರ ಧೀರ್ಘ ಸತ್ರ ಯಾಗ ಎಂಬ ಯಜ್ಞವನ್ನು ನಡೆಸುತ್ತಿದ್ದಾಗ, ಅವರ ಪತ್ನಿ ಗರ್ಭವತಿಯಾಗಿ  12 ತಿಂಗಳುಗಳ ನಂತರ ಒಂದು ಪಿಂಡಕ್ಕೆ (ಮಾಂಸದ ಮುದ್ದೆ – ಭ್ರೂಣದ ಮೊದಲಿನ ಭಾಗ) ಜನ್ಮವಿತ್ತಳು ಹಾಗು ಅದೇ ತಿರುಮಳಿಶೈ ಆಳ್ವಾರ್. ಅವರು ಸುದರ್ಶನ ಅಂಶಸ್ಥ (ಆಳ್ವಾರ ವೈಭವಗಳನ್ನು ಗಮನಿಸಿದರೆ, ಇವರು ನಿತ್ಯಸೂರಿಗಳ ಅಂಶ ಎಂದು ಕೆಲ ಆಚಾರ್ಯರು ಅಭಿಪ್ರಾಯ ಹೊಂದಿದ್ದರೂ ಸಹ, ನಮ್ಮ ಪೂರ್ವಾಚಾರ್ಯರು ಸ್ಪಷ್ಟವಾಗಿ ವಿವರಿಸಿರುವಂತೆ ಆಳ್ವಾರರು ಬಹಳ ಹಿಂದಿನಿಂದಲೂ ಈ ಸಂಸಾರದಲ್ಲಿ ಇದ್ದು, ಹಠಾತ್ತನೆ ಎಂಬೆರುಮಾನಿನ ಕೃಪೆಗೆ ಪಾತ್ರರಾದವರು). ಭಾರ್ಗವ ಮಹರ್ಷಿ ಹಾಗು ಅವರ ಪತ್ನಿ, ಆಕಾರ ತಳೆಯದ ಮಗುವಿಗೆ ಆಶ್ರಯಕೊಡಲು ಇಚ್ಚಿಸದೆ, ಒಂದು ಪೊದೆಯ ಕೆಳಗೆ ಬಿಟ್ಟುಬಿಟ್ಟರು.  ಶ್ರೀದೇವಿ ನಾಚ್ಚಿಯಾರಿನ ಸಂಕಲ್ಪದೊಂದಿಗೆ ಭೂದೇವಿ ನಾಚ್ಚಿಯಾರ್ ಆ ಪಿಂಡವನ್ನು ಸಂರಕ್ಷಿಸಿ, ತನ್ನ ಸ್ಪರ್ಶ ಮಾತ್ರದಿಂದ ಆ ಪಿಂಡವನ್ನು ಒಂದು ಸುಂದರ ಮಗುವನ್ನಾಗಿಸಿದಳು.  ಒಡನೆಯೇ ಆ ಮಗು ಹಸಿವಿನಿಂದ ಅಳಲಾರಂಭಿಸಿದಾಗ, ಜಗನ್ನಾಥ (ತಿರುಮಳಿಶೈಯ) ಎಂಬೆರುಮಾನ್, ಆಳ್ವಾರರ ಮುಂದೆ ಪ್ರತ್ಯಕ್ಷನಾಗಿ ತಿರುಕ್ಕುಡಂದೈ ಆರಾವಮುದನ್‍ರ ದಿವ್ಯ ಮಂಗಳ ರೂಪವನ್ನು ತೋರಿಸಿ, ಆಳ್ವಾರರಿಗೆ ಸಂಪೂರ್ಣ ಜ್ಞಾನವನ್ನು ದಯಪಾಲಿಸಿದ. ಎಂಬೆರುಮಾನ್ ಮರೆಯಾದ ತಕ್ಷಣ, ಆಳ್ವಾರರು ಭಗವಂತನ ವಿಯೋಗದಿಂದ ಅಳ ತೊಡಗಿದರು.

ಆ ಸಮಯದಲ್ಲಿ, ಅಲ್ಲಿ ಹಾದುಹೊಗುತ್ತಿದ್ದ ತಿರುವಾಳನ್ ಎಂಬ ಒಬ್ಬ ಮರ ಕಡಿಯುವವ, ಅಳುತ್ತಿರುವ ಎಳೆಯ ಮಗುವನ್ನು ಬಹಳ ಸಂತೋಷದಿಂದ ತೆಗೆದುಕೊಂಡು, ತನ್ನ ಪತ್ನಿಯ ಬಳಿ ತರುತ್ತಾರೆ. ಮಕ್ಕಳಿಲ್ಲದ ಆಕೆ, ಸಂತೋಷದಿಂದ ಮಗುವನ್ನು ಸ್ವೀಕರಿಸಿ ಬೆಳೆಸುತ್ತಾಳೆ. ತಾಯಿಯ ಮಮತೆಯಿಂದ ಆಕೆ ತನ್ನ ಮೊಲೆಹಾಲು ಉಣಿಸಲು ಪ್ರಯತ್ನಿಸಿದರೂ ಸಹ,   ಆಳ್ವಾರರು ಭಗವತ್ ಕಲ್ಯಾಣಾನುಭವದಲ್ಲಿ ತಲ್ಲೀನರಾಗಿದ್ದುದರಿಂದ, ತಿನ್ನುವುದಾಗಲಿ, ಮಾತನಾಡುವುದಾಗಲಿ, ಅಳುವುದಾಗಲಿ, ಇನ್ನಿತರ ಯಾವುದರಲ್ಲಿಯೂ ಆಸಕ್ತಿ ತೋರದೆ, ಭಗವಂತನ ಕೃಪೆಯಿಂದ ಸುಂದರವಾಗಿ ಬೆಳೆಯುತ್ತಾರೆ.

ಈ ಅದ್ಭುತ ವಾರ್ತೆಯನ್ನು ಕೇಳಿದ್ದ ಚತುರ್ಥ ವರ್ಣದಲ್ಲಿ ಹುಟ್ಟಿದ್ದ ಓರ್ವ ವೃದ್ದ ತನ್ನ ಪತ್ನಿಯೊಡನೆ ಒಂದು ದಿನ ಬೆಳಗಿನ ಜಾವದಲ್ಲೇ ಬಂದು, ಭವ್ಯ ತೇಜಸ್ಸಿನಿಂದ ಬೆಳಗುವ ಮಗುವನ್ನು ನೋಡಿ, ತಾವು ತಯಾರಿಸಿದ್ದ ಒಳ್ಳೆಯ ಬೆಚ್ಚಗಿನ ಹಾಲನ್ನು ಅರ್ಪಿಸಿ ಸ್ವೀಕರಿಸಲು ಬೇಡಿಕೊಳ್ಳುತ್ತಾರೆ. ಅವರ ಭಕ್ತಿಗೆ ಮೆಚ್ಚಿದ ಆಳ್ವಾರರು, ಹಾಲನ್ನು ಸ್ವೀಕರಿಸಿ, ಸ್ವಲ್ಪ ಕುಡಿದು, ಶೇಷವನ್ನು (ಉಳಿದಿದ್ದನ್ನು) ಆ ವೃದ್ದ ದಂಪತಿಗಳಿಗೇ ನೀಡುತ್ತಾರೆ. ಅವರುಗಳಿಗೆ ಆ ಹಾಲಿನ ಪ್ರಸಾದವನ್ನು ಸೇವಿಸುವಂತೆ ಮತ್ತು ಅದರಿಂದ ಅವರುಗಳಿಗೆ ಒಬ್ಬ ಸತ್ಪುತ್ರ (ಒಳ್ಳೆಯ ಗಂಡು ಮಗು) ಪ್ರಾಪ್ತಿಯಾಗುವುದು ಎಂದು ಆಳ್ವಾರರು ತಿಳಿಸುತ್ತಾರೆ.  ಒಡನೆಯೇ ಆ ದಂಪತಿಗಳಿಗೆ ತಮ್ಮ ಪ್ರಾಯ ಮರುಕಳಿಸಿ, ಅ ಹೆಂಗಸು ಗರ್ಭ ಧರಿಸುತ್ತಾಳೆ. 10 ತಿಂಗಳುಗಳ ಬಳಿಕ ಆಕೆ ಶ್ರೀ ವಿದುರರಂತೆ (ಕಣ್ಣನಿಗೆ ಅತ್ಯಂತ ಹತ್ತಿರದ ಸಂಭಂದವಿದ್ದ) ಮಗುವಿಗೆ ಜನ್ಮವೀಯುತ್ತಾಳೆ. ಅವರು ಆ ಮಗುವಿಗೆ ಕನಿ ಕಣ್ಣನ್ ಎಂದು ನಾಮಕರಣ ಮಾಡಿ, ಆತನಿಗೆ ಎಂಬೆರುಮಾನ್‍ರ ಬಗೆ ಎಲ್ಲವನ್ನೂ ಹೇಳಿಕೊಡುತ್ತಾರೆ.

ಭಾರ್ಗವ ಋಷಿಯ ಪುತ್ರರಾದುದರಿಂದಲೂ ಹಾಗು ಜನ್ಮದ ಸಮಯದಲ್ಲಿ ಎಂಬೆರುಮಾನ್‍ರ ಕೃಪೆಗೆ ಪಾತ್ರರಾದುದರಿಂದಲೂ ಆಳ್ವಾರರಿಗೆ 7 ವರ್ಷಗಳು ತುಂಬಿದ ನಂತರ ಅವರಿಗೆ ಅಷ್ಟಾಂಗ ಯೋಗ ಮಾಡುವ ಬಯಕೆ ಹುಟ್ಟಿತು. ಅದು ಮಾಡುವುದಕ್ಕೆ ಮೊದಲು ಪರಬ್ರಹ್ಮದ ಅರ್ಥಪಡೆದುಕೊಳ್ಳಬೇಕು ಎಂದು ವಿವಿಧ ಮತಗಳ ಸಂಶೋಧನೆ ಮಾಡಲು (ಇತರ ಮತಗಳು ದೋಷಯುಕ್ತವಾದವು ಎಂದು ಸ್ಥಾಪಿಸಲು) ಬಾಹ್ಯ ಮತಗಳು (ಶಾಕ್ಯ, ಉಲೂಕ್ಯ, ಅಕ್ಷಪಾದತ್, ಕ್ಷಪಣ, ಕಪಿಲ, ಪತಾಂಜಲಿ) ಹಾಗು ಕುದೃಷ್ಟಿ ಮತಗಳ (ಶೈವ, ಮಾಯಾವಾದ, ನ್ಯಾಯ, ವೈಶೇಷಿಕ, ಭಟ್ಟ, ಪ್ರಭಾಕರ, ಇತರೆ) ಬಗ್ಗೆ ವಿಷ್ಲೇಶಿಸಿ, ಈ ಮತಗಳು ಅತ್ಯುಚ್ಚ ಸತ್ಯದ ಕಡೆಗೆ ಕರೆದೊಯ್ಯಲಾರದು ಎಂದು ಸ್ಪಷ್ಟವಾಗಿ ಸ್ಥಾಪಿಸಿದರು. ಕಡೆಗೆ, ಅವರು ಸನಾತನ ಧರ್ಮವಾದ ಶ್ರೀವೈಷ್ಣವ ಸಿದ್ದಾಂತದಲ್ಲಿ ದೃಢವಾಗಿ ನೆಲಗೊಳ್ಳುತ್ತಾರೆ. ಅಷ್ಟರಲ್ಲಿ 700 ವರ್ಷಗಳು ಕಳೆದಿರುತ್ತದೆ.

ತದನಂತರ ಸರ್ವೇಶ್ವರನು ಆಳ್ವಾರರಿಗೆ ಕಳಂಕರಹಿತ ದೈವೀಕ ಜ್ಞಾನವನ್ನು ಕರುಣಿಸಿ, ಅವರಿಗೆ ಕೆಳಕಂಡದೆಲ್ಲವನ್ನು ತೋರಿಸುತ್ತಾರೆ:

 • ಆತನ ದಿವ್ಯ ಸ್ವರೂಪ
 • ಆತನ ಅತ್ಯಂತ ಮಂಗಳಕರ ಗುಣಗಳು
 • ಆತನ ದಿವ್ಯ ರೂಪಗಳು (ಸ್ವರೂಪ ಮತ್ತು ಗುಣಗಳನ್ನು ತೋರಿಸುವಂತಹ)
 • ಆ ದಿವ್ಯ ರೂಪಗಳ ಮೇಲೆ ಧರಿಸಿರುವಂತಹ ಆಭರಣಗಳು
 • ಅನುಕೂಲರು ಆಭರಣಗಳು ಎಂದೇ ಪರಿಗಣಿಸಲ್ಪಡುವ ಆತನ ದಿವ್ಯ ಆಯುಧಗಳು
 • ಆತನ ಮಹಿಷಿಗಳು (ಶ್ರೀದೇವಿ, ಭೂದೇವಿ, ನೀಳಾ ದೇವಿ, ಇತರರು) ಮತ್ತು ಆತನ ನಿರಂತರ ಅನಂದವನ್ನು ಅನುಭವಿಸುವ ನಿತ್ಯಸೂರಿಗಳು ಮೇಲ್ಕಂಡವುಗಳೊಂದಿಗೆ (ಸ್ವರೂಪ, ಗುಣ, ರೂಪ, ಆಭರಣ, ಆಯುಧ, ಮತ್ತಿತರ)
 • ಪರಮಪದ – ಅದರ ನಿತ್ಯ ಸುಂದರ ನಿವಾಸ ಹಾಗು ಕೊನೆಯದಾಗಿ
 • ಸಂಸಾರ – ಪ್ರಕೃತಿ, ಪುರುಷ, ಕಾಲ ತತ್ವಗಳನ್ನು ಒಳಗೊಂಡದ್ದು ಮತ್ತು ಸೃಷ್ಟಿ, ಸ್ಥಿತಿ, ಸಂಹಾರಗಳನ್ನು ಇತರ ದೇವತೆಗಳಿಂದ ಪರೋಕ್ಷವಾಗಿ ಹಾಗು ಎಂಬೆರುಮಾನ್ ತಾನೇ ಪ್ರತ್ಯಕ್ಷವಾಗಿ ನಡೆಸುವ  ನಿರಂತರ ಪ್ರಕ್ರಿಯೆಗಳು.

ತನ್ನ ಮಹಾನ್ ಗುಣಗಳಿಂದ ಎಂಬೆರುಮಾನ್ ಹೇಗೆ ಬ್ರಹ್ಮ (ತನ್ನ ಮೊದಲನೆಯ ಮಗ) ತನ್ನ ನಾಭಿ ಕಮಲದಿಂದ ಸೃಷ್ಟಿಸಲ್ಪಟ್ಟ ಎಂದು ಆಳ್ವಾರರಿಗೆ ತೋರಿಸಿದ –  ಶ್ವೇತಾಶ್ವತರ ಉಪನಿಷತ್ತಿನ “ಯೋ ಬ್ರಹ್ಮಾಣಾಂ ವಿದಧಾತಿ ಪೂರ್ವಂ” ನಂತೆ ಬ್ರಹ್ಮನನ್ನು ಸೃಷ್ಟಿಸುವುದು ಪರಬ್ರಹ್ಮ ಮತ್ತು ಛಾಂದೋಗ್ಯ ಬ್ರಾಹ್ಮಣದ “ಬ್ರಹ್ಮಣಃ ಪುತ್ರಾಯ ಜ್ಯೇಷ್ಠಾಯ ಶ್ರೇಷ್ಠಾಯ” – ರುದ್ರನು ಬ್ರಹ್ಮನ ಮೊದಲನೆ ಪುತ್ರ. ಇದನ್ನು ಗಮನಿಸಿದ ತಕ್ಷಣ ಆಳ್ವಾರರು ತಮ್ಮ ನಾನ್ಮುಗನ್ ತಿರುವಂದಾದಿಯಲ್ಲಿ “ನಾನ್ಮುಗನೈ ನಾರಾಯಣನ್ ಪಡೈತ್ತಾನ್ ನಾನ್ಮುಗನುಂ ತಾನ್ ಮುಗಮಾಯ್ ಶಂಕರನೈ ತಾನ್ ಪಡೈತ್ತಾನ್” ಎಂಬ ಘೋಷಣೆಯಂತೆ ನಾರಾಯಣನು ಬ್ರಹ್ಮನನ್ನು ಸೃಷ್ಟಿಸಿದ ಹಾಗು ಪ್ರತಿಯಾಗಿ ಬ್ರಹ್ಮ ರುದ್ರನನ್ನು ಎನ್ನುತ್ತಾ ಸಂಸಾರಿಗಳ ಮನಸ್ಸಿನಲ್ಲಿ ಎಂಬೆರುಮಾನ್‍ನ ಪರತ್ವದ ಬಗ್ಗೆ ಇರುವ ಯಾವುದೇ ಅನುಮಾನಗಳನ್ನು ತೆಗೆದುಹಾಕುತ್ತಾರೆ.  ತಾವೇ ಘೋಷಿಸುವಂತೆ ಆಳ್ವಾರರು ವಿವಿಧ ಮತಗಳನ್ನು ಕಲಿತುಕೊಂಡ ನಂತರ ಕೊನೆಯಲ್ಲಿ ಎಂಬೆರುಮಾನ್ ಕೃಪೆಯಿಂದಾಗಿ ತಾವು ಎಂಬೆರುಮಾನ್‍ನ ಪಾದಪದ್ಮಗಳನ್ನು ಆಶ್ರಯಿಸಿದೆ ಎಂದು ಹೇಳುತ್ತಾರೆ. ತದನಂತರ ಅವರು  ಕೈರವಣಿ ಪುಷ್ಕರಣಿಯ ತಟಾಕದಲ್ಲಿರುವ ತಿರುವಲ್ಲಿಕೇಣಿ (ಬೃಂದಾರಣ್ಯ ಕ್ಷೇತ್ರ) ದಲ್ಲಿರವ ಶ್ರೀಯಃಪತಿಯ (ಮಹಾಲಕ್ಷ್ಮಿಯ ಪತಿ) ಕಲ್ಯಾಣ ಗುಣಗಳ ನಿರಂತರ ಧ್ಯಾನದಲ್ಲಿ ನಿರತರಾಗಿದ್ದರು.

ಒಂದು ದಿನ ರುದ್ರನು ತನ್ನ ಪತ್ನಿಯೊಡನೆ ಆಕಾಶಮಾರ್ಗದಲ್ಲಿ ತನ್ನ ವೃಷಭ ವಾಹನದಲ್ಲಿ ಸಂಚರಿಸುತ್ತಿದ್ದನು. ಅವರ ನೆರಳು ಆಳ್ವಾರರ ಮೇಲೆ ಬೀಳುವುದರಲ್ಲಿದ್ದಾಗ ಆಳ್ವಾರರು ಕೊಂಚ ದೂರ ಸರಿದರು. ಅದನ್ನು ಗಮನಿಸಿದ ಪಾರ್ವತಿ, ರುದ್ರನಲ್ಲಿ ಆಳ್ವಾರರನ್ನು ಭೇಟಿ ಮಾಡೋಣವೆಂದು ಹೇಳುತ್ತಾಳೆ. ಮಹಾತ್ಮರಾದ ಆಳ್ವಾರರು ಎಂಬರುಮಾನ್‍ನ ಭಕ್ತರಾದುದರಿಂದ ತಮ್ಮನ್ನು ಉಪೇಕ್ಷಿಸುತ್ತಾರೆ ಎಂದು ರುದ್ರನು ಹೇಳುತ್ತಾನೆ. ಆದರೂ  ಪಾರ್ವತಿಯ ಬಲವಂತಕ್ಕೆ ಮಣಿದು ರುದ್ರನು ಕೆಳಗೆ ಇಳಿದು ಆಳ್ವಾರರನ್ನು ಭೇಟಿ ಮಾಡಲು ಒಪ್ಪುತ್ತಾನೆ.   ಆಳ್ವಾರರು  ಬಂದವರು ಯಾರೆಂದು ನೋಡುವುದು ಇಲ್ಲ. ಆಗ ರುದ್ರನು ಕೇಳುತ್ತಾನೆ, “ನಾವು ನಿಮ್ಮ ಪಕ್ಕದಲ್ಲಿದ್ದರೂ ಸಹ ತಾವೇಕೆ ನಮ್ಮನ್ನು ನೋಡುವುದಿಲ್ಲ?” ಆದಕ್ಕೆ ಆಳ್ವಾರರು “ನಿನ್ನೊಡನೆ ನನಗೆ ಮಾಡಲು ಏನೂ ಇಲ್ಲ” ಎಂದು ಉತ್ತರಿಸುತ್ತಾರೆ. ಆಗ ರುದ್ರನು “ನಿಮಗೆ ವರವನ್ನು ನೀಡಲು ಇಚ್ಚಿಸುತ್ತೇವೆ” ಎಂದು ಹೇಳುತ್ತಾನೆ.  ಆದಕ್ಕೆ ಆಳ್ವಾರರು “ನನಗೆ ನಿನ್ನಿಂದ ಏನೂ ಬೇಡ” ಎಂದು ಹೇಳುತ್ತಾರೆ. ಆಗ ರುದ್ರನು “ನಾವು ಭೇಟಿ ಮಾಡಲು ಬಂದದ್ದು ವ್ಯರ್ಥವಾಗುತ್ತದೆ, ಆದುದರಿಂದ ನಿಮ್ಮ ಯಾವುದೇ ಬಯಕೆ ಇದ್ದರೆ ಕೇಳಿ” ಎನ್ನುತ್ತಾನೆ. ಅದಕ್ಕೆ ನಗುತ್ತಾ ಆಳ್ವಾರರು “ ನನಗೆ ಮೋಕ್ಷ ನೀಡುವೆಯಾ?” ಎಂದು ಕೇಳುತ್ತಾರೆ. ಆಗ ರುದ್ರನು “ನನಗೆ ಅದನ್ನು ನೀಡುವ ಅಧಿಕಾರ ಇಲ್ಲ, ಕೇವಲ ಶ್ರೀಮನ್ನಾರಯಣನೊಬ್ಬನೆ ಅದನ್ನು ನೀಡಬಲ್ಲ” ಎಂದು ಉತ್ತರಿಸುತ್ತಾನೆ. ಆಗ ಆಳ್ವಾರರು “ ಯಾರಾದರೂ ಒಬ್ಬ ವ್ಯಕ್ತಿಯ ಸಾವನ್ನು ಮುಂದೂಡಲು ಸಾಧ್ಯವೆ?” ಎಂದು ಕೇಳಿದಾಗ ರುದ್ರನು “ಅದು ವ್ಯಕ್ತಿಯ ಕರ್ಮಾನುಸಾರವಾದದ್ದು, ನನಗೆ ಅದರ ಮೇಲೆ ನಿಯಂತ್ರಣವಿಲ್ಲ” ಎನ್ನುತ್ತಾನೆ. ಆಗ ಆಳ್ವಾರರು ತಮ್ಮ ಕೈಯಲ್ಲಿದ್ದ ಸೂಜಿ-ದಾರವನ್ನು ತೋರಿಸಿ “ಈ ಸೂಜಿಯೊಳಗೆ ದಾರವನ್ನು ತೂರಿಸಬಲ್ಲಿರಾ?” ಎಂದು ವ್ಯಂಗ್ಯವಾಗಿ ಕೇಳುತ್ತಾರೆ. ಆಗ ರುದ್ರನು ಕೋಪಗೊಂಡು ಕಾಮದೇವನನ್ನ ಸಟ್ಟಂತೆ ಆಳ್ವಾರರನ್ನೂ ಭಸ್ಮಮಾಡಿಬಿಡುವುದಾಗಿ ಶಪಥ ಮಾಡತ್ತಾನೆ. ರುದ್ರನು ತನ್ನ ಮೂರನೆ ಕಣ್ಣು ತೆರೆಯುತ್ತಿದ್ದಂತೆ ಬೆಂಕಿಯು ಹರಿಯಲು ಪ್ರಾರಂಭವಾಗುತ್ತದೆ.  ಪ್ರತಿಯಾಗಿ ಆಳ್ವಾರರು ಸಹ  ತಮ್ಮ ಬಲಗಾಲಿನಲ್ಲಿದ್ದ ತಮ್ಮ ಮೂರನೆಯ ಕಣ್ಣನ್ನು ತರೆದಾಗ, ಅದರಿಂದಲೂ ಬೆಂಕಿಯು ಹೊರಹೊಮ್ಮಲು ತೊಡಗುತ್ತದೆ.  ಆಳ್ವಾರರ ತಿರುವಡಿಯ ಅಗ್ನಿಯ ಉಷ್ಣತೆಯನ್ನು ತಾಳಲಾರದೆ, ರುದ್ರನು ಶ್ರೀಮನ್ನಾರಯಣನಲ್ಲಿ ಶರಣಾಗುತ್ತಾನೆ ಹಾಗ ಇತರ ಎಲ್ಲ ದೇವತೆಗಳು, ಋಷಿಗಳು ಸಹ ಎಂಬೆರುಮಾನ್‍ನ ಮೊರೆ ಹೊಕ್ಕು ವ್ಯವಸ್ಥೆಯನ್ನು ಕಾಪಾಡಲು ಪ್ರಾರ್ಥಿಸುತ್ತಾರೆ. ಒಡನೆ ಎಂಬೆರುಮಾನ್ ದೊಡ್ಡ ಮಳೆ ತರುವ ಪ್ರಳೆಯದ ಮೋಡಗಳನ್ನ ಆದೇಶಿಸುತ್ತಾನೆ. ಈ ಮೋಡಗಳಿಗೆ ಆಳ್ವಾರರ ಅಗ್ನಿಯನ್ನು ಉಪಶಮನ ಮಾಡುವ ಶಕ್ತಿ ಇದೆಯೇ ಎಂದು ಕೇಳಿದಾಗ, ಎಂಬೆರುಮಾನ್ ತಾನು ಆ ಶಕ್ತಿಯನ್ನು ಮೋಡಗಳಿಗೆ ನೀಡುವೆ ಎಂದು ಉತ್ತರಿಸುತ್ತಾನೆ.  ಒಂದು ದೊಡ್ಡ ಪ್ರವಾಹವು ಉತ್ಪತ್ತಿಯಾಗಿ ಆಳ್ವಾರರ ಅಗ್ನಿಯನ್ನ ಶಾಂತವಾಗಿಸಿದ ನಂತರ, ಎಂಬೆರುಮಾನ್‍ರಲ್ಲಿ ದೃಢ ಭಕ್ತಿ ಹೊಂದಿದ್ದ ಆಳ್ವಾರರು ಯಾವುದೇ ಅಡೆತಡೆಗಳಿಲ್ಲದೆ ತಮ್ಮ ಧ್ಯಾನವನ್ನು ಮುಂದುವರೆಸುತ್ತಾರೆ. ಅಳ್ವಾರರ ನಿಷ್ಠೆಯನ್ನು ಕಂಡು ವಿಸ್ಮಯಗೊಂಡ ರುದ್ರನು, ಅವರಿಗೆ “ಭಕ್ತಿಸಾರ” ಎಂಬ ಬಿರುದನ್ನು ನೀಡಿ, ಅವರನ್ನು ವೈಭವೀಕರಸಿ, ಪಾರ್ವತಿಗೆ “ಅಂಬರೀಷನಿಗೆ ಅಪಚಾರ ಮಾಡಿ ದೂರ್ವಾಸರು ಶಿಕ್ಷೆಗೆ ಒಳಗಾದರು, ಭಾಗವತರನ್ನು ಸೋಲಿಸಲು ಸಾಧ್ಯವಿಲ್ಲ” ಎಂದು ತಿಳಿಸಿ ತನ್ನ ಸ್ವಸ್ಥಾನಕ್ಕೆಹಿಂದಿರುಗಿದನು.

ಆಳ್ವಾರರು ತಮ್ಮ ಧ್ಯಾನವನ್ನು ಮುಂದುವರೆಸುತ್ತಾರೆ. ಒಬ್ಬ ಕೇಚರ (ಗಗನ ಸಂಚಾರಿ) ತನ್ನ ಹುಲಿಯ ಮೇಲೆ ಆಕಾಶಮಾರ್ಗದಲ್ಲಿ ಚಲಿಸುತ್ತಿದ್ದಾಗ, ಆಳ್ವಾರರ ಯೋಗಶಕ್ತಿಯ ಕಾರಣದಿಂದ ಆತನಿಗೆ ಆಳ್ವಾರರನ್ನು ದಾಟಿ ಮಂದೆಹೋಗಲು ಸಾಧ್ಯವಾಗಲಿಲ್ಲ. ಆತ ಕೆಳಗೆ ಬಂದು ಆಳ್ವಾರರಿಗೆ ತನ್ನ ಪ್ರಣಾಮಗಳನ್ನು ಸಲ್ಲಿಸಿದ.  ಆ ಕೇಚರ ತನ್ನ ಮಾಂತ್ರಿಕ ಶಕ್ತಿಯಿಂದ ಒಂದು ಸುಂದರವಾದ ಶಾಲು ಸೃಷ್ಠಿಸಿ “ನಿಮ್ಮ ಹರಿದುಹೋದ ಶಾಲುವನ್ನು ಬಿಟ್ಟುಕೊಟ್ಟು ತನ್ನ ಸುಂದರವಾದ ಶಾಲುವನ್ನು ಅಂಗೀಕರಿಸಿ” ಎಂದು ಕೇಳಿಕೊಳ್ಳುತ್ತಾನೆ.  ಆಗ ಆಳ್ವಾರರು ಸುಲಲಿತವಾಗಿ ಮತ್ತೊಂದು ಸುಂದರ ಹಾಗು ರತ್ನಗಳಿಂದ ಕೂಡಿರುವ ಶಾಲುವನ್ನು ಸೃಷ್ಠಿಸಿದಾಗ ಕೇಚರನಿಗೆ ಅಸಮಾಧಾನವಾಗುತ್ತದೆ. ಆಗ ಕೇಚರ ತನ್ನ ಹಾರ (ಕಂಠಹಾರ) ತೆಗೆದು ಆಳ್ವಾರರಿಗೆ ಸಮರ್ಪಿಸಿದಾಗ ಆಳ್ವಾರರು ತಮ್ಮ ತುಳಸಿಮಾಲೆಯನ್ನು ತೆಗೆದು ಆತನಿಗೆ ವಜ್ರದ ಹಾರದಂತೆ ತೋರಿಸುತ್ತಾರೆ.  ಆಳ್ವಾರರ ಯೋಗಶಕ್ತಿಯನ್ನು ಅರ್ಥಮಾಡಿಕೊಂಡ ಕೇಚರನು, ಅವರನ್ನು ವೈಭವೀಕರಿಸಿ, ಪ್ರಣಾಮಗಳನ್ನು ಸಲ್ಲಿಸಿ, ಅಲ್ಲಿಂದ ಹೊರಡಲು ಅನುಮತಿ ಪಡೆದನು.

ಆಳ್ವಾರರ ವೈಭವಗಳನ್ನು ಕೇಳಿ, ಕೊಂಕಣಸಿದ್ದ ಎಂಬ ಜಾದೂಗಾರ ಆಳ್ವಾರರನ್ನು ಭೇಟಿಮಾಡಲು ಬಂದು, ತನ್ನ ಪ್ರಣಾಮಗಳನ್ನು ಅರ್ಪಿಸಿ, ಅವರಿಗೆ ಒಂದು ರಸವಿದ್ಯೆ ಕಲ್ಲನ್ನು (ಕಲ್ಲು/ಲೋಹವನ್ನು ಚಿನ್ನವನ್ನಾಗಿ ರೂಪಾಂತರಗೊಳಿಸುವ) ನೀಡಲು ಆಶಿಸಿದ. ಅದನ್ನು ತಿರಸ್ಕರಿಸಿದ ಆಳ್ವಾರರು, ತಮ್ಮ ದಿವ್ಯದೇಹದಿಂದ (ಕಿವಿಯ ಭಾಗದಿಂದ) ಕೊಂಚ ಕೊಳಕನ್ನು ಆ ಜಾದೂಗರನಿಗೆ ಕೊಟ್ಟು ಆ ಕೊಳಕು ಪದಾರ್ಥವೂ ಸಹ ಕಲ್ಲನ್ನು ಚಿನ್ನವನ್ನಾಗಿ ರೂಪಾಂತರಗೊಳಿಸುತ್ತದೆ ಎಂದರು. ಅದನ್ನು ಪರೀಕ್ಷಿಸಿ ಕಾರ್ಯ ಮಾಡುವುದು ಎಂಬುದನ್ನು ತಿಳಿದು ಸಂತೋಷದಿಂದ ಆಳ್ವಾರರಿಗೆ ತನ್ನ ಪ್ರಣಾಮಗಳನ್ನು ಅರ್ಪಿಸಿ ಹೊರಟುಹೋದ.

ಆಳ್ವಾರರು ತಮ್ಮ ಧ್ಯಾನವನ್ನು ಒಂದು ಗುಹೆಯೊಳಗೆ ಕೆಲಕಾಲ ಮುಂದುವರೆಸಿದರು.  ಯವಾಗಲೂ ಎಂಬೆರುಮಾನ್‍ನ ದಿವ್ಯಗುಣಗಳನ್ನು ವೈಭವೀಕರಿಸುತ್ತಾ  ನಿರಂತರವಾಗಿ ಪರ್ಯಟನೆ ಮಾಡುತಿದ್ದ ಮುದಲಳ್ವಾರರು (ಪೊಯ್‍ಗೈಯಾಳ್ವಾರ್, ಭೂದತ್ತಾಳ್ವಾರ್, ಪೇಯಾಳ್ವಾರ್)  ದಿವ್ಯ ತೇಜಸ್ಸು ಹೊರಹೊಮ್ಮುತ್ತಿದ್ದ ಆಳ್ವಾರರು ವಾಸಿಸುತ್ತಿದ್ದ ಆ ಗುಹೆಯ ಬಳಿ ಬಂದರು. ತಿರುಮಳಿಶೈ ಆಳ್ವಾರರ ವೈಭವವನ್ನು ಅರಿತ ಒಡನೆಯೇ, ಅವರ ಯೋಗಕ್ಷೇಮವನ್ನು ವಿಚಾರಿಸಿದರು. ಮುದಲಾಳ್ವಾರರ ವೈಭವವನ್ನು ಅರ್ಥಮಾಡಿಕೊಂಡ ಆಳ್ವಾರರು ಸಹ ಅವರ ಕುಶಲೋಪರಿಯನ್ನು ವಿಚಾರಿಸಿದರು. ಅವರುಗಳು ತಮ್ಮ ಭಗವದನುಭವಗಳನ್ನು ಒಟ್ಟಾಗಿ ಹಂಚಿಕೊಂಡರು. ಅವರೆಲ್ಲರೂ ಒಗ್ಗೂಡಿ ಅಲ್ಲಿಂದ ಹೊರಟು ಪೇಯಾಳ್ವಾರರ ಅವತಾರ ಸ್ಥಳವಾದ ತಿರುಮಯಿಲೈ (ಮಯಿಲಾಪುರ) ತಲುಪಿ, ಕೈರವತೀರ್ಥದ ದಡದ ಬಳಿ ಕೆಲಕಾಲ ಕಳೆದರು. ನಂತರ ಮುದಲಾಳ್ವಾರರು ತಮ್ಮ ದಿವ್ಯಪರ್ಯಟನೆಯನ್ನು ಮುಂದುವರೆಸಿದಾಗ, ಆಳ್ವಾರರು ತಮ್ಮ ಅವತಾರಸ್ಥಳವಾದ ತಿರುಮಳಿಶೈಗೆ ಹಿಂತಿರುಗಿದರು.

ಆವರು ತಿರುಮಣ್‍ಕಾಪ್ಪು ಹುಡುಕಲು ತೊಡಗಿದಾಗ ಅವರಿಗೆ ಸಿಗಲಿಲ್ಲ, ಅವರು ದುಃಖಿತರಾಗಿರುವಾಗ, ಅವರಿಗೆ ಸ್ವಪ್ನದಲ್ಲಿ ತಿರುವೇಂಗಡಮುಡೈಯಾನ್ ಪ್ರತ್ಯಕ್ಷನಾಗಿ ತಿರುಮಣ್ ದೊರೆಯುವ ಸ್ಥಳವನ್ನು ತೋರಿದನು.  ಆಗ ಅವರು ಸಂತೋಷದಿಂದ ಅದನ್ನು ಪುನಃ ಪಡೆದುಕೊಂಡು ದ್ವಾದಶ ಊರ್ಧ್ವಪುಂಡ್ರ (ಶಾಸ್ತ್ರಗಳಲ್ಲಿ ತಿಳಿಸಿರುವಂತೆ ದೇಹದ ವಿವಿಧ ಭಾಗಗಳಲ್ಲಿ 12 ತಿರುಮಣ್‍ಗಳು) ಧರಿಸಿದರು ಮತ್ತು ತಮ್ಮ ಭಗವದನುಭವಗಳನ್ನು ಮುಂದುವರೆಸಿದರು. ಪೊಯ್‍ಗೈಯಾಳ್ವಾರರ ಅವತಾರ ಸ್ಥಳಕ್ಕೆ ಹೋಗಲು ಇಚ್ಛೆಪಟ್ಟು ಪುಣ್ಯಕ್ಷೇತ್ರಗಳಲ್ಲಿ ಅತ್ಯಂತ ವೈಭವಯುಕ್ತವಾದ ಕಾಂಚೀಪುರದ ತಿರುವೆಕ್ಕಾಗೆ ಬಂದರು. ಶ್ರೀದೇವಿ-ಭೂದೇವಿಯರೊಡನೇ ಸೇವೆ ಸ್ವೀಕರಿಸುತ್ತಾ ಆದಿಶೇಷನ ಮೇಲೆ ಸುಂದರವಾಗಿ  ಪವಡಿಸಿರುವ ಎಂಬೆರುಮಾನ್‍ನನ್ನು ಪೂಜಿಸುತ್ತಾ ಅಲ್ಲಿಯೇ  700 ವರ್ಷಗಳ ಕಾಲ ಇದ್ದರು. ಪೊಯ್‍ಗೈಯಾಳ್ವಾರರು ಕಾಣಿಸಿಕೊಂಡ ಕೊಳದ ದಡದ ಮೇಲೇ ವಾಸಿಸುತ್ತಾ, ಪೊಯ್‍ಗೈಯಾಳ್ವಾರರನ್ನು ಧ್ಯಾನಿಸುತ್ತಾ ಸಮಯ ಕಳೆದರು.

.

yathokthakari-swamy

ನಾಚ್ಚಿಯಾರೊಡಗೂಡಿ ಯಥೋಕ್ತಕಾರಿ, ತಿರುವೆಕ್ಕಾ

ಆ ಸಮಯದಲ್ಲಿ ಕಣಿಕಣ್ಣನ್ ಅಲ್ಲಿಗೆ ತಲುಪಿ ಅವರ ಪಾದ ಪದ್ಮಗಳಲ್ಲಿ ಆಶ್ರಯವನ್ನು ಪಡೆದ.  ಒಬ್ಬ ವೃದ್ದ ಮಹಿಳೆ ಪ್ರತಿ ದಿನವೂ ಆಳ್ವಾರರ ಸೇವೆಯನ್ನು ಶ್ರದ್ಧಾಭಕ್ತಿಯಿಂದ ಮಾಡುತ್ತಿದ್ದಳು. ಆಳ್ವಾರರು ಆಕೆಯ ಶ್ರದ್ಧಾಭಕ್ತಿಯನ್ನು ಮೆಚ್ಚಿ, ಏನಾದರೂ ಕೋರಿಕೆಗಳಿದ್ದರೆ ಪೂರ್ತಿ ಮಾಡುತ್ತೇನೆಂದು ಹೇಳಿದರು.  ಆಕೆ ತಾನು ಮತ್ತೆ ಯೌವನ ಮರುಪಡೆಯಬೇಕು ಎಂದಾಗ, ಆಳ್ವಾರರು ಅವಳನ್ನು ಹರಿಸಿದ ಒಡನೆಯೆ ಆಕೆ ಪುನಃ ಸುಂದರ ಯುವತಿಯಾದಳು.   ಆಕೆಯಿಂದ ಆಕರ್ಷಿತನಾದ ಆ ಪ್ರದೇಶದ ರಾಜ ಪಲ್ಲವರಾಯನು, ತನ್ನನ್ನು ಮದುವೆಯಾಗು ಎಂದು ಕೇಳಿದ. ಆಕೆ ಒಪ್ಪಿ, ಈರ್ವರೂ ಮದುವೆಯಾಗಿ ಸಂತೋಷದಿಂದ ಜೊತೆಗೂಡಿದ್ದರು. ಒಂದು ದಿನ, ಪಲ್ಲವರಾಯ ತಾನು ಪ್ರತಿ ದಿನವೂ ವೃದ್ಧನಾಗುತ್ತಿದ್ದರೂ ಸಹ ತನ್ನ ಪತ್ನಿ (ಆಳ್ವಾರರ ಆಶೀರ್ವಾದದಿಂದ) ಸದಾ ಯೌವನದಿಂದ ಇರುವುದನ್ನು ಕಂಡು, ಈ ದಿವ್ಯ ಯೌವನದ ಮರ್ಮವೇನೆಂದು ಕೇಳಿದ. ಆಕೆ ಆಳ್ವಾರರ ಆಶೀರ್ವಾದದ ಬಗ್ಗೆ ತಿಳಸಿ, ಕನಿಕಣ್ಣನ್ ನನ್ನು (ರಾಜನಿಗೆ ಕೈಂಕರ್ಯ ಮಾಡಲು ಪದಾರ್ಥಗಳನ್ನು ತರುತ್ತಿದ್ದ) ವಿನಮ್ರತೆಯಿಂದ  ವಿನಂತಿಸಿಕೊಂಡರೆ, ಆತ ಆಳ್ವಾರರಿಗೆ ಶಿಫಾರಸು ಮಾಡಿ, ರಾಜನಿಗೂ ಅದೇ ದಿವ್ಯ ಯೌವನ ದಯಪಾಲಿಸುವರು ಎಂದು ನಿರ್ದೇಶಿಸಿದಳು. ಕನಿಕಣ್ಣನ್‍ನನ್ನು ಕರೆಸಿಕೊಂಡ ರಾಜನು, ಆಳ್ವಾರರನ್ನು ಪೂಜಿಸಲು ಅರಮನೆಗೆ ಕರೆದುಕೊಂಡುಬರಬೇಕು ಎಂದು ವಿನಂತಿಸಿಕೊಳ್ಳುತ್ತಾನೆ. ಆಳ್ವಾರರು ಎಂಬೆರುಮಾನ್‍ನ ದೇವಾಲಯ ಹೊರತಾಗಿ ಬೇರೆಲ್ಲಿಗೂ ಹೋಗುವುದಿಲ್ಲವೆಂದು ಉತ್ತರಿಸುತ್ತಾನೆ. ರಾಜನು ತನ್ನನ್ನು ವೈಭವೀಕರಿಸಲು ಕೋರಿದಾಗ, ಕನಿಕಣ್ಣನ್ ತಾನು ಶಿಷ್ಟಾಚಾರದಂತೆ (ಹಿರಿಯರ ವರ್ತನೆ ಹಾಗು ಕಾರ್ಯ)  ಶ್ರೀಮನ್ನಾರಾಯಣ ಮತ್ತು ಆತನ ಭಕ್ತರ ವಿನಃ ಬೇರೆ ಯಾರನ್ನೂ ವೈಭವೀಕರಿಸುವುದಿಲ್ಲ ಎಂದು ಹೇಳುತ್ತಾನೆ. ತನ್ನನ್ನು ವೈಭವೀಕರಿಸಲು ನಿರಾಕರಿಸಿದ ಎಂಬ ಕಾರಣದಿಂದ ಕೋಪಗೊಂಡ ರಾಜನು ಕನಿಕಣ್ಣನ್‍ನನ್ನು ತನ್ನ ರಾಜ್ಯದಿಂದ ಹೊರ ಹೋಗುವಂತೆ ಆಜ್ಞೆಮಾಡಿದ. ತಕ್ಷಣ ಅರಮನೆಯಿಂದ ಹೊರ ಬಂದ ಕನಿಕಣ್ಣನ್, ಆಳ್ವಾರರ ಬಳಿಬಂದು ನಡೆದ ಘಟನೆಗಳನ್ನು ವಿವರಿಸಿ ಹೊರಡಲು ಅಪ್ಪಣೆಯನ್ನು ಕೇಳಿದ. ಅಳ್ವಾರರು “ನೀನು ಹೋಗುವುದಾದರೆ ನಾನೂ ಸಹ ಹೋಗುತ್ತೇನೆ.  ನಾನ ಹೋಗುವುದಾದರೆ ಎಂಬೆರುಮಾನ್ ಸಹ ಹೊರಡುತ್ತಾನೆ ಮತ್ತು ಅವನೊಡನೆ ಎಲ್ಲಾ ದೇವತೆಗಳೂ ಇಲ್ಲಿಂದ ಹೊರಟುಹೋಗುತ್ತಾರ” ಎಂದು ಹೇಳುತ್ತಾ “ನಾನು ದೇವಾಲಯಕ್ಕೆ ಹೋಗಿ ಎಂಬೆರುಮಾನ್‍ನನ್ನು ಎಬ್ಬಿಸಿ ನನ್ನೊಡನೆ ಕರೆದು ತರುತ್ತೇನೆ” ಎಂದು ದೇವಾಲಯಕ್ಕೆ ಹೋದರು.  ಆಳ್ವಾರರು ತಿರುವೆಕ್ಕಾ ಎಂಬೆರುಮಾನ್‍ರ ಮುಂದೆ ಹಾಡಲು ತೊಡಗುತ್ತಾರೆ:

ಕಣಿಕಣ್ಣನ್ ಪೋಗಿನ್ರಾನ್ ಕಾಮರು ಪೂಂಗಚ್ಚಿ
ಮಣಿವಣ್ಣಾ! ನೀ ಕಿಡಕ್ಕ ವೇಂಡಾ ತುಣಿವುಡೈಯ
ಶೆನ್ನಾಪ್ಪುಲವನುಂ ಪೋಗಿನ್ರೇನ್ ನೀಯುಂ ಉನ್ರನ್
ಪೈಂನ್ನಾಗಪ್ಪಾಯ್ ಶರುಟ್ಟಿಕ್ಕೊಳ್

ಓ ತಿರುವೆಕ್ಕಾದಲ್ಲಿ ವಾಸಿಸುವ ಸುಂದರ ರೂಪ ಉಳ್ಳವನೇ! ಕನಿಕಣ್ಣನ್ ಹೋಗುತ್ತಿದ್ದಾನೆ. ನಾನು (ಸ್ಥಿರವಾಗಿ ಸ್ಥಾಪಿತನಾದ ಕವಿ) ಸಹ ಹೋಗುತ್ತಿದ್ದೇನೆ. ನೀನೂ ಸಹ ನಿನ್ನ ಆದಿಶೇಷನನ್ನು ಸುತ್ತಿಕೊಂಡು ನಮ್ಮೊಡನೆ ಹೊರಡು.

ಎಂಬೆರುಮಾನ್ ಆಳ್ವಾರರ ಮಾತು ಕೇಳಿ ತಕ್ಷಣವೇ ಆಳ್ವಾರ್ ಹಾಗು ಕನಿಕಣ್ಣನ್ ರನ್ನು ಹಿಂಬಾಲಿಸುತ್ತಾನೆ. ಆದುದರಿಂದಲೇ ಅವನಿಗೆ ಯಥೋಕ್ತಕಾರಿ (ಯಥಾ – ಯಾವರೀತಿ, ಉಕ್ತ – ಹೇಳಿದಂತೆ, ಕಾರಿ- ಮಾಡಿದ) ಎಂಬ ಹೆಸರು ಬಂದಿತು. ಎಲ್ಲಾ ದೇವತೆಗಳೂ ಎಂಬೆರುಮಾನ್‍ರ ಹಿಂಬಾಲಕರಾದುದರಿಂದ ಕಾಂಚೀಪುರವು ಎಲ್ಲ ಮಂಗಳಕರಗಳ ಅನುಪಸ್ಥಿತಿಯಿಂದ ನಿರ್ಜೀವವಾಯಿತು. ಆ ಕಾರಣದಿಂದ ಸೂರ್ಯನೂ ಉದಯಿಸಲಿಲ್ಲ. ಸಮಸ್ಯೆಯನ್ನು ಅರಿತುಕೊಂಡ ರಾಜ ಹಾಗು ಅವನ ಮಂತ್ರಿಗಳು, ಪ್ರಯಾಣ ಮಾಡುತ್ತಿದ್ದ ಕೂಟದ ಹಿಂದೆ ಹೋಗಿ, ಕನಿಕಣ್ಣನ್‍ನ ಅಡಿದಾವರೆಗಳಲ್ಲಿ ಬಿದ್ದು ತಮ್ಮನ್ನು ಕ್ಷಮಿಸಬೇಕೆಂದು ಪ್ರಾರ್ಥಿಸಿದರು. ಕನಿಕಣ್ಣನ್ ಆಳ್ವಾರರನ್ನು ಹಿಂತಿರುಗಬೇಕೆಂದು ಕೇಳಿಕೊಂಡಾಗ, ಆಳ್ವಾರರು ಎಂಬೆರುಮಾನ್‍ನನ್ನು ಯಥಾಸ್ಥಾನಕ್ಕೆ ಹಿಂತಿರುಗಬೇಕೆಂದು ಪ್ರಾರ್ಥಿಸುತ್ತಾ:

ಕನಿಕಣ್ಣನ್ ಪೋಕ್ಕೊಳಿಂದಾನ್
ಕಾಮರು ಪೂಂಗಚ್ಚಿ ಮಣಿವಣ್ಣಾ ನೀ ಕಿಡಕ್ಕ ವೇಂಡುಂ
ತುಣಿವುಡೈಯ ಶೆನ್ನಾಪ್ಪುಲವನುಂ ಪೋಕ್ಕೊಳಿಂದಾನ್
ನೀಯುಂ ಉನ್ರನ್ ಪೈನ್ನಾಗಪ್ಪಾಯ್ ಪಡುತ್ತುಕ್ಕೊಳ್

ಓ ತಿರುವೆಕ್ಕಾದಲ್ಲಿ ವಾಸಿಸುವ ಸುಂದರ ರೂಪ ಉಳ್ಳವನೇ! ಕನಿಕಣ್ಣನ್ ಹಿಂತಿರುಗುತ್ತಿದ್ದಾನೆ. ನಾನು (ಸ್ಥಿರವಾಗಿ ಸ್ಥಾಪಿತನಾದ ಕವಿ) ಸಹ ಹಿಂತಿರುಗುತ್ತಿದ್ದೇನೆ. ನೀನೂ ಸಹ ನಿನ್ನ ಆದಿಶೇಷನನ್ನು ತೆರೆದು ಮೊದಲಿನಂತೆ ವಿರಮಿಸು”.

ಹೀಗಿತ್ತು ಎಂಬೆರುಮಾನ್‍ನ ಸೌಲಭ್ಯ – ನೀರ್ಮೈ (ಸರಳತೆ) ಮತ್ತು ಆದುದರಿಂದಲೇ ಆಳ್ವಾರರು ಎಂಬೆರುಮಾನ್‍ನ ಈ ಗುಣದಲ್ಲಿ ಮುಳುಗಿ ಹಾಡುತ್ತಾ – ವೆಃಕ್ಕಣೈ ಕ್ಕಿಡಂದನ್ ಎನ್ನ ನೀರ್ಮೈ – ನನ್ನ ಬೇಡಿಕೆಯ ಮೇರೆಗೆ ತಿರುವೆಕ್ಕಾದಲ್ಲಿ ಪವಡಿಸಿದ ಎಂಬೆರುಮಾನ್ ಎಂತಹ ಕರುಣಾಮಯಿ ಎಂದು ಹಾಡಿದ್ದಾರೆ.

ತದನಂತರ, ಆಳ್ವಾರರು ಆರಾವಮುದನ್ (ಎಂಬೆರುಮಾನ್) ಗೆ ಮಂಗಳಾಶಾಸನ ಮಾಡಲು ಬೃಹತ್ ಇಚ್ಛೆಯಿಂದ ತಿರುಕ್ಕುಡಂದೈ (ಕುಂಭಕೋಣಂ) ಗೆ ಹೋಗಲು ಪ್ರಯಾಣ ಆರಂಭಿಸಿದರು. ತಿರುಕ್ಕುಡಂದೈ ಮಾಹಾತ್ಮ್ಯದಲ್ಲಿ ಹೇಳಿರುವಂತೆ “ಕುಂಭಕೋಣದಲ್ಲಿ ಒಂದು ಕ್ಷಣ ಇದ್ದವರಿಗೆ ವೈಕುಂಠವೇ ದೊರಕುವಾಗ, ಈ ಪ್ರಪಂಚದ ಸಂಪತ್ತಿನ ಬಗ್ಗೆ ಹೇಳುವುದಕ್ಕೇನಿರುವುದು” – ಈ ರೀತಿಯದು ಈ ದಿವ್ಯದೇಶದ ಮಹಿಮೆ. ಆಳ್ವಾರರು ಮಾರ್ಗಮಧ್ಯದಲ್ಲಿ ಪೆರುಂಪುಲಿಯೂರ್ ಎಂಬ ಗ್ರಾಮದಲ್ಲಿನ ಒಂದು ಮನೆಯ ಜಗುಲಿಯ ಮೇಲೆ ವಿಶ್ರಮಿಸಿಕೊಳ್ಳುತ್ತಿದ್ದರು. ಆ ಸಮಯದಲ್ಲಿ ವೇದಾಧ್ಯಯನದಲ್ಲಿ ನಿರತರಾಗಿದ್ದ ಕೆಲ ಬ್ರಾಹ್ಮಣರು ಆಳ್ವಾರರನ್ನು ಕಂಡು, ಆಳ್ವಾರರ ಸುಸ್ತಾದ ರೂಪವನ್ನು ಅಪಾರ್ಥಮಾಡಿಕೊಂಡು ತಮ್ಮ ವಾಚನವನ್ನು ನಿಲ್ಲಿಸಿಬಿಟ್ಟರು. ಅದನ್ನು ಅರಿತುಕೊಂಡ ಆಳ್ವಾರರು, ಅತಿ ವಿನಮ್ರತೆಯಿಂದ ಆ ಸ್ಥಳದಿಂದ ಹೊರಡಲನುವಾದರು. ಆ ಬ್ರಾಹ್ಮಣರು ತಮ್ಮ ವಾಚನವನ್ನು ಮುಂದುವರೆಸಲು ಇಚ್ಛಿಸಿದರೂ ಸಹ, ಎಲ್ಲಿಯವರೆವಿಗೂ ನಿಲ್ಲಿಸಿದ್ದರೆಂದು ಮರೆತುಬಿಟ್ಟಿದ್ದರು. ಒಡನೆಯೇ ಆಳ್ವಾರರು ಒಂದು ಕಪ್ಪಗಿನ ಅಕ್ಕಿಯ ಕಾಳನ್ನು ತಮ್ಮ ಉಗುರಿನಿಂದ ವಿಭಿನ್ನಗೊಳಿಸಿ ಯಜುರ್ ಕಾಂಡದ “ಕೃಷ್ಣಂ ವ್ರೀಹಿಣಂ ನಖನಿರ್ಭಿನ್ನಂ” ಎಂಬುವುದನ್ನು ತೋರಿಸಿದರು. ತಮ್ಮ ತಪ್ಪನ್ನು ಅರಿತುಕೊಂಡ ಆ ಬ್ರಾಹ್ಮಣರು ಆಳ್ವಾರರಿಗೆ ವಂದಿಸಿ ತಮ್ಮ ತಪ್ಪಾದ ನಡವಳಿಕೆಯನ್ನು ಮನ್ನಿಸಬೇಕೆಂದು ಬೇಡಿಕೊಂಡರು.

ಒಮ್ಮೆ ಆಳ್ವಾರರು ತಮ್ಮ ತಿರುವಾರಾಧನೆಗೆ ಪರಕರಗಳನ್ನು ಹುಡುಕುತ್ತಿದ್ದಾಗ, ಆ ಗ್ರಾಮದ ದೇವಾಲಯದ ಎಂಬೆರುಮಾನ್ ಆಳ್ವಾರರು ಓಡಾಡುವ ಕಡೆಗೆ ಮುಖಮಾಡಿ ನಿರಂತರವಾಗಿ ತಿರುಗುತ್ತಿದ್ದನು. ಇಂತಹ ಆಶ್ಚರ್ಯಕರ ದೃಶ್ಯವನ್ನು ಅರ್ಚಕರು ಕೆಲ ಬ್ರಾಹ್ಮಣರಿಗೆ ತೋರಿಸಿದರು. ಆ ಬ್ರಾಹ್ಮಣರು ಪ್ರತಿಯಾಗಿ ಆ ಗ್ರಾಮದಲ್ಲಿ ಒಂದು ಯಾಗವನ್ನು ಮಾಡುತ್ತಿದ್ದ ಪೆರುಂಪುಲಿಯೂರ್‍ಅಡಿಗಳ್‍ರವರಿಗೆ ಈ ಸನ್ನಿವೇಶವನ್ನು ಹಾಗು ಆಳ್ವಾರರ ಹಿರಿಮೆಗಳನ್ನು ತಿಳಿಸುತ್ತಾರೆ. ಪೆರುಂಪುಲಿಯೂರ್‍ಅಡಿಗಳ್‍ ಒಡನೆಯೇ ಯಾಗಶಾಲೆಯಿಂದ (ಯಾಗ ಭೂಮಿ) ಹೊರ ಬಂದು, ಆಳ್ವಾರರನ್ನು ತಲುಪಿ, ಅವರ ಅಪ್ರಾಕೃತ (ದೈವೀಕ ಆತ್ಮ) ತಿರುಮೇನಿಯನ್ನು (ದೇಹ) ಕಾಣುತ್ತಲೇ ಆಳ್ವಾರರ ಚರಣಕಮಲಗಳಲ್ಲಿ ಪ್ರಣಾಮಗಳ್ನ್ನು ಅರ್ಪಿಸಿ ತಮ್ಮ ಯಾಗಶಾಲೆಗೆ ಭೇಟಿ ನೀಡುವಂತೆ ಭಿನ್ನವಿಸಿಕೊಳ್ಳುತ್ತಾರೆ.  ಆಳ್ವಾರ ಆಗಮನದ ನಂತರ ಪೆರುಂಪುಲಿಯೂರ್‍ಅಡಿಗಳ್‍ ಆಳ್ವಾರರಿಗೆ ಯಜ್ಞದಲ್ಲಿನ ಅಗ್ರಪೂಜೆ (ಅತ್ಯಂತ ಹೆಚ್ಚಿನ ಗೌರವ) ಮಾಡುತ್ತಾರೆ. ಧರ್ಮಪುತ್ರ ತನ್ನ ರಾಜಸೂಯ ಯಾಗದ ಅಗ್ರಪೂಜೆಯನ್ನು ಕೃಷ್ಣನಿಗೆ ಕೊಡುವುದನ್ನು ವಿರೋಧಿಸಿದ  ಶಿಶುಪಾಲ ಮತ್ತವನ ಸ್ನೇಹಿತರಂತೆ ಆಳ್ವಾರರಿಗೆ ಸಲ್ಲಿಸಿದ ಅಗ್ರಪೂಜೆಯನ್ನು ಕೆಲ ಬ್ರಾಹ್ಮಣರು ವಿರೋಧಿಸುತ್ತಾರೆ.  ಪೆರುಂಪುಲಿಯೂರ್‍ಅಡಿಗಳ್‍ ದುಃಖಿತರಾಗಿ ಆ ಬ್ರಾಹ್ಮಣರ ಮಾತುಗಳು ಕೇಳಲಾಗುತ್ತಿಲ್ಲವೆಂದು ಆಳ್ವಾರರಿಗೆ ಹೇಳುತ್ತಾರೆ. ತಮ್ಮ ಮಹಾನ್ ಸ್ಥಾನವನ್ನು ಬಹಿರಂಗಪಡಿಸಲು ನಿಶ್ಚಯಿಸಿದ ಆಳ್ವಾರರು ತಮ್ಮ ಅಂತರ್ಯಾಮಿ ಎಂಬೆರುಮಾನ್‍ರ ಮೇಲೆ ಪಾಶುರವನ್ನು ಹಾಡಿ, ತಮ್ಮ ಹೃದಯದಲ್ಲಿ ಪ್ರತ್ಯಕ್ಷರಾಗಿ ಎಲರಿಗೂ ದರ್ಶನ ನೀಡುವಂತೆ ಪ್ರಾರ್ಥಿಸುತ್ತಾರೆ.  ಒಡನೆಯೇ ಎಂಬೆರುಮಾನ್ ತನ್ನ ದಿವ್ಯ ಮಹಿಷಿಯರು, ಆದಿಶೇಷ, ಗರುಡಾಳ್ವಾರ್, ಇನ್ನಿತರರಂದಿಗೆ ಆಳ್ವಾರರ ಹೃದಯದಲ್ಲಿ ತಮ್ಮ ಉಪಸ್ಥಿತಿಯನ್ನು ಬಹಿರಂಗಪಡಿಸತ್ತಾರೆ. ಆಳ್ವಾರರನ್ನು ವಿರೋಧಿಸಿದ ಎಲ್ಲಾ ಬ್ರಾಹ್ಮಣರೂ, ಅವರ ಹಿರಿಮೆಯನ್ನು ಕಂಡುಕೊಂಡು, ಅವರ ಪಾದಗಳಿಗೆರಗಿ ಕ್ಷಮೆ ಬೇಡುತ್ತಾರೆ. ಅವರುಗಳು ನಂತರ ಬ್ರಹ್ಮರಥ (ಆಳ್ವಾರರನ್ನು ಪಲ್ಲಕಿಯ ಮೇಲೆ ಸಾಗಿಸಿ) ನಡೆಸಿ ಆಳ್ವಾರರ ಕೃಪಾಕಟಾಕ್ಷಕ್ಕೆ ಪಾತ್ರರಾಗುತ್ತಾರೆ. ಆಳ್ವಾರರು ಅವರುಗಳಿಗೆ ಶಾಸ್ತ್ರಗಳ ಸತ್ವಗಳನ್ನು ವಿಷದವಾಗಿ ವಿವರಿಸುತ್ತಾರೆ. ನಂತರ ಆಳ್ವಾರರು ತಿರುಕ್ಕುಡಂದೈನ ಆರಾವಮುದನ್ ಎಂಬೆರುಮಾನ್ ದರ್ಶನಕ್ಕೆ ಹೊರಡುತ್ತಾರೆ.

ತಿರುಕ್ಕುಡಂದೈ ತಲುಪಿದ ನಂತರ, ಆಳ್ವಾರರು ತಮ್ಮ ಎಲ್ಲಾ ಗ್ರಂಥಗಳನ್ನು (ಓಲೆ ಗರಿಗಳು) ಕಾವೇರಿ ನದಿಯಲ್ಲಿ ಎಸೆದುಬಿಟ್ಟರು.  ಆದರೆ ಎಂಬೆರುಮಾನ್‍ರ ತಿರುವುಳ್ಳಂದಿಂದ ನಾನ್ಮುಗನ್ ತಿರುವಂದಾದಿ ಮತ್ತು ತಿರುಚ್ಛಂದ ವಿರುತ್ತಂ ಕೃತಿಗಳು ಮಾತ್ರವೇ ಅಲೆಗಳಿಂದ ಮೇಲೆ ತೀಲಿ ಆಳ್ವಾರರ ಬಳಿ ತಿರುಗಿಬಂದವು. ಆಳ್ವಾರರು ಅವುಗಳನ್ನು ಶೇಖರಿಸಿಕೊಂಡು ಆರಾವಮುದನ್ ಸನ್ನಿಧಿಗೆ ಹೋಗಿ, ಎಂಬೆರುಮಾನ್‍ನ ಸುಂದರವಾದ ತಿರುವಡಿ (ಪಾದಗಳು) ಇಂದ ತಿರುಮುಡಿ (ತಲೆ) ಯ ವರೆವಿಗೂ ಪೋಜಿಸಿದರು. ಅತ್ಯಂತ ಪ್ರೇಮದಿಂದ ಎಂಬೆರುಮಾನ್‍ನಿಗೆ ನಿರ್ದೇಶಿಸುತ್ತಾ “ಕಾವಿರಿಕ್ಕರೈ ಕ್ಕುಡಂದೈಯುಳ್ ಕಿಡಂದವಾರ್ ಎಳುಂದಿರುಂದು ಪೇಶು”  ಅಂದರೆ “ಓ ಕಾವೇರಿ ದಡದಲ್ಲಿನ ತಿರುಕ್ಕುಡಂದೈಯಲ್ಲಿ ಮಲಗಿಕೊಂಡಿರುವವನೇ, ಮೇಲೆ ಎದ್ದು ನನ್ನ ಜೊತೆ ಮಾತನಾಡು” ಎಂದು ಹಾಡಿದರು. ಆಳ್ವಾರರ ಮಾತುಗಳನ್ನು ಕೇಳಿ ಅಕ್ಷರಶಃ ಎದ್ದು ನಿಲ್ಲಲು ಪ್ರಯತ್ನಿಸಿದಾಗ ಆಳ್ವಾರರು ಎಂಬೆರುಮಾನ್‍ನ ಕಾರ್ಯವನ್ನು ಕಂಡು ಆಶ್ಚರ್ಯಪಟ್ಟು ಎಂಬೆರುಮಾನ್‍ರಿಗೆ ಮಂಗಳಾಶಾಸನ ಮಾಡುತ್ತಾ “ವಾಳಿ ಕೇಶನೇ” (வாழி கேசனே) ಅಂದರೆ “ಓ ಸುಂದರವಾದ ಕೇಶವುಳ್ಳವನೇ! ಧೀರ್ಘಕಾಲ ಬಾಳು” ಎಂದು ಆಶಿಸಿದರು. ಆ ದಿವ್ಯಮಂಗಳ ವಿಗ್ರಹವನ್ನು ಧ್ಯಾನಿಸುತ್ತಾ ಆಳ್ವಾರರುಮ್ ಹಾಲನ್ನು ಹೊರತುಪಡಿಸಿ ಬೇರೆ ಯಾವುದೇ ಆಹಾರವನ್ನು ಸ್ವೀಕರಿಸದೆ 2300 ವರ್ಷಗಳ ಕಾಲ ತಿರುಕ್ಕುಡಂದೈನಲ್ಲಿಯೇ ಕಾಲ ಕಳೆದರು. ಈರೀತಿ ಅವರು 4700 ವರ್ಷಗಳ ಕಾಲ ಈ ಭೂಲೋಕದಲ್ಲಿ ಇದ್ದು, ಈ ಸಂಸಾರದಲ್ಲಿರುವ ಎಲ್ಲರ ಉನ್ನತಿಗಾಗಿ ತಮ್ಮ ದೈವೀಕ ಅನುಗ್ರಹದಿಂದ ಶಾಸ್ತ್ರಗಳಲ್ಲಿರುವ ಸತ್ವಗಳಾನ್ನು ತಮ್ಮ ಪ್ರಬಂಧಗಳ ಮೂಲಕ ಕೊಟ್ಟಿದ್ದಾರೆ.

aarAvamuthan

ಕೋಮಲವಲ್ಲಿ ತಾಯರ್ ಸಮೇತ ಆರಾವಮುದನ್, ತಿರುಕ್ಕುಡಂದೈ

ಇವರು ತಿರುಮಳಿಶೈ ಪಿರಾನ್ ಎಂದು ಖ್ಯಾತಿ ಹೊಂದಿದ್ದು ( ಪಿರಾನ್ ಎಂದರೆ ದೊಡ್ಡ ಅನುಗ್ರಹ ಮಾಡುವವರು ಎಂದು ಮತ್ತು ಈ ಪದ ಸಾಮಾನ್ಯವಾಗಿ ಎಂಬೆರುಮಾನ್ ರನ್ನು ಕೊಂಡಾಡಲು ಉಪಯೋಗಿಸಲ್ಪಡುತ್ತದೆ)  – ಎಂಬೆರುಮಾನ್ ನ ಪರತ್ವವನ್ನು ಸ್ಥಾಪಿಸಿ ಪರಮ ಕೃಪೆ ತೋರಿದ್ದರಿ0ದ  – ಆಳ್ವಾರ್ ರವರು ಪಿರಾನ್ ಎಂದು ಕರೆಯಲ್ಪಟ್ಟರು. ಇದಕ್ಕೆ ಬದಲಾಗಿ, ತಿರುಕ್ಕುಡಂದೈ ಆರಾವಮುದನ್ ಎಂಬೆರುಮಾನ್ ಆಳ್ವಾರ್ ಎಂಬ ಹೆಸರು ಪಡೆದ( ಆಳ್ವಾರ್ ಎಂದರೆ ಎಂಬೆರುಮಾನ್ ರ ನಾಮ, ರೂಪ, ಗುಣಗಳಲ್ಲಿ ಮುಳುಗಿದವರು ಎಂಬ ಅರ್ಥವಿದ್ದು ಸಾಮಾನ್ಯವಾಗಿ ಈ ಪದ ಎಂಬೆರುಮಾನ್ ರ ಬಹು ದೊಡ್ಡ ಭಕ್ತರುಗಳಿಗೆ ಉಪಯೋಗಿಸಲ್ಪಡುತ್ತದೆ )– ಯಾಕೆಂದರೆ ತಿರುಮಳಿಶೈ ಆಳ್ವಾರ್ ರ ನಾಮ, ರೂಪ, ಗುಣಗಳಲ್ಲಿ ತಲ್ಲೀನರಾದುದರಿ0ದ ಆರಾವಮುದನ್ ಎಂಬೆರುಮಾನ್, ಆರಾವಮುದಾಳ್ವಾರ್ ಎಂಬ ಹೆಸರು ಪಡೆದ.

ಎಂಬೆರುಮಾನ್ ಹಾಗು ಅವನ ಅಡಿಯಾರ್ ಗಳ ಅಭಿಮುಖವಾಗಿ ನಮಗೂ ಇಂತಹುದೇ ಬಾಂಧವ್ಯ ಬೆಳೆಯಲೆಂದು ನಾವೆಲ್ಲರೂ ಆಳ್ವಾರರ ದಿವ್ಯ ಕಾರುಣ್ಯವನ್ನು ಪ್ರಾರ್ಥಿಸೋಣ.

ಇವರ ತನಿಯನ್

ಶಕ್ತಿ ಪಂಚಮಯ ವಿಗ್ರಹಾತ್ಮನೇ ಸೂಕ್ತಿಕಾರಜತ ಚಿತ್ತ ಹಾರಿಣೇ
ಮುಕ್ತಿದಾಯಕ ಮುರಾರಿ ಪಾದಯೋರ್ ಭಕ್ತಿಸಾರ ಮುನಯೇ ನಮೋ ನಮ:

ಇವರುಗಳ ಅರ್ಚಾವತಾರ ಅನುಭವಗಳನ್ನು ಈಗಾಗಲೇ ಇಲ್ಲಿ ಚರ್ಚಿಸಲಾಗಿದೆ – http://ponnadi.blogspot.in/2012/10/archavathara-anubhavam-thirumazhisai-azhwar.html.

ಅಡಿಯೇನ್ ತಿರುನಾರಣನ್ ರಾಮಾನುಜ ದಾಸನ್

ಮೂಲ: https://guruparamparai.wordpress.com/2013/01/16/thirumazhisai-azhwar/

ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಧರ್ಮಗ್ರಂಥಗಳು) – http://granthams.koyil.org

ಪ್ರಮಾತಾ (ಭೋಧಕರು) – http://acharyas.koyil.org

ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org

ತಿರುಮಂಗೈ ಆಳ್ವಾರ್

ಶ್ರೀ:
ಶ್ರೀಮತೇ ಶಠಕೋಪಾಯ ನಮ:
ಶ್ರೀಮತೇ ರಾಮಾನುಜಾಯ ನಮ:
ಶ್ರೀಮದ್ ವರವರಮುನಯೇ ನಮ:
ಶ್ರೀ ವಾನಾಚಲ ಮಹಾಮುನಯೇ ನಮ:

ತಿರುನಕ್ಷತ್ರಮ್: ಕಾರ್ತಿಗೈ, ಕಾರ್ತಿಗೈ

ಅವತಾರ ಸ್ಥಳಂ: ತಿರುಕ್ಕುರೈಯಲೂರ್

ಆಚಾರ್ಯನ್: ವಿಶ್ವಕ್ಸೇನರ್, ತಿರುನರೈಯೂರ್ ನಂಬಿ, ತಿರುಕ್ಕಣ್ಣಪುರಮ್ ಸೌರಿ ಪೆರುಮಾಳ್

ಶಿಷ್ಯರು: ಅವರ ಭಾವ ಇಳಯಾಳ್ವಾರ್, ಪರಕಾಲ ಶಿಷ್ಯರ್, ನೀರ್ಮೇಲ್ ನಡಪ್ಪಾನ್, ತಾಳೂತುವಾನ್, ತೋರಾ ವಳಕ್ಕನ್, ನಿಳಲಿಲ್ ಮರೈವಾನ್, ಉಯರತ್ತೊನ್ಗುವಾನ್.

ಕೃತಿಗಳು: ಪೆರಿಯ ತಿರುಮೊಳಿ, ತಿರುಕ್ಕುರುಂತಾಣ್ಡಗಮ್, ತಿರುವೆಳುಕ್ಕೂಟ್ರಿರುಕ್ಕೈ, ಸಿರಿಯ ತಿರುಮಡಲ್, ಪೆರಿಯ ತಿರುಮಡಲ್, ತಿರುನೆಡುಂತಾಣ್ಡಗಮ್

ಪರಮಪದಕ್ಕೆ ಸೇರಿದ ಸ್ಥಳ: ತಿರುಕ್ಕುರುಂಗುಡಿ

ಪೆರಿಯವಾಚಾನ್ ಪಿಳ್ಳೈ ಅವರ ಪೆರಿಯ ತಿರುಮೊಳಿಯ ಪ್ರಸ್ತಾವನೆಯು ಶಾಸ್ತ್ರಗಳ ಸಾರವನ್ನು ತೆರೆದಿಟ್ಟಿದಾರೆ, ಅದೆಂದರೆ ಎಂಪೆರುಮಾನನು ತನ್ನ ನಿಷ್ಕಾರಣ ಕಾರುಣ್ಯದಿಂದಾಗಿ ತಿರುಮಂಗೈ ಆಳ್ವಾರರನ್ನು ಸುಧಾರಿಸುತ್ತಾನೆ ಮತ್ತು ಅವರ ಮೂಲಕ ಅನೇಕ ಜೀವಾತ್ಮರನ್ನು ಉದ್ಧರಿಸುತ್ತಾನೆ. ನಾವು ಅದನ್ನು ಈಗ ನೋಡೋಣ.

ತಿರುಮಂಗೈ ಆಳ್ವಾರರು ತಮ್ಮ ಆತ್ಮವನ್ನು (ತಮ್ಮನ್ನು) ಸುಡು ಬಿಸಿಲಿನಲ್ಲಿಟ್ಟಿದ್ದರು ಮತ್ತು ಶರೀರವನ್ನು ತಂಪಾದ ನೆರಳಿನಲ್ಲಿಟ್ಟಿದ್ದರು. ಆತ್ಮವನ್ನು ಸುಡು ಬಿಸಿಲಿನಲ್ಲಿಡುವುದೆಂದರೆ ಭಗವದ್ವಿಷಯದಲ್ಲಿ (ಆಧ್ಯಾತ್ಮಿಕ ವಿಷಯದಲ್ಲಿ) ತೊಡಗದಿರುವುದು, ಮತ್ತು ಶರೀರವನ್ನು ತಂಪಾದ ನೆರಳಿನಲ್ಲಿಡುವುದೆಂದರೆ ಅನಾದಿಕಾಲದಿಂದ ಪ್ರಾಪಂಚಿಕ ಆಕಾಂಕ್ಷೆಗಳಿಗೆ ಅಂಟಿಕೊಂಡಿರುವುದು ಮತ್ತು ಅದನ್ನೇ ಜೀವನದ ಧ್ಯೇಯವನ್ನಾಗಿಟ್ಟು ಕೊಂಡಿರುವುದು. ನಿಜವಾದ ನೆರಳೆಂದರೆ ಭಗವದ್ವಿಷಯ ಮಾತ್ರ ಈ ಹೇಳಿಕೆಯಂತೆ “ವಾಸುದೇವ : ತರುಚ್ಛಾಯಾ” ಅರ್ಥಾತ್ “ವಾಸುದೇವನು (ಕೃಷ್ಣನು) ನಿಜವಾದ ನೆರಳು ಕೊಡುವ ವೃಕ್ಷ”. ಅವನು ಮಾತ್ರವೇ ಎಲ್ಲೆಡೆಯೂ ಮತ್ತು ಎಲ್ಲ ಕಾಲವೂ ನೆರಳು ಕೊಡುವ ಮೂಲ/ಆಹ್ಲಾದಕರ ವೃಕ್ಷ. ಈ ನೆರಳು ಯಾವ ತಾಪವನ್ನೂ(ಯಾತನೆಯನ್ನೂ) ನಾಶ ಮಾಡಬಲ್ಲುದು ಮತ್ತು ಅದು ಅತಿ ಬಿಸಿಯಾಗಲಿ ಅಥವಾ ಅತಿ ತಣ್ಣಗಾಗಲಿ ಇಲ್ಲ. ತಿರುಮಂಗೈ ಆಳ್ವಾರರು ಕಣ್ಣುಗಳಿಗೆ ರಮ್ಯವಾಗಿರುವ ವಿಷಯಾಂತರಗಳಿಗೆ (ಪ್ರಾಪಂಚಿಕ ಆಕಾಂಕ್ಷೆಗಳಿಗೆ) ಅಂಟಿಕೊಡಿದ್ದರಿಂದ, ಎಂಬೆರುಮಾನನು ಅವರ ಲಕ್ಷ್ಯವನ್ನು ವಿಷಯಾಂತರಗಳಿಂದ ವಿಮುಖಗೊಳಿಸಿ ಅನೇಕ ದಿವ್ಯದೇಶಗಳು ಮತ್ತು ನೇತ್ರಗಳಿಗೆ ಆಹ್ಲಾದಕರವಾಗಿರುವ ಅರ್ಚಾವತಾರ ಎಂಬೆರುಮಾನರ ಕಡೆಗೆ ತಿರುಗಿಸುತ್ತಾನೆ ಮತ್ತು ಅವರ ಮನಸ್ಸು ಸಂಪೂರ್ಣವಾಗಿ ಅರ್ಚಾವತಾರ ಎಂಬೆರುಮಾನರಲ್ಲಿ ನೆಟ್ಟಿರುವಂತೆ ಮಾಡುತ್ತಾನೆ ಮತ್ತು ಎಂಬೆರುಮಾನನನ್ನು ನೋಡದೆ ಒಂದು ಕ್ಷಣವೂ ಉಳಿಯಲಾಗದಂತಹ ಗಾಢ ಅನುಭವವನ್ನು ಆಳ್ವಾರರಿಗೆ ನೀಡುತ್ತಾನೆ. ಅದಲ್ಲದೆ ಎಂಬೆರುಮಾನನು ಅವರನ್ನು ಈ ಸಂಸಾರದಲ್ಲಿ ಇರುವಂತೆಯೇ ನಿತ್ಯರು/ಮುಕ್ತರುಗಳ ಸ್ತರದಲ್ಲಿ ಇರುವಂತೆ ಪರಿವರ್ತಿಸುತ್ತಾನೆ ಮತ್ತು ಅವರಲ್ಲಿ ಪರಮಪದಕ್ಕೆ ಸೇರುವ ಅಪೇಕ್ಷೆಯನ್ನು ವೃದ್ಧಿಪಡಿಸುತ್ತಾನೆ ಮತ್ತು ಅಂತಿಮವಾಗಿ ಪರಮಪದ ಪ್ರಾಪ್ತಿಯನ್ನೂ ಅವರಿಗೆ ಕರುಣಿಸುತ್ತಾನೆ.

ಎಂಬೆರುಮಾನನು ಇವುಗಳನ್ನು ಮಾತ್ರ ನೋಡುತ್ತಾನೆಂದು ಆಳ್ವಾರರು ಅರಿತುಕೊಳ್ಳುತ್ತಾರೆ – ಆಳ್ವಾರರ ಅದ್ವೇಷವನ್ನು (ಅದೆಂದರೆ ಅನಾದಿಕಾಲದಿಂದಲೂ ಭಗವಾನನು ಜೀವಾತ್ಮನಿಗೆ ಸಹಾಯ ಮಾಡಲು ಪ್ರಯತ್ನಿಸುತ್ತಿದ್ದಾನೆ ಮತ್ತು ಜೀವಾತ್ಮನು ಈ ಸಹಾಯವನ್ನು ತಿರಸ್ಕರಿಸುತ್ತಿದ್ದಾನೆ, ಜೀವಾತ್ಮನು ತಿರಸ್ಕರಿಸುವುದನ್ನು ನಿಲ್ಲಿಸಿದಾಕ್ಷಣ, ಎಂಬೆರುಮಾನನಿಗೆ ಅದೇ ಸಾಕು ಜೀವಾತ್ಮನನ್ನು ಉದ್ಧರಿಸಲು – ಈ ಅದ್ವೇಷವನ್ನು ಅಧಿಕಾರಿ ವಿಶೇಷಣವೆಂದೂ ವಿವರಿಸಲಾಗಿದೆ ಅರ್ಥಾತ್ ಜೀವಾತ್ಮನ ಒಂದು ಸ್ವಾಭಾವಿಕ ಗುಣಲಕ್ಷಣ). ಮತ್ತು ಆಳ್ವಾರರನ್ನು ಸುಧಾರಿಸಲು ಪ್ರಾಪಂಚಿಕ ಆಕಾಂಕ್ಷೆಗಳ ಇತಿಮಿತಿಗಳನ್ನು, ಪ್ರಾಪಂಚಿಕ ಆಕಾಂಕ್ಷೆಗಳಲ್ಲಿ ಆಳ್ವಾರರ ಅಭಿರುಚಿಯನ್ನು ಆಧಾರವಾಗಿಟ್ಟು (ಮತ್ತು ಆ ಅಭಿರುಚಿಯನ್ನು ಎಂಬೆರುಮಾನನ ಕಡೆಗೆ ವಿಮುಖಗೊಳಿಸಿ) ಮತ್ತು ಆಳ್ವಾರರ ಅನಾದಿಕಾಲದ ಪಾಪಗಳನ್ನು ಎಂಬೆರುಮಾನನ ಕಾರುಣ್ಯದ ಲಕ್ಷ್ಯವಾಗಿಟ್ಟು, ಮತ್ತು ಮೊದಲು ತಿರುಮಂತ್ರವನ್ನು ಮತ್ತು ನಂತರ ಎಂಬೆರುಮಾನನ ಸ್ವರೂಪ, ರೂಪ, ಗುಣ ಮತ್ತು ವಿಭೂತಿ(ಐಶ್ವರ್ಯ) ಇವುಗಳನ್ನು ಸಾಕ್ಷಾತ್ಕಾರಗೊಳಿಸುವುದರ ಮೂಲಕ ಅನುಗ್ರಹಿಸುತ್ತಾನೆ. ಎಂಬೆರುಮಾನನ ಈ ಉಪಕಾರಗಳಿಂದ ಭಾವಪರವಶರಾದ ಆಳ್ವಾರರು, ತಕ್ಷಣವೇ ಕೃತಜ್ಞತೆಯಿಂದ ತಮ್ಮ ಪೆರಿಯ ತಿರುಮೊಳಿಯಲ್ಲಿ ತಿರುಮಂತ್ರವನ್ನು ವೈಭವೀಕರಿಸಲು ಪ್ರಾರಂಭಿಸುತ್ತಾರೆ. ಚಿತ್ (ಸಚೇತನ) ಸ್ವರೂಪವು ಜ್ಞಾನವನ್ನು ಅಭಿವ್ಯಕ್ತಿಪಡಿಸುವುದಾಗಿದೆ ಮತ್ತು ಅಚೇತನವು ಜ್ಞಾನವಿಹೀನವಾದ್ದರಿಂದ ಯಾವುದನ್ನೂ ಮೆಚ್ಚಲು ಅಶಕ್ಯವಾಗಿದೆ. ಆದ್ದರಿಂದ, ತಮ್ಮ ಕೃತಜ್ಞತೆಯನ್ನು ಪ್ರದರ್ಶಿಸಲು ಮತ್ತು ಎಂಬೆರುಮಾನನ ಅರ್ಚಾವತಾರಗಳನ್ನು ವೈಭವೀಕರಿಸಲು, ಆಳ್ವಾರರು ಈ ಅನೇಕ ದಿವ್ಯಪ್ರಬಂಧಗಳನ್ನು ಹಾಡುತ್ತಾರೆ.

ಹೀಗೆ, ಪೆರಿಯವಾಚಾನ್ ಪಿಳ್ಳೈ ಎಂಬೆರುಮಾನನ ನಿರ್ಹೇತುಕ ಕೃಪೆ ಮತ್ತು ಆಳ್ವಾರರ ಉಪಾಯ ಶೂನ್ಯತ್ವವನ್ನು (ಎಂಬೆರುಮಾನನ ಕರುಣೆಯನ್ನು ಪಡೆಯಲು ಯಾವುದೇ ಪ್ರಶಂಸನೀಯ ಕಾರ್ಯವನ್ನು ಮಾಡಬೇಕಾಗಿಲ್ಲದಿರುವುದು) ಈ ವ್ಯಾಖ್ಯಾನ ಅವತಾರಿಕೆಯಲ್ಲಿ ಪ್ರತಿಪಾದಿಸುತ್ತಾರೆ. ಆದರೆ ಒಮ್ಮೆ ಆಳ್ವಾರರು ಎಂಬೆರುಮಾನನಿಂದ ದೈವಿಕವಾಗಿ ಅನುಗ್ರಹಿಸಲ್ಪಟ್ಟ ಮೇಲೆ, ಎಂಬೆರುಮಾನನೊಂದಿಗೆ ಅವರ ಬಾಂಧವ್ಯವು ಅದ್ವಿತೀಯವಾಗುತ್ತದೆ, ಅವರೇ ಪೆರಿಯ ತಿರುಮೊಳಿ 4.9.6 ಯಲ್ಲಿ ಘೋಷಿಸಿರುವ ಹಾಗೆ – “ನುಮ್ಮಡಿಯಾರೋಡುಮ್ ಒಕ್ಕ ಎಣ್ಣಿಯಿರುತ್ತೀರ್ ಅಡಿಯೇನೈ” ಅರ್ಥಾತ್ “ಇತರ ಅಡಿಯಾರರಂತೆ ನನ್ನನ್ನು ಪರಿಗಣಿಸಬೇಡಿ”.

ನಾವು ಈಗಾಗಲೇ ಪೆರಿಯವಾಚಾನ್ ಪಿಳ್ಳೈ ಮತ್ತು ಮಾಮುನಿಗಳ ಆಳ್ವಾರರ ವೈಭವೀಕರಣವನ್ನು ಇಲ್ಲಿ ನೋಡಿದ್ದೇವೆ:

http://ponnadi.blogspot.in/2012/10/archavathara-anubhavam-thirumangai.html

ಎಂಬೆರುಮಾನಾರ್ (ಶ್ರೀ ರಾಮಾನುಜರು) ರಾಮಾನುಜ ನೂಟ್ರನ್ದಾದಿಯ 2 ನೆಯ ಪಾಶುರದಲ್ಲಿ ಅಮುದನಾರರಿಂದ ಹೀಗೆ ಘೋಷಿಲ್ಪಟ್ಟರು “ಕುರೈಯಲ್ ಪಿರಾನಡಿಕ್ಕೀಳ್ ವಿಳ್ಳಾದ ಅನ್ಬನ್” ಅರ್ಥಾತ್ “ತಿರುಮಂಗೈ ಆಳ್ವಾರರ ತಿರುವಡಿಯೊಂದಿಗೆ ಧೃಡವಾದ ಬಾಂಧವ್ಯವನ್ನು ಹೊಂದಿದವರು”.

ಮಾಮುನಿಗಳು ತಿರುವಾಲಿ-ತಿರುನಗರಿ ದಿವ್ಯದೇಶಗಳನ್ನು ಸಂದರ್ಶಿಸುವಾಗ ಆಳ್ವಾರರ ದಿವ್ಯ ತಿರುಮೇನಿಯ ಸೌಂದರ್ಯದಿಂದ ಎಷ್ಟು ಆಕರ್ಷಿತರಾದರೆಂದರೆ, ಆ ಕ್ಷಣವೇ ಆ ಸುಲಲಿತವಾದ ರೂಪವನ್ನು ನಮ್ಮ ಕಣ್ಣುಗಳ ಮುಂದೆ ತರುವಂತಹ ಒಂದು ಪಾಶುರವನ್ನು ಸಮರ್ಪಿಸಿದರು. ನಾವು ಈಗ ಅದನ್ನು ಆನಂದಿಸೋಣ:

“ಅಣೈತ್ತ ವೇಲುಮ್, ತೊಳುತಕೈಯುಮ್, ಅಳುಣ್ದಿಯ ತಿರುನಾಮಮುಮ್,
ಓಮೆನ್ರ ವಾಯುಮ್, ಉಯರ್ನ್ತ ಮೂಕ್ಕುಮ್, ಕುಳಿರ್ನ್ತ ಮುಕಮುಮ್,
ಪರನ್ತ ವಿಳಿಯುಮ್, ಇರುಣ್ಡ ಕುಳಲುಮ್, ಚುರುಣ್ಡ ವಳೈಯಮುಮ್,
ವಡಿತ್ತ ಕಾದುಮ್, ಮಲರ್ನ್ದ ಕಾದು ಕಾಪ್ಪುಮ್, ತಾಳ್ನ್ದ ಚೆವಿಯುಮ್,
ಚೆರಿಣ್ದ ಕಳುತ್ತುಮ್, ಅಗನ್ರ ಮಾರ್ಬುಮ್, ತಿರಣ್ಡ ತೋಳುಮ್,
ನೆಳಿತ್ತ ಮುದುಗುಮ್, ಕುವಿಣ್ದ ಇಡೈಯುಮ್, ಅಲ್ಲಿಕ್ಕಯಿರುಮ್,
ಅಳುಣ್ದಿಯ ಚೀರಾವುಮ್, ತೂಕ್ಕಿಯ ಕರುಙ್ಕೋವೈಯುಮ್,
ತೊಙ್ಗಲುಮ್, ತನಿ ಮಾಲೈಯುಮ್, ಚಾತ್ತಿಯ ತಿರುತ್ತಣ್ಡೈಯುಮ್,
ಚದಿರಾನ ವೀರಕ್ಕಳಲುಮ್, ಕುಣ್ದಿಯಿಟ್ಟ ಕಣೈಕ್ಕಾಲುಮ್,
ಕುಳಿರ ವೈತ್ತ ತಿರುವಡಿ ಮಲರುಮ್, ಮರುವಲರ್ತಮ್ ಉಡಲ್ ತುಣಿಯ
ವಾಳ್ವೀಚುಮ್ ಪರಕಾಲನ್ ಮಙ್ಗೈಮನ್ನರಾನ ವಡಿವೇ ಎನ್ರುಮ್”

ಪರಕಾಲ/ಮಂಗೈ ಮನ್ನರ ದಿವ್ಯ ರೂಪವು ಯಾವಾಗಲೂ ನನ್ನ ಹೃದಯದಲ್ಲಿರುತ್ತದೆ. ಈ ರೂಪವು ಹೀಗೆ ನಿರೂಪಿತವಾಗಿದೆ:

ಭುಜದಿಂದ ಆಧರಿತವಾದ ಭರ್ಜಿ, ಎಂಬೆರುಮಾನನ್ನು ಪೂಜಿಸುತ್ತಿರುವ ಕೈಗಳು, ಸುಂದರವಾದ ಊರ್ಧ್ವಪುಂಡ್ರ, ಓಂ ಎಂದು ಹೇಳುತ್ತಿರುವ ಬಾಯಿ, ಚೂಪಾದ/ಸ್ವಲ್ಪ ಎತ್ತರಿಸಿರುವ ಮೂಗು, ತಂಪೆರೆಯುವ ಮುಖ, ಅಗಲವಾದ ಕಣ್ಣುಗಳು, ಸುಂದರವಾಗಿ ಗುಂಗುರಾದ ಕಪ್ಪು ಕೂದಲುಗಳು, ನಿಖರವಾಗಿ ರಚಿಸಲ್ಪಟ್ಟ ಮತ್ತು ಸ್ವಲ್ಪ ಬಾಗಿದ ಕಿವಿಗಳು (ಎಂಪೆರುಮಾನನಿಂದ ಅಷ್ಟಾಕ್ಷರ ಮಹಾಮಂತ್ರವನ್ನು ಕೇಳಲು), ಚೆನ್ನಾಗಿ ದುಂಡಾದ ಕುತ್ತಿಗೆ, ವಿಶಾಲವಾದ ಎದೆ, ಬಲವತ್ತಾದ ಭುಜಗಳು, ಸುರೂಪವಾದ ಮೇಲ್ಭಾಗದ ಬೆನ್ನು, ಸಪೂರವಾದ ಸೊಂಟ, ಸುಂದರವಾದ ಮಾಲೆಗಳು, ಅದ್ಭುತವಾದ ಕಾಲ್ಬಳೆಗಳು, ಆಳ್ವಾರರ ಪರಾಕ್ರಮವನ್ನು ಪ್ರತಿಬಿಂಬಿಸುವ ತೊಡೆಗಳು, ಸ್ವಲ್ಪ ಓರೆಯಾದ ದಿವ್ಯ ಪಾದಾರವಿಂದಗಳು ಮತ್ತು ಎಲ್ಲ ವೈರಿಗಳನ್ನೂ ನಾಶಮಾಡುವ ಖಡ್ಗ. ತಿರುವಾಲಿ-ತಿರುನಗರಿಯಲ್ಲಿನ ಕಲಿಯನ್ನರ ಅರ್ಚಾ ವಿಗ್ರಹವು ಇಡೀ ಸೃಷ್ಟಿಯಲ್ಲಿ ಅತಿ ಸುಂದರವಾದದ್ದೆಂದು ನಾವು ಸುಲಭವಾಗಿ ಸಾರಬಹುದು.

ಆಳ್ವಾರರು ಪರಕಾಲನ್, ಕಲಿಯನ್, ನೀಲನ್, ಕಲಿಧ್ವಂಸನ್, ಕವಿಲೋಕ ದಿವಾಕರನ್, ಚತುಶ್ಕವಿ ಶಿಖಾಮಣಿ, ಷಟ್ ಪ್ರಬಂಧ ಕವಿ, ಕಲಿವೈರಿ, ನಾಲುಕವಿಪ್ಪೆರುಮಾಳ್, ತಿರುವಾವೀರುಡೈಯ ಪೆರುಮಾನ್, ಮಂಗೈಯರ್ ಕೋನ್, ಅರುಳ್ ಮಾರಿ, ಮಂಗೈ ವೇನ್ದನ್, ಆಲಿನಾಡನ್, ಅರಟ್ಟ್ಮುಕ್ಕಿ, ಅಡೈಯಾರ್ ಸೀಯಮ್, ಕೊಂಗು ಮಲರ್ಕ್ಕುಳಲಿಯರ್ವೇಳ್, ಕೊಟ್ರ ವೇನ್ದನ್, ಕೊಟ್ರವೇಲ್ ಮಂಗೈ ವೇನ್ದನ್ ಎಂದೂ ಹೆಸರಾಗಿದ್ದರು.

ಇದನ್ನು ಗಮನದಲ್ಲಿಟ್ಟು, ನಾವು ಈಗ ಅವರ ಚರಿತ್ರೆಯನ್ನು ನೋಡೋಣ.

ಗರುಡವಾಹನ ಪಂಡಿತರ ದಿವ್ಯಸೂರಿ ಚರಿತ್ರೆಯಲ್ಲಿ ಗುರುತಿಸಿರುವಂತೆ ಆಳ್ವಾರರು ತಿರುಕ್ಕುರೈಯಲೂರ್ (ತಿರುವಾಲಿ-ತಿರುನಗರಿ ಸಮೀಪ) ಕಾರ್ಮುಕನ ಒಂದು ಅಂಶವಾಗಿ ಚತುರ್ಥ ವರ್ಣದಲ್ಲಿ ಜನಿಸಿದರು ಮತ್ತು ನೀಲನ್ (ಕಪ್ಪು ಮೈಬಣ್ಣದ) ಎಂದು ನಾಮಾಂಕಿತರಾದರು.

ತಮ್ಮ ಬಾಲ್ಯದಲ್ಲಿ ಭಗವದ್ವಿಷಯಗಳೊಂದಿಗೆ ಯಾವುದೇ ನಂಟಿಲ್ಲದೆ ಬೆಳೆದ ಅವರು, ಯುವಕನಾದಾಗ ಅತಿ ವಿಷಯಾಸಕ್ತರಾದರು. ಅವರಿಗೆ ಬಲಿಷ್ಠವಾದ ಶರೀರ ಮತ್ತು ಅನೇಕ ಆಯುಧಗಳನ್ನು ಉಪಯೋಗಿಸುವ ಚಾಕಚಕ್ಯತೆಯೊಂದಿಗೆ ಹೋರಾಡುವ ಕೌಶಲ್ಯವಿತ್ತು, ಮತ್ತು ಅದರಿಂದಾಗಿ ಚೋಳ ಭೂಪತಿಯ (ಆ ಪ್ರದೇಶದ ರಾಜ) ಬಳಿಗೆ ಹೋಗಿ ಅವನ ಸೇನೆಯಲ್ಲಿ ತಮ್ಮನ್ನು ಸೇರಿಸಿಕೊಳ್ಳುವಂತೆ ವಿನಂತಿಸಿಕೊಳ್ಳುತ್ತಾರೆ. ರಾಜನು ನೀಲನ ಸಾಮರ್ಥ್ಯಗಳನ್ನು ಕಂಡು ಸಂತುಷ್ಟನಾಗಿ ಅವರನ್ನು ತನ್ನ ಸೇನೆಯಲ್ಲಿ ಒಬ್ಬ ದಂಡನಾಯಕನನ್ನಾಗಿ ನೇಮಿಸುತ್ತಾನೆ ಮತ್ತು ಒಂದು ಚಿಕ್ಕ ಪ್ರದೇಶವನ್ನು ಆಳಲು ಕೊಡುತ್ತಾನೆ.

ಅದೇ ಕಾಲದಲ್ಲಿ, ತಿರುವಾಲಿ ದಿವ್ಯದೇಶದಲ್ಲಿ, ಒಂದು ಸುಂದರವಾದ ಕೊಳದಲ್ಲಿ, ಕೆಲವು ಅಪ್ಸರ ಸ್ತ್ರೀಯರು (ದೇವಲೋಕದ ನರ್ತಕಿಯರು) ನೀರಿನಲ್ಲಿ ಆಟವಾಡಲು ಬರುತ್ತಾರೆ. ಅವರಲ್ಲಿ ಒಬ್ಬಳಾದ ತಿರುಮಾಮಗಳ್ (ಕುಮುದವಲ್ಲಿ) ಎಂಬುವಳು ಕೆಲವು ಹೂಗಳನ್ನು ತರಲು ಹೋಗುತ್ತಾಳೆ ಮತ್ತು ಅವಳ ಸ್ನೇಹಿತೆಯರು ಅವಳನ್ನು ಮರೆತು ಆ ಸ್ಥಳದಿಂದ ಹೊರಟುಹೋಗುತ್ತಾರೆ. ಅವಳು ಮನುಷ್ಯ ಶರೀರವನ್ನು ಸ್ವೀಕರಿಸುತ್ತಲೇ ಮತ್ತು ಯಾವುದಾದರೂ ಸಹಾಯಕ್ಕಾಗಿ ಎದುರುನೋಡುತ್ತಾಳೆ. ಒಬ್ಬ ಶ್ರೀವೈಷ್ಣವ ವೈದ್ಯರು ಆ ಹಾದಿಯಾಗಿ ಬರುತ್ತಾರೆ ಮತ್ತು ಅವಳನ್ನು ವಿಚಾರಿಸುತ್ತಾರೆ ಮತ್ತು ಅವಳು ತನ್ನ ಸ್ನೇಹಿತೆಯರು ತನ್ನನ್ನು ಒಬ್ಬಂಟಿಯಾಗಿ ಬಿಟ್ಟು ಹೋದುದನ್ನು ಮತ್ತು ಇಡೀ ಪ್ರಸಂಗವನ್ನು ತಿಳಿಸುತ್ತಾಳೆ. ಅವರಿಗೆ ಯಾವುದೇ ಮಕ್ಕಳಿಲ್ಲದಿದುದರಿಂದ, ಅವರು ಸಂತೋಷದಿಂದ ಅವಳನ್ನು ಮನೆಗೆ ಕರೆತರುತ್ತಾರೆ ಮತ್ತು ತಮ್ಮ ಹೆಂಡತಿಗೆ ಅವಳನ್ನು ಪರಿಚಯಿಸುತ್ತಾರೆ ಮತ್ತು ಅವರಿಬ್ಬರೂ ಸಂತೋಷದಿಂದ ಅವಳನ್ನು ತಮ್ಮ ಮಗಳಾಗಿ ಸ್ವೀಕರಿಸುತ್ತಾರೆ ಮತ್ತು ಅವಳನ್ನು ಬೆಳೆಸಲು ಆರಂಭಿಸುತ್ತಾರೆ. ಅವಳ ಸೌಂದರ್ಯವನ್ನು ಕಂಡ ಕೆಲವರು ಅವಳ ಬಗ್ಗೆ ನೀಲನಿಗೆ ಹೋಗಿ ತಿಳಿಸುತ್ತಾರೆ ಮತ್ತು ಅವಳ ಸೌಂದರ್ಯದಿಂದ ಆಕರ್ಷಿತರಾಗಿ ಅವರು ತಕ್ಷಣವೇ ಭಾಗವತ ವೈದ್ಯರ ಬಳಿಗೆ ಹೋಗುತ್ತಾರೆ ಮತ್ತು ಮಾತುಕತೆಯನ್ನು ಪ್ರಾರಂಭಿಸುತ್ತಾರೆ. ಅದೇ ಸಮಯದಲ್ಲಿ ಕುಮುದವಲ್ಲಿಯು ಅವರ ಮುಂದೆ ಹೋಗುತ್ತಾಳೆ ಮತ್ತು ವೈದ್ಯರು ನೀಲನಿಗೆ ಅವಳ ಕುಲ, ಗೋತ್ರ ಯಾವುದೂ ತಿಳಿಯದಿರುವುದರಿಂದ ಅವಳನ್ನು ಒಬ್ಬ ಸೂಕ್ತ ವರನಿಗೆ ವಿವಾಹ ಮಾಡಿಕೊಡುವುದರ ಬಗ್ಗೆ ಚಿಂತಿಸುತ್ತಿರುವುದರ ಬಗ್ಗೆ ಹೇಳುತ್ತಾರೆ. ತಕ್ಷಣವೇ ನೀಲನು ವೈದ್ಯರಿಗೆ ಅವಳನ್ನು ವಿವಾಹವಾಗಲು ಬಯಸಿರುವುದಾಗಿ ಹೇಳುತ್ತಾನೆ ಮತ್ತು ಅಪಾರ ಸಂಪತ್ತನ್ನು ಕೊಡುವುದಾಗಿ ಹೇಳುತ್ತಾನೆ. ವೈದ್ಯರು ಮತ್ತು ಅವರ ಪತ್ನಿ ಅವರಿಗೆ ಅವಳನ್ನು ಮದುವೆ ಮಾಡಿಕೊಡಲು ಒಪ್ಪಿಕೊಳ್ಳುತ್ತಾರೆ, ಆದರೆ ಕುಮುದವಲ್ಲಿಯು ತಾನು ಒಬ್ಬ ಆಚಾರ್ಯರಿಂದ ಪಂಚಸಂಸ್ಕಾರ ಮಾಡಲ್ಪಟ್ಟ ಒಬ್ಬ ಶ್ರೀವೈಷ್ಣವನನ್ನು ಮಾತ್ರ ವಿವಾಹವಾಗುವುದಾಗಿ ಷರತ್ತನ್ನು ಹಾಕುತ್ತಾಳೆ. ಒಬ್ಬ ಬುದ್ಧಿವಂತನಾದ ಮನುಷ್ಯನು ಒಳ್ಳೆಯ ಕಾರ್ಯಗಳನ್ನು ತಕ್ಷಣವೇ ಮಾಡುತ್ತಾನೆಂದು ಹೇಳಿರುವಂತೆ, ನೀಲನು ಆ ಕ್ಷಣವೇ ತಿರುನರೈಯೂರಿಗೆ ಓಡುತ್ತಾನೆ ಮತ್ತು ತಿರುನರೈಯೂರ್ ನಂಬಿಯ ಮುಂದೆ ನಿಲ್ಲುತ್ತಾನೆ ಮತ್ತು ಪಂಚ್ಸಂಸ್ಕಾರವನ್ನು ಮಾಡಿ ಅನುಗ್ರಹಿಸುವಂತೆ ಕೇಳಿಕೊಳ್ಳುತ್ತಾನೆ. ಎಂಬೆರುಮಾನನು ತನ್ನ ದಿವ್ಯ ಕಾರುಣ್ಯದಿಂದಾಗಿ ಅವನಿಗೆ ಶಂಖ ಚಕ್ರ ಲಾಂಛನವನ್ನು ಹಾಕುತ್ತಾನೆ ಮತ್ತು ತಿರುಮಂತ್ರ ಉಪದೇಶವನ್ನು ಮಾಡುತ್ತಾನೆ.

ಪದ್ಮ ಪುರಾಣದಲ್ಲಿ ಹೀಗೆ ಹೇಳಿದೆ:

ಸರ್ವಶ್ವೇತಾಮೃತ ಧಾರ್ಯಮ್ ಊರ್ಧ್ವಪುಂಡ್ರಮ್ ಯಥಾವಿಧಿ ।
ರುಜುಣಿ ಸಾನ್ತರಾಳಾಣಿ ಹ್ಯಙ್ಗೇಶು ದ್ವಾದಶಸ್ವಪಿ ।।

ದಿವ್ಯದೇಶಗಳಿಂದ ಬಂದ ಬಿಳಿಯ ಬಣ್ಣದಿಂದ ಕೂಡಿದ ಮಣ್ಣನ್ನು ಉಪಯೋಗಿಸಿ ಮಾಡಿದ ಊರ್ಧ್ವಪುಂಡ್ರವನ್ನು ದೇಹದ ಹನ್ನೆರಡು ಭಾಗಗಳಲ್ಲಿ ಧರಿಸಬೇಕು, ಮೇಲ್ಮುಖವಾಗಿ ನಡುವೆ ಸಾಕಷ್ಟು ಅಂತರವಿರುವಂತೆ.

ಹೀಗೆ ಆಳ್ವಾರರು ದ್ವಾದಶ ಊರ್ಧ್ವಪುಂಡ್ರವನ್ನು ಧರಿಸಿ ಕುಮುದವಲ್ಲಿಯ ಬಳಿಗೆ ಹಿಂತಿರುಗುತ್ತಾರೆ ಮತ್ತು ಕುಮುದವಲ್ಲಿಗೆ ತನ್ನನ್ನು ವಿವಾಹವಾಗಲು ಕೇಳುತ್ತಾರೆ. ಕುಮುದವಲ್ಲಿಯು ಅವರನ್ನು ವಿವಾಹವಾಗುವುದಾಗಿ, ಆದರೆ ಆಳ್ವಾರರು ಒಂದು ವರ್ಷ ಪೂರ್ತಿ ಪ್ರತಿದಿನವೂ ತಪ್ಪದೇ 1008 ಶ್ರೀವೈಷ್ಣವರಿಗೆ ತದಿಯಾರಾಧನವನ್ನು ಮಾಡಿದರೆ ಮಾತ್ರ ಅವರನ್ನು ಪತಿಯಾಗಿ ಸ್ವೀಕರಿಸುವುದಾಗಿ ಹೇಳುತ್ತಾಳೆ. ಆಳ್ವಾರರು ಕುಮುದವಲ್ಲಿಯ ಮೇಲಿನ ಮೋಹದಿಂದ ಈ ಷರತ್ತಿಗೆ ಒಪ್ಪಿಕೊಳ್ಳುತ್ತಾರೆ ಮತ್ತು ಅವರ ವಿವಾಹವು ಒಂದು ಅದ್ದೂರಿಯ ಸಮಾರಂಭದಲ್ಲಿ ನಡೆಯುತ್ತದೆ.

ಪದ್ಮ ಪುರಾಣದಲ್ಲಿ ಹೀಗೆ ಹೇಳಿದೆ:

ಆರಾಧನಾನಾಮ್ ಸರ್ವೇಶಾಮ್ ವಿಷ್ಣೋರ್ ಆರಾಧನಮ್ ಪರಮ್ ।
ತಸ್ಮಾತ್ ಪರತರಮ್ ಪ್ರೋಕ್ತಮ್ ತದೀಯಾರಾಧನಮ್ ನೃಪ ।।

ಹೇ ರಾಜನ್ ! ವಿಷ್ಣುವನ್ನು ಪೂಜಿಸುವುದು ಇತರ ಯಾರನ್ನು ಪೂಜಿಸುವುದಕ್ಕಿಂತ ಶ್ರೇಷ್ಠವಾದುದು.
ವಿಷ್ಣುಭಕ್ತರನ್ನು ಆರಾಧಿಸುವುದು ವಿಷ್ಣುವಿಗಿಂತಲೂ ಶ್ರೇಷ್ಠವಾದದ್ದೆಂದು ಪರಿಗಣಿಸಲ್ಪಟ್ಟಿದೆ.

ಈ ಮೇಲಿನ ಪ್ರಮಾಣದಂತೆ, ಆಳ್ವಾರರು ತಮ್ಮ ಎಲ್ಲ ಸಂಪತ್ತನ್ನೂ ಬಳಸಿ ತದೀಯಾರಾಧನವನ್ನು (ಶ್ರೀವೈಷ್ಣವರಿಗೆ ಪ್ರತಿದಿನ ಹೇರಳವಾದ ಪ್ರಸಾದವನ್ನು ಉಣಬಡಿಸುವುದರ ಮೂಲಕ) ಮಾಡಲು ಪ್ರಾರಂಭಿಸಿದರು. ಇದನ್ನು ನೋಡಿದ ಕೆಲವರು, ಪರಕಾಲನು (ಆಳ್ವಾರ್) ರಾಜ್ಯದ ಎಲ್ಲ ಸಂಪತ್ತನ್ನು ಕೇವಲ ಶ್ರೀವೈಷ್ಣವರಿಗೆ ಉಣಬಡಿಸುವುದರ ಮೂಲಕ ವ್ಯಯಿಸುತ್ತಿದ್ದಾನೆಂದು ರಾಜನಿಗೆ ದೂರು ನೀಡುತ್ತಾರೆ. ರಾಜನು ಆಳ್ವಾರರನ್ನು ಆಸ್ಥಾನಕ್ಕೆ ಕರೆತರಲು ಕೆಲವು ಸೈನಿಕರನ್ನು ಕಳುಹಿಸುತ್ತಾನೆ, ಆದರೆ ಆಳ್ವಾರರು ಅವರೊಂದಿಗೆ ನಯವಾಗಿ ಮಾತನಾಡಿ ಅವರು ಅಲ್ಲೇ ಕಾದಿರುವಂತೆ ಮಾಡುತ್ತಾರೆ. ಸೈನಿಕರು ಆಳ್ವಾರರು ರಾಜನಿಗೆ ತಮ್ಮ ಕಂದಾಯವನ್ನು ಕಟ್ಟಬೇಕೆಂದು ಆಗ್ರಹಪಡಿಸುತ್ತಾರೆ, ಮತ್ತು ಆಳ್ವಾರರು ಕೋಪಗೊಂಡು ಅವರನ್ನು ಹೊರಗೆ ಅಟ್ಟುತ್ತಾರೆ. ಸೈನಿಕರು ರಾಜನಲ್ಲಿಗೆ ಹಿಂತಿರುಗುತ್ತಾರೆ ಮತ್ತು ನಡೆದ ಘಟನೆಯನ್ನು ಅವನಿಗೆ ತಿಳಿಸುತ್ತಾರೆ. ರಾಜನು ಸೇನಾಧಿಪತಿಗೆ ಎಲ್ಲ ಸೈನ್ಯದೊಂದಿಗೆ ಹೋಗಿ ಅವರನ್ನು ಬಂಧಿಸಲು ಆಜ್ಞಾಪಿಸುತ್ತಾನೆ. ಸೇನಾಧಿಪತಿಯು ಒಂದು ದೊಡ್ಡ ಸೈನ್ಯದೊಂದಿಗೆ ಹೋಗುತ್ತಾನೆ ಮತ್ತು ಆಳ್ವಾರರ ಮೇಲೆ ದಾಳಿ ಮಾಡುತ್ತಾನೆ. ಆಳ್ವಾರರು ಅತ್ಯಂತ ಬಲಿಷ್ಠ ಮತ್ತು ಧೈರ್ಯಶಾಲಿಯಾದ್ದರಿಂದ ಪ್ರತಿಯಾಗಿ ಹೋರಾಟ ಮಾಡಿ ಸೇನಾಧಿಪತಿ ಮತ್ತು ಅವನ ಸೈನ್ಯವನ್ನು ಆ ಪ್ರದೇಶದಿಂದ ಹೊರಗಟ್ಟುತ್ತಾರೆ. ಸೇನಾಧಿಪತಿಯು ರಾಜನ ಬಳಿಗೆ ಹಿಂತಿರುಗುತ್ತಾನೆ ಮತ್ತು ಆಳ್ವಾರರ ಜಯದ ಬಗ್ಗೆ ತಿಳಿಸುತ್ತಾನೆ. ಪ್ರಬಲನಾದ ರಾಜನು ಸ್ವತಃ: ಆಳ್ವಾರರೊಂದಿಗೆ ಹೋರಾಡಲು ನಿರ್ಧರಿಸುತ್ತಾನೆ ಮತ್ತು ತನ್ನ ದೊಡ್ಡ ಸೈನ್ಯದೊಂದಿಗೆ ಆಳ್ವಾರರ ಮೇಲೆ ದಾಳಿ ಮಾಡುತ್ತಾನೆ. ಆಳ್ವಾರರು ಮತ್ತೊಮ್ಮೆ ತಮ್ಮ ಪರಾಕ್ರಮವನ್ನು ತೋರಿಸುತ್ತಾರೆ ಮತ್ತು ರಾಜನ ಸೈನ್ಯವನ್ನು ಧ್ವಂಸ ಮಾಡುತ್ತಾರೆ. ರಾಜನು ಆಳ್ವಾರರ ಪರಾಕ್ರಮವನ್ನು ಕಂಡು ಅತಿ ಸಂತೋಷಗೊಳ್ಳುತ್ತಾನೆ, ಯುದ್ಧ ವಿರಾಮವನ್ನು ಘೋಷಿಸುತ್ತಾನೆ ಮತ್ತು ಅವರ ಹಿರಿಮೆಯನ್ನು ಪ್ರಶಂಸಿಸುತ್ತಾನೆ. ರಾಜನನ್ನು ನಂಬಿದ ಆಳ್ವಾರರು ಅವನ ಬಳಿಗೆ ಹೋಗುತ್ತಾರೆ, ಆದರೆ ರಾಜನು ಕಪಟದಿಂದ ತನ್ನ ಮಂತ್ರಿಯ ಮೂಲಕ ಅವರನ್ನು ಬಂಧಿಸುತ್ತಾನೆ ಮತ್ತು ಉಳಿದ ತೆರಿಗೆಯನ್ನು ಕಟ್ಟುವಂತೆ ಹೇಳುತ್ತಾನೆ. ಮಂತ್ರಿಯು ಆಳ್ವಾರರನ್ನು ಕರೆದುಕೊಂಡು ಹೋಗಿ ಎಂಬೆರುಮಾನನ ಒಂದು ಗುಡಿಯಲ್ಲಿ ಸೆರೆಯಲ್ಲಿಡುತ್ತಾನೆ ಮತ್ತು ಆಳ್ವಾರರು 3 ದಿನ ಯಾವುದೇ ಆಹಾರ ಸ್ವೀಕರಿಸದೆ ಉಪವಾಸ ಮಾಡುತ್ತಾರೆ. ಅದೇ ಸಮಯದಲ್ಲಿ ತಿರುನರೈಯೂರಿನ ನಾಚಿಯಾರ್ ತಿರುನರೈಯೂರ್ ನಂಬಿಗೆ ಆಳ್ವಾರರು ಹಸಿವಿನಿಂದಿರುವುದನ್ನು ತನಗೆ ನೋಡಲಾಗದೆಂದು ಹೇಳಿ ಸ್ವಲ್ಪ ಪ್ರಸಾದವನ್ನು ಅವರಿಗೆ ತಂದು ಕೊಟ್ಟರೆಂದು ಹೇಳಲಾಗಿದೆ. ಆಳ್ವಾರರು ಪೆರಿಯ ಪೆರುಮಾಳ್ ಮತ್ತು ತಿರುವೇಂಕಟಮುಡೈಯಾನ್ಗೆ ಸಂಪೂರ್ಣ ಶರಣಾಗತರಾಗಿದ್ದು ಅವರನ್ನು ಧ್ಯಾನಿಸುತ್ತಿರುತ್ತಾರೆ. ಅದೇ ಸಮಯದಲ್ಲಿ, ಕಾಂಚೀಪುರಮ್ನ ದೇವ ಪೆರುಮಾಳ್ ಆಳ್ವಾರರ ಸ್ವಪ್ನದಲ್ಲಿ ಕಾಣಿಸಿಕೊಳ್ಳುತ್ತಾರೆ ಮತ್ತು ಕಾಂಚೀಪುರಂನಲ್ಲಿ ಒಂದು ದೊಡ್ಡ ನಿಧಿ ಇದೆಯೆಂದು ಮತ್ತು ಅವರು ಅಲ್ಲಿಗೆ ಬಂದರೆ ಅದನ್ನು ತೆಗೆದುಕೊಳ್ಳಬಹುದೆಂದು ಹೇಳುತ್ತಾರೆ. ಆಳ್ವಾರರು ಅದನ್ನು ರಾಜನಿಗೆ ಅದನ್ನು ತಿಳಿಸುತ್ತಾರೆ ಮತ್ತು ರಾಜನು ಆಳ್ವಾರರು ಕಾಂಚೀಪುರಕ್ಕೆ ಹೋಗಲು ಬಹು ಭದ್ರತೆಯೊಂದಿಗೆ ಏರ್ಪಾಡು ಮಾಡುತ್ತಾನೆ. ಆಳ್ವಾರರು ಕಾಂಚೀಪುರವನ್ನು ತಲುಪಿದಾಗ ಆ ನಿಧಿಯು ಕಾಣಬರುವುದಿಲ್ಲ ಮತ್ತು ದೇವ ಪೆರುಮಾಳ್ ತನ್ನ ಭಕ್ತರಿಗೆ ಎಲ್ಲವನ್ನೂ ಕೊಡುವವನಾದ್ದರಿಂದ, ಆಳ್ವಾರರ ಸ್ವಪ್ನದಲ್ಲಿ ಮತ್ತೆ ಕಾಣಿಸಿಕೊಳ್ಳುತ್ತಾನೆ ಮತ್ತು ವೇಗವತಿ ನದಿಯ ದಡದಲ್ಲಿ ನಿಧಿಯಿರುವ ಸ್ಥಳವನ್ನು ತೋರಿಸುತ್ತಾನೆ. ಆಳ್ವಾರರು ನಿಧಿಯನ್ನು ಕಂಡುಹಿಡಿಯುತ್ತಾರೆ, ರಾಜನ ಪಾಲನ್ನು ಕೊಡುತ್ತಾರೆ ಮತ್ತು ತಿರುಕ್ಕುರೈಯಲೂರ್ ಗೆ ಹಿಂತಿರುಗಿ ತಮ್ಮ ತದೀಯಾರಾಧನವನ್ನು ಮುಂದುವರಿಸುತ್ತಾರೆ. ಮತ್ತೆ ಕೆಲವು ಕಾಲದ ನಂತರ, ರಾಜನು ತನ್ನ ಸೈನಿಕರನ್ನು ತೆರಿಗೆಯನ್ನು ಸಂಗ್ರಹಿಸಲು ಕಳುಹಿಸುತ್ತಾನೆ, ಆಳ್ವಾರರು ವ್ಯಾಕುಲಗೊಳ್ಳುತ್ತಾರೆ ಮತ್ತು ದೇವ ಪೆರುಮಾಳ್ ಪುನ: ಆಳ್ವಾರರ ಸ್ವಪ್ನದಲ್ಲಿ ಕಾಣಿಸಿಕೊಳ್ಳುತ್ತಾನೆ ಮತ್ತು ವೇಗವತಿ ನದಿಯ ದಂಡೆಯಿಂದ ಮರಳನ್ನು ಸಂಗ್ರಹಿಸಿ ಅದನ್ನು ಸೈನಿಕರಿಗೆ ನೀಡುವಂತೆ ಆದೇಶಿಸುತ್ತಾನೆ. ಸೈನಿಕರು ಅದನ್ನು ಸ್ವೀಕರಿಸಿದಾಗೆ ಅವರಿಗೆ ಅದು ಅಮೂಲ್ಯವಾದ ಕಣಗಳಂತೆ ಕಾಣುತ್ತದೆ. ಅವರು ಸಂತೋಷದಿಂದ ಅದನ್ನು ರಾಜನ ಬಳಿಗೆ ತೆಗೆದುಕೊಂಡು ಹೋಗುತ್ತಾರೆ ಮತ್ತು ನಡೆದುದೆಲ್ಲವನ್ನೂ ವಿಸ್ತಾರವಾಗಿ ಅವನಿಗೆ ತಿಳಿಸುತ್ತಾರೆ. ಆಗ ರಾಜನು ಆಳ್ವಾರರ ಮಹಿಮೆಯನ್ನು ಅರಿತುಕೊಳ್ಳುತ್ತಾನೆ, ಅವರನ್ನು ಮತ್ತೆ ಆಸ್ಥಾನಕ್ಕೆ ಆಹ್ವಾನಿಸುತ್ತಾನೆ, ಕ್ಷಮೆಯನ್ನು ಯಾಚಿಸುತ್ತಾನೆ ಮತ್ತು ಅವರಿಗೆ ಅಪಾರ ಸಂಪತ್ತನ್ನು ಸಲ್ಲಿಸುತ್ತಾನೆ. ತಾನು ಆಳ್ವಾರರಿಗೆ ಮಾಡಿದ ಅಪರಾಧಗಳ ಪರಿಹಾರವಾಗಿ, ರಾಜನು ತನ್ನ ಸಂಪತ್ತನ್ನು ದೇವರು ಮತ್ತು ಬ್ರಾಹ್ಮಣರಿಗೆ ದಾನಗಳನ್ನು ಮಾಡಲು ವ್ಯಯಿಸುತ್ತಾನೆ.

ಆಳ್ವಾರರು ತಮ್ಮ ತದೀಯಾರಾಧನವನ್ನು ಮುಂದುವರಿಸುತ್ತಾರೆ ಮತ್ತು ಅದರ ಪರಿಣಾಮವಾಗಿ ಅವರ ಸಂಪತ್ತು ಬರಿದಾಗುತ್ತದೆ. ಆಗ ಅವರು ಆ ಪ್ರದೇಶದ ಮೂಲಕ ಹಾದು ಹೋಗುವ ಶ್ರೀಮಂತರನ್ನು ಲೂಟಿ ಮಾಡಿ ತಮ್ಮ ಕೈಂಕರ್ಯವನ್ನು ಮುಂದುವರಿಸಲು ನಿರ್ಧರಿಸುತ್ತಾರೆ. ಅವರು ಶ್ರೀಮಂತರನ್ನು ಕೊಳ್ಳೆ ಹೊಡೆಯುತ್ತಾರೆ ಮತ್ತು ಬಹು ಭಕ್ತಿಯಿಂದ ತದೀಯಾರಾಧನವನ್ನು ನಡೆಸುತ್ತಾರೆ. ಸರ್ವೇಶ್ವರನು, ಅವರು ಶ್ರೀಮಂತರನ್ನು ಕೊಳ್ಳೆ ಹೊಡೆದರೂ ಸಹ ಆ ಹಣವನ್ನು ಶ್ರೀವೈಷ್ಣವರ ಪ್ರಸಾದಕ್ಕಾಗಿ ವ್ಯಯಿಸಿ ಚರಮ ಪುರುಷಾರ್ಥದಲ್ಲಿ (ಅಂತಿಮ ಗುರಿಯಲ್ಲಿ) ಸ್ಥಾಪಿತರಾಗಿದ್ದರೆಂದು ಯೋಚಿಸಿ, ಅವರಿಗೆ ದಿವ್ಯ ನಿಷ್ಕಳಂಕ ಜ್ಞಾನವನ್ನು ಅನುಗ್ರಹಿಸಿ ಉದ್ಧರಿಸಲು ನಿಶ್ಚಯಿಸುತ್ತಾನೆ. ಶ್ರೀಮನ್ನಾರಾಯಣನು ಮನುಷ್ಯ ರೂಪವನ್ನು ತಳೆದು (ಆಚಾರ್ಯನಾಗಿ) ಸಂಸಾರದಲ್ಲಿ ಪರಿತಪಿಸುತ್ತಿರುವ ಜೀವಾತ್ಮರನ್ನು ಶಾಸ್ತ್ರಗಳ ಸಹಾಯದಿಂದ ಉದ್ಧರಿಸುತ್ತಾನೆಂದು ಹೇಳುವಂತೆ, ಎಂಬೆರುಮಾನನು ವಿವಾಹದ ಉಡುಪುಗಳನ್ನು ಧರಿಸಿದ ನಾಚಿಯಾರೊಡಗೂಡಿ ವೈಯಾಲಿ ಮಣವಾಳನಾಗಿ ಸುಂದರವಾದ ಆಭರಣಗಳೊಂದಿಗೆ ಮತ್ತು ಒಂದು ದೊಡ್ಡ ಮದುವೆ ದಿಬ್ಬಣದೊಂದಿಗೆ ಆಳ್ವಾರರ ಸ್ಥಳಕ್ಕೆ ಪ್ರಯಾಣಿಸುತ್ತಾನೆ. ಒಂದು ದೊಡ್ಡ ಸಂಪತ್ತನ್ನು ಕೊಳ್ಳೆ ಹೊಡೆಯುವ ಅವಕಾಶದಿಂದ ಉತ್ತೇಜಿತರಾದ ಆಳ್ವಾರರು, ಎಂಬೆರುಮಾನ್ ಮತ್ತು ಆತನ ಮದುವೆಯ ದಿಬ್ಬಣವನ್ನು ಸುತ್ತುವರಿಯುತ್ತಾರೆ ಮತ್ತು ಅವರಿಂದ ಎಲ್ಲವನ್ನೂ ಲೂಟಿ ಮಾಡುತ್ತಾರೆ. ಕಡೆಯದಾಗಿ, ಆಳ್ವಾರರು ಎಂಬೆರುಮಾನನ ಪಾದಾರವಿಂದದ ಕಾಲುಂಗುರವನ್ನು ಬಾಯಲ್ಲಿ ಕಚ್ಚಿ ತೆಗೆಯುತ್ತಾರೆ ಮತ್ತು ಎಂಬೆರುಮಾನನು ಆಳ್ವಾರರ ಶೌರ್ಯದಿಂದ ಬಹು ವಿಸ್ಮಿತನಾಗಿ “ನಮ್ ಕಲಿಯನೋ” ಎಂದು ಸಾರುತ್ತಾನೆ (ಕಲಿಯನ್ ಎಂದರೆ ಮಹಾ ಪರಾಕ್ರಮಶಾಲಿ ಎಂದು ಅರ್ಥ).

ಇದಾದ ನಂತರ, ಆಳ್ವಾರರು ಹಣ ಮತ್ತು ಆಭರಣಗಳ ಒಂದು ದೊಡ್ಡ ಮೂಟೆಯನ್ನು ಸಿದ್ಧಪಡಿಸುತ್ತಾರೆ ಮತ್ತು ಅದನ್ನು ಎತ್ತಲು ಪ್ರಯತ್ನಿಸುತ್ತಾರೆ, ಆದರೆ ಎತ್ತಲಾಗುವುದಿಲ್ಲ. ಅವರು ವರನ (ಎಂಬೆರುಮಾನನ) ಕಡೆಗೆ ನೋಡುತ್ತಾರೆ ಮತ್ತು ಹೇಳುತ್ತಾರೆ “ನೀನು ಯಾವುದೊ ಒಂದು ಮಂತ್ರವನ್ನು ಹೇಳಿರುವೆ ಅದರಿಂದಾಗಿ ನಾನು ಇದನ್ನು ಎತ್ತಲು ಅಶಕ್ಯನಾಗಿದ್ದೇನೆ”. ಎಂಬೆರುಮಾನನು ಹೀಗೆ ಒಂದು ಮಂತ್ರವಿದೆಯೆಂದು ಒಪ್ಪಿಕೊಳ್ಳುತ್ತಾನೆ ಮತ್ತು ಆಳ್ವಾರರು ಬಯಸಿದರೆ ಅದನ್ನು ಬಹಿರಂಗಪಡಿಸುವುದಾಗಿ ಹೇಳುತ್ತಾನೆ. ಆಳ್ವಾರರು ತಮ್ಮ ಖಡ್ಗವನ್ನು ತೋರಿಸುತ್ತಾರೆ ಮತ್ತು ಕೂಡಲೇ ಆ ಮಂತ್ರವನ್ನು ಕೇಳಲು ಬಯಸುತ್ತೇನೆಂದು ಹೇಳುತ್ತಾರೆ. ಎಂಬೆರುಮಾನನು, ಕೇಳಲು ಅತ್ಯಂತ ಆಪ್ಯಾಯಮಾನವಾದ, ಸಕಲ ಅರ್ಥಗಳಿಂದ ಪೂರ್ಣವಾದ, ಅಂತಿಮ ಗುರಿ ಸಾಧನೆಯನ್ನು ಪ್ರತಿಷ್ಠಾಪಿಸುವ, ಸಕಲ ವೇದಗಳ ಸಾರವಾದ, ಬಹು ದುಃಖಗಳಿಂದ ಕೂಡಿದ ಸಂಸಾರದಿಂದ ಒಬ್ಬರನ್ನು ಮೇಲೆತ್ತಲು ಸಹಾಯಕವಾದ, ಉಪಾಸಕರಿಗೆ ಐಶ್ವರ್ಯ(ಈ ಪ್ರಪಂಚದಲ್ಲಿ ಸುಖ), ಕೈವಲ್ಯ(ಆತ್ಮಾನಂದ) ಮತ್ತು ಭಗವತ್ ಕೈಂಕರ್ಯವನ್ನು ಅನುಗ್ರಹಿಸುವ, ತಿರುಮಂತ್ರವನ್ನು ಬಹಿರಂಗಪಡಿಸಿದನು. ಈ ತಿರುಮಂತ್ರವು ಶಾಸ್ತ್ರಗಳಲ್ಲಿ ಹೀಗೆ ವೈಭವೀಕರಿಸಲ್ಪಟ್ಟಿದೆ:

ವೃತ್ತ ಹಾರೀತ ಶ್ರುತಿ:

ಋಚೋ ಯಜುಂಶಿ ಸಾಮಾಣಿ ತಥೈವ ಅಥರ್ವಣಾನಿ ಚ |
ಸರ್ವಮ್ ಅಷ್ಟಾಕ್ಷರಾಂತಸ್ತಮ್ ಯಚ್ಚಾನ್ಯದಪಿ ವಾಙ್ಮಯಮ್ ||

ಋಕ್, ಯಜುರ್, ಸಾಮ, ಅಥರ್ವ ವೇದಗಳ ಮತ್ತು ಅವುಗಳ ಉಪಬ್ರಾಹ್ಮಣಗಳ ಸಕಲ ಅರ್ಥಗಳೂ ಅಷ್ಟಾಕ್ಷರದಲ್ಲಿಯೇ ಅಡಕವಾಗಿವೆ.

ನಾರದೀಯ ಪುರಾಣ:

ಸರ್ವವೇದಾಂತ ಸಾರಾರ್ಥಸ್ ಸಂಸಾರಾರ್ಣವ ತಾರಕ: |
ಗತಿರ್ ಅಷ್ಟಾಕ್ಷರೋ ನೃಣಾಮ್ ಅಪುನರ್ಭವಕಾಂಕ್ಷಿಣಾಮ್ ||

ಮೋಕ್ಷವನ್ನು ಪಡೆಯಲು ಇಚ್ಛಿಸುವ ನರರಿಗೆ, ಸಕಲ ವೇದಾಂತಗಳ ಸಾರವಾದ ಮತ್ತು ಸಂಸಾರ ಸಾಗರವನ್ನು ದಾಟಲು ಇರುವ ಒಂದೇ ಗತಿ ಅಷ್ಟಾಕ್ಷರ ಮಂತ್ರ.

ನಾರಾಯಣ ಉಪನಿಷದ್:

ಓಮಿತ್ಯಗ್ರೇ ವ್ಯಾಹರೇತ್, ನಮ ಇತಿ ಪಶ್ಚಾತ್, ನಾರಾಯಣಾಯೇತ್ಯುಪರಿಷ್ಟಾತ್, ಓಮಿತ್ಯೇಕಾಕ್ಷರಮ್, ನಮ ಇತಿ ದ್ವೇ ಅಕ್ಷರೇ, ನಾರಾಯಣಾಯೇತಿ ಪಂಚಾಕ್ಷರಾಣಿ

ಓಂ ಅನ್ನು ಮೊದಲು ಉಚ್ಚರಿಸಬೇಕು, ನಂತರ ನಮ: ಮತ್ತು ನಾರಾಯಣಾಯ; ಓಂ ನಲ್ಲಿ ಒಂದಕ್ಷರವಿದೆ, ನಮ: ದಲ್ಲಿ ಎರಡು ಅಕ್ಷರಗಳಿವೆ ಮತ್ತು ನಾರಾಯಣಾಯ ಐದು ಅಕ್ಷರಗಳಿಂದ ರಚಿತವಾಗಿದೆ (ಹೀಗೆ ಈ ಮಂತ್ರವು 8 ಅಕ್ಷರಗಳಿಂದ ಕೂಡಿದೆ ಮತ್ತು ಅಷ್ಟಾಕ್ಷರ ಎಂದು ಹೇಳಲ್ಪಟ್ಟಿದೆ). ಹೀಗೆ ಶಾಸ್ತ್ರವು ಅಷ್ಟಾಕ್ಷರದ ನಿಖರವಾದ ರಚನೆಯನ್ನು ಮತ್ತು ಅದನ್ನು ಹೇಗೆ ಉಚ್ಚರಿಸಬೇಕೆಂಬುದನ್ನು ಯಾವುದೇ ಸಂದೇಹವಿಲ್ಲದಂತೆ ಹೇಳಿದೆ.

ನಾರದೀಯ ಪುರಾಣ:

ಮಂತ್ರಾಣಾಮ್ ಪರಮೋ ಮಂತ್ರೋ ಗುಹ್ಯಾನಾಮ್ ಗುಹ್ಯಮುತ್ತಮಮ್ |
ಪವಿತ್ರಂಚ ಪವಿತ್ರಾಣಾಮ್ ಮೂಲಮಂತ್ರಸ್ ಸನಾತನ: ||

ಅಷ್ಟಾಕ್ಷರ ಮಂತ್ರವು ಎಲ್ಲ ಮಂತ್ರಗಳಲ್ಲಿ ಶ್ರೇಷ್ಠತಮವಾದ ಮಂತ್ರ, ಗುಹ್ಯವಾದ ಮಂತ್ರಗಳಲ್ಲಿ ಗುಹ್ಯತಮವಾದದ್ದು, ಪವಿತ್ರವಾದ ಮಂತ್ರಗಳಲ್ಲಿ ಅತ್ಯಂತ ಪವಿತ್ರವಾದದ್ದು ಮತ್ತು ಸನಾತನವಾದ ಮೂಲ ಮಂತ್ರ.

ಇದೆಲ್ಲಕ್ಕಿಂತ ಮಿಗಿಲಾಗಿ ಅಷ್ಟಾಕ್ಷರ ಮಹಾಮಂತ್ರವು ಮಹಾ ಜ್ಞಾನಿಗಳಾದ ಪೂರ್ವಾಚಾರ್ಯರುಗಳಿಂದ ಅಂಗೀಕರಿಸಲ್ಪಟ್ಟ ಮಂತ್ರ, ತಿರುಮೊಳಿ 7.4.4 ರಲ್ಲಿ ಹೇಳಿರುವಂತೆ “ಪೇರಾಳನ್ ಪೇರೋದುಮ್ ಪೆರಿಯೋರ್” ಅರ್ಥಾತ್ “ಎಂಬೆರುಮಾನನ ನಾಮಗಳನ್ನು ಸಂಕೀರ್ತನೆ ಮಾಡುವ ಮಹಾನ್ ವ್ಯಕ್ತಿಗಳು”. ಇದಲ್ಲದೆ, ಪೆರಿಯ ತಿರುಮೊಳಿಯ ಮೊದಲ ಪದಿಗಮ್ ನಲ್ಲಿಯೇ ಸ್ವತಃ ಆಳ್ವಾರರೇ ಹೀಗೆ ತೆರೆದಿಟ್ಟಿದ್ದಾರೆ “ಪೆಟ್ರ ತಾಯಿನುಮ್ ಆಯಿನ ಚೆಯ್ಯುಮ್ ನಲಂತರುಮ್ ಚೊಲ್ಲೈ ನಾನ್ ಕಣ್ಡು ಕೊಣ್ಡೇನ್” ಅರ್ಥಾತ್ “ತನ್ನ ಹೆತ್ತ ತಾಯಿಗಿಂತ ಮಿಗಿಲಾಗಿ ಒಳ್ಳೆಯದನ್ನುಂಟು ಮಾಡುವ ಮಂತ್ರವನ್ನು ನಾನು ಕಂಡುಕೊಂಡೆ”.

ಎಂಬೆರುಮಾನನಿಂದ ತಿರುಮಂತ್ರವನ್ನು ಶ್ರವಣ ಮಾಡಿದ ನಂತರ, ಸುಂದರವಾಗಿ ಸ್ವರ್ಣದಂತೆ ಹೊಳೆಯುವ ಶರೀರ ಉಳ್ಳವನಾದ ದಿವ್ಯ ಗರುಡಾಳ್ವರರ ಮೇಲೆ ಕರುಣೆಯೇ ಮೂರ್ತಿವೆತ್ತ ಶ್ರೀ ಮಹಾಲಕ್ಷ್ಮಿಯೊಂದಿಗೆ ಎಂಬೆರುಮಾನನು ತನ್ನ ದಿವ್ಯ ಸ್ವರೂಪವನ್ನು ತೋರಿಸುತ್ತಾನೆ. ಅದಲ್ಲದೆ, ಎಂಪೆರುಮಾನನು ತನ್ನ ನಿರ್ಹೇತುಕ ಕೃಪೆಯಿಂದಾಗಿ ಆಳ್ವಾರರಿಗೆ ದಿವ್ಯ ನಿಷ್ಕಳಂಕ ಜ್ಞಾನವನ್ನು ಅನುಗ್ರಹಿಸುತ್ತಾನೆ. ಇದೆಲ್ಲವನ್ನೂ ನೋಡಿದ ನಂತರ, ಆಳ್ವಾರರು ಶ್ರೀ ಮಹಾಲಕ್ಷ್ಮಿ ತಾಯಾರರ ಪುರುಷಕಾರದಿಂದ ಪ್ರಚೋದಿತವಾದ ಎಂಬೆರುಮಾನನ ಅನುಗ್ರಹವನ್ನು ಅರಿತು, ಸಕಲರಿಗೂ 6 ಪ್ರಬಂಧಗಳನ್ನು ಅನುಗ್ರಹಿಸುತ್ತಾರೆ – ಪೆರಿಯ ತಿರುಮೊಳಿ, ತಿರುಕ್ಕುರುನ್ತಾಣ್ಡಕಮ್, ತಿರುವೆಳುಕ್ಕೂಟ್ರಿರುಕ್ಕೈ, ಚಿರಿಯ ತಿರುಮಡಲ್, ಪೆರಿಯ ತಿರುಮಡಲ್ ಮತ್ತು ತಿರುನೆಡುನ್ತಾಣ್ಡಕಮ್ – ಇವುಗಳನ್ನು ನಮ್ಮಾಳ್ವಾರರ ದಿವ್ಯ ಪ್ರಬಂಧಗಳ 6 ಅಂಗಗಳನ್ನಾಗಿ ಪರಿಗಣಿಸಲಾಗಿದೆ. ಅವರ ಪ್ರಬಂಧಗಳು ವಿಭಿನ್ನ ರೀತಿಯ ಕವಿತೆಗಳಿಂದ ಕೂಡಿವೆ – ಆಶು, ಮಧುರ, ಚಿತ್ರ ಮತ್ತು ವಿಸ್ತಾರ, ಮತ್ತು ಇದರಿಂದಾಗಿ ಅವರು ನಾಲು ಕವಿ ಪೆರುಮಾಳ್ ಎಂದು ಪ್ರಸಿದ್ಧರಾದರು.

ಕಡೆಯದಾಗಿ, ಎಂಬೆರುಮಾನನು ಆಳ್ವಾರರಿಗೆ ತಮ್ಮ ಶಿಷ್ಯರೊಂದಿಗೆ ವಿವಿಧ ದಿವ್ಯದೇಶಗಳಿಗೆ ಹೋಗಿ ಆ ದಿವ್ಯದೇಶ ಅರ್ಚಾವತಾರ ಎಂಬೆರುಮಾನರಿಗೆ ಮಂಗಳಾಶಾಸನವನ್ನು ಮಾಡುವಂತೆ ಆದೇಶಿಸುತ್ತಾನೆ ಮತ್ತು ಅಂತರ್ಧಾನನಾಗುತ್ತಾನೆ. ಆಳ್ವಾರರು ತಮ್ಮ ಮಂತ್ರಿಗಳು ಮತ್ತು ಶಿಷ್ಯರೊಂದಿಗೆ ತಮ್ಮ ದಿವ್ಯದೇಶ ಯಾತ್ರೆಯನ್ನು ಪ್ರಾರಂಭಿಸುತ್ತಾರೆ. ಅನೇಕ ಪುಣ್ಯನದಿಗಳಲ್ಲಿ ಸ್ನಾನ ಮಾಡುತ್ತಾರೆ ಮತ್ತು ಶ್ರೀ ಭದ್ರಾಚಲಮ್, ಸಿಂಹಾಚಲಮ್, ಶ್ರೀ ಕೂರ್ಮಮ್, ಶ್ರೀ ಪುರುಷೋತ್ತಮಮ್ (ಪುರಿ ಜಗನ್ನಾಥ), ಗಯಾ, ಗೋಕುಲಮ್, ವೃಂದಾವನಮ್, ಮಥುರಾ, ದ್ವಾರಕಾ, ಅಯೋಧ್ಯಾ, ಬದರಿಕಾಶ್ರಮ, ಕಾಂಚೀಪುರಮ್, ತಿರುವೇಂಕಟಮ್, ಇತ್ಯಾದಿ ದಿವ್ಯದೇಶಗಳಲ್ಲಿ ಮಂಗಳಾಶಾಸನವನ್ನು ಮಾಡುತ್ತಾರೆ. ಆಳ್ವಾರರು ಚೋಳಮಂಡಲವನ್ನು ತಲುಪುತ್ತಾರೆ, ಅವರ ಶಿಷ್ಯರು ಅವರ ವೈಭವಗಳನ್ನು “ಚತುಷ್ಕವಿ ಬಂದಿದ್ದಾರೆ”, “ಕಲಿಯನ್ ಬಂದಿದ್ದಾರೆ”, “ಪರಕಾಲನ್ ಬಂದಿದ್ದಾರೆ”, “ಇತರ ಎಲ್ಲ ಮತಗಳ ಮೇಲೆ ವಿಜಯ ಸಾಧಿಸಿದವರು ಬಂದಿದ್ದಾರೆ”, ಇತ್ಯಾದಿಯಾಗಿ ಘೋಷಿಸುತ್ತಾರೆ.

ತಿರುಜ್ಞಾನ ಸಂಬಂಧರ್ ಎಂಬ ಒಬ್ಬ ಶೈವ ಪಂಡಿತರು/ಭಕ್ತರು ಆ ಕಾಲದಲ್ಲಿ ಅಲ್ಲಿ ವಾಸಿಸುತ್ತಿದ್ದರು ಮತ್ತು ಅವರ ಶಿಷ್ಯರು ಆಳ್ವಾರರ ವೈಭವಗಳಿಗೆ ಆಕ್ಷೇಪಿಸಿದರು. ಆಳ್ವಾರರು ತಕ್ಷಣವೇ ಸಂಬಂಧರೊಂದಿಗೆ ವಾದ ಮಾಡುವುದಾಗಿ ಮತ್ತು ನಾರಾಯಣ ಪರತ್ವವನ್ನು ಸಿದ್ಧಪಡಿಸುವುದಾಗಿ ಹೇಳಿದರು. ಅವರು ಆಳ್ವಾರರನ್ನು ಸಂಬಂಧರ ಮನೆಗೆ ಕರೆದುಕೊಂಡು ಹೋಗುತ್ತಾರೆ ಮತ್ತು ವಿಷಯವನ್ನು ಅವರಿಗೆ ತಿಳಿಸುತ್ತಾರೆ ಮತ್ತು ಅವರು ಆಳ್ವಾರರೊಂದಿಗೆ ವಾದ ಮಾಡಲು ಒಪ್ಪಿಕೊಳ್ಳುತ್ತಾರೆ. ಆ ಇಡೀ ಸ್ಥಳವು/ಪಟ್ಟಣವು ಅವೈಷ್ಣವರಿಂದ ತುಂಬಿದ್ದರಿಂದ ಮತ್ತು ಅಲ್ಲಿ ಎಂಬೆರುಮಾನನ ವಿಗ್ರಹವು ಇಲ್ಲದಿದ್ದುದರಿಂದ, ಆಳ್ವಾರರು ಮಾತನಾಡಲು ಅಶಕ್ಯರಾಗುತ್ತಾರೆ ಮತ್ತು ಪರಿಸ್ಥಿತಿಯ ಬಗ್ಗೆ ತಳಮಳಗೊಳ್ಳುತ್ತಾರೆ. ಅದೇ ಸಮಯದಲ್ಲಿ ಅವರು ಒಬ್ಬ ಶ್ರೀವೈಷ್ಣವ ಸ್ತ್ರೀಯನ್ನು ಗಮನಿಸುತ್ತಾರೆ ಮತ್ತು ಆಕೆಯ ತಿರುವಾರಾಧನ ವಿಗ್ರಹವನ್ನು ತರುವಂತೆ ಹೇಳುತ್ತಾರೆ. ಆಕೆಯು ತನ್ನ ಎಂಬೆರುಮಾನ್ ಕೃಷ್ಣನನ್ನು ಸಂಬಂಧರ ವಾಸಸ್ಥಳಕ್ಕೆ ತರುತ್ತಾಳೆ ಮತ್ತು ಚರ್ಚೆಯು ಪ್ರಾರಂಭವಾಗುತ್ತದೆ. ಸಂಬಂಧರು ಒಂದು ಪದ್ಯವನ್ನು ವಾಚಿಸುತ್ತಾರೆ ಮತ್ತು ಆಳ್ವಾರರು ಅದರಲ್ಲಿ ತಪ್ಪನ್ನು ಕಂಡುಹಿಡಿಯುತ್ತಾರೆ. ಆಗ ಸಂಬಂಧರು ಆಳ್ವಾರರಿಗೆ ಒಂದು ಪದ್ಯವನ್ನು ವಾಚಿಸಲು ಸವಾಲು ಹಾಕುತ್ತಾರೆ ಮತ್ತು ಆಳ್ವಾರರು “ಒರು ಕುರಳಾಯ್” ತಾಡಾಳನ್ ಎಂಬೆರುಮಾನನ ಮೇಲೆ (ಕಾಳಿ ಚೀರಾಮ ವಿಣ್ಣಗರಮ್ – ಸೀರ್ಗಾಳಿ) ಪದಿಗವನ್ನು (ಪೆರಿಯ ತಿರುಮೊಳಿ – 7.4) ಹಾಡುತ್ತಾರೆ. ಸಂಬಂಧರು ನಿಖರವಾಗಿ ಮತ್ತು ಸುಂದರವಾಗಿ ರಚಿಸಲ್ಪಟ್ಟ ಆ ಪದಿಗಕ್ಕೆ ಉತ್ತರಿಸಲು ಅಶಕ್ಯರಾಗಿ ಆಳ್ವಾರರ ಶ್ರೇಷ್ಠತೆಯ ಬಗ್ಗೆ ಆಶ್ಚರ್ಯಗೊಳ್ಳುತ್ತಾರೆ ಮತ್ತು ಅವರ ವೈಭವಗಳನ್ನು ಒಪ್ಪಿಕೊಳ್ಳುತ್ತಾರೆ ಮತ್ತು ಅವರನ್ನು ಪೂಜಿಸುತ್ತಾರೆ.

ವಿಮಾನಮ್ ಪ್ರಣವಾಕಾರಮ್ ವೇದಶೃಂಗಮ್ ಮಹಾದ್ಭುತಮ್ |
ಶ್ರೀರಂಗಛಾಯೀ ಭಗವಾನ್ ಪ್ರಣವಾರ್ಥ ಪ್ರಕಾಶಕ: ||

ಅತ್ಯಂತ ಅದ್ಭುತವಾದ ಶ್ರೀರಂಗವಿಮಾನವು ಓಂಕಾರದ ಅಭಿವ್ಯಕ್ತಿಯಾಗಿದೆ. ಅದರ ಶೃಂಗವು ಸಾಕ್ಷಾತ್ ವೇದವಾಗಿದೆ. ಭಗವಾನ್ ಶ್ರೀರಂಗನಾಥನು ಸ್ವತಃ (ತಿರುಮಂತ್ರದ ಸಾರಾಂಶವಾದ) ಪ್ರಣವದ ಪರಮಾರ್ಥವಾಗಿ ಅಭಿವ್ಯಕ್ತಿಗೊಂಡಿದ್ದಾನೆ.

ಆಳ್ವಾರರು ದೇವಸ್ಥಾನದ ಸುತ್ತಲೂ ಕೋಟೆಯೊಂದನ್ನು ಕಟ್ಟಲು ಬಯಸಿ, ಅದಕ್ಕಾಗಿ ಸಂಪನ್ಮೂಲಗಳನ್ನು ರೂಢಿಸಲು ತಮ್ಮ ಶಿಷ್ಯರೊಂದಿಗೆ ಚರ್ಚಿಸುತ್ತಾರೆ. ಅವರು ನಾಗಪಟ್ಟಿಣಂನಲ್ಲಿ ಅವೈದಿಕ ಮಠಕ್ಕೆ ಸೇರಿದ ಪೂರ್ಣವಾಗಿ ಚಿನ್ನದಿಂದ ಮಾಡಿದ ವಿಗ್ರಹವೊಂದಿದೆ ಮತ್ತು ನಾವು ಅದನ್ನು ಪಡೆದುಕೊಂಡರೆ ಅದರಿಂದ ನಾವು ಬಹಳಷ್ಟು ಕೈಂಕರ್ಯಗಳನ್ನು ಮಾಡಬಹುದೆಂದು ಹೇಳುತ್ತಾರೆ. ಆಳ್ವಾರರು ತಕ್ಷಣವೇ ನಾಗಪಟ್ಟಿಣಂಗೆ ಹೊರಡುತ್ತಾರೆ ಮತ್ತು ಹೆಂಗಸೊಬ್ಬಳನ್ನು ಕಾಣುತ್ತಾರೆ ಮತ್ತು ಅವಳನ್ನು ಆ ಪಟ್ಟಣದಲ್ಲಿ ರಹಸ್ಯವಾದ ವಿಷಯವೇನಾದರೂ ಇದೆಯೇ ಎಂದು ಕೇಳುತ್ತಾರೆ. ಅದಕ್ಕೆ ಅವಳು ಸುವರ್ಣ ವಿಗ್ರಹವೊಂದು ಇದೆಯೆಂದು ತನ್ನ ಅತ್ತೆ ಹೇಳುತ್ತಿದ್ದುದಾಗಿ ಮತ್ತು ಆ ವಿಗ್ರಹ ಮತ್ತು ಆ ವಿಗ್ರಹವಿರುವ ಸ್ಥಳಕ್ಕೆ ಅತ್ಯಂತ ಸುರಕ್ಷಿತವಾದ ವಿಮಾನವನ್ನು ರಚಿಸಿದ ಶಿಲ್ಪಿಯು ಬೇರೊಂದು ದ್ವೀಪದಲ್ಲಿ ವಾಸಿಸುತ್ತಿರುವುದಾಗಿ ಹೇಳುತ್ತಾಳೆ. ಆಳ್ವಾರರು ತಕ್ಷಣವೇ ತಮ್ಮ ಶಿಷ್ಯರೊಂದಿಗೆ ಆ ಸ್ಥಳಕ್ಕೆ ಹೊರಡುತ್ತಾರೆ ಮತ್ತು ವಿಶ್ವಕರ್ಮನಿಗೆ ಹೋಲಿಸಬಹುದಾದ ಆ ಶಿಲ್ಪಿಯ ಬಗ್ಗೆ ವಿಚಾರಿಸುತ್ತಾರೆ. ಅಲ್ಲಿಯ ಜನರು ಆಳ್ವಾರರಿಗೆ ಒಂದು ಬಹು ದೊಡ್ಡದಾದ ಮತ್ತು ಸುಂದರವಾದ ಅರಮನೆಗೆ ದಾರಿ ತೋರಿಸುತ್ತಾರೆ ಮತ್ತು ಆಳ್ವಾರರು ಆ ಅರಮನೆಯನ್ನು ತಲುಪುತ್ತಾರೆ. ತಮ್ಮ ಶಿಷ್ಯರೊಂದಿಗೆ ಅವರು ಅರಮನೆಯ ಹೊರಗೆ ಇರುವ ವಿವಿಧ ವಸ್ತುಗಳ ಬಗ್ಗೆ ಚರ್ಚಿಸಲು ಪ್ರಾರಂಭಿಸುತ್ತಾರೆ ಮತ್ತು ಅದೇ ಸಮಯದಲ್ಲಿ ಶಿಲ್ಪಿಯು ತನ್ನ ಸ್ನಾನ ಮತ್ತು ಭೋಜನವನ್ನು ಮುಗಿಸಿ ಹೊರಗೆ ಬರುತ್ತಾನೆ. ಆತನನ್ನು ನೋಡಿ ಆಳ್ವಾರರು ತಂತ್ರಯುಕ್ತವಾಗಿ ಬಹು ವಿಷಾದದಿಂದ ಹೇಳುತ್ತಾರೆ “ಒಹ್ ! ಕೆಲವು ಆಕ್ರಮಣಕಾರರು ಬಂದು ನಾಗಪಟ್ಟಿಣಂನ ದೇವಸ್ಥಾನವನ್ನು ನಾಶಮಾಡಿದರು ಮತ್ತು ಅದರ ಸುವರ್ಣ ವಿಗ್ರಹವನ್ನು ಕೊಂಡೊಯ್ದರು. ನಾವು ಇನ್ನೂ ಈ ಜಗತ್ತಿನಲ್ಲಿ ಏಕೆ ಜೀವಿಸಿದ್ದೇವೆ?”. ಇದನ್ನು ಕೇಳಿದ ಶಿಲ್ಪಿಯು ಅತೀವ ಸಂಕಟಪಡುತ್ತಾನೆ, ಜೋರಾಗಿ ಅಳು ಆರಂಭಿಸುತ್ತಾನೆ ಮತ್ತು ಹೇಳುತ್ತಾನೆ “ಇದು ದುರುದ್ದೇಶಪೂರಿತರಾದ ಶಿಲ್ಪಿಗಳಲ್ಲೊಬ್ಬನಿರಬೇಕು ಈ ರಹಸ್ಯವನ್ನು ಬಯಲುಮಾಡಿರುವುದು – ವಿಮಾನದ ತುದಿಯನ್ನು ತೆರೆದು ಯಾರಾದರೂ ಅಲ್ಲಿ ಪ್ರವೇಶಿಸಬಹುದು. ನಾನು ಅತ್ಯಂತ ಜಟಿಲವಾದ ಕೀಲಿಕೈಯನ್ನು ಮಾಡಿದ್ದೆ – ಒಂದು ಕಲ್ಲಿನೊಳಗೆ ಒಂದು ತಿರುಚಿದ ಕಬ್ಬಿಣದ ಸರಪಣಿ ಮತ್ತು ಅದನ್ನು ನೀರು ಬೀಳುವ ಕಡೆ ಚಪ್ಪಡಿಯ ಕೆಳಗೆ ಇಟ್ಟಿದ್ದೆ ಮತ್ತು ಅದನ್ನು ಹೇಗೆ ಅವರು ಒಡೆದರು?”, ಹೀಗೆ ತನಗೆ ಅರಿವಿಲ್ಲದಂತೆಯೇ ವಾಸ್ತವಿಕ ರಹಸ್ಯವನ್ನು ಬಯಲುಮಾಡಿದನು.

ರಹಸ್ಯವು ತಿಳಿದಿದ್ದರಿಂದಾಗಿ, ಆಳ್ವಾರರು ತಕ್ಷಣವೇ ತಮ್ಮ ಶಿಷ್ಯರೊಂದಿಗೆ ಆ ಸ್ಥಳದಿಂದ ಹೊರಡುತ್ತಾರೆ ಮತ್ತು ನಾಗಪಟ್ಟಿಣಂಗೆ ಹಿಂತಿರುಗಲು ಸಮುದ್ರ ತೀರವನ್ನು ತಲುಪುತ್ತಾರೆ. ಅವರು ಒಬ್ಬ ಗುಣಶೀಲನಾದ ವರ್ತಕನು ಒಂದು ದೊಡ್ಡ ಅಡಿಕೆಯ ಸರಕಿನೊಂದಿಗೆ ತನ್ನ ಹಡಗನ್ನು ಏರುವುದನ್ನು ನೋಡುತ್ತಾರೆ ಮತ್ತು ಅವನನ್ನು ಹರಸುತ್ತಾರೆ ಮತ್ತು ತಮ್ಮನ್ನು ಸಮುದ್ರದ ಇನ್ನೊಂದು ತಟಕ್ಕೆ ಕರೆದುಕೊಂಡು ಹೋಗಲು ವಿನಂತಿಸಿಕೊಳ್ಳುತ್ತಾರೆ. ಅವನು ಒಪ್ಪಿಕೊಳ್ಳುತ್ತಾನೆ ಮತ್ತು ಅವರೆಲ್ಲರೂ ಹಡಗನ್ನು ಏರುತ್ತಾರೆ ಮತ್ತು ಪ್ಪ್ರಯಾಣವನ್ನು ಆರಂಭಿಸುತ್ತಾರೆ. ಆಳ್ವಾರರು ಒಂದು ಅಡಿಕೆಯನ್ನು ತೆಗೆದುಕೊಳ್ಳುತ್ತಾರೆ ಮತ್ತು ಅದನ್ನು ಎರಡು ಭಾಗ ಮಾಡುತ್ತಾರೆ ಮತ್ತು ವರ್ತಕನಿಗೆ ಕೊಡುತ್ತಾರೆ ಮತ್ತು ಅದನ್ನು ಪ್ರಯಾಣ ಮುಗಿದ ನಂತರ ತೆಗೆದುಕೊಳ್ಳುತ್ತೇನೆಂದು ಹೇಳುತ್ತಾರೆ ಮತ್ತು ಒಂದು ಚೀಟಿಯಲ್ಲಿ ತನ್ನ ಸಹಿಯೊಂದಿಗೆ ಹೀಗೆ ಬರೆದುಕೊಡಲು ಹೇಳುತ್ತಾರೆ “ನಾನು ನನ್ನ ಹಡಗಿನ ಅರ್ಧ ಅಡಿಕೆಯನ್ನು ಆಳ್ವಾರರಿಂದ ಸಾಲ ಪಡೆದಿದ್ದೇನೆ”. ಆ ವರ್ತಕನು ಹಾಗೆಯೇ ಮಾಡುತ್ತಾನೆ ಮತ್ತು ನಾಗಪಟ್ಟಿಣಂ ತಲುಪಿದ ನಂತರ ಆಳ್ವಾರರು ಬೆಲೆಬಾಳುವ ಅಡಿಕೆಯ ಆ ಹಡಗಿನ ಅರ್ಧ ಸರಕನ್ನು ಕೊಡಲು ಹೇಳುತ್ತಾರೆ (ಅದನ್ನು ಶ್ರೀರಂಗಂನ ದೇವಸ್ಥಾನದ ಕೈಂಕರ್ಯಕ್ಕೆ ಉಪಯೋಗಿಸಲು). ವರ್ತಕನು ಆಘಾತಗೊಳ್ಳುತ್ತಾನೆ ಮತ್ತು ಹಾಗೆ ಮಾಡಲು ನಿರಾಕರಿಸುತ್ತಾನೆ. ಅವರಿಬ್ಬರೂ ವಾದ ಮಾಡುತ್ತಾರೆ ಮತ್ತು ಒಂದು ನಿಷ್ಪಕ್ಷಪಾತ ತೀರ್ಪಿಗಾಗಿ ಎಲ್ಲ ವರ್ತಕರನ್ನೂ ಒಟ್ಟಿಗೆ ಕರೆತರಲು ನಿರ್ಧರಿಸುತ್ತಾರೆ ಮತ್ತು ಎಲ್ಲ ವರ್ತಕರೂ ಈ ವ್ಯಾಪಾರಿಯು ಹಡಗಿನ ಅರ್ಧ ಸರಕನ್ನು ಆಳ್ವಾರರಿಗೆ ನೀಡಬೇಕೆಂದು ಸ್ಪಷ್ಟಪಡಿಸುತ್ತಾರೆ. ಆ ವರ್ತಕನು ಬೇರೆ ದಾರಿಯಿಲ್ಲದೆ ಹಡಗಿನ ಅರ್ಧ ಸರಕಿನ ಹಣವನ್ನು ಆಳ್ವಾರರಿಗೆ ಕೊಡುತ್ತಾನೆ ಮತ್ತು ಹೊರಡುತ್ತಾನೆ.

ಆಳ್ವಾರರು ಮತ್ತು ಅವರ ಶಿಷ್ಯರು ನಂತರ ದೇವಸ್ಥಾನಕ್ಕೆ ಹೋಗುತ್ತಾರೆ ಮತ್ತು ರಾತ್ರಿಯಾಗುವವರೆಗೆ ಅಲ್ಲಿ ಅವಿತುಕೊಳ್ಳುತ್ತಾರೆ. ರಾತ್ರಿಯಾದಾಗ ಅವರು ಚಪ್ಪಡಿ ಕಲ್ಲನ್ನು ಒಡೆಯುತ್ತಾರೆ, ಕೀಲಿಕೈಯನ್ನು ತೆಗೆದುಕೊಳ್ಳುತ್ತಾರೆ, ವಿಮಾನದ ತುದಿಗೆ ಹೋಗುತ್ತಾರೆ ಮತ್ತು ಅದನ್ನು ಎರಡೂ ಬದಿಯಲ್ಲಿ ತಿರುಗಿಸುವ ಮೂಲಕ ಪ್ರವೇಶದ್ವಾರವನ್ನು ತೆರೆಯುತ್ತಾರೆ ಮತ್ತು ಅತೀವವಾಗಿ ಹೊಳೆಯುವ ವಿಗ್ರಹವನ್ನು ನೋಡುತ್ತಾರೆ. ಆಳ್ವಾರರನ್ನು ನೋಡಿ ವಿಗ್ರಹವು ಹೇಳುತ್ತದೆ “ಈಯತ್ತಾಲ್ ಆಗಾತೋ ಇರುಂಬಿನಾಲ್ ಆಗಾತೋ, ಭೂಯತ್ತಾಲ್ ಮಿಕ್ಕತೊರು ಭೂತತ್ತಾಲ್ ಆಗಾತೋ, ತೇಯತೇಯ್ ಪಿತ್ತಳೈ ನರ್ಚೆಂಬುಗಳಾಲಾಗಾತೋ, ಮಾಯಪ್ಪೊನ್ ವೇಣುಮೋ ಮತಿತ್ತೆನ್ನೈಪ್ಪಣ್ಣುಗೈಕ್ಕೇ” ಅರ್ಥಾತ್ “ನೀವು ಕಬ್ಬಿಣ, ತಾಮ್ರ, ಕಂಚು, ಇತ್ಯಾದಿಗಳನ್ನು ಉಪಯೋಗಿಸಬಾರದಿತ್ತೇ? ನಾನು ದಿವ್ಯ ಸುವರ್ಣದಿಂದ ಮಾಡಲ್ಪಟ್ಟಿರುವುದರಿಂದ ನೀವು ಇಲ್ಲಿ ಬಂದು ನನ್ನನ್ನು ಭಗವಂತನ ಕೈಂಕರ್ಯಕ್ಕೆ ಉಪಯೋಗಿಸಲು ಅನುವಾಯಿತು”. ಆಳ್ವಾರರು ನಂತರ ತಮ್ಮ ಭಾವನಿಗೆ ವಿಗ್ರಹವನ್ನು ತೆಗೆದುಕೊಂಡು ಬರಲು ಹೇಳುತ್ತಾರೆ ಮತ್ತು ಎಲ್ಲರೊಂದಿಗೆ ಆ ಸ್ಥಳದಿಂದ ಹೊರಡುತ್ತಾರೆ.

ಮಾರನೆಯ ದಿನ ಬೆಳಿಗ್ಗೆ ಅವರು ಒಂದು ಚಿಕ್ಕ ಪಟ್ಟಣವನ್ನು ತಲುಪುತ್ತಾರೆ, ಅಲ್ಲಿ ಆಗ ತಾನೇ ಉಳುಮೆ ಮಾಡಿದ್ದ ಒಂದು ಚಿಕ್ಕ ಹೊಲದಲ್ಲಿ ಸುರಕ್ಷತೆಗಾಗಿ ಆಳ್ವಾರರು ವಿಗ್ರಹವನ್ನು ಹೂಳುತ್ತಾರೆ ಮತ್ತು ಅಲ್ಲಿಯೇ ವಿರಮಿಸುತ್ತಾರೆ. ರೈತರು ಬಂದು ಹೊಲವನ್ನು ಉಳಲು ಪ್ರಾರಂಭಿಸಿದಾಗ ಅವರು ವಿಗ್ರಹವನ್ನು ನೋಡುತ್ತಾರೆ ಮತ್ತು ಅದು ತಮ್ಮದೆಂದು ಸಾರುತ್ತಾರೆ. ಆಳ್ವಾರರು ಅದು ತಮ್ಮ ಪೂರ್ವಜರಿಗೆ ಸೇರಿದ್ದೆಂದು ಅವರು ಅದನ್ನು ಹೊಲದಲ್ಲಿ ಹೂತಿದ್ದರೆಂದು ಹೇಳುತ್ತಾರೆ. ಒಂದು ವಾದವು ಶುರುವಾಗುತ್ತದೆ ಮತ್ತು ಆಳ್ವಾರರು ಕಡೆಯದಾಗಿ ತಮ್ಮ ಒಡೆತನವನ್ನು ಸಾಬೀತುಪಡಿಸುವ ಪ್ರಮಾಣಪತ್ರವನ್ನು ಮರುದಿನ ಬೆಳಗ್ಗೆ ತೋರಿಸುವುದಾಗಿ ಹೇಳುತ್ತಾರೆ ಮತ್ತು ರೈತರು ಒಪ್ಪಿಕೊಳ್ಳುತ್ತಾರೆ ಮತ್ತು ಅಲ್ಲಿಂದ ಹೊರಡುತ್ತಾರೆ. ಸೂರ್ಯಾಸ್ತದ ನಂತರ, ಆಳ್ವಾರರು ಮತ್ತು ಅವರ ಶಿಷ್ಯರು ವಿಗ್ರಹದೊಂದಿಗೆ ಆ ಸ್ಥಳದಿಂದ ಹೊರಡುತ್ತಾರೆ, ಉತ್ತಮರ್ ಕೋಯಿಲ್ ದಿವ್ಯದೇಶವನ್ನು ತಲುಪುತ್ತಾರೆ ಮತ್ತು ವಿಗ್ರಹವನ್ನು ಅಲ್ಲಿ ಭದ್ರವಾಗಿ ಮುಚ್ಚಿಡುತ್ತಾರೆ. ಇದೇ ಸಮಯದಲ್ಲಿ ನಾಗಪಟ್ಟಿಣಂನ ದೇವಸ್ಥಾನದ ನಿರ್ವಾಹಕರು ಮತ್ತು ಸ್ಥಳೀಯ ನಾಯಕರು ವಿಗ್ರಹವು ಕಳ್ಳತನವಾಗಿರುವುದನ್ನು ತಿಳಿಯುತ್ತಾರೆ ಮತ್ತು ಅದನ್ನು ಹೂಳಿದ್ದ ಹೊಲದವರೆಗೆ ಅದರ ಸುಳಿವನ್ನು ಕಂಡುಹಿಡಿಯುತ್ತಾರೆ ಮತ್ತು ಕಡೆಯದಾಗಿ ಉತ್ತಮರ್ ಕೋಯಿಲ್ ಗೆ ತಲುಪುತ್ತಾರೆ. ಅವರು ಆಳ್ವಾರರನ್ನು ವಿಗ್ರಹದ ಬಗ್ಗೆ ಕೇಳಿದಾಗ, ಮೊದಲು ಅವರು ವಿಗ್ರಹದ ಬಗ್ಗೆ ಏನೂ ತಿಳಿಯದೆಂದು, ಆದರೆ ನಂತರ ಮಳೆಗಾಲ ಮುಗಿದ ಮೇಲೆ ಪಂಗುನಿ ಮಾಸದಲ್ಲಿ ವಿಗ್ರಹವನ್ನು ಸಂಪೂರ್ಣವಾಗಿ ಬೆರಳಿನವರೆಗೆ ಹಿಂತಿರುಗಿಸುವುದಾಗಿ ಹೇಳುತ್ತಾರೆ. ಅದರಂತೆಯೇ ಒಂದು ದಾಖಲೆಪತ್ರವನ್ನು ಬರೆದು, ಸಹಿ ಮಾಡಿ ಮತ್ತು ಸಹಿಯೊಂದಿಗೆ ಅದನ್ನು ಅವರಿಗೆ ಕೊಡುತ್ತಾರೆ ಮತ್ತು ಅವರು ಅದನ್ನು ಸ್ವೀಕರಿಸಿ ಅಲ್ಲಿಂದ ಹೊರಡುತ್ತಾರೆ. ಆಳ್ವಾರರು ವಿಗ್ರಹವನ್ನು ಕೂಡಲೇ ಕರಗಿಸುತ್ತಾರೆ, ಅದನ್ನು ಮಾರಿ ಹಣ ಪಡೆಯುತ್ತಾರೆ ಮತ್ತು ಶ್ರೀರಂಗಮ್ ದೇವಸ್ಥಾನದ ಸುತ್ತಲೂ ಕೋಟೆಯನ್ನು ಕಟ್ಟಲು ಪ್ರಾರಂಭಿಸುತ್ತಾರೆ. ಅವರು ತೊಂಡರಡಿಪ್ಪೊಡಿ ಆಳ್ವಾರರು ಸಿದ್ಧಪಡಿಸಿದ್ದ ನಂದವನವನ್ನು ಪ್ರವೇಶಿಸುತ್ತಾರೆ ಮತ್ತು ಜಾಗರೂಕವಾಗಿ ಆ ಸ್ಥಳವನ್ನು ಭಂಗ ಮಾಡದೆ ಅತಿ ಗೌರವಯುತವಾಗಿ ಹೊರಬರುತ್ತಾರೆ. ತಿರುಮಂಗೈ ಆಳ್ವಾರರ ಈ ಕ್ರಿಯೆಯಿಂದ ಬಹು ಸಂತೋಷಗೊಂಡ ತೊಂಡರಡಿಪ್ಪೊಡಿ ಆಳ್ವಾರರು ಅವರ ತೋಟದ ಉಪಕರಣವನ್ನು ಅರುಳ್ ಮಾರಿ (ತಿರುಮಂಗೈ ಆಳ್ವಾರರ ಒಂದು ಹೆಸರು) ಎಂದು ಬಹು ಪ್ರೀತಿಯೊಂದಿಗೆ ಹೆಸರಿಸುತ್ತಾರೆ. ಹೀಗೆ ಆಳ್ವಾರರು ಈ ರೀತಿಯಾದ ಅನೇಕ ಕೈಂಕರ್ಯಗಳನ್ನು ಮಾಡಿದರು ಮತ್ತು ಎಂಬೆರುಮಾನನಿಗೆ ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಿದರು.

ಮಳೆಗಾಲದ ನಂತರ ಅವರೆಲ್ಲರೂ ವಿಗ್ರಹವನ್ನು ಹುಡುಕಿಕೊಂಡು ಬರುತ್ತಾರೆ. ಅವರು ದಾಖಲೆಪತ್ರವನ್ನು ಓದಲು ಹೇಳುತ್ತಾರೆ ಮತ್ತು ದಾಖಲೆಪತ್ರದಲ್ಲಿ ಬರೆದಿರುವಂತೆ ಒಂದು ಚಿಕ್ಕ ಬೆರಳನ್ನು ಹಿಂತಿರುಗಿಸುತ್ತಾರೆ. ಒಂದು ಉದ್ವೇಗಯುತವಾದ ಚರ್ಚೆಯು ನಡೆಯುತ್ತದೆ ಮತ್ತು ಅವರು ಮಧ್ಯಸ್ಥರ ಬಳಿಗೆ ಹೋಗುತ್ತಾರೆ ಮತ್ತು ಮಧ್ಯಸ್ಥರು ದಾಖಲೆಪತ್ರದಲ್ಲಿರುವ ಒಪ್ಪಂದದ ಪ್ರಕಾರ ಅವರು ಬೆರಳನ್ನು ಸ್ವೀಕರಿಸಿ ಹಿಂತಿರುಗಬೇಕೆಂದು ತೀರ್ಪು ನೀಡುತ್ತಾರೆ. ಅವರು ಆಳ್ವಾರರ ಜಾಣತನವನ್ನು ಅರಿಯುತ್ತಾರೆ ಮತ್ತು ಏನನ್ನೂ ತೆಗೆದುಕೊಳ್ಳದೆ ಹಿಂತಿರುಗುತ್ತಾರೆ. ತರುವಾಯ ಆಳ್ವಾರರು ಆ ದೇವಸ್ಥಾನದ ಶಿಲ್ಪಿಗಳನ್ನು ಆಹ್ವಾನಿಸುತ್ತಾರೆ ಮತ್ತು ಅವರಿಗೆ ಸ್ವಲ್ಪ ಸಂಪತ್ತನ್ನು ಕೊಡಲು ಬಯಸಿರುವುದಾಗಿ ಹೇಳುತ್ತಾರೆ ಮತ್ತು ಆ ನಿಧಿಯು ಸಮೀಪದ ದ್ವೀಪವೊಂದರಲ್ಲಿರುವುದಾಗಿ ಹೇಳುತ್ತಾರೆ. ಅವರು ಎಲ್ಲರನ್ನು ಒಂದು ದೋಣಿಯಲ್ಲಿ ಹತ್ತಿಸುತ್ತಾರೆ ಮತ್ತು ಸ್ವಲ್ಪ ದೂರ ನೀರಿನಲ್ಲಿ ಹೋದ ನಂತರ ಅವರು ಅಂಬಿಗನಿಗೆ ಸಂಜ್ಞೆ ಮಾಡುತ್ತಾರೆ, ಅಂಬಿಗನು ಆಳ್ವಾರರೊಂದಿಗೆ ಇನ್ನೊಂದು ಚಿಕ್ಕ ದೋಣಿಗೆ ಧುಮುಕುತ್ತಾನೆ ಮತ್ತು ಎಲ್ಲ ಶಿಲ್ಪಿಗಳಿರುವ ಆ ದೋಣಿಯನ್ನು ಬಗ್ಗಿಸುತ್ತಾನೆ ಮತ್ತು ಅವರೆಲ್ಲರನ್ನೂ ಮುಳುಗಿಸುತ್ತಾನೆ. ಆಳ್ವಾರರು ತಮ್ಮ ಸ್ಥಳಕ್ಕೆ ಹಿಂತಿರುಗುತ್ತಾರೆ ಮತ್ತು ಆ ಶಿಲ್ಪಿಗಳ ಮೊಮ್ಮಕ್ಕಳು ಅಲ್ಲಿಗೆ ಬರುತ್ತಾರೆ ಮತ್ತು ತಮ್ಮ ತಾತಂದಿರ ಬಗ್ಗೆ ವಿಚಾರಿಸುತ್ತಾರೆ. ಆಳ್ವಾರರು ಅವರಿಗೆ ದ್ವೀಪದಲ್ಲಿ ಅಪಾರ ಸಂಪತ್ತನ್ನು ತೋರಿಸಿರುವುದಾಗಿ ಮತ್ತು ಅವರು ಅದನ್ನು ಇಲ್ಲಿಗೆ ತರಲು ಗಂಟು ಕಟ್ಟುತ್ತಿರುವುದಾಗಿ ಹೇಳುತ್ತಾರೆ. ಮೊಮ್ಮಕ್ಕಳಿಗೆ ಆಳ್ವಾರರ ಮೇಲೆ ಸಂದೇಹವುಂಟಾಗಿ, ತಮ್ಮ ತಾತಂದಿರನ್ನು ಜೀವಂತವಾಗಿ ಹಿಂತಿರುಗಿಸುವವರೆಗೂ ತಾವು ಅಲ್ಲಿಂದ ಹೊರಡುವುದಿಲ್ಲವೆಂದು ಹೇಳುತ್ತಾರೆ. ಆಳ್ವಾರರು ಬಹು ಆತಂಕಗೊಳ್ಳುತ್ತಾರೆ ಮತ್ತು ಶ್ರೀರಂಗನಾಥನು ಅವರ ಸ್ವಪ್ನದಲ್ಲಿ ಕಾಣಿಸಿಕೊಳ್ಳುತ್ತಾನೆ ಮತ್ತು ಹೇಳುತ್ತಾನೆ “ಇನ್ನು ಚಿಂತಿಸಬೇಡ”. ಅವರು ನಂತರ ಅವರೆಲ್ಲರಿಗೂ ಕಾವೇರಿ ನದಿಗೆ ಹೋಗಿ, ಅಲ್ಲಿ ಸ್ನಾನ ಮಾಡಿ, ಊರ್ಧ್ವಪುಂಡ್ರಗಳನ್ನು ಧರಿಸಿ ಮತ್ತು ಮುಖ್ಯ ಮಂಟಪಕ್ಕೆ ಬಂದು ಮತ್ತು ಅವರ ತಾತಂದಿರುಗಳನ್ನು ಒಬ್ಬೊಬ್ಬರಾಗಿ ಹೆಸರನ್ನು ಕರೆದು ಆಹ್ವಾನಿಸುವಂತೆ ಹೇಳುತ್ತಾರೆ. ಅವರು ಎಂಬೆರುಮಾನನ ಆಜ್ಞೆಯನ್ನು ಒಪ್ಪಿಕೊಳ್ಳುತ್ತಾರೆ ಮತ್ತು ತಮ್ಮ ತಾತಂದಿರನ್ನು ಒಬ್ಬೊಬ್ಬರಾಗಿ ಆಹ್ವಾನಿಸುತ್ತಾರೆ. ಅವರ ಆಶ್ಚರ್ಯಕ್ಕೆ ಪ್ರತಿಯೊಬ್ಬರೂ ಶ್ರೀರಂಗನಾಥನ ಹಿಂದಿನಿಂದ ಬಂದು ಅವರ ಮುಂದೆ ಕಾಣಿಸಿಕೊಳ್ಳುತ್ತಾರೆ ಮತ್ತು ಅವರಿಗೆ ಹೇಳುತ್ತಾರೆ “ಆಳ್ವಾರರ ದಿವ್ಯ ಕೃಪೆಯಿಂದಾಗಿ ನಾವು ಪೆರಿಯ ಪೆರುಮಾಳರ ಪಾದಾರವಿಂದವನ್ನು ಸೇರಿದ್ದೇವೆ. ನೀವೂ ಕೂಡ ಅವರಲ್ಲಿ ಆಶ್ರಯವನ್ನು ಪಡೆಯಿರಿ, ಈ ಸಂಸಾರದಲ್ಲಿ ಕೆಲವು ಕಾಲ ಸಂತೋಷವಾಗಿರಿ ಮತ್ತು ನಿಮ್ಮನ್ನು ಉದ್ಧರಿಸಿಕೊಳ್ಳಿ”. ತಮ್ಮ ತಾತಂದಿರ ಆದೇಶದಂತೆ ಅವರಲ್ಲಿ ಪ್ರತಿಯೊಬ್ಬರೂ ಆಳ್ವಾರರನ್ನು ತಮ್ಮ ಆಚಾರ್ಯನನ್ನಾಗಿ ಸ್ವೀಕರಿಸುತ್ತಾರೆ ಮತ್ತು ಪರಿಣಾಮವಾಗಿ ತಮ್ಮ ಸ್ಥಳಕ್ಕೆ ಹಿಂತಿರುಗುತ್ತಾರೆ.

ಆನಂತರ ಪೆರಿಯ ಪೆರುಮಾಳ್ ಆಳ್ವಾರರಿಗೆ ಏನಾದರೂ ಬಯಕೆಗಳಿವೆಯೇ ಎಂದು ಕೇಳುತ್ತಾರೆ. ಆಳ್ವಾರರು ಎಂಬೆರುಮಾನನ ದಶಾವತಾರವನ್ನು ಪೂಜಿಸಲು ಇಚ್ಛಿಸುತ್ತೇನೆಂದು ಪೆರಿಯ ಪೆರುಮಾಳ್ ಗೆ ಹೇಳುತ್ತಾರೆ. ಪೆರಿಯ ಪೆರುಮಾಳ್ ಹೇಳುತ್ತಾರೆ “ಇದೇ ನಿನ್ನ ಬಯಕೆಯಾದರೆ ನೀನು ನನ್ನ ದಶಾವತಾರದ ಅರ್ಚಾವತಾರ ವಿಗ್ರಹಗಳನ್ನು ಪ್ರತಿಷ್ಠಾಪಿಸಬಹುದು” ಮತ್ತು ಕೂಡಲೇ ಆಳ್ವಾರರು ಶ್ರೀರಂಗಮ್ ನಲ್ಲಿ ದಶಾವತಾರ ಎಂಬೆರುಮಾನರ ಸನ್ನಿಧಿಯನ್ನು ಕಟ್ಟುತ್ತಾರೆ.

ತದನಂತರ, ಪೆರಿಯ ಪೆರುಮಾಳ್ ಆಳ್ವಾರರ ಭಾವನನ್ನು ಆಹ್ವಾನಿಸುತ್ತಾರೆ ಮತ್ತು ಆಳ್ವಾರರ ಒಂದು ಅರ್ಚಾ ವಿಗ್ರಹವನ್ನು ಸಿದ್ಧಪಡಿಸುವಂತೆ (ಏಕೆಂದರೆ ಆಳ್ವಾರರು ಅವರ ಭಾವನ ಆಚಾರ್ಯರು), ಮತ್ತು ಅದನ್ನು ತಿರುಕ್ಕುರೈಯಲೂರ್ ನಲ್ಲಿ ಪ್ರತಿಷ್ಠಾಪಿಸಿ, ಅಲ್ಲಿ ಒಂದು ಭವ್ಯವಾದ ದೇವಸ್ಥಾನವನ್ನು ನಿರ್ಮಿಸಿ ಮತ್ತು ಆಳ್ವಾರರ ಉತ್ಸವಗಳನ್ನು ವೈಭವೋಪೇತವಾಗಿ ನಡೆಸುವಂತೆ ಆದೇಶಿಸುತ್ತಾರೆ. ಅವರ ಭಾವನವರು ಕೂಡಲೇ ಅಳ್ವಾರ್ ಮತ್ತು ಅವರ ಪತ್ನಿ ಕುಮುದವಲ್ಲಿ ನಾಚಿಯಾರ್ ಅವರ ವಿಗ್ರಹಗಳನ್ನು ಸಿದ್ಧಪಡಿಸುತ್ತಾರೆ, ಎಲ್ಲರೊಂದಿಗೆ ತಿರುಕ್ಕುರೈಯಲೂರ್ ಗೆ ಹೋಗುತ್ತಾರೆ ಮತ್ತು ಅರ್ಚಾ ವಿಗ್ರಹಗಳನ್ನು ಅಲ್ಲಿ ಪ್ರತಿಷ್ಠಾಪಿಸುತ್ತಾರೆ ಮತ್ತು ವೈಭವಯುತವಾದ ಉತ್ಸವಗಳನ್ನು ಅಲ್ಲಿ ನಡೆಸುತ್ತಾರೆ. ಆಳ್ವಾರರು ತಮ್ಮ ಶಿಷ್ಯರನ್ನು ಹಾಗೂ ಇತರರನ್ನು ಉದ್ಧರಿಸುವುದನ್ನು ಮುಂದುವರಿಸುತ್ತಾರೆ ಮತ್ತು ಪೆರಿಯ ಪೆರುಮಾಳರನ್ನು ಉಪಾಯ ಮತ್ತು ಉಪೇಯವನ್ನಾಗಿಟ್ಟುಕೊಂಡು ನಿರಂತರವಾಗಿ ಧ್ಯಾನಿಸುತ್ತಾ ತಮ್ಮ ಜೀವನವನ್ನು ಕಳೆಯುತ್ತಾರೆ.

ಅವರ ತನಿಯನ್:

ಕಲಯಾಮಿ ಕಲಿಧ್ವಂಸಮ್ ಕವಿಮ್ ಲೋಕ ದಿವಾಕಾರಮ್ |
ಯಸ್ಯ ಕೋಬಿ: ಪ್ರಕಾಶಾಭಿರ್ ಆವಿದ್ಯಮ್ ನಿಹತಮ್ ತಮ: ||

ಅವರ ಅರ್ಚಾವತಾರ ಅನುಭವವನ್ನು ಇಲ್ಲಿ ಈಗಾಗಲೇ ವಿವರಿಸಲಾಗಿದೆ:
http://ponnadi.blogspot.in/2012/10/archavathara-anubhavam-thirumangai.html.

ಅಡಿಯೇನ್ ಪಾರ್ಥಸಾರಥಿ ರಾಮಾನುಜ ದಾಸನ್

ಮೂಲ: http://guruparamparai.wordpress.com/2013/01/23/thirumangai-azhwar/

ರಕ್ಷಿತ ಮಾಹಿತಿ:  https://guruparamparaikannada.wordpress.com

ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಧರ್ಮಗ್ರಂಥಗಳು) – http://granthams.koyil.org
ಪ್ರಮಾತಾ (ಭೋಧಕರು) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org

ಆಂಡಾಳ್ (ಗೋದಾ ದೇವಿ )

ಶ್ರೀ:
ಶ್ರೀಮತೇ ಶಠಕೋಪಾಯ ನಮ:
ಶ್ರೀಮತೇ ರಾಮಾನುಜಾಯ ನಮ:
ಶ್ರೀಮದ್ ವರವರಮುನಯೇ ನಮ:
ಶ್ರೀ ವಾನಾಚಲ ಮಹಾಮುನಯೇ ನಮ:

ತಿರುನಕ್ಷತ್ರ : ತಿರುವಾಡಿಪ್ಪೂರಂ

ಅವತಾರ ಸ್ಥಳ : ಶ್ರೀವಿಲ್ಲಿಪುತ್ತೂರ್

ಆಚಾರ್ಯರು : ಪೆರಿಯಾಳ್ವಾರ್

ಕೃತಿಗಳು : ತಿರುಪ್ಪಾವೈ, ನಾಚ್ಚಿಯಾರ್ ತಿರುಮೊೞಿ 

ತಿರುಪ್ಪಾವೈ ೬೦೦೦ ಪಡಿ ವ್ಯಾಖ್ಯಾನದಲ್ಲಿ ಪೆರಿಯಾವಾಚ್ಚಾನ್ ಪಿಳ್ಳೈ ಮೊದಲಿಗೆ ಎಲ್ಲಾ ಆಳ್ವಾರುಗಳಿಗಿಂತಲೂ ಗೋದೆಗಿರುವ ವೈಶಿಷ್ಟ್ಯವನ್ನು ಎತ್ತಿ ತೋರಿದ್ದಾರೆ. ಅವರು ಜೀವಾತ್ಮಾಗಳಲ್ಲಿರುವ ವಿವಿಧ ಸ್ತರಗಳನ್ನು ತೋರಿ, ಅವರುಗಳ ನಡುವೆ ಇರುವ ವ್ಯತ್ಯಾಸಗಳನ್ನೂ ಅದ್ಭುತವಾಗಿ ತೋರಿದ್ದಾರೆ.ಸಂಸಾರಿಗಳಿಗೂ (ದೇಹಾತ್ಮಾಭಿಮಾನಿಗಳು) ಮತ್ತು ಆತ್ಮ ಸ್ವರೂಪವನ್ನರಿತ ಋಷಿಗಳಿಗೂ ನಡುವಿನ ಭೇದವು ಚಿಕ್ಕ ಕಲ್ಲಿಗೂ ದೊಡ್ಡ ಪರ್ವತಕ್ಕೂ ಇರುವ ಭೇದದಂತೆ.

ಅಂತಹ ಋಷಿಗಳಿಗೂ (ಸ್ವಪ್ರಯತ್ನದಿಂದ ಜ್ಞಾನವನ್ನು ಸಂಪಾದಿಸಿದವರು, ಮತ್ತು ತಮ್ಮ ಕರ್ಮಾನುಸಾರ ಕೆಲವೊಮ್ಮೆ ಅಧಃಪತನಕ್ಕೆ ಆಸ್ಪದವಿರುವವರು) ಮತ್ತು ಆಳ್ವಾರುಗಳಿಗೂ (ಭಗವಂತನ ಕೃಪೆಯಿಂದ ಅನುಗ್ರಹಿಸಲ್ಪಟ್ಟ ಜ್ಞಾನವನ್ನು ಹೊಂದಿದವರು, ಮತ್ತು ಅದೇ ಕಾರಣದಿಂದಾಗಿ ಪರಿಶುದ್ಧರಾಗಿರುವವರು) ನಡುವಿನ ವ್ಯತ್ಯಾಸವು ಅದೇ ಚಿಕ್ಕ ಕಲ್ಲಿಗೂ ದೊಡ್ಡ ಪರ್ವತಕ್ಕೂ ಇರುವಷ್ಟು.ಇತರ ಆಳ್ವಾರುಗಳಿಗೂ (ಒಮ್ಮೆ ಸ್ವಾನುಭವದಲ್ಲಿ ಮುಳುಗಿ, ಮಗದೊಮ್ಮೆ ಮಂಗಳಾಶಾಸನಪರರಾಗುವವರು) ಮತ್ತು ಪೆರಿಯಾಳ್ವಾರ್‌ರಿಗೂ (ಸದಾ ಮಂಗಳಾಶಾಸನಪರರಾದವರು) ನಡುವೆ ಅದೇ ಚಿಕ್ಕ ಕಲ್ಲಿಗೂ ದೊಡ್ಡ ಪರ್ವತಕ್ಕೂ ಇರುವ ವ್ಯತ್ಯಾಸ.ಹಾಗೆಯೇ ಪೆರಿಯಾಳ್ವಾರ್ ಮತ್ತು ಅಂಡಾಳ್ ನಡುವಿನ  ವ್ಯತ್ಯಾಸವೂ ಚಿಕ್ಕ ಕಲ್ಲಿಗೆ ಮತ್ತು ದೊಡ್ಡ ಪರ್ವತಕ್ಕೆ ಇರುವ ಅಂತರವನ್ನು ಹೋಲುತ್ತದೆ. ಅದಕ್ಕೆ ಕಾರಣಗಳೇನೆಂದರೆ :

 • ಎಲ್ಲಾ ಆಳ್ವಾರುಗಳೂ ಮೊದಲು ಶ್ರೀಮನ್ನಾರಾಯಣನಿಂದ ಅನುಗ್ರಹಿಸಲ್ಪಟ್ಟು ನಂತರದಲ್ಲಿ ಸಂಸಾರಿಗಳನ್ನು ಎಚ್ಚರಿಸಿದರು (ಭಗವಂತನ ಬಗೆಗೆ ಜ್ಞಾನವನ್ನು ನೀಡಿದರು). ಆದರೆ ಅಂಡಾಳ್ ಸಾಕ್ಷಾತ್ ಭೂಮಿ ದೇವಿಯ ಅವತಾರವಾಗಿದ್ದು ತಾನೇ ಭಗವಂತನನ್ನು ಎಚ್ಚರಗೊಳಿಸಿ ಎಲ್ಲರನ್ನು ರಕ್ಷಿಸುವ ಜವಾಬ್ದಾರಿಯನ್ನು ಜ್ಞಾಪಿಸಿದಳು. ನಂಪಿಳ್ಳೈ ತಮ್ಮ ತಿರುವಿರುತ್ತಮ್ ಮತ್ತು ತಿರುವಯ್ಮೊೞಿ ವ್ಯಾಖ್ಯಾನಗಳಲ್ಲಿ ತೋರಿಸಿರುವಂತೆ ಆಳ್ವಾರುಗಳೆಲ್ಲರೂ ಮೊದಲು ಸಂಸಾರಿಗಳಾಗಿದ್ದು ನಂತರದಲ್ಲಿ ಭಗವಂತನಿಂದ ಅನುಗ್ರಹ ಹೊಂದಿದವರು. ಆದರೆ ಆಂಡಾಳ್ ಸಾಕ್ಷಾತ್ ಭೂಮಿದೇವಿಯ ಅವತಾರ. ಅವಳು ನಿತ್ಯಸೂರಿಯೇ ಆಗಿದ್ದು ವಿಶೇಷವಾಗಿ ಭಗವಂತನ ದಿವ್ಯ ಮಹಿಷಿಯರಲ್ಲಿ ಒಬ್ಬಳು. ಪೆರಿಯಾವಾಚ್ಚಾನ್ ಪಿಳ್ಳೈಯೂ ನಂಪಿಳ್ಳೈ ವ್ಯಾಖ್ಯಾನವನ್ನು ಅನುಸರಿಸಿ ಅದೇ ಶೈಲಿಯಲ್ಲಿ ವ್ಯಾಖ್ಯಾನಿಸಿರುವುದು ವಿಶೇಷ.
 • ಗೋದೆಯು ಸ್ವತಃ ಸ್ತ್ರೀಯಾಗಿದ್ದು ಆಕೆಯ ಸ್ವರೂಪಕ್ಕನುಗುಣವಾಗಿ ಭಗವಂತನೊಂದಿಗೆ ಪತಿ-ಪತ್ನಿ ಸಂಬಂಧದಲ್ಲಿ ತೊಡಗಿಸಿಕೊಳ್ಳತಕ್ಕವಳು (ಮಿಕ್ಕ ಎಲ್ಲಾ ಆಳ್ವಾರುಗಳೂ ಪುರುಷರಾಗಿ ಅವತರಿಸಿದ ಕಾರಣ ಸ್ತ್ರೀಸ್ವಭಾವವನ್ನು ಆಪಾದಿಸಿಕೊಳ್ಳಬೇಕಿತ್ತು). ಅಲ್ಲದೆ, ಆಕೆಗೆ ಭಗವಂತನಲ್ಲಿದ್ದ ಪ್ರೇಮ ಸಹಜವಾಗಿ ಉಳಿದ ಆಳ್ವಾರುಗಳ ಪ್ರೀತಿಗಿಂತ ಹೆಚ್ಚಾಗಿತ್ತು.

ಪಿಳ್ಳೈ ಲೋಕಾಚಾರ್ಯರು ತಮ್ಮ ‘ಶ್ರೀವಚನ ಭೂಷಣ’ ದಿವ್ಯಶಾಸ್ತ್ರದಲ್ಲಿ ಅಂಡಾಳ್ ವೈಭವವನ್ನು ಕೆಲವು ಸೂತ್ರಗಳಲ್ಲಿ ತಿಳಿಸಿದ್ದಾರೆ. ಅವುಗಳಲ್ಲಿ ಕೆಲವನ್ನು ಇಲ್ಲಿ ಅನುಭವಿಸೋಣ.

 • ಸೂತ್ರ ೨೩೮  – ಬ್ರಾಹ್ಮಣೋತ್ತಮರಾನ ಪೆರಿಯಾಳ್ವಾರುಮ್ ತಿರುಮಗಳಾರುಮ್ ಗೋಪಜನ್ಮತ್ತೈ ಆಸ್ಥಾನಮ್ ಪಣ್ಣಿನಾರ್ಗಳ್ (ப்ராஹ்மணோத்தமரான பெரியாழ்வாரும்  திருமகளாரும் கோபஜந்மத்தை ஆஸ்தாநம் பண்ணினார்கள்). ಈ ಪ್ರಕರಣದಲ್ಲಿ ಪಿಳ್ಳೈಲೋಕಾಚಾರ್ಯರು ಜನ್ಮ-ವರ್ಣ ಇತ್ಯಾದಿಗಳ ಭೇದವಿಲ್ಲದೆ ಭಾಗವತರ ವೈಭವವನ್ನು ವರ್ಣಿಸುತ್ತಾರೆ. ಇದರಲ್ಲಿ ಭಗವದನುಭವ/ಕೈಂಕರ್ಯಕ್ಕೆ ಪೂರಕವಾದ ಅನೇಕ ಜನ್ಮಗಳನ್ನಪೇಕ್ಷಿಸಿದ ಅನೇಕ ಉನ್ನತ ವ್ಯಕ್ತಿಗಳ ಉದಾಹರಣೆಗಳನ್ನು ನೀಡುತ್ತಾರೆ. ಈ ಸೂತ್ರದಲ್ಲಿ ಅವರು ಪೆರಿಯಾಳ್ವಾರ್ ಮತ್ತು ಆಂಡಾಳ್ ಇಬ್ಬರೂ ಬ್ರಾಹಣೋತ್ತಮರಾಗಿ ಜನಿಸಿದ್ದರೂ ಕೂಡ ತಾವುಗಳು ಸ್ವತಃ ಬೃಂದಾವನದಲ್ಲಿ ಒಬ್ಬ ಗೋಪಿಕೆಯ ಜನ್ಮವನ್ನು ಬಹಳವಾಗಿ ಅಪೇಕ್ಷಿಸಿದರು ಎಂಬುದನ್ನು ತೋರಿದ್ದಾರೆ. ಗೋದೆಯು ಭಗವಂತನಿಗೆ ಸಂತೋಷ ಉಂಟುಮಾಡುವ ಕೈಂಕರ್ಯವೇ ನಮ್ಮೆಲ್ಲರ ಮುಖ್ಯ ಗುರಿ, ಮತ್ತು ಪ್ರತಿಯೊಬ್ಬರೂ ಅಂತಹ ಕೈಂಕರ್ಯವು ಯಾವುದೇ ರೀತಿಯದ್ದಾದರೂ ಅದರ ಮಹತ್ತ್ವವನ್ನರಿತು ಅದಕ್ಕೆ ಹಂಬಲಿಸಬೇಕು ಎಂಬುದನ್ನು ಸ್ಪಷ್ಟವಾಗಿಯೇ ತೋರಿದ್ದಾಳೆ.
 • ಸೂತ್ರ ೨೮೫ – ಕೊಡುತ್ತುಕ್ಕೊಳ್ಳಾದೇ ಕೊಂಡತ್ತುಕ್ಕುಕ್ಕೈಕ್ಕೂಲಿ ಕೊಡುಕ್ಕವೇಣುಮ್ (கொடுத்துக் கொள்ளாதே கொண்டத்துக்குக் கைக்கூலி கொடுக்கவேணும்). ಈ ಪ್ರಕರಣದಲ್ಲಿ ಪಿಳೈ ಲೋಕಾಚಾಾರ್ಯರು ಪ್ರತಿಯೊಬ್ಬರೂ ಕೈಂಕರ್ಯವನ್ನು ಹೇಗೆ ಮಾಡಬೇಕೆಂಬುದನ್ನು ತಿಳಿಸುತ್ತಾರೆ. ಇದು ೨೩೮ನೇ ಸೂತ್ರಕ್ಕೆ ಸಂಬಂಧಪಟ್ಟಿದೆ. ಆ ಸೂತ್ರದಲ್ಲಿ ಪಿಳ್ಳೈ ಲೋಕಾಚಾರ್ಯರು ಭಗವಂತನಿಗೆ ಪ್ರೀತಿಜನಕವಾದ ಕೈಂಕರ್ಯವನ್ನು ಮಾಡಬೇಕೆಂಬುದನ್ನು ತೋರಿದ್ದಾರೆ. ಇದರ ಹಿಂದಿನ ಸೂತ್ರದಲ್ಲಿ (೨೮೪), ಪಿಳ್ಳೈ ಲೋಕಾಚಾರ್ಯರು ಈ ಎಲ್ಲ ಕೈಂಕರ್ಯಗಳ್ಳನ್ನೂ ಯಾವುದೇ ಪ್ರತಿಫಲಗಳನ್ನಾಶಿಸದೆ ಮಾಡಬೇಕೆನ್ನುತ್ತಾರೆ – ಅರ್ಥಾತ್, ಮಾಡಿದ ಕೈಂಕರ್ಯಕ್ಕೆ ಪ್ರತಿಯಾಗಿ ಮತ್ತೊಂದು ಫಲವನ್ನು ಅಪೇಕ್ಷಿಸಬಾರದು. ಈಗ ಈ ಸೂತ್ರದಲ್ಲಿ, ನಾವು ಕೈಂಕರ್ಯವನ್ನು ಮಾಡಿ ತನ್ಮೂಲಕ ಭಗವಂತನಿಗೆ ಪ್ರೀತಿಯುಂಟಾದಾಗ ಅದನ್ನು ವರ್ಧಿಸಲು ಮತ್ತಷ್ಟು ಕೈಂಕರ್ಯ ಮಾಡಬೇಕೆನ್ನುತ್ತಾರೆ. ಮಾಮುನಿಗಳು ಈ ವಿಷಯವನ್ನು ನಮ್ಮಗೆ ನಮ್ಮಗೆ ಆಂಡಾಳ್ ಶ್ರೀಸೂಕ್ತಿಗಳ ಮೂಲಕ ಸುಲಭವಾಗಿ ತಿಳಿಸಿಕೊಡುತ್ತಾರೆ. ಆಂಡಾಳ್ ತನ್ನ ನಾಚ್ಚಿಯಾರ್ ತಿರುಮೊೞಿ೯.೭ರಲ್ಲಿ “ಇನ್ಱು ವಂದು ಇತ್ತನೈಯುಮ್ ಅಮುದುಶೆಯ್ದಿಡಪ್ಪೆರಿಲ್, ನಾನ್ ಒನ್ಱು ನೂಱಾಯಿರಾಮಗ ಕ್ಕೊಡುತ್ತು ಪಿನ್ನುಮ್ ಆಳುಮ್ ಚೆಯ್ವನ್ ” ಎನ್ನುತ್ತಾಳೆ. ಇದರ ಹಿಂದಿನ ಪಾಶುರದಲ್ಲಿ ಆಂಡಾಳ್ ತಿರುಮಾಲಿರುಂಶೋಲೈ ಅಳಗರಿಗೆ (ಸುಂದರಬಾಹು ಪೆರುಮಾಳ್) ನೂರು ಪಾತ್ರೆಗಳಷ್ಟು ಬೆಣ್ಣೆ ಮತ್ತು ನೂರು ಪಾತ್ರೆಗಳಷ್ಟು ಅಕ್ಕಾರ ಅಡಿಶಿಲ್ (ಪರಮಾನ್ನ) ಸಮರ್ಪಿಸಬೇಕೆಂದು ಸಂಕಲ್ಪಿಸುತ್ತಾಳೆ. ಈ ಪಾಶುರದಲ್ಲಿ (೯-೭) ಆಂಡಾಳ್ ತಾನು ಸಮರ್ಪಿಸಿದ್ದನ್ನು ಭಗವಂತ ಸ್ವೀಕರಿಸಿದ್ದನ್ನು ನೋಡಿ ಅವನಿಗೆ ಇನ್ನಷ್ಟು ಅಮುದು ನೀಡಲು ಹೀಗೆಯೆ ಮತ್ತಷ್ಟು ಮಗದಷ್ಟು ಸಮರ್ಪಿಸುತ್ತಲೇ ಇರುತ್ತೇನೆ ಎನ್ನುತ್ತಾಳೆ. ಇದಕ್ಕೆ ಅವನ ಪ್ರೀತಿವರ್ಧನೆಯೇ ಪ್ರತಿಫಲವೇ ಹೊರತು ಬೇರಾವ ಪ್ರತಿಫಲವನ್ನೂ ಆಕೆ ಆಶಿಸುವುದಿಲ್ಲ. ಈ ವಿಧದಲ್ಲಿ ಆಂಡಾಳ್ ಈ ಪಾಶುರದ ಮುಖಾಂತರ ಸಂಪ್ರದಾಯದ ಅತ್ಯುತ್ಕೃಷ್ಟವಾದ ಅರ್ಥವನ್ನು ಬಹಳ ಸುಲಭವಾಗಿ ತೋರಿಸಿಬಿಟ್ಟಳು.

ಆಯಿ ಜನನ್ಯಾಚಾರ್ಯರು ಅವರ ವ್ಯಾಖ್ಯಾನ ಅವತಾರಿಕೆಯಲ್ಲಿ ತಿರುಪ್ಪಾವೈ ವೈಭವವನ್ನು (ಮತ್ತು ತನ್ಮೂಲಕ ಆಂಡಾಳ್ ವೈಭವವನ್ನು) ಅದ್ಭುತವಾಗಿ ವರ್ಣಿಸಿದ್ದಾರೆ. ಅವರು ನಮಗೆ ಎರಡು ವ್ಯಾಖ್ಯಾನಗಳನ್ನು ಕರುಣಿಸಿದ್ದಾರೆ – ೨೦೦೦ ಪಡಿ ಮತ್ತು ೪೦೦೦ ಪಡಿ. ಅವರು ಅವತಾರಿಕೆಯಲ್ಲಿ ಒಂದು ಘಟನೆಯನ್ನು ವಿವರಿಸುತ್ತಾರೆ. ಒಮ್ಮೆ ಎಂಬೆರುಮಾನಾರ್‌ರ ಶಿಷ್ಯರು ಅವರಲ್ಲಿ ತಿರುಪ್ಪಾವೈ ಉಪನ್ಯಾಸವನ್ನು ಮಾಡಿ ತಮ್ಮಗೆಲ್ಲ ಅದರ ಅರ್ಥಗಳನ್ನು ತಿಳಿಸಬೇಕೆಂದು ಪ್ರಾರ್ಥಿಸುತ್ತಾರ‍ೆ. ಅದಕ್ಕೆ ಎಂಬೆರುಮಾನಾರ್ “ನಿಮಗೆ ‘ತಿರುಪ್ಪಲ್ಲಾಣ್ಡು’ ಪ್ರಬಂಧಕ್ಕೆ ಅರ್ಥವನ್ನು ಹೇಳಲು ಮತ್ತು ಕೇಳಲು ಜನ ಸಿಗುತ್ತಾರೆ, ಆದರೆ ‘ತಿರುಪ್ಪಾವೈ’ಗೆ ಅರ್ಥವನ್ನು ಹೇಳಲೋ ಕೇಳಲೋ ಜನ ಸುಲಭದಲ್ಲಿ ಸಿಗರು” ಎನ್ನುತ್ತಾರ‍ೆ. ಇದರ ಅರ್ಥ- ಪೆರಿಯಾಳ್ವಾರ್‌ರು ತಿರುಪ್ಪಲ್ಲಾಣ್ಡನ್ನು ಭಗವಂತನಿಗೆ ಮಂಗಳಾಶಾಸನವಾಗಿ (ಪ್ರಥಮ ಪರ್ವ-ಮೊದಲ ಹಂತ) ಹಾಡಿದ್ದಾರೆ. ಇದೇ ನಿಷ್ಠೆಯಲ್ಲಿರುವ ಅನೇಕರು ನಮ್ಮಗೆ ಸುಲಭದಲ್ಲಿ ದೊರಕಬಹುದು.  ಆದರೆ ತಿರುಪ್ಪಾವೈಯನ್ನು ಆಂಡಾಳ್ ಭಾಗವತರಿಗೆ ಮಂಗಳಾಶಾಸನವಾಗಿ (ಚರಮ ಪರ್ವ – ಅಂತಿಮ ಹಂತ) ಹಾಡಿದ್ದಾಳೆ. ಈ ಉತ್ತಮ ನಿಷ್ಠೆಯಲ್ಲಿರುವ ಜನರು ಸಿಗುವುದು ಬಹಳ ದುರ್ಲಭ ಎಂಬುದಾಗಿದೆ. “ಗಂಡಸರು ತಿರುಪ್ಪಾವೈಯನ್ನು ಕೇಳಲು ಮತ್ತು ವಿವರಿಸಲು ಯೋಗ್ಯರಲ್ಲ” ಎನ್ನುತ್ತಾರೆ ಎಂಬೆರುಮಾನಾರ್. ಇದರರ್ಥ- ತನ್ನ ಗಂಡನ ಮೇಲೆ ಅವಲಂಬಿತಳಾದ ಸ್ತ್ರೀಯಂತೆ ಒಬ್ಬನಿಗೆ ಭಗವಂತನ ಮೇಲೆ ಸಂಪೂರ್ಣವಾದ ಅವಲಂಬನೆಯ ಅರಿವು ಮೂಡಿದರೆ, ಆಗ ಮಾತ್ರ ತಿರುಪ್ಪಾವೈಯಲ್ಲಿ ಹೇಳಿರುವ ಗೂಢಾರ್ಥಗಳು ಗೋದೆಯ ಮನಸ್ಸಿಗೆ ಅನುಸಾರವಾಗಿ ಗೋಚರವಾಗುತ್ತದೆ ಎಂಬುದಾಗಿದೆ.  ಅಷ್ಟೇ ಅಲ್ಲದೆ, “ಸ್ತ್ರೀಯರಲ್ಲೂ ಸಹ, ನಿತ್ಯ ಭಗವಂತನ ಅನುಭವವನ್ನೇ ಅಪೇಕ್ಷಿಸುವ (ಮತ್ತು ಅದರಂತೆಯೇ ಆ ಅನುಭವದಲ್ಲೇ ಮುಳುಗಿರುವ) ಸಾಕ್ಷಾತ್ ಭಗವಂತನ ದಿವ್ಯಮಹಿಷಿಯರೇ ಕೂಡ ಸುಲಭದಲ್ಲಿ ತಿರುಪ್ಪಾವೈ ಅರ್ಥಗಳನ್ನು ವಿವರಿಸಲೋ ಕೇಳಲೋ ಸಾಧ್ಯವಿಲ್ಲ. ಎಲ್ಲಾ ಆಳ್ವಾರುಗಳ ಉತ್ತಮ ಅಂಶಗಳ ರಾಶಿಯಾದ ಅಂಡಾಳ್ ಮಾತ್ರವೇ ತಿರುಪ್ಪಾವೈನ ಮೂಲ ಅರ್ಥವನ್ನು ಮತ್ತು ಅದರ ಭಾವನ್ನು ತೋರಬಲ್ಲಳು” ಎನ್ನುತ್ತಾರೆ ಎಂಬೆರುಮಾನಾರ್. ಆಂಡಾಳ್‌ ಮತ್ತು ಅವಳ ತಿರುಪ್ಪಾವೈಗೆ ಅಷ್ಟರ ಮಟ್ಟಿಗೆ ಮಹಿಮೆಯಿದೆ.

ಮಾಮುನಿಗಳು ಸಹ ಆಂಡಾಳ್‌ನ ಹಿರಿಮೆಯನ್ನು ತನ್ನ ಉಪದೇಶ ರತ್ತಿನಮಾಲೈಯಲ್ಲಿ ೨೨, ೨೩ ಮತ್ತು ೨೪ನೇ ಪಾಶುರಗಳಲ್ಲಿ ತೋರಿದ್ದಾರೆ.

 • ೨೨ನೇ ಪಾಶುರದಲ್ಲಿ ಮಾಮುನಿಗಳು ತನ್ನನ್ನು ರಕ್ಷಿಸಲು ಆಂಡಾಳ್ ಪರಮಪದದ ಅತ್ಯುನ್ನತವಾದ ಆನಂದವನ್ನು ಬೀಸುಟು ಈ ಸಂಸಾರಮಂಡಲದಲ್ಲಿ ಪೆರಿಯಾಳ್ವಾರರ ಮಗಳಾಗಿ ಜನಿಸಿದಳು (ಸ್ವಾನುಭವ) ಎಂದು ಭಾವುಕರಾಗುತ್ತಾರೆ. ಹೇಗೆ ಒಬ್ಬ ತಾಯಿಯು ನೀರಿನಲ್ಲಿ ಮುಳುಗುತ್ತಿರುವ ತನ್ನ ಮಗುವನ್ನು ರಕ್ಷಿಸಲು ತಾನೇ ನೀರಿಗೆ ಧುಮ್ಮುಕುವಳೋ, ಹಾಗೆಯೇ ಎಲ್ಲರಿಗೂ ತಾಯಿಯಾದ ಅಂಡಾಳ್ ಸಂಸಾರದಲ್ಲಿ ಮುಳುಗುತ್ತಿರುವ ಜೀವಿಗಳನ್ನು ರಕ್ಷಿಸಲು ತಾನೇ ಈ ಸಂಸಾರಕ್ಕೆ ಬಂದಳು.
 • ೨೩ನೇ ಪಾಶುರದಲ್ಲಿ ಅವರು ಹೇಗೆ ಗೋದೆಗೆ ಮತ್ತೊಬ್ಬರು ಸಮನಾಗಲಾರರೋ, ಹಾಗೆಯೇ ಗೋದೆಯ ಜನ್ಮ ದಿನವಾದ “ತಿರುವಾಡಿಪ್ಪೂರo”ಕ್ಕೂ ಸರಿಸಮನಾದ ದಿನ ಬೇರಿಲ್ಲ ಎನ್ನುತ್ತಾರೆ.
 • ೨೪ನೆಯ ಪಾಶುರದಲ್ಲಿ ಅಂಡಾಳ್ “ಅಂಜು ಕುಡಿ”ಗೆ ಸಂತತಿ ಎಂದೂ, ಅವಳು ಉಳಿದ ಆಳ್ವಾರ್‌ಗಳಿಗಿಂತಲೂ ಮೇಲಾದವಳೆಂದೂ ಹೇಳಿ, ಆಕೆ ಅತಿಚಿಕ್ಕ ಪ್ರಾಯದಲ್ಲೇ ಭಗವಂತನಲ್ಲಿ ಅಪಾರಪ್ರೀತಿ ಬೆಳೆಸಿಕೊಂಡಿದ್ದನ್ನು ತೋರಿದ್ದಾರೆ. ಪಿಳ್ಳೈಲೋಕಂ ಜೀಯರ್ ತಮ್ಮ ವ್ಯಾಖ್ಯಾನದಲ್ಲಿ “ಅಂಜು ಕುಡಿಯ ಸಂತತಿ” ಎಂಬುದರ ಅರ್ಥವನ್ನು ಹೀಗೆ ವಿವರಿಸಿದ್ದಾರೆ:
 • ಪಂಚಪಾಂಡವರ ಕುಲದಲ್ಲಿ ಜನಿಸಿದ ಪರೀಕ್ಷಿತನಂತೆ ಎಲ್ಲ ಆಳ್ವಾರುಗಳಿಗೂ ಸೇರಿದ ಕುಲದಲ್ಲಿ ಜನಿಸಿದ ಸಂತತಿ.
 • ಪ್ರಪನ್ನ ಕುಲಕ್ಕೆ ಸೇರಿದ ಆಳ್ವಾರ್‌ಗಳ ಸಂತತಿ.
 • ಸದಾಕಾಲವೂ ಭಗವಂತನ ಯೋಗಕ್ಷೇಮದ ಬಗ್ಗೆಯೇ ಚಿಂತೆಯಿಂದಿರುವ (ಅಚ್ಚಮ್=ಭಯ/ಚಿಂತೆ; ಅಂಜುಕುಡಿ=ಅಂಜುವವರು), ಮತ್ತು ಅದೇ ಕಾರಣಕ್ಕೆ ಸದಾ ಭಗವಂತನಿಗೆ ಮಂಗಳಾಶಾಸನಪರರಾಗಿರುವ ಪೆರಿಯಾಳ್ವಾರ್‌ರ ಸಂತತಿ.
 • ಆಂಡಾಳಿನ ಆಚರ್ಯ ನಿಶ್ಟೆ ಪರಿಶುದ್ದವಾದದು. ಆಂಡಾಳ್ ಎಂಬೆರುಮಾನನ್ನು ಪ್ರೀತಿಯಿಂದ ಕೊಂಡಾಡಿದ್ದಾರೆ. ಅದಕ್ಕೆ ಕಾರಣ ಪೆರಿಯಾೞ್ವಾರರು ಮತ್ತು ಎಲ್ಲಾ ಅಲ್ವಾರಿನ ಎಂಪೆರುಮಾನಿನ  ಮೇಲೆ ಇರುವ ಮಮತೆಯೆ ಮತ್ತು ಪ್ರೇಮವೇ. ಇದನ್ನು ನಾವು ಇಲ್ಲಿ ನೋಡಬಹುದು:
 • ನಾಚಿಯಾರ್ ತಿರುಮೊೞಿ, ಪಾಸುರಮ್ ೧೦.೧೦ನಲ್ಲಿ, ಆಂಡಾಳ್ “ವಿಲ್ಲಿಪುತುವೈ ವಿಟ್ಟುಚಿತ್ತರ್ ತಂಗಳ್ ದೇವರೈ ವಲ್ಲ ಪರಿಸು ವರುವಿಪ್ಪರೇಲ್ ಅದು ಕಾಂಣ್ಡುಮೇ (வில்லிபுதுவை விட்டுசித்தர் தங்கள் தேவரை வல்லபரிசு வருவிப்பரேல் அதுகாண்டுமேಎಂದು ಹೇಳಿದ್ದಾರೆ . ಪೆರಿಯಾೞ್ವಾರ್   ಎಂಪೆರುಮಾನನ್ನು ಇಲ್ಲಿಗೆ ಬರಲು ಒಪ್ಪಿಸಿದರು , ತಾನು ಕೂಡ ಪೂಜಿಸುತ್ತೇನೆ ಎಂದರು.
 • ಮಾಮುನಿಗಳ್ ತಮ್ಮ ಉಪದೇಶರತ್ತಿನ  ಮಾಲೈಯಲ್ಲಿ, ೧೦ ಆೞ್ವಾರ್ಗಳ ಬಗ್ಗೆ ವಿವರಿಸಿದ ಮೇಲೆ; ಆಂಡಾಳ್, ಮಧುರಕವಿ ಆೞ್ವಾರ್ ಮತ್ತು ಎಂಪೆರುಮಾನರ್ ಬಗ್ಗೆ ವಿವರವಾಗಿ ಹೇಳಿದ್ದಾರೆ , ಎಕೆಂದರೆ ಈ ಮೂವರು ಆಚಾರ್ಯ ನಿಷ್ಟರು.

ಈಗ ನಾವು ಆಂಡಾಳ್ ಚರಿತ್ರೆಯನ್ನು ನೋಡೋಣ.

ಆಂಡಾಳ್ ಶ್ರೀವಿಲ್ಲಿಪುತ್ತೂರ್ನಲ್ಲಿ ಜನಿಸಿದರು (ಈಗ ನಾಚಿಯಾರ್ ಸನ್ನಿಧಿಯಾಗಿದೆ) ತುಳಸಿ ಮಾಡದ ಹತ್ತಿರ. ಸೀತಾ ಪಿರಾಟ್ಟಿ ಹೇಗೆ ಭೂಮಿಯಿಂದ (ಜನಕ ಮಹಾರಾಜ ಭೂಮಿ ಉಳುವಾಗ) ಅವತರಿಸಿದರು, ಅದರಿಂದ ಸೀತಾಯೆಂದು ಹೆಸರಿಟ್ಟರು. ಹಾಗೆಯೇ  ಪೆರಿಯಾೞ್ವಾರ್ ಆಂಡಾಳು ಕೂಡ ಭೂಮಿ ಪಿರಾಟ್ಟಿಯ ಅವತಾರ ತುಳಸಿ ಮಾಡದ ಹತ್ತಿರ ಮತ್ತು ಅವರನ್ನು ಕೋದೈಯಂದು(ಕೋದೈಯಂದರೆ ಮಾಲೈ/ಹೂವಿನ ಹಾರ) ಹೆಸರಿಟ್ಟರು.

ಅವರು ಚಿಕ್ಕ ವಯಸಿನಿಂದಲೆ, ಪೆರಿಯಾೞ್ವಾರಿಂದ ಎಂಪೆರುಮಾನಿನ ಲೀಲೆಗಳನ್ನು ತಿಳಿದುಕೊಂಡೆ ಬೆಳೆದರು. ಪೆರಿಯಾೞ್ವಾರವರು ಹೂವಿನ ಹಾರವನ್ನು ನಿತ್ಯವು ಕಟ್ಟಿ ಮತ್ತು ಅದನ್ನು ವಟ ಮಹಾಧಾಮ (ವಟ ಪೆರುಂ ಕೊಯಿಲುಡಯಾನ್ ಎಂದು ತಮಿೞಿನಲ್ಲಿ). ಆಂಡಾಳ್ ಎಂಪೆರುಮಾನಿನ  ಮೇಲೆ ತುಂಬ ಪ್ರೇಮದಿಂದಿದರು ಮತ್ತು ಅವರನ್ನೆ ಮದುವೆಯಗಲು ಬಯಸಿದರು. ಒಮ್ಮೆ ಪೆರಿಯಾೞ್ವರಿನ ಗೈರುಹಾಜರಿಯಲ್ಲಿ, ಆಂಡಾಳ್, ಎಂಪೆರುಮಾನಿಗೆ  ಸಮರ್ಪಿಸ ಬೇಕಾದ ಹೂವಿನ ಹಾರವನ್ನು  ಧರಿಸಿಕೊಂಡು ಮತ್ತು ಆ ,ಹಾರ ತನಗೆ  ಸರಿಯಾಗಿದೆಯ ಮತ್ತು ತಾನು ಎಂಪೆರುಮಾನಿಗೆ ಸರಿಯಾದ ಜೊಡಿಯೆ ಎಂದು ಪರೀಕ್ಷಿಸದರು . ಪೆರಿಯಾೞ್ವಾರ್ ಬಂದಮೇಲೆ ಹಾರವನ್ನು ಎಂಪೆರುಮಾನಿಗೆ ಸಮರ್ಪಿಸಿದರು. ಇದು ಹೀಗೆ ನಡೆಯುತ್ತಿತ್ತು  , ಒಂದು ದಿನ ಆಂಡಾಳ್ ಎಂಪೆರುಮಾನಿಗೆ ಸಮರ್ಪಿಸುವ ಹಾರವನ್ನು ಧರಿಸಿರುವುದನ್ನು ಕಂಡು, ಅವರು ತುಂಬಾ ಕೋಪಗೊಂಡರು. ಅವರು ದುಃಖದಿಂದ ಆದಿನ ಎಂಪೆರುಮಾನಿಗೆ ಹಾರವನ್ನು ಸಮರ್ಪಿಸಲಿಲ್ಲ. ಅ ರಾತ್ರಿ ಎಂಪೆರುಮಾನ್ ಪೆರಿಯಾೞ್ವಾರಿನ ಕನಸಿನಲ್ಲಿ ಬಂದು, ಏಕೆ ಹಾರವನ್ನು ತೆಗೆದುಕೊಂಡು ಬರಲಿಲ್ಲ ಎಂದು ಕೇಳಿದರು . ಆೞ್ವಾರು, ತಮ್ಮ ಮಗಳಾದ ಆಂಡಾಳ್ ಎಂಪೆರುಮಾನಿಗೆ  ಸಮರ್ಪಿಸ ಬೇಕಾದ ಹಾರವನ್ನು ತನ್ನು ಧರಿಸಿಕೊಂಡಿದರಿಂದ, ಅ ಹಾರವು ಎಂಪೆರುಮಾನಿಗೆ ಯೋಗ್ಯವಲ್ಲದಾಗಿದೆ ಎಂದರು. ಆಗ ಎಂಪೆರುಮಾನ್ ತಮ್ಮಗೆ ಆಂಡಳ್ ಮೊದಲು ಧರಿಸಿದ ಮಾಲೆಯಲ್ಲಿ ವಿಶೇಷವಾದ ಭಕ್ತಿಯಿದು, ಅದು ತಮ್ಮಗೆ ತುಂಬಾ ಪ್ರೀತಿ ಪಾತ್ರವಾಗಿದೆ ಎಂದರು. ಇದನ್ನು ಕೇಳಿದ ಆೞ್ವಾರು ತುಂಬಾ ಸಂತುಷ್ಟಗೊಂಡರು ಮತ್ತು ಆನಂತರ ಅವರಿಗೆ ಆಂಡಾಳ್ ಮೇಲೆ ಸ್ನೇಹ ಮತ್ತು ಆದರ ದಿಂದಿದರು. ತದನಂತರ, ಪ್ರತಿ ದಿನವು ಅವರು ಆಂಡಳಿಗೆ ಮೊದಲು ಮಾಲೆಯನ್ನು ಕೊಟ್ಟಿದ ಮೇಲೆ ಎಂಪೆರುಮಾನಿಗೆ ಮಾಲೆಯನ್ನು ಸಮರ್ಪಿಸುತ್ತಾರೆ.

ಆಂಡಾಳ್ ನಾಚಿಯಾರರು ಎಂಪೆರುಮಾನಿನ ಮೇಲೆ ಇರುವ ಪರಮ ಭಕ್ತಿಯಿಂದ ಜನಿಸಿದರು, ಏಕೆಂದರೆ ಅವರು ಭೂಮಿ ಪಿರಾಟ್ಟಿಯ ಅಂಶ. ಎಂಪೆರುಮಾನಿನ  ಕಡೆಗೆ ಇರುವ ಅವರ ಪ್ರೇಮ ಮತ್ತೆಲ್ಲಾ ಆಲ್ವಾರ್ಗಳಿಗಿಂತಲೂ ತುಂಬಾ ಅಪಾರವದದು.  ಎಂಪೆರುಮಾನ್ನಿಂದ ಅಗಲಿಕೆಯನ್ನು ತಾಳಲಾರದೆ,ಆಂಡಳ್ರವರು ಅವರನ್ನು ಮದುವೆಯಾಗಲು ದಾರಿಯನ್ನು ಹುಡುಕಲು ತೊಡಗಿದರು. ರಾಸಲೀಲೈಯಿನ ಸಂದರ್ಭದಲ್ಲಿ, ಗೋಪಿಯರು ಕಣ್ಣನ್ ಎಂಪೆರುಮಾನಿನ ಗೈರುಹಜರಿಯಲ್ಲಿ ಯಾವ ದಾರಿಯನ್ನು ಅರಿಸಿದರೋ, ಅದನ್ನೇ ಆಂಡಾಳ್ ಕೂಡ ಪಾಲಿಸಿದರು. ಆಂಡಾಳ್ ವಟ ಪೆರುಂ ಕೊಯಿಲುಡಯಾನ್ನನ್ನು ಕಣ್ಣನ್ಎಂದು  ಭಾವಿಸಿ, ನಂದಗೋಪನ ಮನೆಯೆ ಅವರ ದೆಗುಲವೆಂದು,    ಶ್ರೀವಿಲ್ಲಿಪುತ್ತೂರ್ ಗೋಕುಲವೇ ಎಂದು ಮತ್ತು ಅವರ ಸ್ನೆಹಿತರೆ ಗೋಪಿಯರೆಂದುಕೊಂಡರು. ಆಮೇಲೆ ತಿರುಪ್ಪಾವೈಯನ್ನು ಹಾಡಿದರು.

ತಿರುಪ್ಪಾವೈನಲ್ಲಿ ಆಂಡಾಳ್ ಈ ಕೆಳಗಿನ ವಿಷಯವನ್ನು ಹೇಳಿದ್ದಾರೆ:

 • ಎಂಪೆರುಮಾನನ್ನು ಪ್ರತಿಪಾಲಿಸು ಪ್ರಾಪ್ಯಮ್ (ಗುರಿ) ಮತ್ತು ಪ್ರಾಪಕಮ್ (ದಾರಿ) ಮಾತ್ರವೇ .
 • ಶ್ರೀವೈಷ್ಣವರು ಏನು ಮಾಡಬೇಕು ಏನು ಮಾಡ ಬಾರದು ಎಂದು ಪೂರ್ವಾಚಾರ್ಯಗಳ ಅನುಷ್ಟಾನದಲ್ಲಿ  (ಸಿಸ್ಟಾಚಾರ) ಹೇಳಿದ್ದಾರೆ.
 • ಭಗವತ್ ಅನುಭವವು ಎಲ್ಲಾರೂ ಕೂಡಿ ಮಾಡಬೇಕೆಂದು (ಒಬ್ಬರೆ ಮಾಡಿದರೆ ಅದು ಸ್ವಾರ್ಥವಾಗುತ್ತೆ), ಅವರು ೧೦ ಗೋಪಿಯರನ್ನು ಕಣ್ಣನನ್ನು ನೋಡಲು ಬರಬೇಕೆಂದು ಏಲ್ಲಿಸುತ್ತಾರೆ .
 • ಎಂಪೆರುಮಾನಿನ ಹತ್ತಿರ ಹೋಗಲು ನಾವು ದ್ವಾರ ಪಾಲಕರು, ಬಲರಾಮ, ಯಶೋದೈ, ನಂದಗೋಪರು, ಮತ್ತು ಇತ್ತರರ ಸಹಾಯ ನಮಗೆಬೇಕು.
 • ಎಂಪೆರುಮಾನಿನ ಹತ್ತಿರ ಹೋಗಲು ನಮಗೆ ಪಿರಾಟ್ಟಿಯ (ಪುರುಶಕಾರ) ದಯೇ ಬೇಕು.
 • ನಾವು ಯವಾಗಲು ಎಂಪೆರುಮಾನಿಗೆ ಮಂಗಳಾಸಾಸನವನ್ನು ಮಾಡಬೇಕು.
 • ಕೈಂಕರ್ಯವೇ ಜೀವಾತ್ಮಾವಿನ ಸ್ವರೂಪ. ಆದರಿಂದ ಎಂಪೆರುಮಾನಿನ ಹತ್ತಿರ ಕೈಂಕರ್ಯ ಪ್ರಾರ್ತನೆ ಮಾಡಬೇಕು.
 • ಎಂಪೆರುಮಾನೆ ಕೈಂಕರ್ಯ ಸಿಗಲು ಉಪಾಯ. ನಮ್ಮ ಅಲ್ಪ ಪ್ರಯತ್ನ ಉಪಾಯವೆಂದು ತಿಳೀಯಬಾರದು.
 • ಕೈಂಕರ್ಯವನ್ನು ಎಂಪೆರುಮಾನಿನ ಸಂತೋಷಕ್ಕಾಗಿ ಮಾತ್ರವೇ. ಕೈಂಕರ್ಯ ಮಾಡುವದರಿಂದ ನಾವು ಪ್ರತಿ ಫಲವನ್ನು ಬಯಸಬಾರದು.

ಇಷ್ಟಾದರೂ , ಎಂಪೆರುಮಾನ್  ಆಂಡಾಳನ್ನು ಅಂಗೀಕರಿಸಲಿಲ್ಲ . ಆಂಡಾಳ್ ತಾಳಲಾರದ ದುಃಖದಿಂದ, ಎಂಪೆರುಮಾನನ್ನು ತನ್ನ ನಾಚಿಯಾರ್ ತಿರುಮೋೞಿಯಲ್ಲಿ ಕರೆಯುತ್ತಾಳೆ . ನಮ್ಮ ಸಂಪ್ರದಾಯದಲ್ಲಿ ಇರುವ ಸುಮಾರು ಎಲ್ಲ ತತ್ವಗಳನ್ನು ನಾಚಿಯಾರ್  ತಿರುಮೋೞಿನಲ್ಲಿ ತಿಳಿಸಿದ್ದಾರೆ . ನಾಚಿಯಾರ್ ತಿರುಮೋೞಿಯಿನ ಅರ್ಥವನ್ನು ಆಲಿಸು ಅಥವ ವಾಚನಮಾಡಲು ಮನಸ್ಸು ತುಂಬಾ ಪಕ್ವಪಡದಿರಬೇಕು. ಈದರಲ್ಲಿ ಅವರು “ಮಾನಿಡವರ್ಕ್ಕೆನ್ಱು ಪೇಚ್ಚುಪ್ಪಡಿಲ್ ವಾೞಗಿಲ್ಲೇನ್” (மானிடவர்க்கென்று பேச்சுப்படில் வாழகில்லேன்) ಅಂದರೆ “ಯಾರಾದರು ತಮ್ಮನ್ನು ಎಂಪೆರುಮಾನನ್ನು ಬಿಟ್ಟು ಬೇರೆಯವರಿಗೆ ಮದುವೆ ಮಾಡಲು ಬಯಸಿದರೆ, ತಮ್ಮ ಪ್ರಾಣವನ್ನು ತ್ಯಜಿಸುತ್ತಾರೆ” ಎಂದು ಹೇಳಿದ್ದಾರೆ. ಅವರು ವಾರಣಮ್ ಆಯಿರಮ್ ಪದಿಗದಲ್ಲಿ(೯.೬), ಎಂಪೆರುಮಾನಿನ ಜೊತೆ ತಮ್ಮ ಮದುವೆಯಾಗುವಂತೆ ಕನಸ್ಸು ಕಾಣುತ್ತಾರೆ. ಪೆರಿಯಾೞ್ವಾರ್ ಆಂಡಾಳ್ಗೆ ಎಂಪೆರುಮಾನಿನ ಅರ್ಚಾವತಾರ ವೈಭವವನ್ನು ವಿವರಿಸುತ್ತಾರೆ. ಆದರಿಂದ ಆಂಡಾಳ್ ತಿರುವರಂಗನಾಥನ ಮೇಲೆ ತುಂಬಾ ಪ್ರೇಮ ಬೆಳೆಸಿಕೊಳ್ಳುತ್ತಾರೆ. ಆೞ್ವಾರ್ಗೆ ಆಂಡಾಳಿನ ಅಭಿಲಾಷೆಯನ್ನು ಹೇಗೆ ನೆರವೇರಿಸಬೇಕು ಎಂದು ಆತಂಕಗೊಳ್ಳುತ್ತಾರೆ. ಒಮ್ಮೆ ತಮ್ಮ ಕನಸ್ಸಿನಲ್ಲಿ ಬಂದ ತಿರುವರಂಗನಾಥನು, ಆಂಡಾಳನ್ನು ಶ್ರೀರಂಗಮೇ  ಕರೆತರಲು ಹೇಳುತ್ತಾರೆ. ಈ ಪ್ರಕಾರ ತಿರುವರಂಗನಾಥನು ಆಂಡಾಳಿನ ಜೊತೆ ಮದುವೆಯಾಗಲು. ಆೞ್ವಾರ್ರು ತುಂಬಾ ಸಂತೋಷಗೊಳ್ಳುತ್ತಾರೆ. ಈ ಮಧ್ಯದ ಕಾಲದಲ್ಲಿ ಶ್ರೀರಂಗನಾಥನು ಸುಂದರವಾದ ಪಲಕ್ಕು, ಚಾಮರ, ಕೊಡೆ ಮತ್ತು ಅವರ ಕೈಂಕರ್ಯರ್ತಿಗಳನ್ನು ಶ್ರೀವಿಲ್ಲಿಪುತ್ತೂರಿಗೆ ಆಂಡಾಳನ್ನು ಕರೆತರಲು ಹೇಳುತ್ತಾರೆ. ಆೞ್ವಾರ್ರು, ವಟ ಪೆರುಂ ಕೊಯಿಲುಡಯ ಪೆರುಮಾಳಿನ ಅನುಮತಿಪಡೆದು, ಶ್ರೀರಂಗಮೇ ಆಂಡಾಳ್ ಜೊತೆ ಪಲಕ್ಕಿನಲ್ಲಿ ವಾದ್ಯ ಮತ್ತು ಭರ್ಜರಿಯಾದ ಮೆರವಣಿಗೆಯ ಜೊತೆ ಹೊರಡುತ್ತಾರೆ.

ಶ್ರೀರಂಗಮೇ ಬಂದಮೇಲೆ, ಸುಂದರವಾಗಿ ಅಲಂಕಾರ ಮಾಡಿಕೊಂಡ ಆಂಡಾಳ್, ದೇವಸ್ಥಾನದ ಮುಂದೆ ಪಲಕ್ಕಿನಿಂದ ಹೊರಬಂದು, ಪೆರಿಯ ಪೆರುಮಾಳಿನ ಗರ್ಭಗೃಹವನ್ನು ಪ್ರವೇಷಿ, ಎಂಪೆರುಮಾನನ್ನು ನಮಸ್ಕರಿಸುತ್ತಾರೆ. ತಕ್ಷಣವೆ ಆಂಡಾಳ್ರವರು ಪರಮಪದವನ್ನು ಸೇರುತ್ತಾರೆ.

periyaperumal-andalತದನಂತರ ಈ ಪ್ರಸಂಗವನ್ನು ನೋಡಿದ ಎಲ್ಲರು ಅಚ್ಚರಿಗೊಂಡರು ಮತ್ತು ಪೆರಿಯಾೞ್ವಾರನ್ನು ಪ್ರಶಂಶಿಸುತ್ತಾರೆ. ತಕ್ಷಣ ಪೆರಿಯಾ  ಪೆರುಮಾಳ್, ಪೆರಿಯಾೞ್ವಾರನ್ನು ತಮ್ಮ ಮಾವನಾಗಿ ಸ್ವೀಕರಿಸಿ ಗೌರವಿಸುತ್ತಾರೆ (ಸಮುದ್ರರಾಜ ನಂತೆ). ಆಮೇಲೆ ಪೆರಿಯಾೞ್ವಾರು ಶ್ರೀವಿಲ್ಲಿಪುತ್ತೂರಿಗೆ ಬಂದು ತಮ್ಮ ಕೈಂಕರ್ಯವನ್ನು ವಟ ಪೆರುಂ ಕೊಯಿಲುಡಯಾನ್ಗೆ ಮುಂದುವರಿಸುತ್ತಾರೆ.

ಆಂಡಾಳರ ಮಿತಿಯಿಲ್ಲದ ಕೀರ್ತಿಯನ್ನು ಎಷ್ಟು ಸಲಾ ಕೇಳಿದರು /ಹೇಳಿದರು (ಕಡೆಪಕ್ಷ ಒಮ್ಮೆ ಧನುರ್ ಮಾಸದಲ್ಲಿ ), ಅದು ಹೊಸದಂತೆ ಅನಿಸುತ್ತದೆ . ಅವರ ಪ್ರಭಂದದಲ್ಲಿ  ಅತಿ ಶ್ರೇಷ್ಠವಾದ ಸಿದ್ಧಾಂತ(ತತ್ವ)ವನ್ನು, ನಾವು ಕಾಣಬಹುದು.

ಆಂಡಾಳರ ಮತ್ತು ತಿರುಪ್ಪಾವೈಯಿನ ಮಹಿಮೆಯನ್ನು ನಾವು ಭಟ್ಟರ್ರವರ ಸರ್ವೋತ್ಕೃಷ್ಟವಾದ ಮಾತಿನ್ನಲ್ಲಿ ತಿಳಿಯಬಹುದು.  ಭಟ್ಟರವರು  ಪ್ರತಿಯೊಬ್ಬರು ಪ್ರತಿನಿತ್ಯವು ೩೦ ಪಾಸುರಗಳನ್ನು ಪಠಣೆಮಾಡಬೇಕು ಎಂದು ಹೇಳಿದ್ದಾರೆ. ಅದು ಸಾಧ್ಯವಗದಿದಲ್ಲಿ, ಪ್ರತಿಯೊಬ್ಬರು “ಚಿಱ್ಱಮ್ ಚಿರುಕಾಲೇ” ಪಾಸುರವನ್ನು ಪಠಣೆಮಾಡಬೇಕು. ಇದು ಕೂಡ ಸಾದ್ಯವಗದಿದಲ್ಲಿ, ಕಡೆಪಕ್ಷ ಪ್ರತಿಯೊಬ್ಬರು ಭಟ್ಟರನ್ನು(ತಿರುಪ್ಪಾವೈಯಿನ ಮೇಲಿನ ನನ್ಟು) ನೆನೆಸಿಕೊಳ್ಳಬೇಕು – ಇದರಿಂದ ಎಂಪೆರುಮಾನ್ ಸಂತೋಷಗೊಳ್ಳುತ್ತಾನೆ. ಹೇಗೆ ಹಸುವಿನ ಸ್ತನ ಕರುವನ್ನು ನೋಡಿ ಹಾಲು ಸೋರುತೋ ಹಾಗೆಯೇ,  ಎಂಪೆರುಮಾನ್, ೧ ಪಾಸುರವನ್ನೊ ಅಥವ ೩೦ ಪಾಸುರವನ್ನೊ ಅಥವ ಭಟ್ಟರನ್ನು ನೆನಸಿಕೊಳ್ಳುವುದೊ ಮಾಡಿದರೆ, ನಮಗೆ ಎಂಪೆರುಮಾನ್  ಕರುಣೆಯ ಮಳೆಯಲ್ಲಿ ನೆನೆಯುತೇವೆ. ಎಕೆಂದರೆ ಆಂಡಾಳು (ಭೂಮಿ ಪಿರಾಟ್ಟಿಯಗಿ) ವರಾಹ ಎಂಪೆರುಮಾನನ್ನು ಬೇಡುತ್ತಾಳೆ. ಭೂಮಿ ಪಿರಾಟ್ಟಿಯ ಕರುಣೆಯಿoದ, ಆಂಡಾಳು ಈ ಸಂಸಾರದಲ್ಲಿ  ಜನಿಸಿದರು ಮತ್ತು ತಿರುಪ್ಪಾವೈಯನ್ನು ಹಾಡಿದರು. ಇದರಿಂದ ನಮ್ಮಗೆ ಎಂಪೆರುಮಾನಿನ  ದಿವ್ಯ ಅನುಗ್ರಹವನ್ನು ಮತ್ತು ಈ ಸಂಸಾರದಿಂದ ನಮ್ಮಗೆ ಮುಕ್ತಿ ಹಾಗು ಭಗವತ್ ಅನುಭವ/ಕೈಂಕರ್ಯವನ್ನು ಪರಮಪದದಲ್ಲಿ ಸಿಗುತ್ತದೆ.

ಆಂಡಾಳರ ತನಿಯನ್
ನೀಳಾ ತುಂಗ ಸ್ತನಗಿರಿ ತಟೀ ಸುಪ್ತಮ್ ಉತ್ಪೋದ್ಯ ಕೃಷ್ಣಂ
ಪಾರಾರ್ಥ್ಯಂ ಸ್ವಂ ಶ್ರುತಿ ಶತ ಶಿರಸ್ ಸಿದ್ದಮ್ ಅಧ್ಯಾಪಯಂತೀ|
ಸ್ವೋಚ್ಛಿಷ್ಟಾಯಾಂ ಸ್ರಜಿನಿಗಳಿತಂ ಯಾಬಲಾತ್ ಕ್ರುತ್ಯ ಭುಂಕ್ತೇ
ಗೋದಾ ತಸ್ಯೈ ನಮ ಇದಮಿದಮ್ ಭೂಯ ಏವಾಸ್ತು ಭೂಯ:||

நீளா துங்க ஸ்தனகிரி தடீ ஸுப்தம் உத்போத்ய க்ருஷ்நம்
பாரார்த்யம் ஸ்வம் ஸ்ருதி சத சிரஸ் சித்தம் அத்யாபயந்தீ
ஸ்வோசிஷ்டாயாம் ச்ரஜிநிகளிதம் யாபலாத் க்ருத்ய புங்க்தே
கோதா தஸ்யை நம இதம் இதம் பூய ஏவாஸ்து பூய:

ಅವರ ಅರ್ಚಾವತಾರ ಅನುಭವನ್ನು ಇಲ್ಲಿ ವಿವರಿಸಿದಾರೆ – http://ponnadi.blogspot.in/2012/10/archavathara-anubhavam-andal-anubhavam.html.

ಅಡಿಯೇನ್ ರಾಮಾನುಜ ದಾಸನ್

ಸೌಮ್ಯಲತಾ

ಮೂಲ: http://guruparamparai.wordpress.com/2012/12/16/andal/

ರಕ್ಷಿತ ಮಾಹಿತಿ:  https://guruparamparaikannada.wordpress.com

ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಧರ್ಮಗ್ರಂಥಗಳು) – http://granthams.koyil.org
ಪ್ರಮಾತಾ (ಭೋಧಕರು) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org

ತೊಂಡರಡಿಪ್ಪೊಡಿ ಆಳ್ವಾರ್

ಶ್ರೀ:
ಶ್ರೀಮತೇ ಶಠಕೋಪಾಯ ನಮ:
ಶ್ರೀಮತೇ ರಾಮಾನುಜಾಯ ನಮ:
ಶ್ರೀಮದ್ ವರವರಮುನಯೇ ನಮ:
ಶ್ರೀ ವಾನಾಚಲ ಮಹಾಮುನಯೇ ನಮ:

thondaradippodi-azhwar

ತಿರುನಕ್ಷತ್ರಮ್: ಮಾರ್ಹಳಿ, ಕೇಟ್ಟೈ
ಅವತಾರ ಸ್ಥಳಂ: ತಿರುಮಂಡಂಗುಡಿ
ಆಚಾರ್ಯನ್: ವಿಶ್ವಕ್ಸೇನರ್
ಕೃತಿಗಳು: ತಿರುಮಾಲೈ, ತಿರುಪ್ಪಳ್ಳಿಯೆಳುಚ್ಚಿ
ಪರಮಪದಕ್ಕೆ ಸೇರಿದ ಸ್ಥಳ: ಶ್ರೀರಂಗಮ್

ನನ್ಜೀಯರ್, ತಿರುಪ್ಪಳ್ಳಿಯೆಳುಚ್ಚಿಗೆ ತಮ್ಮ ವ್ಯಾಖ್ಯಾನ ಅವತಾರಿಕೆಯಲ್ಲಿ ಗುರುತಿಸುವುದೇನೆಂದರೆ ಆಳ್ವಾರರು ಈ ಸಂಸಾರದಲ್ಲಿ “ಅನಾದಿ ಮಾಯಯಾ ಸುಪ್ತ:” (ಬಹು ಪ್ರಾಚೀನ ಕಾಲದಿಂದ ಅಜ್ಞಾನದಿಂದಾಗಿ ಈ ಸಂಸಾರದಲ್ಲಿ ನಿದ್ರಿಸುತ್ತಿದ್ದರು) ಮತ್ತು ಎಂಪೆರುಮಾನನು ಅವರನ್ನು ಎಚ್ಚರಗೊಳಿಸುತ್ತಾನೆ (ಅವರಿಗೆ ನಿಷ್ಕಳಂಕ ಜ್ಞಾನವನ್ನು ನೀಡುತ್ತಾನೆ). ಆದರೆ, ಆ ನಂತರ ಪೆರಿಯ ಪೆರುಮಾಳ್ ಯೋಗ ನಿದ್ರೆಯಲ್ಲಿರುವಾಗ ಆತನನ್ನು ಎಚ್ಚರಗೊಳಿಸಿ ಕೈಂಕರ್ಯದಲ್ಲಿ ತೊಡಗಿಸಿಕೊಳ್ಳಲು ಮನವಿ ಮಾಡಿಕೊಳ್ಳುವುದು ಆಳ್ವಾರರ ಸರದಿಯಾಗುತ್ತದೆ.

ಪೆರಿಯಾವಾಚಾನ್ ಪಿಳ್ಳೈ, ತಿರುಪ್ಪಳ್ಳಿಯೆಳುಚ್ಚಿಗೆ ತಮ್ಮ ವ್ಯಾಖ್ಯಾನ ಅವತಾರಿಕೆಯಲ್ಲಿ ಆಳ್ವಾರರ ವೈಭವಗಳನ್ನು ಸ್ವತಃ ಆಳ್ವಾರರ ಪಾಶುರಗಳ ಮೂಲಕವೇ ತೆರೆದಿಡುತ್ತಾರೆ. ಎಂಪೆರುಮಾನನಿಂದ ಎಚ್ಚರಗೊಳಿಸಲ್ಪಟ್ಟ ಆಳ್ವಾರರು, ತಮ್ಮ ಸ್ವರೂಪವನ್ನು ಅರಿತುಕೊಂಡ ನಂತರ, ಪೆರಿಯ ಪೆರುಮಾಳರನ್ನು ನೋಡಲು ಹೋದಾಗ ಅಲ್ಲಿ ಆತನು ಕಣ್ಣುಮುಚ್ಚಿಕೊಂಡು ತಮ್ಮನ್ನು ಸ್ವಾಗತಿಸದೆ, ಕ್ಷೇಮ ಸಮಾಚಾರವನ್ನು ವಿಚಾರಿಸದೆ, ನಿದ್ರಿಸುತ್ತಿರುವುದನ್ನು ಕಾಣುತ್ತಾರೆ. ಪೆರಿಯ ಪೆರುಮಾಳರಿಗೆ ಆಳ್ವಾರರ ಬಗ್ಗೆ ಆಸಕ್ತಿಯಿಲ್ಲವೆಂದು ಹೇಳಲಾಗದು, ಏಕೆಂದರೆ ಆಳ್ವಾರರು ಎಂಪೆರುಮಾನನಿಗೆ ಅತಿ ಪ್ರಿಯರಾದವರು ಹಾಗೆಯೇ ಆಳ್ವಾರರಿಗೆ ಎಂಪೆರುಮಾನನೂ ಸಹ. ಪೆರಿಯ ಪೆರುಮಾಳ್ ಅಜೀರ್ಣದಿಂದ ಮಲಗಿದ್ದಾನೆಂದೂ ಹೇಳಲಾಗದು ಏಕೆಂದರೆ ಈ ದೋಷಗಳನ್ನು ತಮೋಗುಣದಿಂದ ಕೂಡಿದ ಭೌತಿಕ ಪ್ರಕೃತಿಯಲ್ಲಿ ಮಾತ್ರ ಕಾಣಬಹುದು – ಆದರೆ ಪೆರಿಯ ಪೆರುಮಾಳ್ ಸಂಪೂರ್ಣವಾಗಿ ಆಧ್ಯಾತ್ಮಿಕನಾದವನು – ಆದ್ದರಿಂದ ಆ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಪೆರಿಯ ಪೆರುಮಾಳ್ ಧ್ಯಾನಮಗ್ನನಾಗಿ ಪವಡಿಸಲು ಕಾರಣವೇನೆಂದರೆ, ಈ ಕೆಳಗಿನ ಶ್ರೇಷ್ಠ ಗುಣಗಳಿಂದ ಕೂಡಿದ ಆಳ್ವಾರರನ್ನು ಸುಧಾರಿಸಿದಂತೆ ಪ್ರತಿಯೊಬ್ಬರನ್ನೂ ಹೇಗೆ ಸುಧಾರಿಸುವುದೆಂದು ಚಿಂತಿಸುತ್ತಿರುವುದು:
– ಆಳ್ವಾರರಿಗೆ ಜೀವಾತ್ಮನಿಗೆ ಪ್ರಕೃತಿ ಸಂಬಂಧವು ಉಚಿತವಲ್ಲವೆಂಬುದರ ಬಗ್ಗೆ ಸಂಪೂರ್ಣ ಜ್ಞಾನವಿತ್ತು – ಅವರು ಹೇಳುವಂತೆ “ಅದಲಾಲ್ ಪಿರವಿ ವೇಣ್ಡೇನ್” ಅರ್ಥಾತ್ “ನಾನು ಇನ್ನು ಮುಂದೆ ಈ ಸಂಸಾರದಲ್ಲಿ ಜನಿಸಲು ಇಚ್ಛಿಸುವುದಿಲ್ಲ “.
– ಆಳ್ವಾರರಿಗೆ ಸ್ವರೂಪ ಯಾತಾತ್ಮ್ಯ ಜ್ಞಾನವೆಂದರೆ ಭಾಗವತ ಶೇಷತ್ವವೆಂಬುದರ ಬಗ್ಗೆ ಸಂಪೂರ್ಣ ಅರಿವಿತ್ತು (ಆತ್ಮದ ನಿಜವಾದ ಸ್ವಭಾವದ ಬಗ್ಗೆ ತಿಳುವಳಿಕೆ ). ಅವರು ಹೇಳಿರುವಂತೆ “ಪೋನಗಂ ಚೆಯ್ದ ಚೇಟಮ್ ತರುವರೇಲ್ ಪುನಿತಮ್” ಅರ್ಥಾತ್ “ಒಬ್ಬ ಶ್ರೀವೈಷ್ಣವ ತಾನು ತಿಂದುಳಿದ ಆಹಾರವನ್ನು ಕೊಟ್ಟರೆ ಅದು ಬಹು ಪವಿತ್ರವಾದುದು.”
– ಅವರಿಗೆ ಪ್ರಾಪಂಚಿಕ ಮತ್ತು ಆಧ್ಯಾತ್ಮಿಕ ಆಕಾಂಕ್ಷೆಗಳ ಬಗ್ಗೆ ಸ್ಪಷ್ಟವಾದ ತಿಳುವಳಿಕೆಯಿತ್ತು, ಅವರೇ ಹೇಳುವಂತೆ “ಇಚ್ಚುವೈ ತವಿರ ಅಚ್ಚುವೈ ಪೆರಿನುಂ ವೇಣ್ಡೇನ್” ಅರ್ಥಾತ್ ನಾನು ಪೆರಿಯ ಪೆರುಮಾಳರನ್ನು ಮಾತ್ರ ಅನುಭವಿಸಿ ಆನಂದಿಸುತ್ತೇನೆ ಬೇರೇನೂ ಬೇಕಿಲ್ಲ.
– ಅವರಿಗೆ ತಮ್ಮ ಇಂದ್ರಿಯಗಳ ಮೇಲೆ ಸಂಪೂರ್ಣ ನಿಯಂತ್ರಣವಿತ್ತು, ಅವರು ಹೇಳುವಂತೆ “ಕಾವಲಿಲ್ ಪುಲನೈ ವೈತ್ತು” ಅರ್ಥಾತ್ ನಾನು ನನ್ನ ಇಂದ್ರಿಯಗಳನ್ನು ನಿಯಂತ್ರಿಸಿದ್ದೇನೆ.
– ಅವರು ಬೇರೆಲ್ಲ ಉಪಾಯಗಳನ್ನು ಸಂಪೂರ್ಣವಾಗಿ ತೊರೆದಿದ್ದರು, ಅವರು ಹೇಳುವಂತೆ “ಕುಳಿತ್ತು ಮೂನ್ರು ಅನಲೈ ಓಂಬುಮ್ ಕುರಿಕೊಳ್ ಅನದಣಮೈ ತನ್ನೈ ಒಳಿತ್ತಿಟ್ಟೇನ್” ಅರ್ಥಾತ್ ನಾನು ಕರ್ಮ ಯೋಗ, ಇತ್ಯಾದಿಗಳ ಮಾರ್ಗವನ್ನು ತ್ಯಜಿಸಿದ್ದೇನೆ.
– ಅವರಿಗೆ ಉಪಾಯ ಯಾತಾತ್ಮ ಜ್ಞಾನದ (ನಿಜವಾದ ಉಪಾಯ) ಬಗ್ಗೆ ಸಂಪೂರ್ಣ ಅರಿವಿತ್ತು. ಅವರು ಹೇಳುವಂತೆ “ಉನ್ ಅರುಳ್ ಎನ್ನುಂ ಆಶೈ ತನ್ನಾಲ್ ಪೊಯ್ಯನೇನ್ ವಂದು ನಿನ್ರೇನ್” ಅರ್ಥಾತ್ “ನಿನ್ನ ಕೃಪೆ ಎಂಬ ಉಪಾಯದ ಮೇಲೆ ಸಂಪೂರ್ಣವಾಗಿ ಅವಲಂಬಿತನಾಗಿ ನಾನು ಇಲ್ಲಿ ಬಂದಿದ್ದೇನೆ”.

ಕಡೆಯದಾಗಿ ಪೆರಿಯಾವಾಚಾನ್ ಪಿಳ್ಳೈ ಹೇಳುತ್ತಾರೆ, ಆಳ್ವಾರರಿಗೆ ಈ ಶ್ರೇಷ್ಠ ಗುಣಗಳಿರುವುದರಿಂದ ಅವರು ಪೆರಿಯ ಪೆರುಮಾಳ್ ಗೆ ಅತಿ ಪ್ರಿಯರಾಗಿದ್ದಾರೆ, ಈ ಹೇಳಿಕೆಯಂತೆ “ವಾಳುಮ್ ಚೋಂಬರೈಉಗತ್ತಿ ಪೋಲುಮ್” ಅರ್ಥಾತ್ “ಎಂಪೆರುಮಾನನಿಗೆ ಸಂಪೂರ್ಣ ಶರಣಾಗತರಾದವರು ಆತನಿಗೆ ಅತಿ ಪ್ರಿಯರು”.

ಮಾಮುನಿಗಳು ಆಳ್ವಾರರನ್ನು ವೇದ ವಿದ್ವಾಂಸರುಗಳಿಂದ ಶ್ಲಾಘಿಸಲ್ಪಟ್ಟವರೆಂದು ವೈಭವೀಕರಿಸುತ್ತಾರೆ ಏಕೆಂದರೆ ಅವರು ವೇದಗಳ ಸಾರವನ್ನು ನಿಜವಾಗಿ ಅರಿತವರು ಮತ್ತು ಆಳ್ವಾರರ ಚಟುವಟಿಕೆಗಳು ಶಾಸ್ತ್ರಗಳ ಸಾರದ ಪ್ರಕಾರವಾಗಿಯೇ ಇದೆ ಎಂದು ಗಮನಿಸಿ ವೈಭವೀಕರಿಸುತ್ತಾರೆ. ಆಳ್ವಾರರ ಅರ್ಚಾವತಾರ ಅನುಭವವನ್ನು ನಾವು ಈಗಾಗಲೇ ಇಲ್ಲಿ ನೋಡಿದ್ದೇವೆ:
http://ponnadi.blogspot.in/2012/10/archavathara-anubhavam-thondaradippodi.html

ಇದನ್ನು ಗಮನದಲ್ಲಿಟ್ಟುಕೊಂಡು, ನಾವು ಈಗ ಆಳ್ವಾರರ ಚರಿತ್ರೆಯನ್ನು ಆನಂದಿಸೋಣ.

ತಮ್ಮ ಜನನದಲ್ಲಿ ನಂಪೆರುಮಾಳರ ದೈವಿಕ ಆಶೀರ್ವಾದದಿಂದ, ಆಳ್ವಾರರು ಶುದ್ಧ ಸತ್ತ್ವನಿಷ್ಠರಾಗಿ ಜನಿಸಿದರು ಮತ್ತು ವಿಪ್ರನಾರಾಯಣರೆಂದು ಹೆಸರಿಸಲ್ಪಟ್ಟರು. ಅವರು ವಯಸ್ಸಿಗೆ ತಕ್ಕ ಸಂಸ್ಕಾರಗಳಾದ ಚೌಲ, ಉಪನಯನ, ಇತ್ಯಾದಿಗಳನ್ನು ಮುಗಿಸಿದರು ಮತ್ತು ಸಕಲ ವೇದಗಳೊಂದಿಗೆ ಅದರ ಅಂಗಗಳು ಮತ್ತು ಅರ್ಥಗಳನ್ನು ಅಭ್ಯಸಿಸಿದರು. ಅಪಾರ ಜ್ಞಾನವನ್ನು ಮತ್ತು ವೈರಾಗ್ಯವನ್ನು ಬೆಳೆಸಿಕೊಂಡು, ಅವರು ಶ್ರೀರಂಗವನ್ನು ಪ್ರವೇಶಿಸುತ್ತಾರೆ ಮತ್ತು ಪೆರಿಯ ಪೆರುಮಾಳರನ್ನು ಆರಾಧಿಸುತ್ತಾರೆ. ಪೆರಿಯ ಪೆರುಮಾಳ್ ಅವರ ಭಕ್ತಿಯಿಂದ ಸಂತುಷ್ಟರಾಗಿ ತಮ್ಮ ದಿವ್ಯ ಸೌಂದರ್ಯವನ್ನು ತೋರಿಸಿ ಅವರ ಭಕ್ತಿಯನ್ನು ಇನ್ನಷ್ಟು ವರ್ಧಿಸುತ್ತಾರೆ ಮತ್ತು ಅವರು ಶ್ರೀರಂಗದಲ್ಲಿಯೇ ನಿರಂತರವೂ ನೆಲೆಸುವಂತೆ ಮಾಡುತ್ತಾರೆ.

ಆಳ್ವಾರರು ಒಂದು ಸುಂದರವಾದ ನಂದವನವನ್ನು ಸ್ಥಾಪಿಸಿ ಪೆರಿಯ ಪೆರುಮಾಳ್ ಗೆ ಪ್ರತಿದಿನ ಪುಷ್ಪ ಕೈಂಕರ್ಯವನ್ನು ಮಾಡುತ್ತಾರೆ. ಈ ಮಹಾನ್ ಗಳು ಹಾಕಿಕೊಟ್ಟ ದಾರಿಯನ್ನು ಅನುಸರಿಸುತ್ತಾರೆ – ಪುಂಡರೀಕರು (ಒಬ್ಬ ದೊಡ್ಡ ಮಹಾನ್), ಮಾಲಾಕಾರರು (ಮಥುರಾದಲ್ಲಿ ಕಣ್ಣನ್ ಎಂಪೆರುಮಾನ್ ಮತ್ತು ಬಲರಾಮರಿಗೆ ಪುಷ್ಪ ಮಾಲೆಗಳನ್ನು ಬಹು ಪ್ರೀತಿ ಮತ್ತು ವಾತ್ಸಲ್ಯದಿಂದ ಅರ್ಪಿಸಿದವರು), ಒಬ್ಬ ಶ್ರೇಷ್ಠ ಕೈಂಕರ್ಯ ಶ್ರೀಮಾನ್ ಗಜೇಂದ್ರಾಳ್ವಾನ್, ಮತ್ತು ನಮ್ಮ ಶ್ರೇಷ್ಠ ಪೆರಿಯಾಳ್ವಾರ್ (ಎಂಟು ಹೂವುಗಳಿಂದ ಸುಂದರವಾದ ಮಾಲೆಗಳನ್ನು ಮಾಡಿದವರು) .

ಒಮ್ಮೆ ತಿರುಕ್ಕರಂಬನೂರಿನ ದೇವದೇವಿ ಎಂಬ ಒಬ್ಬ ಸುಂದರವಾದ ವೇಶ್ಯೆಯು ತನ್ನ ಸ್ನೇಹಿತೆಯರೊಡನೆ ಉರೈಯೂರಿನಿಂದ ಹಿಂತಿರುಗುವಾಗ ಆಳ್ವಾರರ ತೋಟವನ್ನು ಪ್ರವೇಶಿಸುತ್ತಾಳೆ ಮತ್ತು ಆ ವನದ ಪುಷ್ಪಗಳು, ಪಕ್ಷಿಗಳು, ಇವುಗಳ ಸೌಂದರ್ಯದಿಂದ ಆಶ್ಚರ್ಯಚಕಿತಳಾಗುತ್ತಾಳೆ.

ಅದೇ ಸಮಯದಲ್ಲಿ ಅವರು ಬಹು ಸುಂದರವಾಗಿ ಕಾಣುವ, ತಲೆ ಮತ್ತು ಮುಖದ ಮೇಲೆ ನೀಳವಾದ ಕೇಶಗಳುಳ್ಳ, ಶುಭ್ರವಾದ ವಸ್ತ್ರಗಳು, ತುಳಸಿ/ಪದ್ಮ ಮಾಲೆಗಳು, ಊರ್ಧ್ವಪುಂಡ್ರ, ಇತ್ಯಾದಿಗಳನ್ನು ಧರಿಸಿದ, ನೀರು ಮತ್ತು ತೋಟದ ಉಪಕರಣಗಳನ್ನು ಕೈಯಲ್ಲಿ ಹಿಡಿದ ವಿಪ್ರನಾರಾಯಣರನ್ನು ಕಂಡರು. ಅವರು ಹಾಗೆ ನೋಡುತ್ತಿರಲು, ವಿಪ್ರನಾರಾಯಣರು ಅವರನ್ನು ಕಿಂಚಿತ್ತೂ ಗಮನಿಸದೆ ತಮ್ಮ ಕೈಂಕರ್ಯದಲ್ಲಿ ಶ್ರದ್ಧೆಯಿಂದ ನಿರತರಾಗಿದ್ದರು. ಆಗ ದೇವದೇವಿಯು ತನ್ನ ಸಹೋದರಿ ಮತ್ತು ಗೆಳತಿಯರನ್ನು ಕೇಳುತ್ತಾಳೆ “ಈತನು ಏನು ಬುದ್ಧಿಗೇಡಿಯೊ ಅಥವಾ ಹೇಡಿಯೊ, ನನ್ನಂಥಾ ಸುಂದರವಾದ ಹುಡುಗಿಯು ಮುಂದೆ ನಿಂತಿದ್ದರೂ ಈ ಕಡೆ ನೋಡುತ್ತಿಲ್ಲವೇಕೆ?” ಅವಳ ಗೆಳತಿಯರು ವಿಪ್ರನಾರಾಯಣರು ನಂಪೆರುಮಾಳ್ ಗೆ ಒಬ್ಬ ಕೈಂಕರ್ಯಪರರು ಮತ್ತು ಅವರು ನಿನ್ನ ಸೌಂದರ್ಯದ ಕಡೆ ಗಮನ ಕೊಡುವುದಿಲ್ಲವೆಂದು ತಿಳಿಸುತ್ತಾರೆ. ಅವರು ಹೇಳುತ್ತಾರೆ ಅವರನ್ನು ಮೋಹಗೊಳಿಸಲು ಮತ್ತು ನಿನ್ನ ಬಗ್ಗೆ ಹುಚ್ಚು ಹಿಡಿಯುವಂತೆ ಬದಲಾಯಿಸಲು ೬ ತಿಂಗಳು ಕಾಲಾವಕಾಶ ನೀಡುತ್ತೇವೆ, ಮತ್ತು ಹಾಗೆ ಮಾಡಿದಲ್ಲಿ ಅವಳು ಅತ್ಯಂತ ಸುಂದರಿಯೆಂದು ಒಪ್ಪಿಕ್ಕೊಳ್ಳುತ್ತೇವೆ ಮತ್ತು ೬ ತಿಂಗಳ ಕಾಲ ಅವಳ ದಾಸಿಯರಾಗಿ ಸೇವೆ ಮಾಡುತ್ತೇವೆ. ಅವಳು ಒಪ್ಪಿಕೊಂಡು ತನ್ನ ಬೆಲೆಬಾಳುವ ಒಡವೆ ಇತ್ಯಾದಿಗಳನ್ನು ತನ್ನ ಗೆಳತಿಯರಿಗೆ ಕೊಟ್ಟು ಸಾತ್ವಿಕ ರೂಪ/ವಸ್ತ್ರಗಳನ್ನು ಧರಿಸುತ್ತಾಳೆ.

ಅವಳು ನಂತರ ಹೋಗಿ ಆಳ್ವಾರರ ಕಾಲಿಗೆ ಬೀಳುತ್ತಾಳೆ ಮತ್ತು ಎಂಪೆರುಮಾನಿಗೆ ಗೌಪ್ಯ ಸೇವೆ ಭಾಗವತರೊಬ್ಬರಿಗೆ ಶರಣಾಗಲು ಬಯಸುತ್ತೇನೆಂದು ಹೇಳುತ್ತಾಳೆ. ಅವಳು ಆಳ್ವಾರರ ಹತ್ತಿರ ಹೋಗಿ ಆಳ್ವಾರರು ತಮ್ಮ ಮಾಧುಕರ (ಭಿಕ್ಷೆ) ಮುಗಿಸಿ ಹಿಂತಿರುಗುವ ತನಕ ಕಾದಿರುವೆನೆಂದು ಹೇಳುತ್ತಾಳೆ. ಆಳ್ವಾರರು ಒಪ್ಪಿಕೊಳ್ಳುತ್ತಾರೆ ಮತ್ತು ಅವಳು ಕೆಲವು ಕಾಲ ಆಳ್ವಾರರ ಶೇಷ ಪ್ರಸಾದವನ್ನು ಸೇವಿಸುತ್ತಾ ಅವರ ಸೇವೆಯನ್ನು ಮಾಡುತ್ತಾಳೆ.

ಒಂದು ದಿನ ದೇವದೇವಿಯು ತೋಟದಲ್ಲಿ ಕೆಲಸ ಮಾಡುತ್ತಿರುವಾಗ ಜೋರಾಗಿ ಮಳೆ ಬರುತ್ತದೆ. ಅದರಿಂದಾಗಿ ಅವಳು ನಿಧಾನವಾಗಿ ವಿಪ್ರನಾರಾಯಣರ ಆಶ್ರಮವನ್ನು ಪ್ರವೇಶಿಸುತ್ತಾಳೆ. ಅವಳು ಸಂಪೂರ್ಣವಾಗಿ ತೊಯ್ದಿರುವುದನ್ನು ಕಂಡು ವಿಪ್ರನಾರಾಯಣರು ತಮ್ಮ ಉತ್ತರೀಯವನ್ನು ಅವಳಿಗೆ ನೀಡುತ್ತಾರೆ. ಇದಾದ ನಂತರ ವಿಪ್ರನಾರಾಯಣರು ಮತ್ತು ದೇವದೇವಿಯು ಬೆಣ್ಣೆ ಮತ್ತು ಬೆಂಕಿಯಂತೆ ಪರಸ್ಪರ ನಿಕಟರಾಗುತ್ತಾರೆ. ಮರುದಿನ ಅವಳು ತನ್ನ ಒಡವೆಗಳು ಮತ್ತು ಆಕರ್ಷಕ ವಸ್ತ್ರಗಳನ್ನು ತೆಗೆದುಕೊಡು ಬಂದು ಧರಿಸುತ್ತಾಳೆ ಮತ್ತು ತನ್ನ ಸುಂದರವಾದ ರೂಪವನ್ನು ಅವರಿಗೆ ಪ್ರಕಟಪಡಿಸುತ್ತಾಳೆ. ಅವರು ನಂತರ ಅವಳನ್ನು ಎಷ್ಟು ಹಚ್ಚಿಕೊಳ್ಳುತ್ತಾರೆಂದರೆ ತಮ್ಮ ಕೈಂಕರ್ಯವನ್ನು ಸಂಪೂರ್ಣವಾಗಿ ಮರೆತು ಕೈಬಿಡುತ್ತಾರೆ. ಅವಳು ಕೆಲವು ಕಾಲ ಅವರಿಗೆ ಸ್ವಲ್ಪ ಪ್ರೀತಿಯನ್ನು ತೋರಿಸುತ್ತಾಳೆ ಮತ್ತು ಅವರು ಅವಳಿಗೆ ಸಂಪೂರ್ಣವಾಗಿ ಶರಣಾಗುತ್ತಾರೆ. ಅವರ ಎಲ್ಲ ಸಂಪತ್ತನ್ನು ಕಸಿದುಕೊಂಡ ನಂತರ ಅವಳು ಅವರನ್ನು ಹೊರಗಟ್ಟುತ್ತಾಳೆ ಮತ್ತು ಆ ಜಾಗವನ್ನು ಬಿಡಬೇಕೆಂದು ಹೇಳುತ್ತಾಳೆ. ಅವರು ಬಹು ದುಃಖಿತರಾಗುತ್ತಾರೆ ಮತ್ತು ಅವಳ ಮನೆಯ ಬಾಗಿಲಲ್ಲೇ ಕುಳಿತು ಅವಳು ಅವರನ್ನು ಸ್ವೀಕರಿಸಲು ಕಾಯುತ್ತಾರೆ. ಅದೇ ಸಮಯದಲ್ಲಿ ಪೆರಿಯ ಪೆರುಮಾಳ್ ಮತ್ತು ಪೆರಿಯ ಪಿರಾಟ್ಟಿ ತಮ್ಮ ದಿವ್ಯ ನಡಿಗೆಯಲ್ಲಿ ಆ ರಸ್ತೆಯಲ್ಲಿ ಹಾದು ಹೋಗುತ್ತಾರೆ. ಪಿರಾಟ್ಟಿಯು ಎಂಪೆರುಮಾನನ್ನು ಕೇಳುತ್ತಾಳೆ “ವೇಶ್ಯೆಯ ಮನೆಯ ಬಾಗಿಲಲ್ಲಿ ಕಾಯುತ್ತಿರುವ ಆ ವ್ಯಕ್ತಿ ಯಾರು?” ಮತ್ತು ಎಂಪೆರುಮಾನನು ಅವರು ವಿಪ್ರನಾರಾಯಣರು ತನ್ನ ಒಬ್ಬ ಕೈಂಕರ್ಯಪರರಾಗಿದ್ದರು ಮತ್ತು ಈಗ ಅವಳ ಬಗ್ಗೆ ಹುಚ್ಚು ಹಿಡಿದಿದೆ ಮತ್ತು ಅದರಿಂದ ಕಷ್ಟಪಡುತ್ತಿದ್ದಾರೆ ಎಂದು ಉತ್ತರಿಸುತ್ತಾನೆ. ನಂತರ ಪಿರಾಟ್ಟಿಯು ತನ್ನ ಪುರುಷಾಕಾರವನ್ನು ಉಪಕ್ರಮಿಸುತ್ತಾಳೆ ಮತ್ತು ಎಂಪೆರುಮಾನನನ್ನು ಕೇಳುತ್ತಾಳೆ “ಒಬ್ಬ ಗೌಪ್ಯ ಭಕ್ತನು ವಿಷಯಾಂತರವನ್ನು ಹಚ್ಚಿಕೊಂಡರೂ ಸಹ ಹೀಗೆ ತಾವು ಆತನನ್ನು ಕೈಬಿಡಬಹುದೇ? ಆತನ ಮಾಯೆಯನ್ನು ಅಳಿಸಿ ಮತ್ತು ಪುನ: ಆತನು ನಮ್ಮ ಆಪ್ತ ಸೇವಕನಾಗುವಂತೆ ಅನುಗ್ರಹಿಸಿ”. ಎಂಪೆರುಮಾನ್ ಒಪ್ಪಿಕೊಳ್ಳುತ್ತಾನೆ ಮತ್ತು ತನ್ನ ಸನ್ನಿಧಿಯಿಂದ ಸ್ವರ್ಣ ಪಾತ್ರೆಗಳಲ್ಲೊಂದನ್ನು (ತಿರುವಾರಾಧನಕ್ಕೆ ಉಪಯೋಗಿಸುವ ಪಂಚ ಪಾತ್ರೆಗಳಲ್ಲೊಂದು) ತೆಗೆದುಕೊಂಡು ದೇವದೇವಿಯ ಮನೆಗೆ ಹೋಗುತ್ತಾನೆ (ತನ್ನ ಸ್ವರೂಪವನ್ನು ಬಿಟ್ಟು ಮಾರುವೇಷದಲ್ಲಿ) ಮತ್ತು ಬಾಗಿಲನ್ನು ತಟ್ಟುತ್ತಾನೆ. ಆಕೆಯು ಬಾಗಿಲನ್ನು ತೆರೆದು ಆತನು ಯಾರೆಂದು ಕೇಳಿದಾಗ, ಅವನು ತನ್ನ ಹೆಸರು ಅಳಗಿಯ ಮಣವಾಳನೆಂದು ವಿಪ್ರನಾರಾಯಣರ ದೂತನೆಂದು ಮತ್ತು ಈ ಸ್ವರ್ಣ ಪಾತ್ರೆಯನ್ನು ಉಡುಗೊರೆಯಾಗಿ ಕಳುಹಿಸಿದ್ದಾರೆಂದು ಹೇಳುತ್ತಾನೆ. ಅವಳು ಬಹು ಸಂತೋಷಗೊಂಡು ವಿಪ್ರನಾರಾಯಣರನ್ನು ಒಳಗೆ ಕಳುಹಿಸಲು ಹೇಳುತ್ತಾಳೆ. ಆತನು ನಂತರ ವಿಪ್ರನಾರಾಯಣರ ಬಳಿಗೆ ಹೋಗುತ್ತಾನೆ ಮತ್ತು ದೇವದೇವಿಯು ಒಳಗೆ ಆಹ್ವಾನಿಸಿದ್ದಾಳೆಂದು ತಿಳಿಸುತ್ತಾನೆ. ಈ ಸಿಹಿ ಮಾತುಗಳನ್ನು ಕೇಳಿ ಅವರು ಬಹು ಸಂತೋಷಗೊಳ್ಳುತ್ತಾರೆ ಮತ್ತು ಮನೆಯೊಳಗೆ ಪ್ರವೇಶಿಸುತ್ತಾರೆ ಮತ್ತು ಅವರಿಬ್ಬರೂ ಪುನ: ವಿಷಯಲೋಲುಪತೆಯಲ್ಲಿ ಮುಳುಗುತ್ತಾರೆ. ಪೆರಿಯ ಪೆರುಮಾಳ್ ತಮ್ಮ ಸನ್ನಿಧಿಗೆ ಹಿoತಿರುಗುತ್ತಾರೆ ಮತ್ತು ಆನಂದದಿಂದ ತಮ್ಮ ಆದಿಶೇಷ ಪರ್ಯಂಕದ ಮೇಲೆ ಮಲಗುತ್ತಾರೆ.

ಮರುದಿನ ಕೈಂಕರ್ಯಪರರು ಸನ್ನಿಧಿಯನ್ನು ತೆರೆದಾಗ ಪಾತ್ರೆಗಳಲ್ಲೊಂದು ಕಾಣದಿರುವುದನ್ನು ಗಮನಿಸುತ್ತಾರೆ ಮತ್ತು ರಾಜನಿಗೆ ತಿಳಿಸುತ್ತಾರೆ. ಆಗ ರಾಜನು ಕೈಂಕರ್ಯಪರರ ಅಲಕ್ಷ್ಯತೆಗೆ ಕೋಪಗೊಳ್ಳುತ್ತಾನೆ. ದಾಸಿಯರಲ್ಲೊಬ್ಬಳು ಭಾವಿಯಿಂದ ನೀರನ್ನು ತರಲು ಹೋದಾಗ ತನ್ನ ಸಂಬಂಧಿಕರಲ್ಲೊಬ್ಬರು ರಾಜನ ಕೋಪಕ್ಕೆ ಪಾತ್ರರಾಗಿರುವುದನ್ನು ಕೇಳುತ್ತಾಳೆ ಮತ್ತು ವಿಪ್ರನಾರಾಯಣರು ದೇವದೇವಿಗೆ ಸ್ವರ್ಣಪಾತ್ರೆಯೊಂದನ್ನು ಕೊಟ್ಟಿದ್ದಾರೆ ಮತ್ತು ಅದು ಅವಳ ದಿಂಬಿನ ಕೆಳಗಿದೆ ಎಂದು ಹೇಳುತ್ತಾಳೆ. ಆ ಕೈಂಕರ್ಯಪರರು ವಿಷಯವನ್ನು ರಾಜಭಟರಿಗೆ ತಿಳಿಸುತ್ತಾರೆ ಮತ್ತು ಅವರು ತಕ್ಷಣವೇ ದೇವದೇವಿಯು ಇರುವೆಡೆಗೆ ಹೋಗುತ್ತಾರೆ, ಸ್ವರ್ಣಪಾತ್ರೆಯನ್ನು ಪತ್ತೆಹಚ್ಚುತ್ತಾರೆ, ಮತ್ತು ವಿಪ್ರನಾರಾಯಣ ಮತ್ತು ದೇವದೇವಿ ಇಬ್ಬರನ್ನೂ ಬಂಧಿಸುತ್ತಾರೆ. ಅವರಿಬ್ಬರನ್ನು ರಾಜನ ಆಸ್ಥಾನಕ್ಕೆ ಕರೆತಂದಾಗ ರಾಜನು ಅವಳನ್ನು ಕೇಳುತ್ತಾನೆ “ಯಾರಾದರೂ ಪೆರಿಯ ಪೆರುಮಾಳರ ಪಾತ್ರೆಯನ್ನು ತಂದು ಕೊಟ್ಟರೆ ನೀನು ಅದನ್ನು ಸ್ವೀಕರಿಸಬಹುದೇ?” ಮತ್ತು ಅವಳು ಉತ್ತರಿಸುತ್ತಾಳೆ “ಇದು ಪೆರುಮಾಳರ ಪಾತ್ರೆಯೆಂದು ನನಗೆ ಗೊತ್ತಿಲ್ಲ; ವಿಪ್ರನಾರಾಯಣರು ತನ್ನ ಸ್ವಂತ ಪಾತ್ರೆಯೆಂದು ಅಳಗಿಯ ಮಣವಾಳನೆಂಬ ದೂತನ ಮೂಲಕ ಕಳುಹಿಸಿದರು ಮತ್ತು ನಾನು ಅದನ್ನು ಸಂದೇಹಿಸದೆ ಸ್ವೀಕರಿಸಿದೆ”. ವಿಪ್ರನಾರಾಯಣರು ಹೇಳುತ್ತಾರೆ ತನಗೆ ಯಾವ ದೂತನೂ ಇಲ್ಲ ಮತ್ತು ತಾವು ಯಾವ ಸ್ವರ್ಣ ಪಾತ್ರೆಯನ್ನೂ ಹೊಂದಿಲ್ಲ. ಇದನ್ನು ಕೇಳಿದ ರಾಜನು ದೇವದೇವಿಗೆ ದಂಡವನ್ನು ವಿಧಿಸಿ ಬಿಡುಗಡೆ ಮಾಡುತ್ತಾನೆ. ನಂತರ ಅವನು ಆ ಸ್ವರ್ಣ ಪಾತ್ರೆಯನ್ನು ಎಂಪೆರುಮಾನನಿಗೆ ಸಮರ್ಪಿಸುತ್ತಾನೆ ಮತ್ತು ಈ ಕಳ್ಳತನ ಪ್ರಕರಣದಲ್ಲಿ ಮುಂದಿನ ತನಿಖೆಯಾಗುವವರೆಗೂ ವಿಪ್ರನಾರಾಯಣರನ್ನು ಕಾರಾಗೃಹದಲ್ಲಿಡಲು ತನ್ನ ಭಟರಿಗೆ ಆದೇಶಿಸುತ್ತಾನೆ.

ಈ ಘಟನೆಗಳನ್ನು ನೋಡಿದ ಪಿರಾಟ್ಟಿಯು ವಿಪ್ರನಾರಾಯಣರನ್ನು ತನ್ನ ಲೀಲೆಗೆ ಈಡು ಮಾಡದೇ ಕೃಪೆಗೆ ಪಾತ್ರರನ್ನಾಗಿ ಮಾಡಬೇಕೆಂದು ಎಂಪೆರುಮಾನನನ್ನು ವಿನಂತಿಸಿಕೊಳ್ಳುತ್ತಾಳೆ. ಎಂಪೆರುಮಾನನು ತಕ್ಷಣವೇ ಒಪ್ಪಿಕೊಳ್ಳುತ್ತಾನೆ ಮತ್ತು ಆ ರಾತ್ರಿ ರಾಜನ ಕನಸಿನಲ್ಲಿ ಕಾಣಿಸಿಕೊಳ್ಳುತ್ತಾನೆ. ಆತನು ವಿಪ್ರನಾರಾಯಣರು ತನ್ನ ಗೌಪ್ಯ ಸೇವಕನೆಂದು ಮತ್ತು ಅವರ ಪ್ರಾರಬ್ಧ ಕರ್ಮವನ್ನು ತೊಡೆದು ಹಾಕಲು ಎಂಪೆರುಮಾನನು ಈ ಲೀಲಾ ನಾಟಕವನ್ನಾಡಿದನೆಂದು ಹೇಳುತ್ತಾನೆ. ದಯವಿಟ್ಟು ಅವರನ್ನು ಬಿಡುಗಡೆ ಮಾಡಿ ಮತ್ತು ಅವರು ಮೊದಲಿನಂತೆ ತೋಟವನ್ನು ನೋಡಿಕೊಳ್ಳುವ ಮತ್ತು ನನಗೆ ಮಾಲೆಗಳನ್ನು ಮಾಡುವ ಕೈಂಕರ್ಯದಲ್ಲಿ ತೊಡಗುವಂತೆ ಮಾಡಬೇಕೆಂದು ಹೇಳಿದನು. ರಾಜನು ಎಚ್ಚರಗೊಳ್ಳುತ್ತಾನೆ ಮತ್ತು ವಿಪ್ರನಾರಾಯಣರ ಹಿರಿಮೆಯನ್ನು ಅರಿಯುತ್ತಾನೆ ಮತ್ತು ತಕ್ಷಣವೇ ಅವರ ಬಿಡುಗಡೆಗೆ ಆಜ್ಞಾಪಿಸುತ್ತಾನೆ ಮತ್ತು ಅವರಿಗೆ ತನ್ನ ಸ್ವಪ್ನವನ್ನು ಪೂರ್ಣವಾಗಿ ವಿವರಿಸುತ್ತಾನೆ. ಆತನು ವಿಪ್ರನಾರಾಯಣರಿಗೆ ಬಹು ಮರ್ಯಾದೆ ಮತ್ತು ಸಂಪತ್ತನ್ನು ಕೊಟ್ಟು ಗೌರವಿಸುತ್ತಾನೆ ಮತ್ತು ಅವರನ್ನು ಮನೆಗೆ ಕಳುಹಿಸಿಕೊಡುತ್ತಾನೆ. ಆನಂತರ ವಿಪ್ರನಾರಾಯಣರು ಎಂಪೆರುಮಾನನ ವೈಭವಗಳನ್ನು ಮತ್ತು ತನ್ನನ್ನು ಪುನೀತಗೊಳಿಸಲು ಅವನ ಪ್ರಯತ್ನಗಳನ್ನು ಅರಿತುಕೊಳ್ಳುತ್ತಾರೆ, ವಿಷಯ ಸುಖಗಳ ಮೋಹವನ್ನು ಬಿಡುತ್ತಾರೆ, ಮತ್ತು ಭಾಗವತರ ಶ್ರೀಪಾದತೀರ್ಥವನ್ನು ಸ್ವೀಕರಿಸುತ್ತಾರೆ (ಪಾಪಗಳಿಗೆ ಪ್ರಾಯಶ್ಚಿತ್ತವೆಂದು ಪರಿಗಣಿಸಲ್ಪಡುತ್ತದೆ).

ತದನಂತರ ಅವರು ತೊಂಡರಡಿಪ್ಪೊಡಿ ಅಳ್ವಾರ್ ಮತ್ತು ಭಕ್ತಾಂಘ್ರಿರೇಣು ಎಂದು ಜನಪ್ರಿಯರಾಗುತ್ತಾರೆ – ಅರ್ಥಾತ್ ಎಂಪೆರುಮಾನನ ಭಕ್ತರ ಪಾದಾರವಿಂದಗಳ ಧೂಳು. ಇದು ಇತರ ಆಳ್ವಾರರುಗಳಲ್ಲಿ ಕಾಣದ ಅವರ ಅನನ್ಯವಾದ ಶ್ರೇಷ್ಠತೆ – ಭಾಗವತ ಶೇಷತ್ವವನ್ನು ಪ್ರತಿಬಿಂಬಿಸುವ ಹೆಸರಿರುವುದು ಅವರೊಬ್ಬರಿಗೆ ಮಾತ್ರ. ತಿರುವಡಿ (ಹನುಮಾನ್), ಇಳಯ ಪೆರುಮಾಳ್ (ಲಕ್ಷ್ಮಣ) ಮತ್ತು ನಮ್ಮಾಳ್ವಾರ್(ಶಡಗೋಪನ್) ಅವರು ಎಂಪೆರುಮಾನನನ್ನು ಹೊರತು ಬೇರಾವುದೂ ಗಣ್ಯವಲ್ಲವೆಂದು ಹೇಗೆ ಹೇಳಿದರೋ ಹಾಗೆ ಆಳ್ವಾರರೂ ಸಹ ಹೇಳಿದರು “ಇಂದ್ರಲೋಕಂ ಆಳುಮ್ ಅಚ್ಚುವೈ ಪೆರಿನುಂ ವೇಣ್ಡೇನ್” ಅರ್ಥಾತ್ “ನಾನು ಪರಮಪದದ ಬಗ್ಗೆ ಕೂಡ ಯೋಚಿಸಲು ಇಚ್ಛಿಸುವುದಿಲ್ಲ, ಶ್ರೀರಂಗದಲ್ಲಿ ಪೆರಿಯ ಪೆರುಮಾಳರ ಅನುಭವವನ್ನು ಮಾತ್ರ ಬಯಸುತ್ತೇನೆ”. ಅವರು ತಮ್ಮನ್ನು ಸುಧಾರಿಸಿದುದಕ್ಕಾಗಿ ಪೆರಿಯ ಪೆರುಮಾಳ್ ಗೆ ನಿರಂತರವಾದ ಉಪಕಾರಸ್ಮೃತಿಯನ್ನು ತೋರ್ಪಡಿಸುತ್ತಾರೆ ಮತ್ತು ಸಂಪೂರ್ಣವಾಗಿ ಪೆರಿಯ ಪೆರುಮಾಳರೊಂದಿಗೆ ಸಂಬಂಧ ಬೆಳೆಸುತ್ತಾರೆ, ಅನೇಕ ದಿವ್ಯದೇಶಗಳಿಗೆ ಪ್ರಯಾಣಿಸಿ ಅನೇಕ ಅರ್ಚಾವತಾರ ಎಂಪೆರುಮಾನರ ಕುರಿತು ಹಾಡಿರುವ ಇತರ ಆಳ್ವಾರರುಗಳಂತಲ್ಲದೆ. ತನ್ನ ಬಗ್ಗೆ ಅವರ ಧೃಡವಾದ ವಿಶ್ವಾಸ ಮತ್ತು ನಂಟನ್ನು ಕಂಡು ಅದಕ್ಕೆ ಪ್ರತಿಯಾಗಿ ನಂಪೆರುಮಾಳರೂ ಸಹ ತಮ್ಮ ಪ್ರೇಮವನ್ನು ಅವರ ಕಡೆಗೆ ತೋರಿಸುತ್ತಾರೆ, ನಿಷ್ಕಳಂಕವಾದ ಜ್ಞಾನವನ್ನಿತ್ತು ಅವರಿಗೆ ಆಶೀರ್ವದಿಸುತ್ತಾರೆ ಮತ್ತು  ಪರತ್ವಾದಿ ಪಂಚಕದ
( http://ponnadi.blogspot.in/2012/10/archavathara-anubhavam-parathvadhi.html ಇಲ್ಲಿ ವಿವರಿಸಿರುವ ಎಂಪೆರುಮಾನರ ಐದು ಅಭಿವ್ಯಕ್ತಿಗಳು) ತಮ್ಮ ನಾಮಗಳು, ರೂಪಗಳು, ದಿವ್ಯ ಲೀಲೆಗಳು, ಇತ್ಯಾದಿಗಳನ್ನು ತಿರುವರಂಗದಲ್ಲೇ ತೋರಿಸುತ್ತಾರೆ. ಅಲ್ಲದೆ, ಅವರ ಭಕ್ತಿಯನ್ನು ಕಂಡು, ದೇವದೇವಿಯೂ ಸಹ ಪುನೀತಳಾಗುತ್ತಾಳೆ ಮತ್ತು ತನ್ನ ಎಲ್ಲ ಸಂಪತ್ತನ್ನೂ ಪೆರಿಯ ಪೆರುಮಾಳ್ ಗೆ ಅರ್ಪಿಸುತ್ತಾಳೆ ಮತ್ತು ಎಂಪೆರುಮಾನನಿಗೆ ನಿರಂತರ ಸೇವೆ ಮಾಡುತ್ತಾಳೆ.

ಆಳ್ವಾರರು ಸಂಪೂರ್ಣವಾಗಿ ಪರ ಭಕ್ತಿ, ಪರ ಜ್ಞಾನ ಮತ್ತು ಪರಮ ಭಕ್ತಿಯಲ್ಲಿ ಸ್ಥಾಪಿತರಾಗಿದ್ದರಿಂದ, ಮತ್ತು ಪೆರಿಯ ಪೆರುಮಾಳರೇ ತಮಗೆ ಸರ್ವಸ್ವವೆಂದು ಪೂರ್ಣವಾಗಿ ಅರಿತಿದ್ದರಿಂದ, ತಿರುಮಂತ್ರ ಅನುಸಂಧಾನ ಮತ್ತು ನಾಮ ಸಂಕೀರ್ತನದ ಮೂಲಕೆ ಪೆರಿಯ ಪೆರುಮಾಳರನ್ನು ನಿರಂತರವಾಗಿ ಅನುಭವಿಸುತ್ತಾರೆ. ತಮ್ಮ ದಿವ್ಯ ಸ್ಥಾನವನ್ನು ಅರಿತು, ಶ್ರೀವೈಷ್ಣವರು ಯಮನಿಗೆ ಭಯಪಡಬೇಕಾಗಿಲ್ಲವೆಂದು ಅವರು ಸಾರುತ್ತಾರೆ. ಅವರು ಹೇಳುವುದೇನೆಂದರೆ ಯಮದೂತರು ಶ್ರೀವೈಷ್ಣವರ ಪಾದಗಳನ್ನು ಹರಸುತ್ತಾರೆ ಮತ್ತು ಶ್ರೀವೈಷ್ಣವರು ಇತರ ಶ್ರೀವೈಷ್ಣವರ ಪಾದಗಳನ್ನು ಪೂಜಿಸುವುದಕ್ಕಾಗಿ ಹರಸುತ್ತಾರೆ. ಹೀಗೆ ಪೆರಿಯ ಪೆರುಮಾಳರ ಮುಂದೆ ತಿರುಮಾಲೈಯನ್ನು ಹಾಡುತ್ತಾರೆ, ಹೇಗೆ ಶೌನಕ ಋಷಿಗಳು ಎಂಪೆರುಮಾನನ ದಿವ್ಯ ನಾಮಗಳ ವೈಭವಗಳನ್ನು ಸದಾನಂದರಿಗೆ ವಿವರಿಸಿದರೋ ಹಾಗೆ. ನಮ್ಮಾಳ್ವಾರರು ಅಚಿತ್ ನ(24 ಅಂಶಗಳು: ಮೂಲ ಪ್ರಕೃತಿ, ಮಹಾನ್, ಅಹಂಕಾರ, ಮನಸ್, ಪಂಚ ಜ್ಞಾನೇಂದ್ರಿಯಗಳು, ಪಂಚ ಕರ್ಮೇಂದ್ರಿಯಗಳು, ಪಂಚ ತನ್ಮಾತ್ರೆಗಳು, ಪಂಚ ಭೂತಗಳು) ದೋಷಗಳನ್ನು ಗುರುತಿಸಿದರೋ ಹಾಗೆ ಆಳ್ವಾರರೂ ಸಹ ಅಚಿತ್ ತತ್ತ್ವವನ್ನು ಹೀಗೆ ಗುರುತಿಸುತ್ತಾರೆ “ಪುರಂ ಚುವರ್ ಓಟ್ಟೈ ಮಾಡಮ್”, ಅರ್ಥಾತ್ “ಶರೀರವು ಹೊರಗಿನ ಗೋಡೆ ಮತ್ತು ಆತ್ಮಾ ಅದರೊಳಗಿನೆ ವಾಸಿ ಮತ್ತು ನಿಯಂತ್ರಕ”. ಅವರು ನಂತರ ಜೀವಾತ್ಮನ ಸ್ವರೂಪವು ಎಂಪೆರುಮಾನನ ಭಕ್ತರ ಸೇವಕನೆಂದು ಸಾರುತ್ತಾರೆ “ಅಡಿಯೋರ್ಕ್ಕು”ವಿನಲ್ಲಿ, ಅರ್ಥಾತ್ ಜೀವಾತ್ಮನು ಭಾಗವತರ ಸೇವಕ. ಅವರು ಒಬ್ಬ ತಿರುಮಂತ್ರನಿಷ್ಠರಾಗಿದ್ದರಿಂದ, ತಿರುಮಾಲೈ ಪ್ರಬಂಧದ ಸಾರವಾದ “ಮೇಂಪೊರುಳ್” ಪಾಶುರದಲ್ಲಿ ಎಂಪೆರುಮಾನನು ಮಾತ್ರವೇ ಉಪಾಯವೆಂದು ಪ್ರಕಟಪಡಿಸುತ್ತಾರೆ. ಕಡೆಯದಾಗಿ ಅವರು “ಮೇಂಪೊರುಳ್” ಪಾಶುರದ ನಂತರದ ಪಾಶುರಗಳಲ್ಲಿ ಶ್ರೀವೈಷ್ಣವರ ಅಂತಿಮ ಗುರಿ ಭಾಗವತರ ಸೇವೆ ಮಾಡುವುದೆಂದು ಘೋಷಿಸುತ್ತಾರೆ ಮತ್ತು ತಿರುಪ್ಪಳ್ಳಿಯೆಳುಚ್ಚಿಯ ಕಡೆಯ ಪಾಶುರದಲ್ಲಿ “ಉನ್ನಡಿಯಾರ್ಕ್ಕಾಟ್ಪಡುತ್ತಾಯ್” ಅರ್ಥಾತ್ ನನ್ನನ್ನು ನಿನ್ನ ಭಕ್ತರಿಗೆ ಅಧೀನನನ್ನಾಗಿ ಮಾಡು ಎಂದು ಎಂಪೆರುಮಾನನನ್ನು ಕೇಳಿಕೊಳ್ಳುತ್ತಾರೆ. ಹೀಗೆ ಅವರು ಇಡೀ ಜಗತ್ತಿನ ಉದ್ಧಾರಕ್ಕಾಗಿ ತಮ್ಮ ಎರಡು ದಿವ್ಯ ಪ್ರಬಂಧಗಳಾದ ತಿರುಮಾಲೈ ಮತ್ತು ತಿರುಪ್ಪಳ್ಳಿಯೆಳುಚ್ಚಿಯಲ್ಲಿ ಈ ಉನ್ನತ ತತ್ತ್ವಗಳನ್ನು ತೋರಿಸಿದರು.

ಅವರ ತನಿಯನ್:

ತಮೇವ ಮತ್ವಾ ಪರವಾಸುದೇವಮ್ ರಂಗೇಶಯಮ್ ರಾಜವದರ್ಹಣೀಯಮ್ ।
ಪ್ರಾಬೋಧಿಕೀಮ್ ಯೋಕೃತ ಸೂಕ್ತಿಮಾಲಾಮ್ ಭಕ್ತಾಂಗ್ರಿರೇಣುಮ್ ಭಗವನ್ತಮೀಡೇ ।।

ಅವರ ಅರ್ಚಾವತಾರ ಅನುಭವವನ್ನು ಇಲ್ಲಿ ಈಗಾಗಲೇ ವಿವರಿಸಲಾಗಿದೆ:
http://ponnadi.blogspot.in/2012/10/archavathara-anubhavam-thondaradippodi.html.

ಅಡಿಯೇನ್ ಪಾರ್ಥಸಾರಥಿ ರಾಮಾನುಜ ದಾಸನ್

ಮೂಲ : http://guruparamparai.wordpress.com/2013/01/08/thondaradippodi-azhwar/

ರಕ್ಷಿತ ಮಾಹಿತಿ:  https://guruparamparaikannada.wordpress.com

ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಧರ್ಮಗ್ರಂಥಗಳು) – http://granthams.koyil.org
ಪ್ರಮಾತಾ (ಭೋಧಕರು) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org

ತಿರುಪ್ಪಾಣಾಳ್ವಾರ್

ಶ್ರೀ:
ಶ್ರೀಮತೇ ಶಠಕೋಪಾಯ ನಮ:
ಶ್ರೀಮತೇ ರಾಮಾನುಜಾಯ ನಮ:
ಶ್ರೀಮದ್ ವರವರಮುನಯೇ ನಮ:
ಶ್ರೀ ವಾನಾಚಲ ಮಹಾಮುನಯೇ ನಮ:

tiruppanazhwar1

ತಿರುನಕ್ಷತ್ರಮ್: ಕಾರ್ತಿಗೈ, ರೋಹಿಣಿ
ಅವತಾರ ಸ್ಥಳಂ: ಉರೈಯೂರ್
ಆಚಾರ್ಯನ್: ವಿಶ್ವಕ್ಸೇನರ್
ಕೃತಿಗಳು: ಅಮಲನಾದಿಪಿರಾನ್
ಪರಮಪದಕ್ಕೆ ಸೇರಿದ ಸ್ಥಳ: ಶ್ರೀರಂಗಮ್

ಪೂರ್ವಾಚಾರ್ಯ ಚರಿತ್ರೆಯಲ್ಲಿ ಆಳವಂದಾರರಿಗೆ ಮುನಿ ವಾಹನರ್ ಎಂದೂ ಹೆಸರಾದ ತಿರುಪ್ಪಾಣಾಳ್ವಾರರ ಕುರಿತು ವಿಶಿಷ್ಟವಾದ ಸಂಬಂಧವಿತ್ತೆಂದು ವಿವರಿಸಲಾಗಿದೆ.

ಪೆರಿಯವಾಚಾನ್ ಪಿಳ್ಳೈ, ಅಳಗಿಯ ಮಣವಾಳ ಪೆರುಮಾಳ್ ನಾಯನಾರ್ ಮತ್ತು ವೇದಾಂತಾಚಾರ್ಯರ್ ಇವರು ಆಳ್ವಾರರ ಅಮಲನಾದಿಪಿರಾನ್ ಪ್ರಬಂಧಕ್ಕೆ ಸುಂದರವಾದ ವ್ಯಾಖ್ಯಾನಗಳನ್ನು ಬರೆದಿದ್ದಾರೆ.

ಅಳಗಿಯ ಮಣವಾಳ ಪೆರುಮಾಳ್ ನಾಯನಾರ್ ಅವರು ತಮ್ಮ ವ್ಯಾಖ್ಯಾನ ಅವತಾರಿಕೆಯಲ್ಲಿ ತಿರುಪ್ಪಾಣಾಳ್ವಾರರ ಹಿರಿಮೆಯನ್ನು ಅದ್ಭುತವಾಗಿ ವೈಭವೀಕರಿಸಿದ್ದಾರೆ. ಅದನ್ನು ನಾವು ಈಗ ನೋಡೋಣ.

ಮುದಲಾಳ್ವಾರರು ಶ್ರೀಮನ್ ನಾರಾಯಣನ ಪರತ್ವದ ಮೇಲೆ ಗಮನವನ್ನು ಕೇಂದ್ರೀಕರಿಸಿದ್ದಾರೆ ಮತ್ತು ಆತನ ಅರ್ಚಾವತಾರದ ಬಗ್ಗೆಯೂ ಸಂಕ್ಷಿಪ್ತವಾಗಿ ಹೇಳಿದ್ದಾರೆ. ಕುಲಶೇಖರಾಳ್ವಾರರು ಶ್ರೀ ವಾಲ್ಮೀಕಿ ಭಗವಾನರಂತೆ ಶ್ರೀರಾಮ ಅನುಭವದ ಮೇಲೆ ಗಮನವಿಟ್ಟಿದ್ದಾರೆ ಮತ್ತು ಅರ್ಚಾವತಾರದಲ್ಲಿಯೂ ತೊಡಗಿಸಿಕೊಂಡಿದ್ದಾರೆ. ವೇದವ್ಯಾಸ ಭಗವಾನರಂತೆ, ನಮ್ಮಾಳ್ವಾರ್, ಪೆರಿಯಾಳ್ವಾರ್ ಮತ್ತು ಆಂಡಾಳ್ ಕೃಷ್ಣ ಅನುಭವದ ಮೇಲೆ ಗಮನವಿಟ್ಟಿದ್ದಾರೆ, ಮತ್ತು ಅರ್ಚಾವತಾರವನ್ನೂ ಸಹ ಆನಂದಿಸಿದ್ದಾರೆ. ತಿರುಮಳಿಶೈ ಆಳ್ವಾರ್ ದೇವತಾಂತರ ಪರತ್ವ ನಿರಸನದ (ಇತರ ದೇವತೆಗಳು ಸರ್ವೋಚ್ಛರು ಎಂಬ ಸಂಬಂಧವನ್ನು ತೊಡೆದು ಹಾಕುವುದು) ಮೇಲೆ ಗಮನವಿಟ್ಟಿದ್ದಾರೆ ಮತ್ತು ಅರ್ಚಾವತಾರದಲ್ಲಿಯೂ ತೊಡಗಿಸಿಕೊಂಡಿದ್ದಾರೆ. ತಿರುಮಂಗೈ ಆಳ್ವಾರ್ ಎಲ್ಲ ಅರ್ಚಾವತಾರ ಎಂಪೆರುಮಾನರ ಮೇಲೆಯೂ ಗಮನವಿಟ್ಟಿದ್ದಾರೆ ಮತ್ತು ಪ್ರತಿಯೊಬ್ಬರನ್ನೂ ಸಂದರ್ಶಿಸಿ ವೈಭವೀಕರಿಸಿದ್ದಾರೆ. ಆದರೆ ಅವರು ಅನೇಕ ಸ್ಥಳಗಳಲ್ಲಿ ವಿಭವಾವತಾರ (ಶ್ರೀ ರಾಮ, ಕೃಷ್ಣ, ಇತ್ಯಾದಿ) ಮಾತು ಅರ್ಚಾವತಾರಗಳನ್ನು ನಿಯತವಾಗಿ ವಿನಿಮಯ ಮಾಡಿದ್ದಾರೆ. ತೊಂಡರಡಿಪ್ಪೊಡಿ ಆಳ್ವಾರರು ಪೆರಿಯ ಪೆರುಮಾಳ್ (ಶ್ರೀ ರಂಗನಾಥ) ಅನುಭವಿಸುವುದರಲ್ಲಿ ಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ ಮತ್ತು ಅದೇ ಸಮಯದಲ್ಲಿ, ತಮ್ಮ ಪಾಶುರಗಳಲ್ಲಿ, ಸ್ವತಃ: ತಮ್ಮ ಮಿತಿಗಳನ್ನು ತೋರಿಸಿದ್ದಾರೆ, ಇತರರಿಗೆ ಉಪದೇಶ ಮಾಡುವುದು ಇತ್ಯಾದಿ.

ತಿರುಪ್ಪಾಣಾಳ್ವಾರ್, ಇತರ ಆಳ್ವಾರರಿಗಿಂತ ಪೂರ್ತಿಯಾಗಿ ಭಿನ್ನವಾದ ಸ್ತರದಲ್ಲಿದ್ದುದರಿಂದ, ಸಂಪೂರ್ಣವಾಗಿ ಅರ್ಚಾವತಾರ ಎಂಪೆರುಮಾನನನ್ನು, ಅದು ಕೂಡ ಪೆರಿಯ ಪೆರುಮಾಳರನ್ನು, ಮಾತ್ರ ಆನಂದಿಸುವುದರಲ್ಲಿ ಗಮನವನ್ನು ಕೇಂದ್ರೀಕರಿಸಿದ್ದರು. ಕಟವಲ್ಲಿ (ಉಪನಿಷದ್) ಅರ್ಚಾವತಾರವು ಎಂಪೆರುಮಾನನ ಸಂಪೂರ್ಣ ಅಭಿವ್ಯಕ್ತಿಯೆಂದು ಸಾರುವುದರಿಂದ, ಆಳ್ವಾರರು ಸುಮ್ಮನೆ ಪೆರಿಯ ಪೆರುಮಾಳರನ್ನುವೈಭವೀಕರಿಸುವುದರಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.

ಕೃಷ್ಣನು ಅರ್ಜುನನಿಗೆ ದಿವ್ಯ ಚಕ್ಷುಷಗಳನ್ನು ಕೊಟ್ಟು ತನ್ನ ವಿಶ್ವರೂಪವನ್ನು ಅವನಿಗೆ ತೋರಿಸಿದ ಹಾಗೆ ಮತ್ತು ತನ್ನ ಸೌಂದರ್ಯ, ಉದಾರತೆ, ಇತ್ಯಾದಿಗಳಿಂದ ಅಕ್ರೂರ, ಮಾಲಾಕಾರ, ಇತರರನ್ನು ಆಕರ್ಷಿಸಿದ ಹಾಗೆ, ಪೆರಿಯ ಪೆರುಮಾಳ್ ಅರ್ಚಾ (ಎಲ್ಲಿ ಜನಸಾಮಾನ್ಯರೊಡನೆ ಸಂಭಾಷಣೆ ಮಾಡುವುದಿಲ್ಲವೋ) ಕೂಡ ತನ್ನ ಸೌಂದರ್ಯವನ್ನು ಆಳ್ವಾರರಿಗೆ ತೋರಿಸಿದನು ಮತ್ತು ಆಳ್ವಾರರು ತಕ್ಷಣವೇ ಪೆರಿಯ ಪೆರುಮಾಳರ ಆ ದಿವ್ಯ ರೂಪವನ್ನು ಪೂರ್ಣವಾಗಿ ಆನಂದಿಸಿದರು.

ಆಳ್ವಾರರು ಪಂಚಮ ವರ್ಣದಲ್ಲಿ ಜನಿಸಿದವರಾದ್ದರಿಂದ ನೈಚ್ಯ(ನಮ್ರತೆ) ಅವರಿಗೆ ಜನ್ಮಸಿದ್ಧವಾಗಿತ್ತು. ಆದ್ದರಿಂದ ಅವರು ಇತರ ಆಳ್ವಾರರಂತೆ ನೈಚ್ಯವನ್ನು ಹೊಂದಬೇಕಾಗಲಿಲ್ಲ, ಸ್ವಾಭಾವಿಕವಾಗಿಯೇ ಅದು ಅವರಲ್ಲಿದ್ದುದರಿಂದ. ಅವರು ತಾವಾಗಿಯೇ ತಮ್ಮನ್ನು ನಾಲ್ಕು ವರ್ಣಗಳಿಗೆ ಹೊರತಾದವ (ಪಂಚಮ)ರೆಂದು ಭಾವಿಸಿದ್ದರು ಮತ್ತು ಪೆರಿಯ ಪೆರುಮಾಳ್ ಕೂಡ ಅವರನ್ನು ನಾಲ್ಕು ವರ್ಣಗಳಿಗೆ ಹೊರತಾದವರೆಂದು (ನಿತ್ಯಸೂರಿಯೆಂದು) ಪರಿಗಣಿಸಿದರು.

ಹೇಗೆ ತಿರುವಡಿ(ಹನುಮಾನ್) ತಾನು ಸದಾಕಾಲವೂ ರಾಮ ಅನುಭವದಲ್ಲಿ ತಲ್ಲೀನರಾಗಿರಬೇಕೆಂದು ಶ್ರೀ ರಾಮನಿಗೆ ಘೋಷಿಸಿದರೋ ಮತ್ತು ಪರಮಪದಕ್ಕೆ ಕೂಡ ಹೋಗಲು ಬಯಸಲಿಲ್ಲವೋ ಹಾಗೆ, ಆಳ್ವಾರರೂ ಕೂಡ ಪೆರಿಯ ಪೆರುಮಾಳರ ಅನುಭವದಲ್ಲಿ ತಲ್ಲೀನರಾಗಿದ್ದು ಬೇರೇನೂ ಬೇಡವೆಂದು ಬಯಸಿದರು.

ಅವರ ಈ ಗರಿಮೆಯಿಂದಾಗಿ, ಹೇಗೆ ಶ್ರೀ ರಾಮರು ಸುಗ್ರೀವ ಮಹಾರಾಜನನ್ನು ಶ್ರೀ ವಿಭೀಷಣಾಳ್ವಾನನನ್ನು ಬರಮಾಡಲು ಕಳುಹಿಸಿದರೋ ಹಾಗೆ, ಪೆರಿಯ ಪೆರುಮಾಳ್ ಆಳ್ವಾರರನ್ನು ಪೆರಿಯ ಕೋಯಿಲ್ ಗೆ ಕರೆತರಲು ಶ್ರೀ ಲೋಕಸಾರಂಗ ಮಹಾಮುನಿಗಳನ್ನು ಕಳುಹಿಸುತ್ತಾರೆ. ಶ್ರೀ ಲೋಕಸಾರಂಗ ಮಹಾಮುನಿಗಳು ಆಳ್ವಾರರನ್ನು ಆಹ್ವಾನಿಸಿದಾಗ, ಆಳ್ವಾರರು ತಮ್ಮ ನಮ್ರಭಾವದಿಂದಾಗಿ ಕ್ಷೇತ್ರವನ್ನು ಪ್ರವೇಶಿಸಲು ನಿರಾಕರಿಸುತ್ತಾರೆ. ಆಗ, ಮಹಾಮುನಿಗಳು ಅವರನ್ನು ಒತ್ತಾಯಪಡಿಸುತ್ತಾರೆ ಮತ್ತು ತಮ್ಮ ಭುಜಗಳ ಮೇಲೆ ಅವರನ್ನು ಹೊತ್ತು ಪೆರಿಯ ಪೆರುಮಾಳರ ಹತ್ತಿರ ಕರೆತರುತ್ತಾರೆ. ಆಳ್ವಾರರು ಹೋಗುವ ಹಾದಿಯಲ್ಲಿ ತಮ್ಮ ದಿವ್ಯ ಪ್ರಬಂಧವಾದ ಅಮಲನಾದಿಪಿರಾನ್ ನ 9 ಪಾಶುರಗಳನ್ನು ಹಾಡುತ್ತಾರೆ ಮತ್ತು 10ನೆಯ ಪಾಶುರವನ್ನು ಶ್ರೀರಂಗದ ಪ್ರಧಾನ ಸನ್ನಿಧಿಯಲ್ಲಿ ಮುಗಿಸುತ್ತಾರೆ ಮತ್ತು ತಕ್ಷಣವೇ ಪರಮಪದನಾಥನೊಂದಿಗೆ ಇರಲು ಪರಮಪದದ ದಿವ್ಯ ನೆಲೆಗೆ ತಲುಪುತ್ತಾರೆ ಮತ್ತು ಎಲ್ಲ ನಿತ್ಯರು/ಮುಕ್ತರು ನಿರಂತರವಾಗಿ ಅವರನ್ನು ಶ್ಲಾಘಿಸುತ್ತಾರೆ.

ಮಾಮುನಿಗಳು ಆಳ್ವಾರರನ್ನು ವೈಭವೀಕರಿಸಿರುವುದನ್ನು ನಾವು ಇಲ್ಲಿ ಈಗಾಗಲೇ ನೋಡಿದ್ದೇವೆ:
http://ponnadi.blogspot.in/2012/10/archavathara-anubhavam-thiruppanazhwar.html.

ಇದನ್ನು ಗಮನದಲ್ಲಿಟ್ಟು, ನಾವು ಈಗ ಅವರ ಚರಿತ್ರೆಯನ್ನು ನೋಡೋಣ.
ತಿರುಪ್ಪಾಣಾಳ್ವಾರರ ಚರಿತ್ರೆಯು ಉರೈಯೂರ್ ಕಮಲವಲ್ಲಿ ನಾಚ್ಚಿಯಾರ್ ಚರಿತ್ರೆಯೊಂದಿಗೆ ಆರಂಭವಾಗುತ್ತದೆ (ಅವರಿಬ್ಬರೂ ಈ ದಿವ್ಯದೇಶದಲ್ಲಿ ಜನಿಸಿದವರಾದ್ದರಿಂದ).
ಯಾರ್ಯಾರು ಕಾವೇರಿನಡಿಯ ಗಾಳಿಯನ್ನು ಉಸಿರಾಡುತ್ತಾರೋ ಅವರಿಗೆ ಮೋಕ್ಷ ದೊರಕುತ್ತದೆಂದು ಹೇಳಲಾಗುತ್ತದೆ – ಹೀಗಿರುವಾಗ ಆ ನದಿಯ ದಡಗಳಲ್ಲಿ ವಾಸಿಸುವವರಿಗೆ ಏನೆಂದು ಹೇಳಬೇಕು. ನಿಚುಳಾಪುರಿ (ಉರೈಯೂರ್) ಹೀಗೆ ಕಾವೇರಿನದಿಯ ದಡದಲ್ಲಿರುವ, ಅನೇಕ ದೇವಸ್ಥಾನಗಳು, ಅರಮನೆಗಳು, ಇತ್ಯಾದಿಗಳಿರುವ ಒಂದು ರಾಜ್ಯ. ಸೂರ್ಯವಂಶದಿಂದ ಬಂದ ಚೋಳಭೂಪತಿ ಎಂಬ ರಾಜನು ಅದನ್ನು ಬಹು ಧಾರ್ಮಿಕವಾಗಿ ಆಳುತ್ತಿದ್ದನು. ಶ್ರೀ ಮಹಾಲಕ್ಷ್ಮಿಯು ಸಮುದ್ರ ರಾಜನಿಂದ (ಕ್ಷೀರಾಬ್ಧಿಯ ರಾಜ) ಉದಯಿಸಿದ ಹಾಗೆ, ನೀಳಾದೇವಿಯು (ಪರಮಪದನಾಥನ ಭಾರ್ಯೆ) ಉರೈಯೂರ್ ನಾಚ್ಚಿಯಾರ್ ಆಗಿ ನಂಪೆರುಮಾಳ್ (ಶ್ರೀ ರಂಗನಾಥನ್ ) ಜೊತೆ ಬಹು ನಿಕಟ ಬಾಂಧವ್ಯವನ್ನು ಹೊಂದಿದ್ದ ಧರ್ಮವರ್ಮನ ಮಗಳಾಗಿ ಉದಯಿಸುತ್ತಾಳೆ. ಅವಳು ಸದಾಕಾಲವೂ ನಂಪೆರುಮಾಳ್ ಬಗ್ಗೆಯೇ ಚಿಂತಿಸುತ್ತ ಬೆಳೆಯುತ್ತಾಳೆ ಮತ್ತು ಪ್ರಾಪ್ತವಯಸ್ಕಳಾದಾಗ ರಾಜ್ಯದಲ್ಲಿ ಒಂದು ಉದ್ಯಾನವನಕ್ಕೆ ಹೋಗುತ್ತಾಳೆ. ಅದೇ ಸಮಯದಲ್ಲಿ ನಂಪೆರುಮಾಳ್ ಅದೇ ಸ್ಥಳಕ್ಕೆ ಬೇಟೆಗಾಗಿ ಬರುತ್ತಾನೆ. ಅವನನ್ನು ನೋಡಿ, ಉರೈಯೂರ್ ನಾಚ್ಚಿಯಾರ್ ಬಹು ಆಕರ್ಷಿತಳಾಗುತ್ತಾಳೆ ಮತ್ತು ತನ್ನ ತಂದೆಗೆ ತಾನು ನಂಪೆರುಮಾಳ್ ನನ್ನು ಮಾತ್ರ ವಿವಾಹವಾಗುತ್ತೇನೆಂದು ತಿಳಿಸುತ್ತಾಳೆ. ಧರ್ಮವರ್ಮನು ಇದನ್ನು ಕೇಳಿ ಬಹು ಸಂತೋಷಗೊಂಡು, ನಂಪೆರುಮಾಳ್ ಬಳಿಗೆ ಹೋಗುತ್ತಾನೆ ಮತ್ತು ಅದನ್ನು ತಿಳಿಸುತ್ತಾನೆ. ಇದನ್ನು ಕೇಳಿ ಬಹು ಸಂತಸಗೊಂಡ ನಂಪೆರುಮಾಳ್, ಅದನ್ನು ಒಪ್ಪಿಕೊಳ್ಳುತ್ತಾನೆ ಮತ್ತು ವಿವಾಹಕ್ಕೆ ಸಿದ್ಧತೆಗಳನ್ನು ಮಾಡಲು ಆದೇಶಿಸುತ್ತಾನೆ. ಒಂದು ಅದ್ದೂರಿಯ ವಿವಾಹವು ನಡೆಯುತ್ತದೆ, ಧರ್ಮವರ್ಮನು ಉರೈಯೂರ್ ನಾಚ್ಚಿಯಾರನ್ನು ನಂಪೆರುಮಾಳ್ ಗೆ ನೀಡುತ್ತಾನೆ, ಹೇಗೆ ಜನಕರಾಜನು ಸೀತಾ ಪಿರಾಟ್ಟಿಯನ್ನು ಶ್ರೀ ರಾಮನಿಗೆ ನೀಡಿದನೋ ಹಾಗೆ. ರಾಜನು ನಂಪೆರುಮಾಳ್ ಗೆ ಬಹು ಸಂಪತ್ತನ್ನು ಶ್ರೀಧನವಾಗಿ ಕೊಡುತ್ತಾನೆ ಮತ್ತು ತನ್ನ ರಾಜ್ಯದ ಆಳ್ವಿಕೆಯನ್ನು ಮುಂದುವರಿಸುತ್ತಾನೆ.

ಅದೇ ಕಾಲದಲ್ಲಿ, ತಿರುಪ್ಪಾಣಾಳ್ವಾರರು ಕಾರ್ತಿಗೈ ಮಾಸ, ರೋಹಿಣಿ ನಕ್ಷತ್ರದಲ್ಲಿ ಎಲ್ಲ ಕರ್ತವ್ಯಗಳನ್ನೂ ಮುಗಿಸಿದವರಂತೆ(ಮತ್ತು ಬೇರೆ ಯಾವುದೇ ಋಣವಿಲ್ಲದವರಂತೆ), ಪಂಚಮ ಕುಲದಲ್ಲಿ ಉದಯಿಸುತ್ತಾರೆ. ಅವರ ವೈಭವಗಳನ್ನು ಕಂಡು ಗರುಡವಾಹನ ಪಂಡಿತರು ದಿವ್ಯ ಸೂರಿ ಚರಿತೆಯಲ್ಲಿ ಅವರು ಶ್ರೀವತ್ಸದಂತೆ (ಶ್ರೀಮನ್ ನಾರಾಯಣನ ಎದೆಯಲ್ಲಿರುವ ದಿವ್ಯವಾದ ಮಚ್ಚೆ) ಎಂದಿದ್ದಾರೆ – ಎಲ್ಲ ಆಳ್ವಾರರುಗಳೂ ಎಂಪೆರುಮಾನನನಿಂದ ಸಂಸಾರದಿಂದ ಆರಿಸಲ್ಪಟ್ಟು ನಿಷ್ಕಳಂಕ ಜ್ಞಾನದಿಂದ ಅನುಗ್ರಹಿಸಲ್ಪಟ್ಟಿದ್ದರೂ ಸಹ.

ಜಾಯಮಾನಮ್ ಹಿ ಪುರುಷಮ್ ಯಮ್ ಪಶ್ಯೇನ್ ಮಧುಸೂದನ: |
ಸಾತ್ವಿಕಸ್ಸ ತು ವಿಜ್ಞೇಯಸ್ ಸ ವೈ ಮೋಕ್ಷಾರ್ಥ ಚಿಂತಕ: ||

ಯಾವಾಗ ಮಧುಸೂದನನ್ ಎಂಪೆರುಮಾನನು ಒಬ್ಬ ಜೀವಾತ್ಮನನ್ನು ಹುಟ್ಟಿನಲ್ಲಿಯೇ ಆಶೀರ್ವದಿಸುತ್ತಾನೋ, ಆತನು ಶುದ್ಧ ಸತ್ತ್ವಗುಣಗಳೊಂದಿಗೆ ಜನಿಸುತ್ತಾನೆ. ಅಂತಹ ಜೀವಾತ್ಮನು ಸಂಪೂರ್ಣವಾಗಿ ಮೋಕ್ಷದ ಮೇಲೆಯೇ ತನ್ನ ಗಮನವನ್ನು ಕೇಂದ್ರೀಕರಿಸುತ್ತಾನೆ.

ಮಹಾಭಾರತದಲ್ಲಿ ಈ ಮೇಲಿನ ಶ್ಲೋಕದಲ್ಲಿ ಹೇಳಿರುವಂತೆ, ಎಂಪೆರುಮಾನನು ಆಳ್ವಾರರನ್ನು ಅವರ ಜನನದಲ್ಲಿಯೇ ಆಶೀರ್ವದಿಸಿದ್ದುದರಿಂದ, ಅವರು ಶುದ್ಧ ಸತ್ತ್ವಗುಣಗಳೊಂದಿಗೆ ಜನಿಸುತ್ತಾರೆ, ಮತ್ತು ನಾರದ ಭಗವಾನರಂತೆ (ಎಂಪೆರುಮಾನನೊಂದಿಗೆ ನಿಕಟ ಬಾಂಧವ್ಯವನ್ನು ಹೊಂದಿ ಮತ್ತು ನಿರಂತರವೂ ಆತನನ್ನು ಸ್ತುತಿಸುವವರು), ಮತ್ತು ನಂಪಾಡುವಾನನಂತೆ (ತಿರುಕ್ಕುರುಂಗುಡಿ ನಂಬಿಯ ಬಗ್ಗೆ ಹಾಡುವುದು ಮತ್ತು ಸ್ತುತಿಸುವುದರಲ್ಲಿ ನಿರತನಾಗಿದ್ದವನು) ಕೈಶಿಕ ಪುರಾಣದಲ್ಲಿ ವಿವರಿಸಿರುವಂತೆ ಬ್ರಹ್ಮರಾಕ್ಷಸನನ್ನು (ರಾಕ್ಷಸನಾದ ಬ್ರಾಹ್ಮಣ) ತನ್ನ ಎಲ್ಲ ಪಾಪಗಳಿಂದ ಮುಕ್ತಗೊಳಿಸಿದವನು. ಅವರ ವೈಭವಗಳನ್ನು ನೋಡಿದರೆ, ಎಂಪೆರುಮಾನನನ್ನು ಹಾಡುವುದು ಮತ್ತು ಹೊಗಳುವುದಕ್ಕಾಗಿಯೇ ನಿತ್ಯಸೂರಿಯೊಬ್ಬರು ಜನ್ಮತಾಳಿದರೆಂದೆನಿಸುತ್ತದೆ. ವರ್ಣಾಶ್ರಮ ಧರ್ಮವನ್ನು ಅನುಸರಿಸುತ್ತಾ, ಶ್ರೀರಂಗಕ್ಕೆ ಕಾಲಿಡದೆ, ಪ್ರತಿದಿನ ಅವರು ನದಿಯ ದಕ್ಷಿಣ ದಡದಲ್ಲಿ ನಿಂತು, ಶ್ರೀ ರಂಗನಾಥನ ಕಡೆ ಮುಖ ಮಾಡಿ, ತನ್ನ ಬಲಗೈಯಲ್ಲಿ ಸುದರ್ಶನ ಚಕ್ರವನ್ನು ಹಿಡಿದಿರುವ ಶ್ರೀಮನ್ನಾರಾಯಣನಿಗೆ ಸಂಪೂರ್ಣ ಶರಣಾಗತರಾದವರಂತೆ, ನಿರಂತರವಾಗಿ ಪೆರಿಯ ಪೆರುಮಾಳರನ್ನು ಹಾಡುತ್ತಾರೆ ಮತ್ತು ವೈಭವೀಕರಿಸತ್ತಾರೆ, ಸಹಜವಾದ ಭಾವಗಳೊಂದಿಗೆ. ಪೆರಿಯ ಪೆರುಮಾಳ್ ಸಹ ಆಳ್ವಾರರ ಗಾನ ಮತ್ತು ಸ್ತುತಿಗಳನ್ನು ಅತ್ಯಾನಂದದಿಂದ ಅನುಭವಿಸುತ್ತಾನೆ.

ಒಮ್ಮೆ, ಶ್ರೀ ಲೋಕಸಾರಂಗ ಮಹಾಮುನಿಗಳು ಕೈಂಕರ್ಯಕ್ಕೆ ತೀರ್ಥವನ್ನು ತರಲು ಆಳ್ವಾರರು ಇರುವೆಡೆಗೆ ಬರುತ್ತಾರೆ. ಅವರು ಆಳ್ವಾರರು ತಮ್ಮ ಅನುಭವದಲ್ಲಿ ತಲ್ಲೀನರಾಗಿರುವುದನ್ನು ನೋಡುತ್ತಾರೆ, ಆದರೆ ಅವರ ಜನ್ಮವನ್ನು ಪರಿಗಣಿಸಿ, ತಾವು ಜಲವನ್ನು ತೆಗೆದುಕೊಳ್ಳುವುದಕ್ಕಾಗಿ ಅವರನ್ನು ದೂರ ಹೋಗುವಂತೆ ಹೇಳುತ್ತಾರೆ. ಆಳ್ವಾರರು ಭಗವದನುಭವದಲ್ಲಿ ತಲ್ಲೀನರಾಗಿದ್ದರಿಂದ, ಮಹಾಮುನಿಗಳ ಮಾತುಗಳು ಅವರಿಗೆ ಕೇಳಿಸಲಿಲ್ಲ/ತಿಳಿಯಲಿಲ್ಲ. ಮಹಾಮುನಿಗಳು ಆಳ್ವಾರರ ಕಡೆಗೆ ಒಂದು ಕಲ್ಲನ್ನು ಎಸೆಯುತ್ತಾರೆ, ಅದು ಅವರ ಹಣೆಗೆ ಬೀಳುತ್ತದೆ ಮತ್ತು ರಕ್ತವು ಹರಿಯಲು ಶುರುವಾಗುತ್ತದೆ. ತಮ್ಮ ಕ್ರಿಯೆಯನ್ನು ಅರಿತು, ಮಹಾಮುನಿಗಳ ಕೈಂಕರ್ಯಕ್ಕೆ ಅಡ್ಡಬಂದುದಕ್ಕಾಗಿ ಆಳ್ವಾರರು ಕೂಡಲೇ ಬಹು ವ್ಯಥೆಪಡುತ್ತಾರೆ, ಕ್ಷಮೆ ಯಾಚಿಸುತ್ತಾರೆ ಮತ್ತು ಕ್ಷಿಪ್ರವಾಗಿ ದೂರ ಹೋಗುತ್ತಾರೆ. ನಂತರ ಲೋಕಸಾರಂಗ ಮಹಾಮುನಿಗಳು ಸ್ನಾನ ಮಾಡಿ, ತಮ್ಮ ನಿತ್ಯ ಕರ್ಮಾನುಷ್ಠಾನಗಳನ್ನು ಮುಗಿಸುತ್ತಾರೆ, ಮತ್ತು ಛತ್ರ, ಚಾಮರ, ಮೇಳ, ತಾಳ, ಇತ್ಯಾದಿಗಳೊಂದಿಗೆ (ಎಂಪೆರುಮಾನನಿಗೆ ತೀರ್ಥವನ್ನು ತರಲು ಇರುವ ಸಂಪ್ರದಾಯದಂತೆ) ಪೆರಿಯ ಪೆರುಮಾಳ್ ಕೈಂಕರ್ಯಕ್ಕೆ ತೀರ್ಥವನ್ನು ತೆಗೆದುಕೊಂಡು ಹೋಗುತ್ತಾರೆ. ಲೋಕಸಾರಂಗ ಮುನಿಗಳ ವರ್ತನೆಯಿಂದ ಪೆರಿಯ ಪೆರುಮಾಳ್ ಅಸಮಾಧಾನಗೊಂಡುದನ್ನು ಕಂಡು, ನಾಚ್ಚಿಯಾರ್ ಪೆರುಮಾಳರನ್ನು ಕೇಳುತ್ತಾಳೆ “ನಾವು ಪಾಣ್ ಪೆರುಮಾಳರನ್ನು (ಆಳ್ವಾರರನ್ನು ಅಕ್ಕರೆಯಿಂದ ಕರೆಯುವ ಹೆಸರು) ನಮ್ಮ ಸನ್ನಿಧಿಯಿಂದ ಹೊರಗಿರಲು ಬಿಡಬಹುದೇ?”. ಪೆರಿಯ ಪೆರುಮಾಳ್ ತಕ್ಷಣವೇ ತಮ್ಮ ಸನ್ನಿಧಿಯ ದ್ವಾರಗಳನ್ನು ಮುಚ್ಚುತ್ತಾರೆ ಮತ್ತು ಕೋಪದಿಂದ ಲೋಕಸಾರಂಗ ಮುನಿಗಳನ್ನು ಕೇಳುತ್ತಾರೆ “ನನ್ನ ಪ್ರಿಯನಾದ ಭಕ್ತನಿಗೆ ನೀವು ಹೀಗೆ ಮಾಡಬಹುದೇ?”. ಲೋಕಸಾರಂಗರು ಕೂಡಲೇ ತಮ್ಮ ತಪ್ಪನ್ನು ಅರಿತುಕೊಳ್ಳುತ್ತಾರೆ ಮತ್ತು ತಮ್ಮ ಬಗ್ಗೆ ತಾವೇ ಬಹಳ ಅಸಮಾಧಾನಗೊಳ್ಳುತ್ತಾರೆ. ನಂತರ ಅವರು ಪೆರಿಯ ಪೆರುಮಾಳರನ್ನು ಕೇಳುತ್ತಾರೆ “ನಾನು ಈ ದೊಡ್ಡ ಭಾಗವತ ಅಪಚಾರವನ್ನು ಮಾಡಿದ್ದೇನೆ. ಈ ದೊಡ್ಡ ಪ್ರಮಾದದಿಂದ ನನ್ನನ್ನು ಹೇಗೆ ಪಾರುಮಾಡಬಹುದು?”. ಪಾಣ್ ಪೆರುಮಾಳರ ಬಗ್ಗೆ ಅತಿ ಕಾರುಣ್ಯದಿಂದಾಗಿ ಮತ್ತು ತನ್ನ ಸಂಪೂರ್ಣ ಸ್ವಾತಂತ್ರ್ಯದಿಂದಾಗಿ (ಯಾರಿಂದಲೂ ಪ್ರಶ್ನಿಸಲಾಗದ) ಪೆರಿಯ ಪೆರುಮಾಳ್ ಉತ್ತರಿಸುತ್ತಾರೆ “ನೀವು ಈಗ ಹೋಗಿ ಅವರನ್ನು ನಿಮ್ಮ ಭುಜಗಳ ಮೇಲೆ ಕೂಡಿಸಿಕೊಂಡು ಬಹು ಭಕ್ತಿಯಿಂದ ಕರೆದು ತರಬೇಕು” ಎಂದು ಆ ರಾತ್ರಿ ಸ್ವಪ್ನದಲ್ಲಿ ಹೇಳುತ್ತಾರೆ. ಲೋಕಸಾರಂಗರು ಬೆಳಗಿನ ಜಾವ ಶೀಘ್ರವಾಗಿ ಏಳುತ್ತಾರೆ ಮತ್ತು ಈ ದಿನವು ತಮಗೆ ಒಂದು ಶ್ರೇಷ್ಠವಾದ ದಿನವೆಂದು ಭಾವಿಸುತ್ತಾರೆ, ಅಕ್ರೂರನು ಭಾವಿಸಿದ ಹಾಗೆ “ಅದ್ಯಮೇ ಸಫಲಮ್ ಜನ್ಮ ಸುಪ್ರಭಾತಾ ಚ ಮೇ ನಿಚಾ” ಅರ್ಥಾತ್ ಇಂದು ನನ್ನ ಜನ್ಮವು ಸಾರ್ಥಕವಾಯಿತು ಮತ್ತು ಇಂದಿನ ಸೂರ್ಯೋದಯವು ಮಹತ್ವದ್ದಾಗಿದೆ ಏಕೆಂದರೆ ಕಂಸನು ತನ್ನನ್ನು ಬಲರಾಮ/ಕೃಷ್ಣರನ್ನು ಮಥುರೆಗೆ ಕರೆತರಲು ಕಳುಹಿಸಿದ್ದಾನೆ. ಅವರು ನಿರ್ಮಲವಾದ ಹೃದಯವುಳ್ಳ ಭಕ್ತರೊಂದಿಗೆ ಕಾವೇರಿ ನದಿಗೆ ಹೋಗುತ್ತಾರೆ, ಸ್ನಾನ ಮಾಡುತ್ತಾರೆ, ಮತ್ತು ನಿತ್ಯಾನುಷ್ಠಾನಗಳನ್ನು ಮಾಡುತ್ತಾರೆ.

“ಸುದೂರಮಪಿ ಗಂತವ್ಯಮ್ ಯತ್ರ ಭಾಗವತ: ಸ್ಥಿತ:” ಅರ್ಥಾತ್ “ಒಬ್ಬ ಭಾಗವತರು ಬಹಳ ದೂರದಲ್ಲಿದ್ದರೂ ಕೂಡ ಅವರ ಬಳಿಗೆ ಹೋಗಿ ಸೇವೆ ಮಾಡಬೇಕು” ಎಂದು ಹೇಳಿರುವ ಹಾಗೆ, ಲೋಕಸಾರಂಗ ಮುನಿಗಳು ಶ್ರೀರಂಗದಿಂದ ಇನ್ನೂ ದೂರದಲ್ಲಿ ನಿಂತಿರುವ ತಿರುಪ್ಪಾಣಾಳ್ವಾರ್ ಇರುವ ಕಡೆಗೆ ಹೋಗುತ್ತಾರೆ. ಆಳ್ವಾರರು ಸುಂದರವಾದ ಉದ್ಯಾನಗಳು, ಇತ್ಯಾದಿಗಳಿಂದ ಕೂಡಿದ ಶ್ರೀರಂಗದ ದಿಕ್ಕಿನಲ್ಲಿ ಮುಖಮಾಡಿ ನಿಂತಿದ್ದಾರೆ ಮತ್ತು ಶ್ರೀರಂಗನಾಥನನ್ನು ಸ್ತುತಿಸುತ್ತಿದ್ದಾರೆ. ಲೋಕಸಾರಂಗ ಮುನಿಗಳು ಆಳ್ವಾರರ ಪಾದಾರವಿಂದಗಳಲ್ಲಿ ಬೀಳುತ್ತಾರೆ ಮತ್ತು ನಂಪೆರುಮಾಳರ ಆದೇಶದಂತೆ ಅವರು ಶ್ರೀರಂಗವನ್ನು ಪ್ರವೇಶಿಸುವಂತೆ ಕೇಳಿಕೊಳ್ಳುತ್ತಾರೆ. ಆಳ್ವಾರರು ನಿರಾಕರಿಸುತ್ತಾರೆ ಮತ್ತು ತಾವು ಕೀಳುವರ್ಗದವರಾಗಿದ್ದು, ಚತುರ್ವರ್ಣದಲ್ಲಿ ಜನಿಸಿಲ್ಲವಾದ್ದರಿಂದ ಶ್ರೀರಂಗದಲ್ಲಿ ತಮ್ಮ ಪಾದಾರವಿಂದವನ್ನು ಇಡಲು ಅನರ್ಹರೆಂದು ಹೇಳುತ್ತಾರೆ. ಶ್ರೀ ಲೋಕಸಾರಂಗ ಮುನಿಗಳು ತಕ್ಷಣವೇ ಹೇಳುತ್ತಾರೆ “ಓಹೋ ಹೌದು! ನೀವು ನಿಮ್ಮ ಪಾದಾರವಿಂದಗಳನ್ನು ಶ್ರೀರಂಗದಲ್ಲಿ ಇಡಬಾರದು ಆದರೆ ನೀವು ಖಂಡಿತವಾಗಿ ನನ್ನ ಭುಜಗಳ ಮೇಲೆ ಕುಳಿತುಕೊಳ್ಳಬಹುದು ಮತ್ತು ನಾನು ನಿಮ್ಮನ್ನು ನೇರವಾಗಿ ಶ್ರೀ ರಂಗನಾಥನ ಬಳಿಗೆ ಕರೆದುಕೊಂಡುಹೋಗುತ್ತೇನೆ. ಪೆರಿಯ ಪೆರುಮಾಳರ ಆಜ್ಞೆಯಂತೆ ನಾನು ನಿಮಗೆ ಹೀಗೆ ಮಾಡಲು ಒತ್ತಾಯಿಸುತ್ತೇನೆ”. ಆಳ್ವಾರರು ಭಗವಾನ್ ಮತ್ತು ಭಾಗವತರಿಗೆ ಪೂರ್ಣವಾಗಿ ಶರಣಾಗತರಾಗಿದ್ದರಿಂದ, ಪೆರಿಯ ಪೆರುಮಾಳ್ ಮತ್ತು ಲೋಕಸಾರಂಗರ ಮಾತುಗಳನ್ನು ನಿರಾಕರಿಸಲಾಗದೆ, ಆ ಮಾತುಗಳನ್ನು ಒಪ್ಪಿಕೊಳ್ಳುತ್ತಾರೆ ಮತ್ತು ತಮಗೆ ಎಂಪೆರುಮಾನನ ಅತ್ಯಂತ ಕಾರುಣ್ಯದ ಉಪಕಾರಗಳನ್ನು ಸ್ಮರಿಸಲು ಪ್ರಾರಂಭಿಸುತ್ತಾರೆ ಮತ್ತು ತಮ್ಮ ಎಲ್ಲ ಹೊಣೆಗಾರಿಕೆಗಳನ್ನು ಬಿಟ್ಟುಕೊಡುತ್ತಾರೆ ಮತ್ತು ಲೋಕಸಾರಂಗ ಮುನಿಗಳಿಗೆ ತಮ್ಮನ್ನು ಅರ್ಪಿಸುತ್ತಾರೆ. ಶ್ರೀ ಲೋಕಸಾರಂಗ ಮಹಾಮುನಿಗಳು ಅತೀವ ಸಂತೋಷದಿಂದ ಆಳ್ವಾರರನ್ನು ಎತ್ತಿ ತಮ್ಮ ಭುಜಗಳ ಮೇಲೆ ಕೂಡಿಸಿಕೊಳ್ಳುತ್ತಾರೆ ಮತ್ತು ಶ್ರೀರಂಗದ ಕಡೆಗೆ ಅವರನ್ನು ಕರೆದುಕೊಂಡು ಹೋಗುತ್ತಾರೆ, ಹೇಗೆ ಆದಿವಾಹಿಕರು (ಜೀವಾತ್ಮರನ್ನು ತಮ್ಮ ಅಂತಿಮ ಪ್ರಯಾಣದಲ್ಲಿ  ಪರಮಪದದೆಡೆಗೆ ಕರೆದೊಯ್ಯುವವರು) ಮುಕ್ತರಾಗುವ ಜೀವಾತ್ಮರನ್ನು ತಿರುಮಾಮಣಿ ಮಂಟಪಕ್ಕೆ (ದಿವ್ಯಾಭರಣಗಳಿಂದ ಅಲಂಕೃತವಾದ ದಿವ್ಯ ಮಹಿಷಿಗಳು ಮತ್ತು ನಿತ್ಯಸೂರಿಗಳೊಂದಿಗೆ ಪರಮಪದನಾಥನು ಕುಳಿತಿರುವ ದಿವ್ಯವಾದ ಮಂಟಪ) ಕರೆತರುತ್ತಾರೋ ಹಾಗೆ.

ಗಮನಿಸಿ: ಈ ಚರಿತ್ರೆಯನ್ನು ಅಳಗಿಯ ಮಣವಾಳ ಪೆರುಮಾಳ್ ನಾಯನಾರರು ಆಚಾರ್ಯ ಹೃದಯಂ ನ 85ನೆಯ ಚೂರ್ಣಿಕೆಯಲ್ಲಿ ಸುಂದರವಾಗಿ ತೋರಿಸಿದ್ದಾರೆ.

tiruppanazhwar2
ಲೋಕಸಾರಂಗ ಮಹಾಮುನಿ, ತಿರುಪ್ಪಾಣಾಳ್ವಾರ್, ನಂಪೆರುಮಾಳ್

ಪೆರಿಯ ಪೆರುಮಾಳ್ ನಿತ್ಯಸೂರಿಗಳಿಗೆ ತೋರಿಸುವ ತನ್ನ ದಿವ್ಯ ರೂಪವನ್ನು ಆಳ್ವಾರರ ಮುಂದೆ ಪ್ರಕಟಪಡಿಸುತ್ತಾರೆ ಮತ್ತು ಆಳ್ವಾರರು ತಮ್ಮ ದೈವಿಕ ವೀಣೆಯ ಸಂಗೀತದೊಂದಿಗೆ ಅಮಲನಾದಿಪಿರಾನ್ ಹಾಡಲು ಪ್ರಾರಂಭಿಸುತ್ತಾರೆ ಮತ್ತು 9 ಪಾಶುರಗಳನ್ನು ಸನ್ನಿಧಿಯ ಹೊರಗೆ ಹಾಡುತ್ತಾರೆ. ಅವರು ಪೆರಿಯ ಪೆರುಮಾಳ ಸನ್ನಿಧಿಯನ್ನು ಪ್ರವೇಶಿಸಿದ ತಕ್ಷಣವೇ, ಪೆರಿಯ ಪೆರುಮಾಳ್ ಅವರ ಮುಂದೆ ಸುಂದರವಾಗಿ ಪ್ರತ್ಯಕ್ಷನಾಗುತ್ತಾನೆ, ಈ ಕೆಳಗೆ ಶ್ರೀರಂಗ ಮಾಹಾತ್ಮ್ಯದಲ್ಲಿ ವರ್ಣಿಸಿರುವ ಹಾಗೆ:

ಬ್ರಹ್ಮನು ಶ್ರೀರಂಗನಾಥನನ್ನು ಪೂಜಿಸಿದನು, ಸುಂದರವಾದ ಕಿರೀಟ, ತೋಳ್ಬಳೆಗಳಿಂದ ಅಲಂಕೃತನಾದ, ವಜ್ರಗಳು ಮತ್ತು ಅಮೂಲ್ಯ ರತ್ನಗಳಿಂದ ಮಾಡಿದ ಸುಂದರವಾದ ಕುಂಡಲಗಳಿಂದ ಕೂಡಿದ, ಸುಂದರವಾದ ರತ್ನಹಾರ ಮತ್ತು ಶುದ್ಧವಾದ ಮುತ್ತುಗಳಿಂದ ಮಾಡಿದ ಮಾಲೆಗಳನ್ನು ಧರಿಸಿದ, ಕೌಸ್ತುಭಮಣಿಯಿ ವಿಶಾಲವಾದ ಎದೆಯಿಂದ ಶೋಭಿಸುತ್ತಿರುವ, ಶ್ರೀ ಮಹಾಲಕ್ಷ್ಮಿಯ ಶಾಶ್ವತ ನೆಲೆಯಾದ ಬಹು ಪೌರುಷದ ವಕ್ಷಸ್ಥಳದಿಂದ ಕೂಡಿದ, ಕರಗಿಸಿದ ಚಿನ್ನದಂತೆ ಪ್ರಕಾಶಿಸುತ್ತಿರುವ ಸುಂದರವಾದ ಪೀತಾಂಬರಧಾರಿಯಾದ, ಸುಂದರವಾದ ಒಡ್ಯಾಣವನ್ನು ಧರಿಸಿರುವ, ತನ್ನ ಪಾದಾರವಿಂದಗಳಲ್ಲಿ ಸುಂದರವಾದ ಕಾಲ್ಗೆಜ್ಜೆಗಳನ್ನು ಧರಿಸಿದ, ಸುಂದರವಾದ ಮತ್ತು ಮೃದುವಾದ ಯಜ್ಗ್ನೋಪವೀತವನ್ನು ಧರಿಸಿದ, ಆಕರ್ಷಕವಾಗಿ ಒಂದು ಕೈಯನ್ನು ತನ್ನ ಶಿರಕ್ಕೆ ಆಧಾರವಾಗಿ ಹಿಡಿದ ಮತ್ತು ಇನ್ನೊಂದು ಕೈಯನ್ನು ತನ್ನ ಪಾದಾರವಿಂದಗಳ ಕಡೆಗೆ ಚಾಚಿದ, ಸ್ವಲ್ಪ ಮಡಿಚಿದ ಮತ್ತು ಎತ್ತರಿಸಿದ ಪಾದಾರವಿಂದಗಳಿಂದ ಕೂಡಿದ, ಸುಂದರವಾದ ಮತ್ತು ನೀಳವಾದ ರೂಪವುಳ್ಳ, ಎತ್ತರಿಸಿದ ಮತ್ತು ಸುಂದರವಾಗಿ ಅಲಂಕೃತವಾದ ಭುಜಗಳುಳ್ಳ, ತಿರುವನಂತಾಳ್ವಾನ್ (ಆದಿಶೇಷ) ನ ಮೇಲೆ ಪವಡಿಸಿದವನಾದವನು.

ಬ್ರಹ್ಮಾದಿಯಾಗಿ ಎಲ್ಲರಿಂದಲೂ ಪೂಜಿಸಲ್ಪಡುವ ಇಂತಹಾ ಭವ್ಯವಾದ ಎಂಪೆರುಮಾನನ ಸನ್ನಿಧಿಗೆ ಪ್ರವೇಶಿಸಿದ ನಂತರ ಆಳ್ವಾರರು, ತನ್ನನ್ನು ಪೋಷಿಸುವ ತಾಯಿಯ ಸ್ತನಗಳನ್ನು ಅರಸುವ ಎಳೆಮಗುವಿನ ಹಾಗೆ, ಎಂಪೆರುಮಾನನ ಪಾದಾರವಿಂದಗಳನ್ನು ಅರಸುತ್ತಾರೆ, ಏಕೆಂದರೆ ಶರಣಾದವರು ತಮ್ಮ ಪ್ರಭುವಿನ ಪಾದಾರವಿಂದಗಳಲ್ಲಿ ಸದಾಕಾಲವೂ ಧ್ಯಾನ ಮತ್ತು ಸ್ತೋತ್ರಗಳನ್ನು ಮಾಡುವುದನ್ನೇ ಆಸರೆಯಾಗಿಟ್ಟುಕೊಂಡಿರುತ್ತಾರೆ. ಆದ್ದರಿಂದಲೇ ಆಳ್ವಾರರು ತಮ್ಮ ಮೊದಲನೆಯ ಪಾಶುರದಲ್ಲೇ ಹೀಗೆ ಹೇಳಿದ್ದಾರೆ “ಅರಙ್ಗತ್ತಮ್ಮಾನ್ ತಿರುಕ್ಕಮಲಪಾದಮ್ ವಣ್ದು ಎನ್ ಕಣ್ಣಿನುಳ್ಳನ ಒಕ್ಕಿನ್ಡ್ರದೇ” ಅರ್ಥಾತ್ “ನನ್ನ ಪ್ರಭುವಾದ ಶ್ರೀ ರಂಗನಾಥನ ಪಾದಾರವಿಂದಗಳು ಹೊರಗೆ ಬಂದು ನನ್ನ ಕಣ್ಣುಗಳೊಳಗೆ ಪ್ರವೇಶಿಸಿವೆ”. ಅರಙ್ಗತ್ತಮ್ಮಾನ್ ಶೇಷತ್ವವನ್ನು ಸೂಚಿಸುತ್ತದೆ (ಎಂಪೆರುಮಾನ್ ಪ್ರಭುವಾಗಿರುವುದು), ಕಮಲವು ಭೋಗ್ಯತ್ವವನ್ನು ಸೂಚಿಸುತ್ತದೆ, ಮತ್ತು ಪಾದವು ಉಪಾಯತ್ವವನ್ನು (ಗುರಿಯನ್ನು ತಲುಪುವ ದಾರಿ) ಸೂಚಿಸುತ್ತದೆ. ಪೆರಿಯಾಳ್ವಾರ್ ಸಹ ಎಂಪೆರುಮಾನನನ್ನು ಆತನ ಪಾದಕಮಲಗಳಿಂದ ಹಿಡಿದು ಶಿರಸ್ಸಿನ ವರೆಗೆ ತಮ್ಮ ಪೆರಿಯಾಳ್ವಾರ್ ತಿರುಮೊಳಿಯ 2 ನೆಯ ಪದಿಗದ 20 ಪಾಶುರಗಳಲ್ಲಿ ವೈಭವೀಕರಿಸಿದ್ದಾರೆ.

ಅದೇ ರೀತಿ, ಪೆರಿಯ ಪೆರುಮಾಳರ ದೈವಿಕ ಆದೇಶದಂತೆ ಲೋಕಸಾರಂಗ ಮಹಾಮುನಿಗಳ ಮೂಲಕ ತಿರುಪ್ಪಾಣಾಳ್ವಾರರು, ಪೆರಿಯ ಪೆರುಮಾಳರನ್ನು ಪಾದಾರವಿಂದಗಳಿಂದ ಹಿಡಿದು ಶಿರಸ್ಸಿನವರೆಗೆ ಆನಂದಿಸಿದರು ಮತ್ತು ಆ ಉಕ್ಕಿಹರಿಯುವ ಭಾವೋದ್ವೇಗವು ಅಮಲನಾದಿಪಿರಾನ್ ಎಂಬ ದಿವ್ಯಪ್ರಬಂಧವಾಗಿ ಪರಿಣಮಿಸಿತು, ಇದು ನಮ್ಮ ಸಂಪ್ರದಾಯದ ಸಾರವನ್ನು ಕೊಡುತ್ತದೆ – ತಿರುಮಂತ್ರ ಅರ್ಥ – ತಿರುಮಂತ್ರದ ವಿಸ್ತಾರವಾದ ವಿವರಣೆ. ಪೆರಿಯ ಪೆರುಮಾಳ್ ತಿರುಪ್ಪಾಣಾಳ್ವಾರರನ್ನು ಆ ಕ್ಷಣವೇ ಅದೇ ತಿರುಮೇನಿಯೊಂದಿಗೆ ಎಲ್ಲರ ಮುಂದೆ ಸ್ವೀಕರಿಸಿದರು. ಪೆರಿಯ ಪೆರುಮಾಳರ ಪಾದಾರವಿಂದಗಳ ಮೂಲಕ ಆಳ್ವಾರರು ಪರಮಪದವನ್ನು ಸೇರಿದರು.

ಅವರ ತನಿಯನ್:

ಆಪಾದ ಚೂಡಮ್ ಅನುಭೂಯ ಹರಿಮ್ ಶಯಾನಮ್
ಮಧ್ಯೇ ಕವೇರ ದುಹಿತುರ್ ಮುದಿತಾನ್ತರಾತ್ಮಾ |
ಅದ್ರಶ್ಟ್ರುತಾಮ್ ನಯನಯೋರ್ ವಿಷಯಾಂತರಾಣಾಮ್
ಯೋ ನಿಶ್ಚಿಕಾಯ ಮನವೈ ಮುನಿವಾಹನಮ್ ತಮ್ ||

ಅವರ ಅರ್ಚಾವತಾರ ಅನುಭವವನ್ನು ಇಲ್ಲಿ ಈಗಾಗಲೇ ವಿವರಿಸಲಾಗಿದೆ:
http://ponnadi.blogspot.in/2012/10/archavathara-anubhavam-thiruppanazhwar.html.

ಅಡಿಯೇನ್ ಪಾರ್ಥಸಾರಥಿ ರಾಮಾನುಜ ದಾಸನ್

ಮೂಲ : https://guruparamparai.wordpress.com/2013/01/21/thiruppanazhwar/

ರಕ್ಷಿತ ಮಾಹಿತಿ:  https://guruparamparaikannada.wordpress.com

ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಧರ್ಮಗ್ರಂಥಗಳು) – http://granthams.koyil.org
ಪ್ರಮಾತಾ (ಭೋಧಕರು) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org

 

ಪೆರಿಯಾಳ್ವಾರ್

ಶ್ರೀ:
ಶ್ರೀಮತೇ ಶಠಕೋಪಾಯ ನಮ:
ಶ್ರೀಮತೇ ರಾಮಾನುಜಾಯ ನಮ:
ಶ್ರೀಮದ್ ವರವರಮುನಯೇ ನಮ:
ಶ್ರೀ ವಾನಾಚಲ ಮಹಾಮುನಯೇ ನಮ:

periazhvar

ತಿರುನಕ್ಷತ್ರಮ್ : ಆನಿ, ಸ್ವಾತಿ

ಅವತಾರ ಸ್ಥಲಮ್ : ಶ್ರೀವಿಲ್ಲಿಪುತ್ತೂರ್

ಆಚಾರ್ಯನ್ : ವಿಶ್ವಕ್ಸೇನರ್

ಕೃತಿಗಳು : ತಿರುಪ್ಪಲ್ಲಾಣ್ಡು, ಪೆರಿಯಾಳ್ವಾರ್ ತಿರುಮೊಳಿ

ಪರಮಪದಕ್ಕೆಸೇರಿದಸ್ಥಳ : ತಿರುಮಾಲಿರುಂಚೋಲೈ

ಪೆರಿಯಾವಾಚಾನ್ ಪಿಳ್ಳೈ ತಮ್ಮ ತಿರುಪ್ಪಲ್ಲಾಣ್ಡು ವ್ಯಾಖ್ಯಾನ ಅವತಾರಿಕೆಯಲ್ಲಿ ಪೆರಿಯಾಳ್ವಾರರನ್ನು ಅದ್ಭುತವಾಗಿ ವೈಭವೀಕರಿಸುತ್ತಾರೆ. ಅವರು ಪೆರಿಯಾಳ್ವಾರರ ಅವತಾರದ ಉದ್ದೇಶ ಈ ಸಂಸಾರದಿಂದ ಕಷ್ಟ ಪಡುತ್ತಿರುವ ಜೀವಾತ್ಮರನ್ನು ಮೇಲೆತ್ತುವುದಕ್ಕಾಗಿ ಎಂದು ಗುರುತಿಸಿದ್ದಾರೆ. ಪೆರಿಯಾಳ್ವಾರರು ಸ್ವತಃ:ಎಂಪೆರುಮಾನನ ಅನುಗ್ರಹದಿಂದ ಎಂಪೆರುಮಾನನ ಕುರಿತು ‘ಸಹಜ ದಾಸ್ಯ’ ದಿಂದ ಭೂಷಿತರಾಗಿದ್ದಾರೆ. ಅವರು ಕೈಂಕರ್ಯವನ್ನು ಮಾಡಿಕೊಂಡು ತಮ್ಮ ಜೀವನವನ್ನು ನಿರ್ವಹಿಸಲು ಬಯಸಿದರು ಮತ್ತು ಯಾವ ಕೈಂಕರ್ಯವು ಅತ್ಯುತ್ತಮವಾದದ್ದೆಂದು ತಿಳಿಯಲು ಶಾಸ್ತ್ರಗಳನ್ನು ಅಭ್ಯಸಿದರು. ಶ್ರೀ ಕೃಷ್ಣನು ಕಂಸನ ಸಭೆಗೆ ಹೋಗುವುದಕ್ಕೆ ಮೊದಲು ಮಥುರಾದಲ್ಲಿ ಸ್ವತಃ ಮಾಲಾಕಾರನ ಮನೆಗೆ ಹೋಗಿ ಕೆಲವು ಮಾಲೆಗಳಿಗಾಗಿ ಬಿನ್ನವಿಸಿಕೊಂಡನು ಮತ್ತು ಆ ಮಾಲಾಕಾರನು ಬಹು ಪ್ರೀತಿ ಮತ್ತು ಒಲುಮೆಯಿಂದ ಮಾಲೆಯೊಂದನ್ನು ಕೊಡಲು, ಕಣ್ಣನ್ ಎಂಪೆರುಮಾನನು ಅತೀವ ಸಂತೋಷಗೊಳ್ಳುತ್ತಾನೆ ಮತ್ತು ಬಹು ಹರ್ಷದಿಂದ ಅದನ್ನು ಧರಿಸುತ್ತಾನೆ. ಇದನ್ನು ಗಮನಿಸಿದ ಪೆರಿಯಾಳ್ವಾರರು ಹೂಮಾಲೆಗಳನ್ನು ಮಾಡಿಕೊಡುವುದು ಎಂಪೆರುಮಾನನಿಗೆ ಅತ್ಯಂತ ಸಂತುಷ್ಟಗೊಳಿಸುವ ಸೇವೆ ಎಂದು ನಿರ್ಧರಿಸಿದರು. ಅವರು ತೋಟವೊಂದನ್ನು ಮಾಡಲು ಪ್ರಾರಂಭಿಸಿ ಅದರಲ್ಲಿ ನೂತನ ಹೂಗಿಡಗಳ ಬೀಜಗಳನ್ನು ಬಿತ್ತುತ್ತಾರೆ, ಅವುಗಳನ್ನು ಪೋಷಿಸುತ್ತಾರೆ, ಮತ್ತು ಹೊಸ ಮಾಲೆಯೊಂದನ್ನು ಪ್ರತಿದಿನ ಮಾಡಿಕೊಂಡು ಶ್ರೀವಿಲ್ಲಿಪುತ್ತೂರ್ ಎಂಪೆರುಮಾನನಿಗೆ ಅತೀವ ಪ್ರೀತಿ ಮತ್ತು ಅಕ್ಕರೆಯಿಂದ ಅರ್ಪಿಸುತ್ತಾರೆ.

ಪೆರಿಯಾಳ್ವಾರ್ ಮತ್ತು ಇತರ ಆಳ್ವಾರರುಗಳ ನಡುವೆ ಒಂದು ದೊಡ್ಡ ವ್ಯತ್ಯಾಸವಿದೆ. ಇತರ ಆಳ್ವಾರರುಗಳು ತಮ್ಮ ಅಪೇಕ್ಷೆಗಳನ್ನು (ಎಂಪೆರುಮಾನನಿಗೆ ನಿರಂತರ ಸೇವೆ ಸಲ್ಲಿಸುವುದು) ಪೂರೈಸಿಕೊಳ್ಳಲು ಬಯಸುತ್ತಾರೆ. ಆದರೆ ಪೆರಿಯಾಳ್ವಾರರು ತಮ್ಮ ಆಕಾಂಕ್ಷೆಗಳನ್ನೂ ಸಹ ಕಡೆಗಣಿಸಿ ಎಂಪೆರುಮಾನನ ಅಪೇಕ್ಷೆಗಳನ್ನು (ಬಳಲುತ್ತಿರುವ ಅನೇಕ ಜೀವಾತ್ಮಾಗಳನ್ನು ಎಂಪೆರುಮಾನನೊಂದಿಗೆ ಪರಮಪದದಲ್ಲಿ ಸೇರಿಸುವುದು) ಈಡೇರಿಸುವುದರಲ್ಲಿ ತಮ್ಮ ಗಮನವನ್ನು ಕೇಂದ್ರೀಕರಿಸುತ್ತಾರೆ. ಇತರ ಆಳ್ವಾರರು ಈಶ್ವರನು ತಮ್ಮ ರಕ್ಷಕ ಮತ್ತು ತಾವು ರಕ್ಷಿತರು ಎಂದು ಭಾವಿಸಿ ತಮ್ಮ ಭಯವನ್ನು ತೊಡೆದುಹಾಕುತ್ತಾರೆ. ಪೆರಿಯಾಳ್ವಾರರು ತಾವು ರಕ್ಷಕರು ಮತ್ತು ಈಶ್ವರನು ರಕ್ಷಿತನು ಎಂದು ಭಾವಿಸುತ್ತಾರೆ. ಈ ಅಂಶವನ್ನು ಪಿಳ್ಳೈ ಲೋಕಾಚಾರ್ಯರು ಮತ್ತು ಮಾಮುನಿಗಳು ಮತ್ತಷ್ಟು ಸುಂದರವಾಗಿ ವಿವರಿಸುತ್ತಾರೆ, ಅದನ್ನು ನಾವು ಮುಂದಿನ ಭಾಗಗಳಲ್ಲಿ ನೋಡಬಹುದು.
ಹಾಗೆಯೇ, ತಿರುಪ್ಪಲ್ಲಾಂಡು ಇತರ ದಿವ್ಯ ಪ್ರಬಂಧಗಳಿಗೆ ಹೋಲಿಸಿದರೆ ಬಹುವಾಗಿ ಶ್ಲಾಘಿಸಲ್ಪಟ್ಟಿದೆ. ಇತರ ಪ್ರಬಂಧಗಳು ಅನೇಕ ವೇದಾಂತಗಳಿಗೆ ಸಂಬಂಧಿಸಿದ ಸಂಕೀರ್ಣ ವಿಷಯಗಳನ್ನು ಚರ್ಚಿಸಿದರೆ, ತಿರುಪ್ಪಲ್ಲಾಂಡು ಸರಳವಾಗಿ ಎಂಪೆರುಮಾನನಿಗೆ ಮಂಗಳಾಶಾಸನ ಮಾಡುವುದರಲ್ಲಿ ಗಮನವಿಟ್ಟಿದೆ. ಇತರ ಪ್ರಬಂಧಗಳು ಗಾತ್ರದಲ್ಲಿ ದೊಡ್ಡದಾದರೆ, ಈ ಪ್ರಬಂಧವು ಚಿಕ್ಕದಾಗಿ ಚುರುಕಾಗಿದೆ – ಕೇವಲ ೧೨ ಪಾಶುರಗಳಲ್ಲಿ ಎಲ್ಲ ಪ್ರಮುಖವಾದ ತತ್ತ್ವಗಳೂ ವಿವರಿಸಲ್ಪಟ್ಟಿವೆ.

ಪಿಳ್ಳೈ ಲೋಕಾಚಾರ್ಯರು ಶ್ರೀ ವಚನಭೂಷಣ ದಿವ್ಯ ಶಾಸ್ತ್ರದಲ್ಲಿ, ಸಿದ್ಧೋಪಾಯ ನಿಷ್ಠರ (ಭಗವಾನನೇ ಉಪಾಯ ಮತ್ತು ಉಪೇಯ ಎಂಬ ತತ್ತ್ವದಲ್ಲಿ ಪೂರ್ಣವಾಗಿ ನೆಲೆಸಿರುವವರು) ದಿನಚರಿಯಲ್ಲಿ ಮಂಗಳಾಶಾಸನದ ವೈಭವಗಳನ್ನು ವಿವರಿಸುತ್ತಾರೆ. ಶ್ರೀವೈಷ್ಣವ ದಿನಚರಿಯು ‘ಶ್ರೀವೈಷ್ಣವ ಲಕ್ಷಣಂ’ ಸರಣಿ ಲೇಖನದಲ್ಲಿ ( http://ponnadi.blogspot.in/p/srivaishnava-lakshanam.html ) ಇಲ್ಲಿ ಈಗಾಗಲೇ ಚರ್ಚಿಸಲ್ಪಟ್ಟಿದೆ – http://ponnadi.blogspot.in/2012/08/srivaishnava-lakshanam-10.html ಮತ್ತು http://ponnadi.blogspot.in/2012/08/srivaishnava-lakshanam-11.html.

ಮಂಗಳಾಶಾಸನವೆಂದರೆ ಇನ್ನೊಬ್ಬರ ಕ್ಷೇಮಕ್ಕಾಗಿ ಬಯಸುವುದು/ಪ್ರಾರ್ಥಿಸುವುದು. ಆಳ್ವಾರರು ನಿರಂತರವಾಗಿ ಎಂಪೆರುಮಾನನ ಕ್ಷೇಮದಲ್ಲಿ ಗಮನವಿಟ್ಟಿದ್ದರು. ಆದರೆ ಪಿಳ್ಳೈ ಲೋಕಾಚಾರ್ಯರು ಎಂಪೆರುಮಾನನೊಂದಿಗೆ ಪೆರಿಯಾಳ್ವಾರರ ಬಾಂಧವ್ಯ ಇತರರಿಗಿಂತ ಬಹು ದೊಡ್ಡದು ಎಂದು ತೋರಿಸುತ್ತಾರೆ. ಇದು ಈಗಾಗಲೇ ಪೆರಿಯಾಳ್ವಾರರ ‘ಅರ್ಚಾವತಾರ ಅನುಭವಮ್’ ನ ಪ್ರಸ್ತಾವನಾ ಭಾಗದಲ್ಲಿ ವಿವರಿಸಲ್ಪಟ್ಟಿದೆ – http://ponnadi.blogspot.in/2012/10/archavathara-anubhavam-periyazhwar.html. ಈಗ ನಾವು ಪೆರಿಯಾಳ್ವಾರರ ಮತ್ತು ಶ್ರೀ ಭಾಷ್ಯಕಾರರ(ರಾಮಾನುಜರ) ವೈಭವಗಳನ್ನು ಸೊಗಸಾಗಿ ತೆರೆದಿಡುವ 255 ನೆಯ ಸೂತ್ರವನ್ನು ನೋಡೋಣ.

ಅಲ್ಲಾತವರ್ಗಳೈಪ್ಪೋಲೇ ಕೇಟ್ಕಿಟ್ರವರ್ಗಳುಡೈಯವುಮ್, ಚೊಲ್ಲುಕಿಟ್ರವರ್ಗಳುಡೈಯವುಮ್ ತನಿಮೈಯೈತ್ತವಿರ್ಕ್ಕೈಯನ್ಟ್ರಿಕ್ಕೇ ಆಳುಮಾಳಾರ್ ಎನ್ಗಿಟ್ರವನುಡೈಯ ತನಿಮೈಯೈತ್ತವಿರ್ಕ್ಕೈಕ್ಕಾಗವಾಯಿಟ್ರು ಭಾಷ್ಯಕಾರರುಮ್ ಇವರುಮ್ ಉಪದೇಚಿಪ್ಪದು.
ಇತರ ಆಳ್ವಾರರುಗಳಂತಲ್ಲದೆ, ಪೆರಿಯಾಳ್ವಾರ್ ಮತ್ತು ಭಾಷ್ಯಕಾರರು ಜೀವಾತ್ಮಗಳನ್ನು ಸುಧಾರಿಸಲು ಮತ್ತು ಅವರನ್ನು ಎಂಪೆರುಮಾನನ ಮಂಗಳಾಶಾಸನದಲ್ಲಿ ತೊಡಗಿಸಲು ಶಾಸ್ತ್ರಗಳ ಅರ್ಥಗಳನ್ನು ಬೋಧಿಸುತ್ತಾರೆ, ಏಕೆಂದರೆ ಅದು ಎಂಪೆರುಮಾನನ ಏಕಾಂಗಿತನವನ್ನು ಹೋಗಲಾಡಿಸುತ್ತದೆ (ಎಂಪೆರುಮಾನನು ಸ್ವಾಭಾವಿಕವಾಗಿ ಪ್ರತಿಯೊಬ್ಬರೂ ತನ್ನ ಸೇವೆ ಮಾಡಬೇಕೆಂದು ಬಯಸುತ್ತಾನೆ, ಏಕೆಂದರೆ ಎಲ್ಲರೂ ಆತನಿಗೆ ಸೇರಿದವರು, ಹೇಗೆ ಒಬ್ಬ ತಂದೆ ಅಥವಾ ತಾಯಿ ತಮ್ಮ ಮಕ್ಕಳಲ್ಲೊಬ್ಬರು ತಮ್ಮೊಂದಿಗಿಲ್ಲದಿದ್ದರೆ ಸಂತೋಷವಾಗಿರುವುದಿಲ್ಲವೋ, ಹಾಗೆ ಅನೇಕ ಜೀವಾತ್ಮಗಳಲ್ಲಿ ಒಬ್ಬ ಜೀವಾತ್ಮ ತನ್ನೊಂದಿಗಿಲ್ಲದಿದ್ದರೆ ಎಂಪೆರುಮಾನನು ಸಂತೋಷವಾಗಿರುವುದಿಲ್ಲ). ಇಲ್ಲಿ ನಿಜವಾದ ಲಕ್ಷ್ಯವು ಬೋಧಕರ ಏಕಾಂಗಿತನವನ್ನು ಹೋಗಲಾಡಿಸುವುದಾಗಲಿ, ಬೋಧಿತರ ಏಕಾಂಗಿತನವನ್ನು ಹೋಗಲಾಡಿಸುವುದಾಗಲಿ ಮತ್ತು ಜೀವಾತ್ಮಗಳನ್ನು ಉದ್ಧರಿಸುವುದಾಗಲಿ ಅಲ್ಲ – ಆದರೆ ಎಂಪೆರುಮಾನನ ಸ್ವಾಭಾವಿಕ ಬಯಕೆಯನ್ನು ಈಡೇರಿಸುವುದು ಮತ್ತು ಜೀವಾತ್ಮಗಳನ್ನು ತಮ್ಮ ಸ್ವಾಭಾವಿಕ ಸ್ಥಾನದಲ್ಲಿ ನೆಲೆಗೊಳಿಸುವುದೇ ಆಗಿದೆ.

ಮಾಮುನಿಗಳು ಈ ಸೂತ್ರಕ್ಕೆ ತಮ್ಮ ವ್ಯಾಖ್ಯಾನದಲ್ಲಿ ಹೇಗೆ ವಿವರಿಸುತ್ತಾರೆಂದರೆ, ಆಳ್ವಾರರು ಎಂಪೆರುಮಾನನ ಈ ಅತಿ ಮೃದು ಸ್ವಭಾವವನ್ನು ಅರಿತಿದ್ದರು ಮತ್ತು ಅಂತಹ ಮೃದು ಸ್ವಭಾವದ ವ್ಯಕ್ತಿಯು ಜೀವಾತ್ಮರ ಅಗಲಿಕೆಯನ್ನು ತಾಳಿಕೊಳ್ಳಲಾಗದೆಂದು ನಿರ್ಧರಿಸಿದರು ಮತ್ತು ಅದರ ಮೇಲೆಯೇ ಪೂರ್ಣವಾಗಿ ತಮ್ಮ ಲಕ್ಷ್ಯವನ್ನು ಕೇಂದ್ರೀಕರಿಸಲು ಬಯಸಿದರು. ಅವರು ಸುಂದರವಾಗಿ ಹೀಗೆ ತೆರೆದಿಟ್ಟಿದ್ದಾರೆ – ಪಿಳ್ಳೈಲೋಕಾಚಾರ್ಯರು ಭಾಷ್ಯಕಾರರ್ (ಎಂಪೆರುಮಾನಾರ್, ರಾಮಾನುಜರ್, ಇತ್ಯಾದಿಗಳ ಬದಲಿಗೆ) ಎಂದು ಹೇಳಿದ್ದೇಕೆಂದರೆ, ಭಾಷ್ಯಕಾರರ್ ಎಂದರೆ ವೇದಾಂತದ ಸಾರವನ್ನು ಶ್ರೀಭಾಷ್ಯದ ಮೂಲಕ ಸ್ಥಾಪಿಸಿದವರು ಎಂದರ್ಥ – ಮತ್ತು ಹಾಗೆಯೇ ಎಂಪೆರುಮಾನನ ಸಂತೋಷಕ್ಕಾಗಿ ಮಾತ್ರವೇ ಗಮನವಿರಿಸಿದ ಈ ಕ್ರಿಯೆಯು ವೇದಾಂತದ ನಿಟ್ಟಿನಲ್ಲಿಯೇ ಇದೆ.
ಮಾಮುನಿಗಳು ತಮ್ಮ ಉಪದೇಶ ರತ್ನಮಾಲೆಯಲ್ಲಿ 5 ಪಾಶುರಗಳಲ್ಲಿ ಸತತವಾಗಿ ಪೆರಿಯಾಳ್ವಾರರನ್ನು ವೈಭವೀಕರಿಸತ್ತಾರೆ.
• 16 ನೇ ಪಾಶುರದಲ್ಲಿ, ಅವರು ತಮ್ಮ ಸ್ವಂತ ಹೃದಯಕ್ಕೇ ಹೇಳುವುದೇನೆಂದರೆ ಆನಿ ಸ್ವಾತಿ ದಿನವು ಬಹುವಾಗಿ ವೈಭವೀಕರಿಸಲ್ಪಡಬೇಕು, ಏಕೆಂದರೆ ಅಂದು ಬಹು ಶುಭದಾಯಕವಾದ ತಿರುಪ್ಪಲ್ಲಾಣ್ಡು ಸಂಕಲಿಸಿ ನಮಗೆ ನೀಡಿದ ಪಟ್ಟರ್ಪಿರಾನ್ (ಪೆರಿಯಾಳ್ವಾರ್) ಜನ್ಮದಿನ .
• 17 ನೇ ಪಾಶುರದಲ್ಲಿ, ಅವರು ತಮ್ಮ ಸ್ವಂತಹೃದಯಕ್ಕೆ ಆದೇಶಿಸುವುದೇನೆಂದರೆ ಪೆರಿಯಾಳ್ವಾರರ ಅವತಾರ ದಿನವಾದ ಆನಿ ಸ್ವಾತಿಯ ವೈಭವಗಳನ್ನು ಕೇಳಿ ಆನಂದಿಸುವ ಜ್ಞಾನಿಗಳಿಗೆ ಸಮನಾದವರು ಈ ಇಡೀ ಪ್ರಪಂಚದಲ್ಲಿ ಬೇರಾರೂ ಇಲ್ಲ ಎಂದು ಸದಾಕಾಲವೂ ಭಾವಿಸಬೇಕು.
• 18 ನೇ ಪಾಶುರದಲ್ಲಿ, ಅವರು ವಿವರಿಸುವುದೇನೆಂದರೆ ಮಂಗಳಾಶಾಸನ ಮಾಡುವುದರಲ್ಲಿ ಪೆರಿಯಾಳ್ವಾರರ ಆಸಕ್ತಿಯು ಇತರ ಆಳ್ವಾರರಿಗಿಂತ ಬಹು ಹಿರಿದು, ಮತ್ತು ಎಂಪೆರುಮಾನನ ಕುರಿತು ಅವರ ಉಕ್ಕಿಹರಿಯುವ ಪ್ರೀತಿಯಿಂದಾಗಿ ಅವರು ಪೆರಿಯಾಳ್ವಾರ್ ಎಂದು ಪ್ರಖ್ಯಾತರಾದರು.
• 19 ನೇ ಪಾಶುರದಲ್ಲಿ, ಇತರ ಆಳ್ವಾರರರ (ದೋಷರಹಿತರಾದವರು – ಇಲ್ಲಿ ದೋಷವೆಂದರೆ ಇತರ ಉಪಾಯಗಳಾದ ಕರ್ಮ/ಜ್ಞಾನ/ಭಕ್ತಿ ಗಳಲ್ಲಿ ಅಕ್ಕರೆಯಿರುವುದು ಮತ್ತು ಎಂಪೆರುಮಾನನನ್ನು ಸೇರುವ ಅತೀವ ಹಂಬಲವಿಲ್ಲದಿರುವುದು) ಎಲ್ಲ ಪಾಶುರಗಳಲ್ಲಿ (ದೋಷರಹಿತವಾದವು – ಇಲ್ಲಿ ದೋಷವೆಂದರೆ ಎಂಪೆರುಮಾನನ ಹೊರತು ಇತರ ವಿಷಯಗಳನ್ನು ಚರ್ಚಿಸುವುದು) ತಿರುಪ್ಪಲ್ಲಾಣ್ಡು ಅಗ್ರಗಣ್ಯವಾದದ್ದು. ಹೇಗೆ ಪ್ರಣವವು ಸಂಸ್ಕೃತ ವೇದಗಳ ಸಾರವಾಗಿ ಪ್ರಧಾನವಾಗಿದೆಯೋ ಹಾಗೆ ತಿರುಪ್ಪಲ್ಲಾಣ್ಡು ದ್ರಾವಿಡ ವೇದದಲ್ಲಿ ಅಗ್ರಗಣ್ಯವಾಗಿದ್ದು ಅದರ ಸಾರವಾಗಿದೆ ಏಕೆಂದರೆ ಅದು ಮಂಗಳಾಶಾಸನವನ್ನು ಚರ್ಚಿಸುತ್ತದೆ.
• 20 ನೇ ಪಾಶುರದಲ್ಲಿ ಅವರು ತಮ್ಮ ಹೃದಯವನ್ನು ಕೇಳುವುದೇನೆಂದರೆ ಎಲ್ಲಾ ಪ್ರಮಾಣಗಳನ್ನು ಅವಲೋಕಿಸಿ ತಿರುಪ್ಪಲ್ಲಾಂಡಿಗಿಂತ ಉತ್ತಮವಾದ ಪ್ರಬಂಧವು ಇದೆಯೇ ಎಂದು ನೋಡಲು ಮತ್ತು ಎಲ್ಲ ಆಳ್ವಾರರನ್ನು ವೀಕ್ಷಿಸಿ ಪೆರಿಯಾಳ್ವಾರರಿಗಿಂತ ಶ್ರೇಷ್ಠರಾದವರು ಇದ್ದಾರೆಯೇ ಎಂದು ನೋಡಲು ಹೇಳುತ್ತಾರೆ.

ಅವರ ಅನನ್ಯ ವೈಶಿಷ್ಟ್ಯವೇನೆಂದರೆ ಅವರು ಪೆರಿಯ ಪೆರುಮಾಳ್ ಗೆ ತಮ್ಮ ಮಗಳಾದ ಆಂಡಾಳನ್ನು ವಿವಾಹ ಮಾಡಿಕೊಟ್ಟು ಅವರ ಮಾವನಾಗಿರುವುದು.
ಇದನ್ನು ಮನದಲ್ಲಿಟ್ಟು ನಾವು ಈಗ ಅವರ ಚರಿತ್ರೆಯನ್ನು ನೋಡೋಣ.
ಪೆರಿಯಾಳ್ವಾರರು ಅನೇಕ ವೇದಪಾರಂಗತರು ವಾಸಿಸುತ್ತಿದ್ದ ಶ್ರೀವಿಲ್ಲಿಪುತ್ತೂರ್ ನಲ್ಲಿ ಜನಿಸಿದರು. ಅವರು ಆನಿ ಸ್ವಾತಿಯಂದು ಜನಿಸಿದರು ಮತ್ತು ಅವರ ತಂದೆತಾಯಿಗಳು ಅವರಿಗೆ ವಿಷ್ಣುಚಿತ್ತರೆಂದು ಹೆಸರಿಟ್ಟರು. ಅವರು ಪರತತ್ತ್ವ ನಿರೂಪಣೆಯನ್ನು (ಶ್ರೀಮನ್ನಾರಾಯಣನ ಪ್ರಾಧಾನ್ಯವನ್ನು ಸ್ಥಾಪಿಸುವುದರ ಮೂಲಕ) ಮಾಡಿದ್ದರಿಂದ, ಹೇಗೆ ವೇದಾತ್ಮಾ (ವೇದವೇ ಶರೀರವಾಗಿ ಉಳ್ಳವನು) ಎಂದು ಗರುಡನು ಕರೆಯಲ್ಪಡುತ್ತಾನೋ ಮತ್ತು ಶ್ರೀಮನ್ನಾರಾಯಣನ ಪಾದಾರವಿಂದಗಳನ್ನು ನಿರಂತರವೂ ಹಿಡಿದಿರುತ್ತಾನೋ (ಅದರಿಂದಾಗಿ ಶ್ರೀಮನ್ನಾರಾಯಣನ ಪರತ್ವವನ್ನು ಸ್ಥಾಪಿಸಿರುವನೋ) ಹಾಗೆ ಅವರು ಗರುಡಾಳ್ವರರ ಅಂಶವೆಂದು ಪರಿಗಣಿಸಲ್ಪಡುತ್ತಾರೆ (ಆಳ್ವಾರುಗಳು ಎಂಪೆರುಮಾನನಿಂದ ಈ ಸಂಸಾರದಿಂದ ಆರಿಸಲ್ಪಟ್ಟು ದಿವ್ಯವಾಗಿ ಆಶೀರ್ವದಿಸಲ್ಪಟ್ಟಿದ್ದವರು).
ಅವರು ಜನಿಸುವಾಗಲೇ ವಟಪತ್ರಶಾಯಿಯ ನಿರ್ಹೇತುಕ ಕಾರುಣ್ಯದಿಂದ ಅನುಗ್ರಹಿಸಲ್ಪಟ್ಟಿದ್ದರು, ಹೇಗೆ ಪ್ರಹ್ಲಾದನು ಭಗವದ್ ಭಕ್ತಿಯೊಂದಿಗೆ ಜನಿಸಿದನೋ ಹಾಗೆ. ಶಾಸ್ತ್ರದಲ್ಲಿ ಹೀಗೆ ಹೇಳಲಾಗಿದೆ “ನ ಅಕಿಂಚಿತ್ ಕುರ್ವತ್ ಶೇಷತ್ವಮ್” ಅರ್ಥಾತ್ ಯಾವಾಗ ಒಬ್ಬ ವ್ಯಕ್ತಿಯು ಎಂಪೆರುಮಾನನಿಗೆ ಒಂದು ಅಲ್ಪ ಸೇವೆಯನ್ನೂ ಮಾಡುವುದಿಲ್ಲವೋ ಆಗ ಆ ವ್ಯಕ್ತಿಯ ಶೇಷತ್ವವು ಉಳಿಯುವುದಿಲ್ಲ. ತಾವು ಕೂಡ ಎಂಪೆರುಮಾನನ ಸಂತೋಷಕ್ಕಾಗಿಯೇ ಯಾವುದಾದರೂ ಕೈಂಕರ್ಯದಲ್ಲಿ ತೊಡಗಬೇಕೆಂದು ಆಲೋಚಿಸಿ, ಅವರು ಪುರಾಣಗಳು, ಇತ್ಯಾದಿಗಳನ್ನು ಅವಲೋಕಿಸುತ್ತಾರೆ. ಅವರು ಸರ್ವೇಶ್ವರನು ಮಥುರಾದಲ್ಲಿ ಕೃಷ್ಣನಾಗಿ ಉದಯಿಸುವುದನ್ನು ಹೀಗೆ ಗಮನಿಸುತ್ತಾರೆ:

ಈಶ ನಾರಾಯಣ ಶ್ರೀಮನ್ ಕ್ಷೀರಾರ್ಣವ ನಿಕೇತನ: ।
ನಾಗ ಪರ್ಯಂಗಮ್ ಉತ್ಸೃಜ್ಯ ಹ್ಯಾಗತೋ ಮಧುರಾಂ ಪುರೀಮ್ ।।
ಅರ್ಥಾತ್ :
ಕ್ಷೀರಾಬ್ದಿಯಲ್ಲಿ ಪವಡಿಸಿದ್ದ ಶ್ರೀಮನ್ ನಾರಾಯಣನು ತನ್ನ ಆದಿಶೇಷ ಪಲ್ಲಂಗವನ್ನು ತ್ಯಜಿಸಿ ಮಥುರಾಪುರಿಯಲ್ಲಿ ಶ್ರೀ ಕೃಷ್ಣನಾಗಿ ಅವತರಿಸಿದನು.

ಹಾಗೆಯೇ ನಮ್ಮಾಳ್ವಾರರು ಹೇಳುತ್ತಾರೆ: ” ಮಣ್ಣಿನ್ ಭಾರಂ ನೀಕ್ಕುದರ್ಕೇ ವಡಮಥುರೈ ಪಿರಂದಾನ್ ” ಅರ್ಥಾತ್ ” ಭೂದೇವಿಯ ಯಾತನೆಯನ್ನು ತೊಡೆದುಹಾಕುವುದಕ್ಕಾಗಿಯೇ ಕಣ್ಣನ್ ಎಂಪೆರುಮಾನನು ಮಥುರೆಯಲ್ಲಿ ಉದಯಿಸಿದನು “. ಮಹಾಭಾರತದಲ್ಲಿ ಕೂಡ ಹೀಗೆ ಹೇಳಲಾಗಿದೆ “ಅನಂತನಾದ ಭಗವಾನನು ಕಣ್ಣನ್ ಎಂಪೆರುಮಾನನಾಗಿ ಉದಯಿಸಿ ಧರ್ಮವನ್ನು ಸ್ಥಾಪಿಸಲು, ಸಾಧುಗಳನ್ನು ರಕ್ಷಿಸಲು ಮತ್ತು ದುಷ್ಟರನ್ನು ನಾಶಗೊಳಿಸಲು ದ್ವಾರಕೆಯಲ್ಲಿ ನೆಲೆಸುತ್ತಾನೆ”. ಅಂತಹಾ ಎಂಪೆರುಮಾನನು ಅತ್ಯಂತ ಸುಂದರಿಯಾದ ದೇವಕಿಯ ಮಗನಾಗಿ ಜನಿಸುತ್ತಾನೆ ಮತ್ತು ಅತ್ಯಂತ ಸುಂದರಿಯಾದ ಯಶೋದೆಯ ಮಗನಾಗಿ ಬೆಳೆಯುತ್ತಾನೆ. ನಿತ್ಯಸೂರಿಗಳ ಮಾಲೆಗಳಿಂದ ಅಲಂಕರಿಸಲ್ಪಡುವ ಅಂತಹಾ ಸುಂದರನಾದ ಕೃಷ್ಣನು ಕಂಸನ ಮಾಲಾಕಾರನ ಬಳಿಗೆ ಹೋಗಿ ತನಗೆ ಕೆಲವು ಮಾಲೆಗಳನ್ನು ಕೊಡುವಂತೆ ಕೇಳಿದನು. ಸ್ವತಃ ಕಣ್ಣನ್ ಎಂಪೆರುಮಾನನೇ ಬಂದು ಮಾಲೆಗಳನ್ನು ಕೇಳಿದ್ದರಿಂದ ಅತಿ ಸಂತೋಷಗೊಂಡ ಮಾಲಾಕಾರನು ಎಂಪೆರುಮಾನನನ್ನು ಸಂತೋಷಗೊಳಿಸುವುದಕ್ಕಾಗಿ ತನ್ನಲ್ಲಿರುವ ಅತ್ಯುತ್ತಮವಾದ ಮತ್ತು ಅತಿ ನೂತನವಾದ ಮಾಲೆಗಳನ್ನು ಕೊಡುತ್ತಾನೆ. ಇದನ್ನು ಕಂಡು ಪೆರಿಯಾಳ್ವಾರರು ಬಹು ಪ್ರೀತಿ ಮತ್ತು ಒಲುಮೆಯಿಂದ ಸಿದ್ಧಗೊಳಿಸಿದ ಮಾಲೆಗಳನ್ನು ಅರ್ಪಿಸುವುದು ಎಂಪೆರುಮಾನನಿಗೆ ಅತ್ಯಂತ ಪ್ರಿಯವಾದ ಕೈಂಕರ್ಯವೆಂಬುದನ್ನು ತಿಳಿದುಕೊಳ್ಳುತ್ತಾರೆ ಮತ್ತು ಶ್ರೀವಿಲ್ಲಿಪುತ್ತೂರಿನ ವಟಪತ್ರಶಾಯಿ ಎಂಪೆರುಮಾನನಿಗೆ ಆ ಕೈಂಕರ್ಯವನ್ನು ಮಾಡಲು ಪ್ರಾರಂಭಿಸುತ್ತಾರೆ.
ಅದೇ ಕಾಲದಲ್ಲಿ ಪಾಂಡ್ಯ ರಾಜವಂಶಕ್ಕೆ ಸೇರಿದ ವಲ್ಲಭ ದೇವನೆಂಬ ರಾಜನು (ತನ್ನ ಮೀನಿನ ಧ್ವಜವನ್ನು ದಿವ್ಯವಾದ ಮೇರುಪರ್ವತದಲ್ಲಿ ನೆಟ್ಟವನು) ಪಾಂಡ್ಯ ರಾಜ್ಯವನ್ನು ದಕ್ಷಿಣದ ಮಧುರೆಯಿಂದ ಬಹು ಧಾರ್ಮಿಕವಾಗಿ ಆಳುತ್ತಿದ್ದನು. ಒಂದು ರಾತ್ರಿ ಆತನು ತನ್ನ ರಾಜ್ಯ ಸರಿಯಾಗಿ ಕಾರ್ಯ ನಿರ್ವಹಿಸುತ್ತಿದೆಯೇ ಎಂದು ನೋಡಲು ಮಾರುವೇಷದಲ್ಲಿ ನಡೆಯುತ್ತಿರುವಾಗ ಒಂದು ಮನೆಯ ಮುಂದೆ ಬ್ರಾಹ್ಮಣನೊಬ್ಬನು ಕುಳಿತಿರುವುದನ್ನು ಗಮನಿಸಿದನು. ರಾಜನು ಆತನ ಗುರುತು ಮತ್ತು ಎಲ್ಲಿಯವನೆಂದು ವಿಚಾರಿಸಲು ಆ ಬ್ರಾಹ್ಮಣನ್ನು  ತಾನು ಒಬ್ಬ ಬ್ರಾಹ್ಮಣ ಮತ್ತು ಗಂಗೆಯಲ್ಲಿ ಗಂಗಾಸ್ನಾನ ಮಾಡಿಕೊಂಡು ಹಿಂತಿರುಗುತ್ತಿರುವುದಾಗಿ ತಿಳಿಸಿದನು. ರಾಜನು ಅತನಿಗೆ ಒಂದು ಶ್ಲೋಕವನ್ನು ಹೇಳಲು ಕೇಳಿದಾಗ ಆ ಬ್ರಾಹ್ಮಣನು ಈ ಶ್ಲೋಕವನ್ನು ಪಠಿಸುತ್ತಾನೆ:

ವರ್ಷಾರ್ಥಮಷ್ಟೌ ಪ್ರಯತೇತ ಮಾಸಾನ್ ನಿಷಾರ್ಥಮರ್ಥಮ್ ದಿವಸಂ ಯತೇತ
ವಾರ್ಧಕ್ಯಹೇತೋರ್ ವಯಸಾ ನವೇನ ಪರತ್ರಹೇತೋರಿಹ ಜನ್ಮನಾ ಚ

ಜನರು ಮಳೆಗಾಲದ ೪ ತಿಂಗಳು ವಿಶ್ರಮಿಸಲು ವರ್ಷದ ೮ ತಿಂಗಳು ಕಷ್ಟಪಟ್ಟು ದುಡಿಯುತ್ತಾರೆ; ರಾತ್ರಿಯಲ್ಲಿ ಸಂತೋಷವಾಗಿರಲು ಅವರು ಹಗಲು ಕಷ್ಟಪಟ್ಟು ದುಡಿಯುತ್ತಾರೆ; ವೃದ್ಧಾಪ್ಯದಲ್ಲಿ ಸುಖವಾಗಿರಲು ಅವರು ಯೌವ್ವನದಲ್ಲಿ ಕಷ್ಟಪಟ್ಟು ದುಡಿಯುತ್ತಾರೆ; ಹಾಗೆಯೇ ಜನರು ಪರ ಜನ್ಮದಲ್ಲಿ ಒಳಿತಿಗಾಗಿ ಈ ಜನ್ಮದಲ್ಲಿ ಕಷ್ಟಪಟ್ಟು ಕೆಲಸ ಮಾಡಬೇಕು.
ಇದನ್ನು ಕೇಳಿದ ರಾಜನು ತಾನು ಈ ಜನ್ಮದಲ್ಲಿ ಭೌತಿಕ ಸಂಪತ್ತು ಮತ್ತು ಸೌಲಭ್ಯಗಳಿಂದ ಸುಖವಾಗಿದ್ದೇನೆ ಆದರೆ ನಂತರದ ಜನ್ಮದ ಬಗ್ಗೆ ಖಚಿತವಿಲ್ಲ ಮತ್ತು ಅದನ್ನು ತಿಳಿಯುವ ವಿಧಾನವೇನೆಂದು ಆಲೋಚಿಸಿದನು. ಆನಂತರ ಆತನು ತನ್ನ ಪುರೋಹಿತರ ಬಳಿಗೆ ಹೋಗಿ ಸರ್ವೋಚ್ಛ ದೇವನು ಯಾರೆಂದು ಹೇಗೆ ದೃಢಪಡಿಸುವುದು ಮತ್ತು ಆತನನ್ನು ಈ ಜನ್ಮದ ನಂತರ ಪಡೆಯುವುದು ಹೇಗೆಂದು ಕೇಳಿದನು. ಶ್ರೀಮನ್ನಾರಾಯಣನ ಪರಮ ಭಕ್ತನಾದ ಸೆಲ್ವ ನಂಬಿಯು ತಕ್ಷಣವೇ ಹೇಳುವುದೇನೆಂದರೆ ನಾವು ಎಲ್ಲ ವಿದ್ವಾಂಸರ ಸಭೆಯೊಂದನ್ನು ಕರೆಯಬೇಕು ಮತ್ತು ವೇದಾಂತದ ಆಧಾರದ ಮೇಲೆ ಪರತತ್ತ್ವವನ್ನು ದೃಢಪಡಿಸಬೇಕು ಎಂದು. ರಾಜನು ಸತ್ಯವನ್ನು ಪ್ರಮಾಣೀಕರಿಸಲು ವಿದ್ವಾಂಸರನ್ನು ಆಹ್ವಾನಿಸುತ್ತಾನೆ, ಏಕೆಂದರೆ ಆಪಸ್ತಂಭ ಧರ್ಮ ಸೂತ್ರದ ಪ್ರಕಾರ ಅತಿ ಮುಖ್ಯವಾದ ತತ್ತ್ವವೇನೆಂದರೆ “ಧರ್ಮಜ್ಞಸಮಯ: ಪ್ರಮಾಣಂ ವೇದಾಚ್ಚ” ಅರ್ಥಾತ್ “ವೇದವನ್ನು ಅರಿತವರ ಕ್ರಿಯೆಗಳು ಜ್ಞಾನದ ಪ್ರಾಥಮಿಕ ಮೂಲ ಮತ್ತು ವೇದವು ಎರಡನೆಯ ಮೂಲ”.
ರಾಜನು ಬಹು ಸಂಪತ್ತನ್ನು ತುಂಬಿರುವ ಚೀಲವೊಂದನ್ನು ತಯಾರಿಸಿ ಸತ್ಯವನ್ನು ಸ್ಥಾಪಿಸುವವರಿಗೆ ಬಹುಮಾನವಾಗಿ ಅದನ್ನು ಅಲಂಕೃತವಾದ ಚಾವಣಿಯಿಂದ ತೂಗುಹಾಕುತ್ತಾನೆ. ಅವನು ಆ ಇಡೀ ಪ್ರದೇಶದ ಎಲ್ಲ ವಿದ್ವಾಂಸರನ್ನೂ ಚರ್ಚೆಗಾಗಿ ಅರಮನೆಯಲ್ಲಿ ಸಭೆ ಸೇರಲು ಆಹ್ವಾನಿಸುತ್ತಾನೆ.

ವಟಪತ್ರಶಾಯೀ ಎಂಪೆರುಮಾನನು (ಶ್ರೀವಿಲ್ಲಿಪುತ್ತೂರ್) ಪೆರಿಯಾಳ್ವಾರರ ಮೂಲಕ ತನ್ನ ಸಾರ್ವಭೌಮತ್ವವನ್ನು ಸಿದ್ಧಪಡಿಸಿ (ವೇದಾಂತದಲ್ಲಿ ವಿವರಿಸಿರುವಂತೆ) ಸಂಸಾರಿಗಳನ್ನು ಉದ್ಧರಿಸಲು ಬಯಸುತ್ತಾನೆ, ಆಳ್ವಾರರ ಸ್ವಪ್ನದಲ್ಲಿ ಕಾಣಿಸಿಕೊಳ್ಳುತ್ತಾನೆ ಮತ್ತು ಬಹುಮಾನವನ್ನು ಪಡೆದು ತರಲು ಆದೇಶಿಸುತ್ತಾನೆ. ಆಳ್ವಾರರು ಎಂಪೆರುಮಾನನಿಗೆ ಪ್ರತ್ಯುತ್ತರಿಸುವುದೇನೆಂದರೆ ಆ ಬಹುಮಾನವು ಎಂಪೆರುಮಾನನ ಸಾರ್ವಭೌಮತ್ವವನ್ನು ವೇದಾಂತದ ಮೂಲಕ ಸ್ಥಾಪಿಸುವುದಕ್ಕಾಗಿ ಮತ್ತು ನಮ್ರತೆಯಿಂದ ಹೇಳುತ್ತಾರೆ “ತೋಟದಲ್ಲಿ ಕೆಲಸ ಮಾಡುವುದರಿಂದ ಒರಟಾಗಿರುವ ನನ್ನ ಕೈಗಳಿಂದ ನಾನು ಹೇಗೆ ಆ ಬಹುಮಾನವನ್ನು ಪಡೆದು ತರಲಿ?”. ಎಂಪೆರುಮಾನನು “ನಾನು ವೇದ ಮತ್ತು ಅದರ ಅರ್ಥಗಳನ್ನು ಅವಶ್ಯವಿರುವಷ್ಟು ಪ್ರಕಟಪಡಿಸುವವನಾದುದರಿಂದ ನಾನು ಎಲ್ಲವನ್ನೂ ನೋಡಿಕೊಳ್ಳುತ್ತೇನೆ” ಎಂದು ಒತ್ತಾಯಿಸುತ್ತಾನೆ. ಆಳ್ವಾರರು ಶಾಸ್ತ್ರದಲ್ಲಿ ಹೇಳಿರುವಂತೆ, “ಬ್ರಾಹ್ಮೇ ಮುಹೂರ್ತೇ ಚ ಉತ್ಥಾಯ ” ಅರ್ಥಾತ್ ಒಬ್ಬ ವ್ಯಕ್ತಿಯು ಬ್ರಹ್ಮ ಮುಹೂರ್ತದಲ್ಲಿ ಏಳಬೇಕು (ಸುಮಾರು ಬೆಳಗಿನ ೪ ಗಂಟೆ), ಬೆಳಗಿನ ಜಾವ ಎದ್ದು ದಿವ್ಯ ಸ್ವಪ್ನವನ್ನು ನೆನೆಸಿಕೊಂಡು, ತಮ್ಮ ನಿತ್ಯಾನುಷ್ಠಾನಗಳನ್ನು ಮಾಡಿಕೊಳ್ಳುತ್ತಾರೆ ಮತ್ತು ಮದುರೆಯ ರಾಜನ ಅರಮನೆಗೆ ತೆರಳುತ್ತಾರೆ. ಅರಮನೆಯನ್ನು ತಲುಪಿದಾಗ, ರಾಜ ಮತ್ತು ಸೆಲ್ವ ನಂಬಿಗಳು ಬ್ರಾಹ್ಮಣೋತ್ತಮರಾದ ಆಳ್ವಾರರನ್ನು ಬರಮಾಡಿಕೊಳ್ಳುತ್ತಾರೆ ಮತ್ತು ಅವರಿಗೆ ನಮಸ್ಕರಿಸುತ್ತಾರೆ. ಆ ಪ್ರದೇಶದ ವಿದ್ವಾಂಸರು ಆಳ್ವಾರರು ಅಷ್ಟು ಪಂಡಿತರಲ್ಲವೆಂದು ರಾಜನಿಗೆ ತಿಳಿಸುತ್ತಾರೆ – ಆದರೆ ವಟಪತ್ರಶಾಯಿಗೆ ಆಳ್ವಾರರ ಸಮರ್ಪಣಾ ಭಾವ ಮತ್ತು ಕೈಂಕರ್ಯವನ್ನು ಈಗಾಗಲೇ ತಿಳಿದಿದ್ದ ಸೆಲ್ವ ನಂಬಿ ಮತ್ತು ರಾಜನು ಅವರಿಗೆ ಬಹು ಗೌರವವನ್ನು ಕೊಡುತ್ತಾರೆ ಮತ್ತು ವೇದಾಂತದ ಆಧಾರದ ಮೇಲೆ ಪರತತ್ತ್ವವನ್ನು ಪ್ರತಿಷ್ಠಾಪಿಸಲು ಕೇಳುತ್ತಾರೆ. ಎಂಪೆರುಮಾನನ ದಿವ್ಯ ಅನುಗ್ರಹದಿಂದ ಪೆರಿಯಾಳ್ವಾರರಿಗೆ ವೇದ, ವೇದಾಂತ, ಇತಿಹಾಸ, ಪುರಾಣ, ಇತ್ಯಾದಿಗಳ ಸಾರವನ್ನು ಚಿತ್ರೀಕರಿಸಿಕೊಳ್ಳಲು ಮತ್ತು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಹೇಗೆ ಶ್ರೀ ವಾಲ್ಮೀಕಿ ಭಗವಾನರಿಗೆ ಬ್ರಹ್ಮನ ಅನುಗ್ರಹದಿಂದ ಮಹತ್ತಾದ ತತ್ತ್ವಗಳನ್ನು ತಿಳಿದುಕೊಳ್ಳಲು ಸಾಧ್ಯವಾಯಿತೋ ಮತ್ತು ಹೇಗೆ ಎಂಪೆರುಮಾನನ ಪಾಂಚಜನ್ಯದ ಸ್ಪರ್ಶವಾದ ತಕ್ಷಣವೇ ಪ್ರಹ್ಲಾದಾಳ್ವಾನನಿಗೆ ಸರ್ವಜ್ಞನಾಗಲು ಸಾಧ್ಯವಾಯಿತೋ, ಹಾಗೆ ಪೆರಿಯಾಳ್ವಾರರು ಎಂಪೆರುಮಾನನ ನಿರ್ಹೇತುಕ ಕಾರುಣ್ಯದಿಂದಾಗಿ ಶ್ರೀಮನ್ನಾರಾಯಣನ ಪರತ್ವ (ಸಾರ್ವಭೌಮತ್ವ)ವೇ ಶಾಸ್ತ್ರಗಳ ಸಾರ ಎಂಬುದನ್ನು ಅರಿತುಕೊಂಡರು. ಇದನ್ನು ಪ್ರಮಾಣಗಳ ತಾರ್ಕಿಕ ಅನುಕ್ರಮದಲ್ಲಿ ಹೀಗೆ ನೋಡಬಹುದು:

ಸಮಸ್ತ ಶಬ್ದ ಮೂಲತ್ವಾತ್ ಆಕಾರಸ್ಯ ಸ್ವಭಾವತಃ
ಸಮಸ್ತ ವಾಚ್ಯ ಮೂಲತ್ವಾತ್ ಬ್ರಹ್ಮಣೋಪಿ ಸ್ವಭಾವತಃ
ವಾಚ್ಯವಾಚಕ ಸಂಬಂಧಸ್ ತಯೋರ್ ಅರ್ಥಾತ್ ಪ್ರದೀಯತೇ

ಎಲ್ಲ ಶಬ್ದಗಳೂ ಸ್ವಾಭಾವಿಕವಾಗಿ ಅಕಾರದಿಂದ ಉತ್ಪತ್ತಿಯಾಗುತ್ತವೆ. ಆ ಶಬ್ದಗಳ ಎಲ್ಲ ಅರ್ಥಗಳು (ಅಥವಾ ವಸ್ತುಗಳು) ಸ್ವಾಭಾವಿಕವಾಗಿ ಬ್ರಹ್ಮದಿಂದ ಉತ್ಪತ್ತಿಯಾಗುತ್ತವೆ. ಆದ್ದರಿಂದ ಅಕಾರ ಮತ್ತು ಬ್ರಹ್ಮಮ್ ಇವುಗಳ ನಡುವಿನ ಸಂಬಂಧವೂ ಕೂಡ ಸ್ವಾಭಾವಿಕವೆಂದು ಅರಿತುಕೊಳ್ಳಬಹುದು.

ಭಗವದ್ಗೀತೆಯಲ್ಲಿ ಸ್ವತಃ ಗೀತಾಚಾರ್ಯನೇ ಘೋಷಿಸಿರುವಂತೆ “ಅಕ್ಷರಾಣಾಮ್ ಅಕಾರೋಸ್ಮಿ” ಅರ್ಥಾತ್ ಅಕ್ಷರಗಳಲ್ಲಿ ನಾನು ಅಕಾರ.
ಹೀಗೆಯೂ ಹೇಳಲಾಗಿದೆ “ಅಕಾರೋ ವಿಷ್ಣುವಾಚಕ:” ಅರ್ಥಾತ್ ಆಕಾರವು ವಿಷ್ಣುವನ್ನು ಪ್ರತಿನಿಧಿಸುತ್ತದೆ, ಅದು ಶ್ರೀಮನ್ನಾರಾಯಣನು ಸಾರ್ವಭೌಮ ವ್ಯಕ್ತಿಯೆಂದು ದೃಢೀಕರಿಸುತ್ತದೆ.
ತೈತ್ತಿರೀಯ ಉಪನಿಷತ್ ಅಂತಹಾ ಶ್ರೀಮನ್ನಾರಾಯಣನ ಪ್ರಧಾನ ಗುಣಗಳನ್ನು ಹೀಗೆ ಗುರುತಿಸುತ್ತದೆ :
“ಯತೋ ವಾ ಇಮಾನಿ ಭೂತಾನಿ ಜಾಯಂತೇ, ಯೇನ ಜಾತಾನಿ ಜೀವಂತಿ, ಯತ್ ಪ್ರಯಂತಿ ಅಭಿಸಂವಿಶಂತಿ,
ತತ್ ವಿಜಿಜ್ಞಾಸಸ್ವ, ತತ್ ಬ್ರಹ್ಮೇತಿ”
“ಅದು ಯಾವುದರಿಂದ ಈ ಇಡೀ ಬ್ರಹ್ಮಾಂಡ ಮತ್ತು ಜೀವಿಗಳು ಸೃಷ್ಟಿಸಲ್ಪಡುತ್ತವೆಯೋ, ಈ ಇಡೀ ಬ್ರಹ್ಮಾಂಡಕ್ಕೆ ಯಾವುದು ಆಸರೆಯಾಗಿದೆಯೋ, ವಿನಾಶಕಾಲದಲ್ಲಿ ಯಾವುದರಲ್ಲಿ ಅದು ವಿಲೀನಗೊಳ್ಳುತ್ತದೆಯೋ, ಎಲ್ಲಿ ತಲುಪಿದಾಗ ಜೀವಿಗಳು ಮೋಕ್ಷವನ್ನು ಪಡೆಯುತ್ತವೆಯೋ, ಅದನ್ನು ಬ್ರಹ್ಮವೆಂದು ತಿಳಿಯಬೇಕು”.
ಹೀಗೆ ಜಗತ್ ಕಾರಣತ್ವ(ಬ್ರಹ್ಮಾಂಡ ಸೃಷ್ಟಿ ಕಾರಣಕರ್ತ), ಮುಮುಕ್ಷು ಉಪಾಸ್ಯತ್ವ (ಮೋಕ್ಷಾಭಿಲಾಷಿಗಳಿಂದ ಪೂಜಿಸಲ್ಪಡುವುದು), ಮತ್ತು ಮೋಕ್ಷ ಪ್ರದಾತ್ವ (ಒಬ್ಬ ಜೀವಾತ್ಮನಿಗೆ ಮೋಕ್ಷವನ್ನು ಕರುಣಿಸುವ ಅಧಿಕಾರ), ಇವುಗಳು ಸಾರ್ವಭೌಮ ವ್ಯಕ್ತಿಯ ಪ್ರಧಾನ ಗುಣಗಳೆಂದು ಗುರುತಿಸಲ್ಪಟ್ಟಿವೆ.
ಈ ಗುಣಗಳನ್ನು ಶ್ರೀಮನ್ನಾರಾಯಣನಲ್ಲಿ ಸಂಪೂರ್ಣವಾಗಿ ನೋಡಬಹುದು, ಈ ಕೆಳಗೆ ವಿವರಿಸಿರುವಂತೆ:
“ವಿಷ್ಣೋಸ್ಸಕಾಚಾದ್ಭೂತಂ ಜಗತ್ ತತ್ರೈವ ಚ ಸ್ಥಿತಂ
ಸ್ಥಿತಿ ಸಂಯಮಕರ್ತಾಸೌ ಜಗತೋಸ್ಯ ಜಗಚ್ಚ ಸ:”
ವಿಷ್ಣುಪುರಾಣದಲ್ಲಿ ಹೇಳಿರುವಂತೆ, “ಈ ಬ್ರಹ್ಮಾಂಡವು ವಿಷ್ಣುವಿನಿಂದ ಉತ್ಪತ್ತಿಯಾಗುತ್ತದೆ, ಪ್ರಳಯ ಕಾಲದಲ್ಲಿ ವಿಷ್ಣುವಿನಲ್ಲಿ ಅಡಗುತ್ತದೆ; ವಿಷ್ಣುವೇ ಅದನ್ನು ಪೋಷಿಸುವವನು ಮತ್ತು ಅಳಿಸುವವನು; ಇಡೀ ಬ್ರಹ್ಮಾಂಡವೇ ಅವನಿಗೆ ಶರೀರವಾಗಿದೆ ಕೂಡ”.

“ನಾರಾಯಣಾತ್ ಪರೋ ದೇವೋ ನ ಭೂತೋ ನ ಭವಿಷ್ಯತಿ
ಏತತ್ ರಹಸ್ಯಮ್ ವೇದಾನಾಮ್ ಪುರಾಣಾನಾಮ್ ಚ ಸಮ್ಮತಮ್”
ವರಾಹಪುರಾಣದಲ್ಲಿ ಹೇಳಿರುವಂತೆ “ನಾರಾಯಣನಿಗಿಂತ ಮೇಲೆ ಯಾರೂ ಹಿಂದೆ ಇರಲಿಲ್ಲ ಮುಂದೆಯೂ ಇರುವುದಿಲ್ಲ. ಇದು ವೇದಗಳ ಅತಿ ರಹಸ್ಯವಾದ ಸಂದೇಶ ಮತ್ತು ಪುರಾಣಗಳಲ್ಲಿ ಸಹ ಅಂಗೀಕೃತವಾಗಿದೆ”.

“ಸತ್ಯಂ ಸತ್ಯಂ ಪುನಸ್ಸತ್ಯಂ ಉಧೃತ್ಯ ಭುಜಮುಚ್ಯತೇ
ವೇದಶಾಸ್ತ್ರಾತ್ ಪರಂ ನಾಸ್ತಿ ನ ದೈವಂ ಕೇಶವಾತ್ ಪರಂ”
ನಾರದೀಯ ಪುರಾಣದಲ್ಲಿ ಹೇಳಿರುವಂತೆ “ನಾನು ಕೈಗಳನ್ನೆತ್ತಿ ಮೂರು ಬಾರಿ ಘೋಷಿಸುತ್ತೇನೆ (ಒತ್ತಿ ಹೇಳುತ್ತೇನೆ) ಕೇಶವನಿಗಿಂತ ಶ್ರೇಷ್ಠನಾದ ದೇವನಿಲ್ಲ ಮತ್ತು ವೇದಕ್ಕಿಂತ ಶ್ರೇಷ್ಠವಾದ ಶಾಸ್ತ್ರವಿಲ್ಲ”.

ಪೆರಿಯಾಳ್ವಾರರು ಈ ಮೇಲಿನ ಪ್ರಮಾಣಗಳು ಮತ್ತು ಸ್ಮೃತಿ, ಇತಿಹಾಸ, ಪುರಾಣ, ಇತ್ಯಾದಿಗಳಿಂದ ಇನ್ನೂ ಅನೇಕ ಪ್ರಮಾಣಗಳನ್ನು ನೀಡಿ ಶ್ರೀಮನ್ನಾರಾಯಣನ ಪರತ್ವವನ್ನು ಪ್ರತಿಷ್ಠಾಪಿಸಿದರು. ತಕ್ಷಣವೇ ಧನಕನಕಗಳಿಂದ ತುಂಬಿದ ಆ ಚೀಲವು (ವಿಜೇತರ ಬಹುಮಾನ) ದೈವ ಸಂಕಲ್ಪದಿಂದ ತಾನಾಗಿಯೇ ಸೂರಿನಿಂದ ಕೆಳಗೆ ಬರುತ್ತದೆ, ಮತ್ತು ಪೆರಿಯಾಳ್ವಾರರು ಅದನ್ನು ಕ್ಷಿಪ್ರವಾಗಿ ತೆಗೆದುಕೊಳ್ಳುತ್ತಾರೆ.
ಇದನ್ನು ನೋಡಿ ಪೆರಿಯಾಳ್ವಾರರನ್ನು ತಿರಸ್ಕರಿಸಿದ್ದ ವಿದ್ವಾಂಸರು, ರಾಜ ಮತ್ತು ಅಲ್ಲಿ ಸೇರಿದ್ದವರೆಲ್ಲರೂ ಅತೀವ ಸಂತೋಷಗೊಳ್ಳುತ್ತಾರೆ ಮತ್ತು ಅವರಿಗೆ ನಮಸ್ಕರಿಸುತ್ತಾರೆ.
ಅವರು ಪೆರಿಯಾಳ್ವಾರರು ವೇದಾಂತದ ಸಾರವನ್ನು ಶುದ್ಧವಾಗಿ ಸ್ಪಷ್ಟವಾಗಿ ಪ್ರಕಟಪಡಿಸಿದ್ದಾರೆಂದು ಘೋಷಿಸುತ್ತಾರೆ ಮತ್ತು ಬಹು ಪ್ರೀತಿಯಿಂದ ಉತ್ಸವದ ಆನೆಯ ಮೇಲೆ ಆಳ್ವಾರರಿಗೆ ಅದ್ದೂರಿಯ ಮೆರವಣಿಗೆಯನ್ನು ಏರ್ಪಡಿಸುತ್ತಾರೆ. ಪಕ್ಕದಲ್ಲಿ ಎಲ್ಲ ವಿದ್ವಾಂಸರು ಛತ್ರ ಚಾಮರಗಳನ್ನು ಹಿಡಿದು “ವೇದಗಳ ಸಾರವನ್ನು ಪ್ರಕಟಪಡಿಸಿದ ಅತಿ ವಿಶ್ವಾಸಾರ್ಹ ವ್ಯಕ್ತಿಯು ಆಗಮಿಸಿದ್ದಾರೆ, ಅವರಿಗೆ ಎಲ್ಲ ಯಶಸ್ಸುಗಳು ದೊರೆಯಲಿ” ಎಂದು ಸಾರುತ್ತಾರೆ. ರಾಜ ವಲ್ಲಭ ದೇವನು ಅವರಿಗೆ ಪಟ್ಟರ್ಪಿರಾನ್ (ಎಂದರೆ ಭಟ್ಟರು ಅಥವಾ ಮಹಾ ವಿದ್ವಾಂಸರುಗಳಿಗೆ ಅತ್ಯಮೂಲ್ಯವಾದ ಜ್ಞಾನವನ್ನು ಬಹಿರಂಗಗೊಳಿಸಿ ಉಪಕಾರ ಮಾಡಿದವರು) ಎಂಬ ಬಿರುದನ್ನಿಟ್ಟು ಗೌರವಿಸತ್ತಾನೆ. ರಾಜನು ಸಹ ಮೆರವಣಿಗೆಯಲ್ಲಿ ಸೇರುತ್ತಾನೆ ಮತ್ತು ಎಲ್ಲೆಡೆಯೂ ವೈಭವದ ಉತ್ಸವ ನಡೆಯುತ್ತದೆ.

pallandu

ಇದನ್ನು ನೋಡಿ ಪರಮಪದನಾಥನು, ಹೇಗೆ ಒಬ್ಬ ಮಾತಾಪಿತರು ಎಲ್ಲಿ ತಮ್ಮ ಮಕ್ಕಳು ಶ್ಲಾಘಿಸಲ್ಪಟ್ಟರೆ ಸಂತೋಷದಿಂದ ಭಾಗವಹಿಸಲು ಬಯಸುತ್ತಾರೋ ಹಾಗೆ ಆ ಮಹಾ ಉತ್ಸವದಲ್ಲಿ ಪಾಲುಗೊಳ್ಳಲು ಇಚ್ಛಿಸುತ್ತಾನೆ. ಶ್ರೀ ಮಹಾಲಕ್ಷ್ಮಿಯೊಂದಿಗೆ (ಶ್ರಿಯಃಪತಿತ್ವ – ಪಿರಾಟ್ಟಿಯ ಪತಿ ಎನ್ನುವುದು ಆತನ ಮುಖ್ಯವಾದ ಲಕ್ಷಣ) ಭವ್ಯವಾದ ಗರುಡಾಳ್ವಾನನ ಮೇಲೇರಿ ಪಾಂಚಜನ್ಯ ಮತ್ತು ಸುದರ್ಶನಾಳ್ವಾನರಿಂದ ಅಲಂಕೃತನಾದ ಎಂಪೆರುಮಾನನು ಆಕಾಶದಲ್ಲಿ ಆಗಮಿಸುತ್ತಾನೆ. ಆಳ್ವಾರರೊಂದಿಗಿರುವ ಆತನನ್ನು ನೋಡಲು ಈ ಭೌತಿಕ ಜಗತ್ತಿನ ಎಲ್ಲ ದೇವತೆಗಳು – ಬ್ರಹ್ಮ, ರುದ್ರ, ಇಂದ್ರ, ಇತ್ಯಾದಿ – ತಕ್ಷಣವೇ ತಮ್ಮ ಪರಿವಾರ ಮತ್ತು ಅಧೀನ ದೇವತೆಗಳೊಂದಿಗೆ ಆಗಮಿಸುತ್ತಾರೆ. ಆಳ್ವಾರರೊಂದಿಗಿರುವ ಆತನನ್ನು ನೋಡಲು ಈ ಭೌತಿಕ ಜಗತ್ತಿನ ಎಲ್ಲ ದೇವತೆಗಳು – ಬ್ರಹ್ಮ, ರುದ್ರ, ಇಂದ್ರ, ಇತ್ಯಾದಿ – ತಕ್ಷಣವೇ ತಮ್ಮ ಪರಿವಾರ ಮತ್ತು ಅಧೀನ ದೇವತೆಗಳೊಂದಿಗೆ ಆಗಮಿಸುತ್ತಾರೆ. ಪೆರಿಯಾಳ್ವಾರರು ಎಂಪೆರುಮಾನನಿಂದ ಅನುಗ್ರಹಿಸಲ್ಪಟ್ಟಿದ್ದರಿಂದ ಮತ್ತು ಶ್ರೀಮನ್ನಾರಾಯಣ ಮತ್ತು ಇತರರನ್ನು ವೀಕ್ಷಿಸಲು ಶಕ್ತರಾದ್ದರಿಂದ, ತಮಗೆ ನಡೆಯುತ್ತಿರುವ ಉತ್ಸವದ ಬಗ್ಗೆ ಮತ್ತು ಆತನ ಮತ್ತು ಇತರರ ಆಗಮನದ ಬಗ್ಗೆ ಹೆಮ್ಮೆ ಪಡದೆ, ತಕ್ಷಣವೇ ಈ ಭೌತಿಕ ಜಗತ್ತಿನಲ್ಲಿ ಎಂಪೆರುಮಾನನ ಉಪಸ್ಥಿತಿಯನ್ನು ಕಂಡು ಆತಂಕಗೊಳ್ಳುತ್ತಾರೆ. ದಿವ್ಯಜ್ಞಾನದಿಂದ ಅನುಗ್ರಹಿಸಲ್ಪಟ್ಟ ಅವರು, ಶ್ರೀಮನ್ನಾರಾಯಣನು ಸರ್ವಜ್ಞ, ಸರ್ವಶಕ್ತ, ಇತ್ಯಾದಿ ಮತ್ತು ಯಾರಿಂದಲೂ ಪರಾಜಯಗೊಳಿಸಲಾಗದವನು ಎಂಬುದನ್ನು ಅರಿತಿದ್ದರೂ ಸಹ, ಎಂಪೆರುಮಾನನ ಕುರಿತು ಅತೀವ ಪ್ರೇಮದಿಂದಾಗಿ ಎಂಪೆರುಮಾನನ ಮೃದು ಮತ್ತು ನಾಜೂಕಾದ ಸ್ವಭಾವದ ಬಗ್ಗೆ ಚಿಂತಿಸಲು ಆರಂಭಿಸುತ್ತಾರೆ. ಶಾಸ್ತ್ರಗಳಲ್ಲಿ ಹೇಳಿರುವುದೇನೆಂದರೆ ಎಂಪೆರುಮಾನನ ದಿವ್ಯ ಮಂಗಳವಿಗ್ರಹವು ಪಂಚ ಉಪನಿಷದ್ ಗಳಿಂದ ರಚಿತವಾಗಿದೆ ಮತ್ತು ನಿಯತವಾಗಿ ನಿತ್ಯಸೂರಿಗಳಿಂದ ಪರಮಪದದಲ್ಲಿ ಆನಂದಿಸಲ್ಪಡುತ್ತದೆ, ಯಾವುದು ಮಹರ್ಷಿಗಳು, ಮತ್ತು ಈ ಲೋಕದ ದೇವತೆಗಳಾದ ಬ್ರಹ್ಮ, ರುದ್ರ, ಇತರರಿಗೆ ಸಹ ತಲುಪಲು ಸಾಧ್ಯವಿಲ್ಲವೋ ಅದು, ಇನ್ನು ಅಸುರರು/ರಾಕ್ಷಸರ ಬಗ್ಗೆ ಹೇಳುವುದೇನಿದೆ. ಆದರೆ ಆತನು ಆ ದಿವ್ಯವಾದ ನೆಲೆಯನ್ನು ತೊರೆದು ಈ ಭೌತಿಕ ಪ್ರಪಂಚಕ್ಕೆ ಪ್ರವೇಶಿಸಿದ್ದಾನೆ, ಯಾವುದು ಅಜ್ಞಾನಿಗಳು ಮತ್ತು ರಾಕ್ಷಸೀಯ ಜನರಿಂದ ತುಂಬಿದೆಯೋ ಮತ್ತು ಈ ಯುಗದಲ್ಲಿ ಕಲಿಯ ಆಳ್ವಿಕೆಯಲ್ಲಿದೆಯೋ ಅದು. ಆಳ್ವಾರರು ಹೀಗೆ ಯೋಚಿಸುತ್ತಾರೆ “ಎಂಪೆರುಮಾನನು ಇಲ್ಲಿ ಆಗಮಿಸಿದ್ದಾನೆ, ಮತ್ತು ಆತನು ದೃಷ್ಟಿಗೆ ಒಳಗಾಗಬಹುದು, ಆದ್ದರಿಂದ ನಾವು ಈಗ ಆತನ ಕ್ಷೇಮಕ್ಕೆ ಪ್ರಾರ್ಥಿಸೋಣ” ಮತ್ತು ತಾವು ಕುಳಿತ ಆನೆಯ ಕೊರಳಿನಿಂದ ಗಂಟೆಯನ್ನು ಎತ್ತಿಕೊಂಡು ತಕ್ಷಣವೇ ತಿರುಪ್ಪಲ್ಲಾಂಡು ಹಾಡಲು ಪ್ರಾರಂಭಿಸುತ್ತಾರೆ. ಪರಾವಲಂಬಿಯಾದ ತಮ್ಮ ಸ್ವಂತ ಸ್ವರೂಪವನ್ನು ಮತ್ತು ಸ್ವತಂತ್ರನಾದ ಮತ್ತು ಶಕ್ತನಾದ ಎಂಪೆರುಮಾನನ ಸ್ವರೂಪವನ್ನು ಮರೆತು, ಆಳ್ವಾರರು ಅತೀವ ಪ್ರೀತಿಯಿಂದ ಎಲ್ಲರನ್ನೂ (ಐಶ್ವರ್ಯಾರ್ಥಿ – ಸಂಪತ್ತನ್ನು ಬಯಸುವವನು, ಕೈವಲ್ಯಾರ್ಥಿ – ಆತ್ಮಾನುಭವವನ್ನು ಬಯಸುವವನು, ಭಗವತ್ ಚರಣಾರ್ಥಿ – ಎಂಪೆರುಮಾನನಿಗೆ ನಿರಂತರ ಕೈಂಕರ್ಯವನ್ನು ಮಾಡಲು ಬಯಸುವವನು) ತಮ್ಮೊಂದಿಗೆ ಆಹ್ವಾನಿಸುತ್ತಾರೆ ಮತ್ತು ತಿರುಪ್ಪಲ್ಲಾಂಡು ಹಾಡುತ್ತಾರೆ. ನಂತರ ಉತ್ಸವಗಳು ಮುಗಿದ ಮೇಲೆ ಶ್ರೀಮನ್ನಾರಾಯಣನು ಸಂತೋಷದಿಂದ ತನ್ನ ನೆಲೆಗೆ ಹಿಂತಿರುಗುತ್ತಾನೆ.

ತರುವಾಯ ಪೆರಿಯಾಳ್ವಾರರು ರಾಜನನ್ನು ಆಶೀರ್ವದಿಸುತ್ತಾರೆ ಮತ್ತು ರಾಜನಿಂದ ಬಹುವಾಗಿ ಗೌರವಿಸಲ್ಪಡುತ್ತಾರೆ.
ಮತ್ತೆ ವಟಪತ್ರಶಾಯಿಯ ಸೇವೆ ಮಾಡುವ ಬಯಕೆಯಿಂದ ಆಳ್ವಾರರು ಶ್ರೀವಿಲ್ಲಿಪುತ್ತೂರ್ ಗೆ ಹಿಂದಿರುಗುತ್ತಾರೆ, ಮತ್ತು ರಾಜನು ಕೊಟ್ಟ ಎಲ್ಲ ಸಂಪತ್ತನ್ನೂ ಅಲ್ಲಿನ ಎಂಪೆರುಮಾನನಿಗೆ ಸಮರ್ಪಿಸುತ್ತಾರೆ. ಮನುಸ್ಮೃತಿಯಲ್ಲಿ ಹೀಗೆ ಹೇಳಿದೆ:

ತ್ರಯಾ ಏವಾಧನಾ ರಾಜನ್ ಭಾರ್ಯಾ ದಾಸಸ್ ತಥಾ ಸೂತ:
ಯತ್ತೇ ಸಮಧಿಗಚ್ಛಂತಿ ಯಸ್ಯೈತೇ ತಸ್ಯ ತದ್ಧನಮ್

ಮಡದಿ, ಸೇವಕ, ಮಗ ಇವರು ಯಾವುದನ್ನೂ ಪಡೆಯುವುದಿಲ್ಲ. ಅವರು ಗಳಿಸಿದ್ದೆಲ್ಲವೂ ಅವರವರ ಒಡೆಯರಿಗೆ ಸೇರುತ್ತದೆ (ಪತಿ, ಯಜಮಾನ ಮತ್ತು ತಂದೆ).

ಅದೇ ರೀತಿ ಪೆರಿಯಾಳ್ವಾರರೂ ಸಹ ತಮ್ಮ ಒಡೆಯನಾದ ವಟಪತ್ರಶಾಯಿಗೆ ಸಮರ್ಪಿಸುತ್ತಾರೆ ಮತ್ತು ಆತನಿಗೆ ಹೇಳುತ್ತಾರೆ “ಇದೆಲ್ಲವನ್ನೂ ನಿನ್ನ ಅನುಗ್ರಹದಿಂದ ಪಡೆದಿದ್ದರಿಂದ ಇದೆಲ್ಲವೂ ನಿನಗೆ ಮಾತ್ರ ಸೇರಬೇಕು”. ತರುವಾಯ ಅವರು ತಮ್ಮ ವಾಡಿಕೆಯ ಕೈಂಕರ್ಯಕ್ಕೆ ಹಿಂತಿರುಗುತ್ತಾರೆ, ಅದೆಂದರೆ ವಿಧವಿಧವಾದ ಹೊಸ ಹೂಮಾಲೆಗಳನ್ನು ಬಹು ಪ್ರೀತಿಯಿಂದ ಕಟ್ಟಿ ವಟಪತ್ರಶಾಯಿಗೆ ಅವುಗಳನ್ನು ಸಮರ್ಪಿಸುವುದು, ಹೇಗೆ ಶ್ರೀ ಮಾಲಾಕಾರನು ಕೃಷ್ಣನಿಗೆ ಅರ್ಪಿಸಿ ಅವನನ್ನು ವೈಭವೀಕರಿಸಿದನೋ ಹಾಗೆ. ಕಣ್ಣನ್ ಎಂಪೆರುಮಾನನ ಚರಿತ್ರೆಗೆ ಅತಿ ಬಾಂಧವ್ಯವನ್ನು ಬೆಳೆಸಿಕೊಂಡು, ಆತನ ಜನನದಿಂದ ದಿವ್ಯ ಲೀಲೆಗಳವರೆಗೆ, ಅವರು ಯಶೋದೆಯ ಭಾವವನ್ನು ಹೊಂದುತ್ತಾರೆ ಮತ್ತು ಅವನ ಸೌಶೀಲ್ಯ (ಉದಾರತೆ) ಮತ್ತು ಸೌಲಭ್ಯ (ಸರಳವಾಗಿ ಪಡೆಯಬಲ್ಲುದು) ವನ್ನು ಬಹುವಾಗಿ ಸವಿಯುತ್ತಾರೆ. ಅಂತಹಾ ಉಕ್ಕಿಹರಿಯುವ ಭಾವನೆಗಳು ಅವರು ದಿವ್ಯಪ್ರಬಂಧ ಪೆರಿಯಾಳ್ವಾರ್ ತಿರುಮೊಳಿಯನ್ನು ಪ್ರಕಟಪಡಿಸುವುದರಲ್ಲಿ ಪರಿಣಮಿಸುತ್ತವೆ. ಅನವರತವೂ ಶ್ರಿಯಪತಿಯನ್ನೇ ಧ್ಯಾನಿಸುತ್ತಾ ತಮಗೆ ಶರಣಾಗತರಾದ ಶಿಷ್ಯರು ಮತ್ತು ಅಭಿಮಾನಿಗಳನ್ನು ಅವರು ಪೋಷಿಸಿ ಉದ್ಧರಿಸುತ್ತಾರೆ ಮತ್ತು ಲೋಕದ ಎಲ್ಲರನ್ನೂ ಹರಸುತ್ತಾರೆ.

ಇದು ಇನ್ನೂ ಮುಗಿದಿಲ್ಲ, ಅವರ ದಿವ್ಯ ಚರಿತ್ರೆಯು ಮುಂದೆ ಆಂಡಾಳ್ ಚರಿತ್ರೆಯಲ್ಲಿ ವಿವರಿಸಲ್ಪಟ್ಟಿದೆ.

ಅವರ ತನಿಯನ್:
ಗುರುಮುಖಮ್ ಅನಧೀತ್ಯ ಪ್ರಾಹ ವೇದಾನಶೇಷಾನ್
ನರಪತಿ ಪರಿಕ್ಲುಪ್ತಮ್ ಶುಲ್ಕಮ್ ಆದಾತುಕಾಮ: ।
ಶ್ವಶುರಮ್ ಅಮರವಂದ್ಯಮ್ ರಂಗನಾಥಸ್ಯ ಸಾಕ್ಷಾತ್
ದ್ವಿಜಕುಲತಿಲಕಮ್ ತಮ್ ವಿಷ್ಣುಚಿತ್ತಮ್ ನಮಾಮಿ ।।

ಅವರ ಅರ್ಚಾವತಾರ ಅನುಭವವನ್ನು ಇಲ್ಲಿ ಈಗಾಗಲೇ ಚರ್ಚಿಸಲಾಗಿದೆ:
http://ponnadi.blogspot.in/2012/10/archavathara-anubhavam-periyazhwar.html

ಅಡಿಯೇನ್ ಪಾರ್ಥಸಾರಥಿ ರಾಮಾನುಜ ದಾಸನ್

ಮೂಲ: http://guruparamparai.wordpress.com/2013/01/20/periyazhwar/

ರಕ್ಷಿತ ಮಾಹಿತಿ:  https://guruparamparaikannada.wordpress.com

ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಧರ್ಮಗ್ರಂಥಗಳು) – http://granthams.koyil.org
ಪ್ರಮಾತಾ (ಭೋಧಕರು) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org